ಕರಾವಳಿ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲು ಬಿಎಂ ಫಾರೂಕ್ ಮನವಿ

ಮಂಗಳೂರು 7 ಅಕ್ಟೋಬರ್ : ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಿ ಎಂ ಫಾರೂಕ್ ತನ್ನ ಎಂಎಲ್ಸಿ ನಿಧಿಯಿಂದ ಕರಾವಳಿ ಪ್ರದೇಶದ ವಿವಿಧ ಸ್ಥಳಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ವಿನಯೋಗಿಸಿದ್ದಾರೆ.
ಕೃಷ್ಣಾಪುರ ಸರ್ಕಾರಿ ಪ್ರೌಢಶಾಲೆಯ ಮೇಲ್ಚಾವಣಿ ಬೀಳುವ ಸ್ಥಿತಿಯಲ್ಲಿದ್ದವು ಫಾರೂಕ್ ರವರ ಶಾಸಕನ ಜಿ ನಿಧಿಯಿಂದ 10 ಲಕ್ಷ ರೂಪಾಯಿ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿದ್ದಾರೆ. ಮಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡಿದ್ದರು. ಉಲ್ಲಾಲ ಕೈಕೋ ರಸ್ತೆ, ಮುಕಛೇರಿ, ಉಲ್ಲಾಲ ದರ್ಗಾ ಸಮೀಪ, ತೊಕ್ಕೊಟ್ಟು ಮೊದಲಾದ ಹಲವಾರು ಸ್ಥಳ ಗಳಲ್ಲಿ ಈಗಾಗಲೇ ಕಾಮಗಾರಿ ಮುಗಿದಿದೆ. ಉದ್ಘಾಟನೆ ಕಾರ್ಯಯು ನಡೆದಿರುತ್ತದೆ. ಕರಾವಳಿ ಭಾಗದ ನೂರಾರು ಸಾರ್ವಜನಿಕರು ಪಕ್ಷ , ಜಾತಿ, ಧರ್ಮ, ವೇದ ಬೇದ ಮರೆತು ಅನುದಾನ ಬಿಡುಗಡೆ ಮಾಡಲು ವಿನಂತಿಸುತ್ತಿದ್ದಾರೆ.
ಹೈ ಮಾಸ್ಕ್ ದೀಪ. ಬೀಚ್ ಅಭಿವೃದ್ಧಿ , ಶಾಲೆ ಮತ್ತು ಧಾರ್ಮಿಕ ಕೇಂದ್ರಗಳಿಗೆ ಕಾಂಪೌಂಡ್ ನಿರ್ಮಾಣ, ಸಿಸಿ ಕ್ಯಾಮೆರಾ ಅಳವಡಿಸಲು, ರಸ್ತೆ , ಚರಂಡಿ , ಅಂಗನವಾಡಿ ಕೇಂದ್ರ ಮೊದಲಾದ ಮೂಲಭೂತ ಸೌಕರ್ಯಗಳು ಮಂಗಳೂರು ಸುತ್ತಮುತ್ತ ಅಗತ್ಯವಾಗಿ ಮತ್ತು ತುರ್ತಾಗಿ ಮಾಡಬೇಕಾಗಿದೆ. ಇದಕ್ಕಾಗಿ ಕನಿಷ್ಠ ಒಂದು ಕೋಟಿ ರೂಪಾಯಿ ತುರ್ತು ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ . ಶಾಶ್ವತ ಕಾಮಗಾರಿಗೆ 5 ಕೋಟಿ ಪ್ರತ್ಯೇಕ ಅನುದಾನ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಿಎಂ ಫಾರೂಕ್ ಸರ್ಕಾರಿ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.