ಕರಾಳಿಯಾದ್ಯಂತ ಕ್ರಿಮಿನಲ್ ಗಳ ಅಟ್ಟಹಾಸ ಮಿತಿಮೀರಿದ್ದು ಕೊಲೆಗಳು ಹೆಚ್ಚಾಗುತ್ತಿದೆ.ಇತಿಚಿಗಿನ ಮೂರೂ ಕೊಲೆ ಪ್ರಕರಣ ಕುರಿತು ನಿವೃತ್ತ ನ್ಯಾಯಾಧೀಶರ ನೇತ್ರತ್ವದಲ್ಲಿ ತನಿಖೆ ನಡೆಸಲು ವಿಧಾನ ಪರಿಷತ್ ಸದಸ್ಯ, ಭರವಸೆ ಸಮಿತಿ ಅಧ್ಯಕ್ಷರಾದ ಬಿ ಎಮ್ ಫಾರೂಕ್ ಆಗ್ರಹಿಸಿದ್ದಾರೆ. ಧಾರ್ಮಿಕ ,ಶೈಕ್ಷಣಿಕ, ಬ್ಯಾಂಕಿಂಗ್ ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ವಿಶ್ವ ವಿಖ್ಯಾತ ಗೊಂಡಿದ ಜಿಲ್ಲೆಯಾಗಿದೆ ದಕ್ಷಿಣ ಕನ್ನಡ. ಇತ್ತೀಚಿನ ವಿದ್ಯಮಾನಗಳು ಶಾಂತಿಪ್ರಿಯ ನಾಗರಿಕರ ಕಂಗಡಿಸಿದೆ. ಹತ್ತು ದಿನದ ಅಂತರದಲ್ಲಿ ನಡೆದಂತಹ ಮೂರು ಯುವಕರ ಕೊಲೆಗಳು ಸಂಪೂರ್ಣ ಆಡಳಿತ ವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯೆ , ಅದಕ್ಕೂ ಮೊದಲು ನಡೆದ ಮಸೂದ್ ಹತ್ಯೆ. ಮತ್ತು ಮುಖ್ಯಮಂತ್ರಿಗಳು ಮಂಗಳೂರಲ್ಲಿ ಇದ್ದಾಗ ನಡೆದಂತಹ ಫಾಝಿಲ್ ಹತ್ಯೆ ಮೊದಲಾದ ಘಟನೆಗಳು ಜನರನ್ನು ಭಯಭೀತಗೊಳಿಸಿದೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜಧರ್ಮ ಪಾಲಿಸಿದೆ ತಾರತಮ್ಯ ಮಾಡಿ ಮುಖ್ಯಮಂತ್ರಿ ಸ್ಥಾನದ ಘನತೆ -ಗೌರವಕ್ಕೆ ಧಕ್ಕೆ ಮಾಡಿದ್ದಾರೆ. ಬೆಲ್ಲಾರೆಯ ಮಸೂದ ಮನೆ ಕೆಲವೇ ಕಿಲೋಮೀಟರ್ ಹತ್ತಿರದಲ್ಲಿ ಇದ್ದರೂ ಅಲ್ಲಿಗೆ ಮುಖ್ಯಮಂತ್ರಿಗಳು ಭೇಟಿ ಕೊಡದೆ ಪರಿಹಾರ ನೀಡದೆ ತಾರತಮ್ಯ ನೀತಿ ಅನುಸರಿಸಿದ್ದಾರೆ .ರಾಜ್ಯಪಾಲರ ಮುಂದೆ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದಾಗ ಮಾಡಿದಂತಹ ಪ್ರಮಾಣವಚನವನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಕೇವಲ ಒಂದೇ ಸಮುದಾಯದ ಮುಖ್ಯಮಂತ್ರಿಯಂತೆ ವರ್ತಿಸಿದ್ದಾರೆ.
ಸುರತ್ಕಲ್ ನ ಫಾಝಿಲ್ ಹತ್ಯ ತನಿಖೆಗೆ ಅಲ್ಲಿನ ಶಾಸಕ ಭರತ್ ಶೆಟ್ಟಿ ಅವರು ನಿರಂತರವಾಗಿ ಹಸ್ತಕ್ಷೇಪ ಮಾಡಿದ್ದು ಖಂಡನೀಯ ಎಂದು ಬಿಎಂ ಫಾರೂಕ್ ವಿಷಾದಿಸಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಗಟ್ಟಿಯಾಗಲು ಎಲ್ಲರೂ ಕೈಜೋಡಿಸಬೇಕು ಎಂದು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಯಾರು ದ್ವೇಷ ರಾಜಕಾರಣ ಮಾಡಬಾರದು. ಸುಳ್ಳು ಸುದ್ದಿ ಮತ್ತು ಗಾಳಿ ಸುದ್ದಿ ಗಳಿಗೆ ಯಾರು ಕಿವಿಗೊಡಬಾರದು ಎಂದು ಜಿಲ್ಲೆಯ ಎಲ್ಲಾ ಜಾತಿ ಧರ್ಮದ ಜನರೊಂದಿಗೆ ವಿನಮ್ರವಾಗಿ ಬಿಎಂ ಫಾರೂಕ್ ವಿನಂತಿಸಿದ್ದಾರೆ.