*ಇನಾಯತ್ ಅಲಿ ಗೆದ್ದರೆ ಮುಂದೊಂದು ದಿನ ಮಂಗಳೂರು ಉತ್ತರ ಕ್ಷೇತ್ರದ ದಿಕ್ಕು ದೆಸೆ ಬದಲಾಗಿ,ರಾಜ್ಯಕ್ಕೆ ಮಾದರಿ ಕ್ಷೇತ್ರವಾಗಲಿದೆ.*
“”””””””””””””””””””””””””””
*ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಏನಾದರೂ ಗೆದ್ದರೆ ಉತ್ತರ ಉತ್ತುಂಗಕ್ಕೇರಲಿದೆ. ಇದನ್ನು ಯಾವಾಗಲೂ ನೆನಪಿಡಿ! ಕ್ಷೇತ್ರದ ಜನತೆಯ ಹಿತದೃಷ್ಟಿಯಿಂದ ಈ ಬರಹ.*
*ಅನೇಕ ವರ್ಷಗಳಿಂದ ಕೋಮುವಾದಿಗಳ,ಚಿಂತನೆ ಇಲ್ಲದವರ,ಸ್ವಾರ್ಥಿಗಳ ಕೈಗೆ ಸಿಲುಕಿದೆ ಈ ಮಂಗಳೂರು ಉತ್ತರ ಕ್ಷೇತ್ರವೆಂಬ ದೊಡ್ಡ ಆಲದಮರ.ಈ ಮರವನ್ನು ರಕ್ಷಿಸಲು,ಈ ಮರದ ಅಭಿವೃದ್ದಿಯ ಹಿತದೃಷ್ಟಿಯಿಂದ ಇನಾಯತ್ ಅಲಿ ಎಂಬ ಮಾನವೀಯತೆಯ ಹರಿಕಾರನನ್ನು ನಾವುಗಳು ಬೆಂಬಲಿಸಿ ಅವರ ಗೆಲುವಿಗಾಗಿ ಹೋರಾಟವನ್ನು ಮುಂದುವರೆಸಬೇಕಾಗಿದೆ. ಈ ಕ್ಷೇತ್ರದಲ್ಲಿ ಅಡಗಿರುವ ಎಲ್ಲಾ ವಿಷ ಜಂತುಗಳನ್ನು ನಿರ್ನಾಮ ಮಾಡುವ ಕೆಲಸಕ್ಕೆ ನಾವುಗಳು ಅವರೊಂದಿಗೆ ಕೈ ಜೋಡಿಸಬೇಕಾದ ಕಾಲ ಕೂಡಿಬಂದಿದೆ.*
*ಈ ಕ್ಷೇತ್ರದ ಕೆಲವು ನೀರು ಹಾವುಗಳು ಬುಸುಗುಡುತ್ತಿವೆ, ಕೋಮುವಾದಿಗಳು,ವರ್ಗಿಯವಾದಿಗಳು,ಹೊಗಳು ಭಟರು, ನೇತಾರರ ಚೇಳಾಗಳು, ನುಂಗಣ್ಣಾಗಳನ್ನು ಸೇರಿದಂತೆ ಎಲ್ಲಾ ರೀತಿಯ ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಏಕೈಕ ದ್ವನಿ ಇನಾಯತ್ ಅಲಿ.ಉತ್ತರದ ರಕ್ಷಣೆಗೆ ಇನಾಯತ್ ಸೂಕ್ತ ಅಭ್ಯಾರ್ಥಿಯಾಗುತ್ತಿದ್ದಾರೆ.ಈ ಕೆಲವು ವಿಷಕಾರಿ ಮನಸ್ಸಿನ ಪಟ್ಟಭ್ರದ್ದ ಶಕ್ತಿಗಳಿಗೆ ಎಚ್ಚರಿಸುವ ಹಾಗೂ ನಾಶಮಾಡುವ ಮೂಲಕ ಉತ್ತರಕ್ಕೆ ತಕ್ಕುದಾದ ಅಭ್ಯಾರ್ಥಿಯನ್ನೇ ಆರಿಸೋಣ. ಇಲ್ಲದಿದ್ದರೆ ಈ ವಿಷಕಾರಿ ಜಂತುಗಳು ಮುಂಬರುವ ದಿನಗಳಲ್ಲಿ ಈ ಕ್ಷೇತ್ರವನ್ನು ಮತ್ತು ಇಲ್ಲಿನ ಹಿಂದೂ,ಮುಸ್ಲಿಮರನ್ನು ಪರಸ್ಪರ ಕಚ್ಚಾಡುವಂತೆ ಮಾಡಿ ಈ ಕ್ಷೇತ್ರವನ್ನು ನುಂಗಿ ಬಿಡುತ್ತಾರೆ. ನಮ್ಮ ಮುಂದಿನ ಪೀಳಿಗೆಗೆ ಅಳುವುದು ಮತ್ತು ಬೈಯುವುದನ್ನು ಬಿಟ್ಟರೆ ಬೇರೇನೂ ಉಳಿಯುವುದಿಲ್ಲ.*
*ಇನಾಯತ್ ಒಬ್ಬ ದೂರದೃಷ್ಟಿಯ ನಾಯಕ.ಮಾನವತವಾದಿ,ಮನುಕುಲ ಸ್ನೇಹಿ,ತುಂಬಾ ಕಷ್ಟಪಡುವ ವ್ಯಕ್ತಿ ಮತ್ತು ಜನರಿಗಾಗಿ, ಜನರಿಗೋಸ್ಕರ ಕಷ್ಟಪಡಲು ಸಿದ್ಧರಿರುವ ಮಾತೃಹೃದಯಿ. ಅದ್ದರಿಂದ ಈ ಕ್ಷೇತ್ರದ ಜನತೆ,ಮತಧಾರ ವಿಶೇಷವಾಗಿ ಮಾನವತವಾದಿಗಳು,ಶಾಂತಿ ಪ್ರೀಯರು ಇನಾಯತ್ ಅಲಿಯವರೊಂದಿಗೆ ದೃಢವಾಗಿ ನಿಲ್ಲಬೇಕು.ಏಕೆಂದರೆ ಇನಾಯತ್ ಅಲಿ ಈ ಕ್ಷೇತ್ರದ ನಾಯಕನಾದರೆ ತನ್ನ ಸ್ವಾರ್ಥಕ್ಕಾಗಿ ಏನನ್ನೂ ಮಾಡಲ್ಲ.ನಮ್ಮ ಕ್ಷೇತ್ರದ ಭವಿಷ್ಯಕ್ಕಾಗಿ,ಇಲ್ಲಿನ ಅಭಿವೃದ್ದಿಗಾಗಿ,ನಮ್ಮ ಪೀಳಿಗೆಗಾಗಿ ಮತ್ತು ಉತ್ತರ ಕ್ಷೇತ್ರದ ಉಜ್ವಲ ಭವಿಷ್ಯಕ್ಕಾಗಿ ತನ್ನ ಸಕಲಕಲಾ ವಿಧ್ಯೆಯನ್ನು ಅರ್ಪಣೆಮಾಡಿ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರ ಮಾಡಲು ದುಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ.ಕಾರಣ ಜಾತಿ,ಮತ-ಬೇಧ,ಕೋಮುವಾದ ವಿಲ್ಲದ,ಮನಸ್ಸು ಮನಸ್ಸುಗಳ ನಾಡಿಮಿಡಿತ ಹರಿಯುವ ಸೌಮ್ಯ ಸ್ವಭಾವದ ದೂರದೃಷ್ಟಿಯುಳ್ಳ ಯುವ ನಾಯಕ.*
*ಶಿವಾನಿ ಸುರತ್ಕಲ್*












