Indian Cultural Centre (ICC) Qatar Celebrated Gandhi Jayanthi

ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ವತಿಯಿಂದ ಗಾಂಧಿ ಜಯಂತಿ

On 2nd October, birth anniversary of father of the nation, Mahatma Gandhi was celebrated in ICC Ashoka hall started with a live quiz program on the theme of, “Celebrating Bapu” by four teams as  finalists from ensuing preliminaries conducted on precious day by Quiz Master Shafqat Nabi.

On 1st Oct 2022, over 150 participants attended the written test and 8 teams with highest score were selected for semi-finals. Two sets of semi-finals were conducted to selected four teams to participate in finals.

Chief guest of the evening on 2nd Oct was HE Dr Deepak Mittal Ambassador of India to Qatar. Other dignitaries attended the evening were Madam Ambasador Dr. Alpana Mittal, Ist Secretary Mr Sachin Dinkar Sakpal, Defence Attaché Mr. Mohan Atla.  Apex body Presidents Mr. PN BabuRajan from ICC, Mr. Vinod Nair from ICBF, and Mr Jaffer Sadic from IBPC, many Community leaders and Associated organizations were among the audience.

Dr Deepak Mittal and other dignitaries offered floral tribute to Mahatma Gandhi and addressed the gathering, by recalling Mahatama and his preicipal, which are followed not only in India and all over the world.

Winners of the Quiz finals were Mr Hussain Abdul Kadhir  and Mr.Mohammed Aatif, and runner up team were Mr. Shinj Leela and Mrs. Swapna Unni. All were presented with a plaque by HE Deepak Mittal Ambassador of India to Qatar.

Vice President Mr Subramanya Hebagellu delivered the speech on behalf of ICC and while Ms. Kamla Thakur ICC MC proposed vote oftThanks. Ms Sahitya Jyothsna was steering the evening as host.

ಭಾರತೀಯ ಸಾಂಸ್ಕೃತಿಕ ಕೇಂದ್ರ, ದೋಹಾ, ಕತಾರ್ ವತಿಯಿಂದ ಗಾಂಧಿ ಜಯಂತಿ ೨೦೨೨ ಆಚರಣೆ
ಅಕ್ಟೋಬರ್ 2 ರಂದು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣದಲ್ಲಿ ಆಚರಿಸಲಾಯಿತು. ಗಾಂಧೀಜಿ ಅವರ ಸ್ಮರಣಾರ್ಥ ಕ್ವಿಜ್ ಮಾಸ್ಟರ್ ಶಫ್ಕತ್ ನಬಿ ಅವರು ನಡೆಸಿ ಕೊಟ್ಟ ರಸ ಪ್ರಶ್ನೆ “ಸೆಲೆಬ್ರೇಟಿಂಗ್ ಗಾಂಧಿ” ಕಾರ್ಯಕ್ರಮ ದಿನದ ಆಕರ್ಷಣೆಯಾಗಿತ್ತು. ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ನಾಲ್ಕು ತಂಡವು ಅಂತಿಮ ಹಂತ ತಲುಪಿದ್ದವು.


ಗಾಂಧಿ ಜಯಂತಿಯ ಮುನ್ನಾ ದಿನ ೧ ಅಕ್ಟೋಬರ್ ೨೦೨೨ ರಂದು ಆಯೋಜಿಸಿದ ಪ್ರಭಂದ ಲೇಖನದಲ್ಲಿ ೧೫೦ಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದರು. ಅತಿ ಹೆಚ್ಚು ಅಂಕ ಗಳಿಸಿದ ೮ ತಂಡಗಳನ್ನು ಸೆಮಿ-ಫೈನಲ್‌ಗೆ ಆಯ್ಕೆ ಮಾಡಲಾಯಿತು. ಫೈನಲ್‌ನಲ್ಲಿ ಭಾಗವಹಿಸಲು ಆಯ್ಕೆಯಾದ ನಾಲ್ಕು ತಂಡಗಳಿಗೆ ಎರಡು ಸೆಟ್‌ಗಳ ಸೆಮಿಫೈನಲ್‌ಗಳನ್ನು ನಡೆಸಲಾಯಿತು.
ಅಕ್ಟೋಬರ್ 2 ರಂದು ಸಂಜೆಯ ಮುಖ್ಯ ಅತಿಥಿಗಳು ಕತಾರ್‌ನ ಭಾರತದ ರಾಯಭಾರಿ ಡಾ ದೀಪಕ್ ಮಿತ್ತಲ್. ಮೇಡಂ ರಾಯಭಾರಿ ಡಾ. ಅಲ್ಪನಾ ಮಿತ್ತಲ್, ಮೊದಲನೇ ಕಾರ್ಯದರ್ಶಿ ಶ್ರೀ ಸಚಿನ್ ದಿನಕರ್ ಸಕ್ಪಾಲ್, ರಕ್ಷಣಾ ಅಟ್ಯಾಚೆ ಶ್ರೀ ಮೋಹನ್ ಅಟ್ಲಾ ಸೇರಿದಂತೆ ಇತರ ಗಣ್ಯರು ಸಂಜೆ ಹಾಜರಿದ್ದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರು ಶ್ರೀ. ಪಿ.ಎನ್.ಬಾಬುರಾಜನ್, ಐ.ಸಿ.ಬಿ.ಎಫ್.ನಿಂದ ಶ್ರೀ. ವಿನೋದ್ ನಾಯರ್ ಮತ್ತು ಐ.ಬಿ.ಪಿ.ಸಿ.ಯಿಂದ ಶ್ರೀ. ಜಾಫರ್ ಸಾದಿಕ್ ಹಾಗೂ ಅನೇಕ ಸಮುದಾಯದ ಮುಖಂಡರು ಸಭಿಕರಲ್ಲಿದ್ದರು.
ಡಾ ದೀಪಕ್ ಮಿತ್ತಲ್ ಮತ್ತು ಇತರ ಗಣ್ಯರು ಮಹಾತ್ಮ ಗಾಂಧೀಜಿಗೆ ಪುಷ್ಪ ನಮನ ಸಲ್ಲಿಸಿದರು ಮತ್ತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ ದೀಪಕ್ ಮಿತ್ತಲ್ ಅವರು, ಮಹಾತ್ಮ ಮತ್ತು ಅವರ ತತ್ವಗಳನ್ನು ಸ್ಮರಿಸುತ್ತಾ, ಗಾಂಧೀಜಿ ಅವರ ತತ್ವಗಳು ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನುಸರಿಸಲಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಬಳಿಕ ರಸಪ್ರಶ್ನೆ ಫೈನಲ್‌ನ ವಿಜೇತರು ಶ್ರೀ ಹುಸೇನ್ ಅಬ್ದುಲ್ ಕಧೀರ್ ಮತ್ತು ಶ್ರೀ ಮೊಹಮ್ಮದ್ ಆತೀಫ್, ಮತ್ತು ರನ್ನರ್ ಅಪ್ ತಂಡವು ಶ್ರೀ. ಶಿಂಜ್ ಲೀಲಾ ಮತ್ತು ಶ್ರೀಮತಿ ಸ್ವಪ್ನಾ ಉನ್ನಿ ಅವರಿಗೆ ರಾಯಭಾರಿಗಳು ಫಲಕವನ್ನು ನೀಡಿದರು.

ಭಾರತೀಯ ಸಾಂಸ್ಕೃತಿಕ ಕೇಂದ್ರದ ಪರವಾಗಿ ಉಪಾಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಮಂಡಳಿ ಸದಸ್ಯರು ಶ್ರೀಮತಿ ಕಮಲಾ ಠಾಕೂರ್ ಅವರು ಸಭೆಗೆ ಧನ್ಯವಾದಗಳನ್ನು ಪ್ರಸ್ತಾಪಿಸಿದರು. ಶ್ರೀಮತಿ ಸಾಹಿತ್ಯ ಜ್ಯೋತ್ಸ್ನಾ ಅವರು ಕಾರ್ಯಕ್ರಮವನ್ನು ಉತ್ತಮವಾಗಿ ನಡೆಸಿಕೊಟ್ಟರು.