2013ರ ಸೆಪ್ಟೆಂಬರ್ ತಿಂಗಳಿನಲಲ್ಲಿ ಮಲ ಹೊರುವ ಪದ್ಧತಿ ನಿಷೇ‘ ಹಾಗೂ ಮಲ ಹೊರುವವರಿಗೆ ಪುನರ್ವಸತಿ ಕಲ್ಪಿಸುವ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಪ್ರಕಾರ ಮಲ ಹೊರುವುದನ್ನು ದೇಶಾದ್ಯಂತ ನಿಷೇಸುವುದಲ್ಲದೇ, ಮಲ ಹೊರುವವರಿಗೆ ವಸತಿ, ಜಮೀನು ಸೇರಿದಂತೆ ಸಕಲ ರೀತಿಯ ಸರ್ಕಾರಿ ಸೌಲ‘್ಯಗಳನ್ನು ಒದಗಿಸುವ ನಿರ್ಣಯ ಕೈಗೊಳ್ಳಲಾಯಿತು. ಸುಪ್ರಿಂ ಕೋರ್ಟ್ ಕೂಡ ಮಲ ಹೊರುವ ಪದ್ಧತಿಯನ್ನು ನಿಷೇಸಿದ್ದಲ್ಲದೇ ಶಿಕ್ಷಾರ್ಹ ಎಂದು ಘೊಷಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಲ ಹೊರುವ ಪದ್ಧತಿಯನ್ನು ತಡೆಯುವ ನಿಟ್ಟಿನಲ್ಲಿ ಕಾಯ್ದೆಯನ್ನು ರೂಪಿಸಿತು. ಪ್ರಸ್ತುತ ಈ ಕಾಯ್ದೆಯನ್ನು ಉಲ್ಲಂಘಿಸಿದರೆ 2 ಲಕ್ಷ ರೂಪಾಯಿಗಳಷ್ಟು ದಂಡ ಹಾಗೂ 6 ತಿಂಗಳ ವರೆಗೆ ಜಾಮೀನುರಹಿತ ಶಿಕ್ಷೆಯನ್ನು ವಿಸಲಾಗುತ್ತದೆ.

ಪ್ರಸ್ತುತ ಪರಿಸ್ಥಿತಿ
ವಿವಿ‘ ಖಾಸಗಿ ಸಂಸ್ಥೆಗಳು ನಡೆಸಿದ ಅ‘್ಯಯನದ ಪ್ರಕಾರ ಭಾರತದಲ್ಲಿ ಮಲ ಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ. ಭಾರತದ ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತ್ರಿಪುರ, ಗುಜರಾತ್ ಈ ಮುಂತಾದ ರಾಜ್ಯಗಳಲ್ಲಿ ಮಲ ಹೊರುವ ಪದ್ಧತಿ ಹೆಚ್ಚಿನ ಸಂಖ್ಯೆಯಲ್ಲಿದೆ. ದಾಖಲೆಯೊಂದರ ಪ್ರಕಾರ ದೇಶದ 9 ರಾಜ್ಯಗಳಲ್ಲಿ ಮಲ ಹೊರುವ ಪದ್ಧತಿ ಜೀವಂತವಾಗಿದೆ. ಅದರಲ್ಲಿ ಕರ್ನಾಟಕವೂ ಒಂದು ಎನ್ನುವ ಕುಖ್ಯಾತಿಯಿದೆ. 2011ರ ಜನಗಣತಿಯ ಪ್ರಕಾರ ದೇಶದಾದ್ಯಂತ 7,94,000 ಪ್ರಕರಣಗಳು ದಾಖಲಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. 2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 13 ಸಾವಿರಕ್ಕೂ ಅಕ ಮಲಹೊರುವವರನ್ನು ಗುರುತಿಸಲಾಗಿದೆ. ಅಲ್ಲದೇ 2013ರಲ್ಲಿ ಸಾಯಿ ಕರ್ಮಚಾರಿ ಆಯೋಹವು ಮನೆ ಮನೆಗೂ ತೆರಳಿ ಮಲ ಹೊರುವ ಕಾರ್ಯದಲ್ಲಿ ತೊಡಗಿರುವವರನ್ನು ಗುರುತಿಸಿದ್ದಾರೆ. ಆ ಪ್ರಕಾರವಾಗಿ ಬೆಂಗಳೂರಿನಲ್ಲಿ ಇಂದಿಗೂ 202 ಜನರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯದ ಗ್ರಾಮೀಣ ‘ಾಗಗಳಲ್ಲಿ 470 ಹಾಗೂ ನಗರ ಪ್ರದೇಶಗಳಲ್ಲಿ 302 ಜನರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಜ್ಯದ ವಿವಿ‘ ಜಿಲ್ಲೆಗಳಲ್ಲಿ ಮಲ ಹೊರುವ ಪದ್ಧತಿ ಆಗಾಗ ಬೆಳಕಿಗೆ ಬರುತ್ತಲೇ ಇದೆ. 6 ತಿಂಗಳ ಹಿಂದೆ ಮೈಸೂರಿನಲ್ಲಿ ಗ್ರಾಘಿ.ಪಂ ಅ‘್ಯಕ್ಷೆಯೋರ್ವರು ಬಲವಂತವಾಗಿ ಕಾರ್ಮಿಕನೋರ್ವನನ್ನು ಮಲದ ಗುಂಡಿಗೆ ಇಳಿಸಿದ್ದು ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತುಘಿ.

ರಾಜ್ಯದಲ್ಲಿ ಮ್ಯಾನ್‌ಹೋಲ್‌ನಲ್ಲಿ ಸತ್ತವರು
‘ 2008ರ ನವೆಂಬರ್ 14ರಂದು ಯಲಹಂಕ ನ್ಯೂಟೌನ್‌ನಲ್ಲಿ ಮೃತಪಟ್ಟವರ ಸಂಕ್ಯೆ 3
‘ 2009ರ ಮೇ 9ರಂದು ಪೀಣ್ಯ 2ನೇ ಹಂತದಲ್ಲಿ ಮೃತಪಟ್ಟವರ ಸಂಕ್ಯೆ 3
‘ 2012ರ ಜುಲೈ 14ರಂದು ಅರಕೆರೆಯಲ್ಲಿ ಮೃತಪಟ್ಟವರ ಸಂಕ್ಯೆ 2
‘ 2014ರ ಜನವರಿ 18ರಂದು ಕೆ. ಪಿ. ಅಗ್ರಹಾರದಲ್ಲಿ ಮೃತಪಟ್ಟವರ ಸಂಖ್ಯೆ 2
‘ 2014ರ ಆಗಸ್ಟ್ 30ರಂದು ಮಹದೇವಪುರದಲ್ಲಿ ಮೃತಪಟ್ಟವರ ಸಂಖ್ಯೆ 1

‘ 2014ರ ಸೆಪ್ಟೆಂಬರ್ 24ರಂದು ನಾಗವಾರದಲ್ಲಿ ಮೃತಪಟ್ಟವರ ಸಂಖ್ಯೆ 2
‘ 2015ರ ಜುಲೈ 15ರಂದು ಯಲಹಂಕದಲ್ಲಿ ಸತ್ತವರ ಸಂಕ್ಯೆ 2
‘ 2015ರ ಆಗಸ್ಟ್ 18ರಂದು ಜಯಮಹಲ್‌ನಲ್ಲಿ ಸತ್ತವರ ಸಂಕ್ಯೆ 2
‘ 2015ರ ಆಗಸ್ಟ್ 19ರಂದು ಗೋರಗುಂಟೆ ಪಾಳ್ಯದಲ್ಲಿ ಸತ್ತವರ ಸಂಕ್ಯೆ 2
‘ 2016ರ ಮಾರ್ಚ್ 7ರಂದು ಕಗ್ಗದಾಸಪುರದಲ್ಲಿ ಸತ್ತವರ ಸಂಕ್ಯೆ 3
‘ 2008ರಿಂದ 10 ವರ್ಷಗಳ ಅವಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಮ್ಯಾನ್‌ಹೋಲ್ ಮತ್ತು ಎಸ್‌ಟಿಪಿ ದುರಸ್ತಿ ವೇಳೆ ಒಟ್ಟೂ 31 ಜನರು ಮೃತಪಟ್ಟಿದ್ದಾರೆ.

ನಿಯಮಗಳು
ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳ ಒಳಚರಂಡಿ ಸುರಕ್ಷತಾ ಕೈಪಿಡಿ ಕರಡು 2012ರ ನಿಯಮಗಳ ಪ್ರಕಾರ ಪರ್ಯಾಯ ಮಾರ್ಗಗಳಿಲ್ಲದ ಸಂದ‘ರ್ದಲ್ಲಿ ಅಗತ್ಯದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಕಾರ್ಮಿಕರನ್ನು ಮ್ಯಾನ್‌ಹೋಲ್‌ಗೆ ಅಥವಾ ಎಸ್‌ಟಿಪಿಗೆ ಇಳಿಸಬಹುದು. ಆದರೆ ಒಳಗೆ ಇಳಿದ ಸಂದ‘ರ್ಗಳಲ್ಲಿ ಅವರಿಗೆ ಆಮ್ಲಜನಕ ಪೂರೈಸುವುದು ಸೇರಿದಂತೆ ಅಗತ್ಯ ಸುರಕ್ಷತೆಗಳನ್ನು ಒದಗಿಸಬೇಕು.
ಮ್ಯಾನ್‌ಹೋಲ್‌ನಲ್ಲಿ ಹಾಗೂ ಎಸ್‌ಟಿಪಿಗಳಲ್ಲಿ ಮೀಥೇನ್, ಕಾರ್ಬನ್ ಮಾನಾಕ್ಸೈಡ್‌ನಂತಹ ವಿಷಕಾರಿ ಅನಿಲಗಳಿರುತ್ತವೆ. ಹೀಗಾಗಿ ಇಳಿಯುವುದಕ್ಕೂ ಮೊದಲು ಕನಿಷ್ಠ ಒಂದು ತಾಸುಗಳ ಕಾಲ ಮುಚ್ಚಳವನ್ನು ತೆರೆದಿಡಬೇಕು. ಇಳಿಯುವುದಕ್ಕೂ ಮೊದಲು ಮೈಗೆ ಕೊಬ್ಬರಿ ಎಣ್ಣೆ ಸವರಿಕೊಂಡು, ಮಾಸ್ಕ್‌, ಕೈಗವಸು ಹಾಗೂ ಬೂಟು ಧರಿಸಿ ಗುಂಡಿಗೆ ಇಳಿಯಬೇಕು.
ನಂತರ ಪ್ರತಿ ಮೂರು ನಿಮಿಷಕ್ಕೊಮ್ಮೆ ಸಹಾಯಕರು ಅನಿಲ ಪರೀಕ್ಷೆ ಮಾಡುತ್ತಿರಬೇಕು. ಗುಂಡಿಯೊಳಗಿನ ವಿಷ ಅನಿಲದಿಂದ ರಕ್ಷಣೆ ನೀಡಲು ಹೊರಗಿನ ಗಾಳಿಯನ್ನು ಬ್ಲೋವರ್ಸ್ ಮೂಲಕ ಒಳಗೆ ಹಾಯಿಸಬೇಕು. ಜೊತೆಗೆ ಗುಂಡಿಯೊಳಕ್ಕೆ ಇಳಿದ ಕಾರ್ಮಿಕರ ಜೊತೆ ಸದಾ ಮಾತನಾಡುತ್ತಿರಬೇಕು.

ಮಲ ಹೊರುವ ಪದ್ಧತಿ ವಿರುದ್ಧ ಜಾಗೃತಿ
ಬೆಜವಾಡ ವಿಲ್ಸನ್‌ಗೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ
ಕೆಜಿಎ್ನ ಬೆಜವಾಡ ವಿಲ್ಸನ್ ಅವರು ಮಲ ಹೊರುವ ಪದ್ಧತಿಯ ವಿರುದ್ಧ ಜನಜಾಗೃತಿ ಕಾರ್ಯಗಳನ್ನು ಕೈಗೊಂಡವರು. ರಾಷ್ಟ್ರೀಯ ಸಾಯಿ ಕರ್ಮಚಾರಿ ಆಂದೋಲನದ ಸಂಚಾಲಕರು. 1986ರಿಂದ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿಯ ವಿರುದ್ಧ ಮಲ ಹೊರುವ ಕಾರ್ಮಿಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳುತ್ತ ಬಂದಿದ್ದಾರೆ. ಕೋಲಾರದ ಕೆಜಿಎ್ ಹಾಗೂ ಕೋಲಾರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಆಂದೋಲನ ಕೈಗೊಂಡರು. ಮಲ ಹೊರುವ ಪದ್ಧತಿ ನಿಷೇಸುವಂತೆ ರಾಷ್ಟ್ರಪತಿ, ಪ್ರ‘ಾನ ಮಂತ್ರಿ ಹಾಗೂ ಇತರ ಜನಪ್ರತಿನಿಗಳಿಗೆ ಪತ್ರ ಚಳುವಳಿ ಮೂಲಕ ತ್ತಡ ಹೇರಿದರು. ಇವರಿಗೆ 2017ರ ಜುಲೈ 27ರಂದು ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ದೊರೆತಿದೆ.

ಆಗಬೇಕಿದೆ ಕಟ್ಟುನಿಟ್ಟಿನ ಕ್ರಮ :
ಮಲ ಹೊರುವ ಪದ್ಧತಿ ರಾಜ್ಯಾದ್ಯಂತ ಕಟ್ಟುನಿಟ್ಟಾಗಿ ನಿಷೇ‘ವಾಗಬೇಕಿದೆ. ಅಲ್ಲೊಮ್ಮೆ ಇಲ್ಲೊಮ್ಮೆ ಈ ಪದ್ಧತಿಯಿಂದಾಗಿ ಕಾರ್ಮಿಕರು ಸಾಯುತ್ತಿದ್ದರೂ ರಾಜ್ಯ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿಲ್ಲ. ಮಲ ಹೊರುವವರಿಗೆ ಪುನರ್ವಸತಿ ಕಲ್ಪಿಸುವುದರ ಜೊತೆಗೆ ಮಲ ಹೊರಲು ಒತ್ತಾಯಿಸುವವರ ಹಾಗೂ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಾಗ ಮಾತ್ರ ಮಲ ಹೊರುವ ಪದ್ಧತಿಯನ್ನು ಅಂತ್ಯಗೊಳಿಸಬಹುದಾಗಿದೆ

 

Courtesy:-