ಅಡಿಗ ಆರ್ಟ್ಸ್ ಅಕಾಡೆಮಿ, ಮತ್ತು ಸ್ವಾನ್ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಿನ್ನೆ ಸಂಜೆ ನಡೆದ ಸಾಂಸ್ಕೃತಿಕ ಮೇಳ-2022 ಸಮಾರಂಭದಲ್ಲಿ ಲೇಖಕಿ ಗೊರೂರು ಪಂಕಜ, ಸಮಾಜ ಸೇವಕ ಶ್ರೀಧರ ಮೂರ್ತಿ, ವೆಂಕಟೇಶ್ ಪ್ರಸಾದ್ ಇತರರಿಗೆ ಭಾರತ ಸೇವ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.  ರಂಗಮಕರ್ಮಿ ಮತ್ತು ಖ್ಯಾತ ಗಾಯಕ ಶಶಿಧರ ಕೋಟೆ, ಪತ್ರಕರ್ತ ಡಾ. ರಾಜು ಕಂಬಾರ, ಸಂಸ್ಥೆಯ ಅಧ್ಯಕ್ಷರಾದ ಸಿದ್ದಪ್ಪ ನೇಗಲಾಲ, ನೀಲಕಂಠ ಅಡಿಗ, ಬಿಬಿಎಂಪಿ ಉಪ ಆಯುಕ್ತರಾದ ಡಿಕೆ ಬಾಬು, ಟ್ರಕ್ ಕ್ಲಬ್ ಆಫ್ ಬೆಂಗಳೂರು ಕೋಶಾಧ್ಯಕ್ಷರಾದ ಜಿಎನ್ ಮೋಹನ್ ಕುಮಾರ್, ಹಾಸ್ಯ ಚತುರ ಸದಾಶಿವ, ಸಮಾಜ ಸೇವಕಿ ಡಾ.ಬಿ.ಆರ್ ಉಷಾ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಡಾ. ರಾಜು ಕಂಬಾರ, ಕಾರ್ಯಭಾರ ಒತ್ತಡದಲ್ಲಿ ಮುಗ್ಧತೆಯನ್ನು ಕಳೆದುಕೊಂಡು, ಒಳ್ಳೆಯದನ್ನು ಕೂಡ ಪ್ರಶ್ನಾರ್ಥಕವಾಗಿ ನೋಡುವ,  ಎಲ್ಲವನ್ನು ಪ್ರಶ್ನಿಸುವ ಹಂತಕ್ಕೆ ಬಂದು ತಲುಪಿದ್ದೇವೆ. ಪ್ರಸ್ತುತ ಕಾಲಘಟ್ಟದಲ್ಲಿ ಮುಗ್ಧತೆಯ ಜಗತ್ತಿಗೆ ನಾವು ತೆರೆದುಕೊಳ್ಳುವ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದ ಅವರು, ಅನೇಕ ಸಾಧಕರನ್ನ ಮುನ್ನೆಲೆಗೆ ತರುವ ಜವಾಬ್ದಾರಿಯನ್ನ ನಿರ್ವಹಿಸುತ್ತಿರುವ ಸಂಸ್ಥೆ ಅಭಿನಂದನಾರ್ಹ ಎಂದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ರಂಗಕರ್ಮಿ, ಖ್ಯಾತ ಗಾಯಕ ಶಶಿಧರ ಕೋಟೆ ಅವರು, ಭಾಷೆ ಸಂಸ್ಕೃತಿಯ ಪ್ರತಿಬಿಂಬವಾಗಿದ್ದು, ಇದರ ಸಮೃದ್ಧತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಗಬೇಕಿದೆ. ಭಕ್ತಿ, ಪ್ರೀತಿ, ನೀತಿ ಇದ್ದಲ್ಲಿ ಎಲ್ಲವನ್ನು ಗೆಲ್ಲಬಹುದು. ಆದ್ದರಿಂದ ಬದುಕಿನಲ್ಲಿ ರೀತಿ-ನೀತಿ  ಅನುಸರಿಸುವುದು  ಪ್ರಮುಖವಾದದ್ದು ಎಂದು ಹೇಳಿ, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.

ನಿಮ್ಮ ಪ್ರೋತ್ಸಾಹ ನಮ್ಮ ಬೆಳವಣಿಗೆ

ಪ್ರೀತಿಪೂರ್ವಕ ನಮಸ್ಕಾರಗಳು ಮತ್ತು ಕೃತಜ್ಞತೆಗಳು.