ಸುಳ್ಯದಲ್ಲಿ ಮಸೂದ್ ಮತ್ತು ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿರುವ ಬೆನ್ನಲ್ಲಿಯೇ ಇಂದು ಸುರತ್ಕಲ್ ನಲ್ಲಿ ಫಾಝೀಲ್ ಎಂಬ ಯುವಕನ ಕೊಲೆ ನಡೆದಿರುವುದು ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿರುವುದಕ್ಕೆ ಸಾಕ್ಷಿ.

ದಕ್ಷಿಣ ಕನ್ನಡದ ಸರಣಿ ಹತ್ಯೆಗಳನ್ನು ಖಂಡಿಸದೆ, ದುಷ್ಕರ್ಮಿಗಳನ್ನು ಬಂಧಿಸಿ ಜೈಲಿಗೆ ಅಟ್ಟದೆ, ಅವರ ದುಷ್ಕೃತ್ಯವನ್ನು ಕ್ರಿಯೆಗೆ-ಪ್ರತಿಕ್ರಿಯೆ ಎಂಬ ಸಮರ್ಥನೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಇದಕ್ಕೆ ಹೊಣೆಗಾರರು. ಅವರು ಜಿಲ್ಲೆಯಲ್ಲಿರುವಾಗಲೇ ನಡೆದಿರುವ ಹತ್ಯೆ ಅವರ ಮುಖಕ್ಕೆ ಮಂಗಳಾರತಿ ಮಾಡಿದಂತಿದೆ.
ಅಸಮರ್ಥ ಗೃಹಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಯಾವುದೇ ನಿಯಂತ್ರಣ ಇಲ್ಲದಂತಾಗಿದೆ. ಇದರಿಂದಾಗಿ ದುಷ್ಕರ್ಮಿಗಳು ರಾಜಾರೋಷವಾಗಿ ಹತ್ಯಾಕಾಂಡವನ್ನು ಮುಂದುವರಿಸಿದ್ದಾರೆ. ಮುಖ್ಯಮಂತ್ರಿಗಳು ಗೃಹಸಚಿವ ಸ್ಥಾನದಿಂದ ಆರಗ ಜ್ಞಾನೇಂದ್ರ ಅವರನ್ನು ತಕ್ಷಣ ಕಿತ್ತುಹಾಕದೆ ಇದ್ದರೆ ರಾಜ್ಯದಲ್ಲಿ ಜನ ಮನೆಯಿಂದ ಹೊರಗೆ ಬರುವುದೂ ಕಷ್ಟವಾಗಬಹುದು.

ಕೊಲೆಗಡುಕರು ಯಾವುದೇ ಪಕ್ಷ, ಪಂಥ, ಜಾತಿ, ಧರ್ಮದವರಾಗಿದ್ದರೂ ಅವರನ್ನು ಪತ್ತೆ ಹಚ್ಚಿ ಜೈಲಿಗೆ ಅಟ್ಟಬೇಕಾಗಿರುವ ರಾಜ್ಯ ಸರ್ಕಾರ, ಹೆಣಗಳನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಹಾಕುತ್ತಿರುವುದು ಅತ್ಯಂತ ದುರದೃಷ್ಟಕರ.
ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರು ಅವರನ್ನು ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟಬೇಕು. ಆದರೆ ರಾಜ್ಯ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಮತ್ತು ಜನಾಕ್ರೋಶವನ್ನು ಶಾಂತಗೊಳಿಸಲು ತನಿಖೆಯ ನೆಪದಲ್ಲಿ ಆರೋಪಿಗಳ ಹೊರತಾಗಿ ಅಮಾಯಕರಿಗೆ ಕಿರುಕುಳ ನೀಡುವುದು ಸಲ್ಲದು. ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

#####

ಸುರತ್ಕಲ್ ಪಾಝಿಲ್ ಹತ್ಯೆಯ ಹಿಂದೆ ಆರೆಸ್ಸೆಸ್-ಬಿಜೆಪಿ: ಪಾಪ್ಯುಲರ್ ಫ್ರಂಟ್

ಸುರತ್ಕಲ್ ನಲ್ಲಿ ನಡೆದ ಪಾಝಿಲ್ ಹತ್ಯೆಗೆ ಆರೆಸ್ಸೆಸ್-ಬಿಜೆಪಿ ನಾಯಕರ ಪ್ರಚೋದನೆಯೇ ನೇರ ಕಾರಣ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಹೇಳಿದ್ದಾರೆ.

ಸಾವಿನ ವ್ಯಾಪಾರವನ್ನು ಕರಗತ ಮಾಡಿಕೊಂಡಿರುವ ಆರೆಸ್ಸೆಸ್-ಬಿಜೆಪಿ ಕೊಲೆ ರಾಜಕೀಯದ ಮೂಲಕ ದ.ಕ.ಜಿಲ್ಲೆಯನ್ನು ಪ್ರಕ್ಷ್ಯುಬ್ಧವಾಗಿಡಲು ಹವಣಿಸುತ್ತಿದೆ. ಈ ಕಾರಣಕ್ಕಾಗಿಯೇ ಸುಳ್ಯದಲ್ಲಿ ಪ್ರವೀಣ್ ಹತ್ಯೆಯಾದಾಗ ಅವರು ಬಹಳಷ್ಟು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿದರು ಮತ್ತು ಮುಸ್ಲಿಮ್ ಸಮುದಾಯದ ವಿರುದ್ಧ ದ್ವೇಷ ಹರಡುವ ಕೃತ್ಯಗಳ‌‌ನ್ನು ನಡೆಸಿದರು. ಅದರ ಜೊತೆಗೇ ಸುಳ್ಯದಲ್ಲಿ ಶವ ಮೆರವಣಿಗೆಯ ಉದ್ದಕ್ಕೂ ಸಂಘಪರಿವಾರದ ಕಾರ್ಯಕರ್ತರಲ್ಲಿ ಪ್ರತೀಕಾರದ ಮನೋಸ್ಥಿತಿಯನ್ನು ಸೃಷ್ಟಿಸಿದರು. ಇದರ‌ ಮುಂದುವರಿದ ಭಾಗವಾಗಿಯೇ ಇಂದು ಪಾಝಿಲ್ ಎಂಬ ಅಮಾಯಕ ಯುವಕನ ಹತ್ಯೆ ನಡೆದಿದೆ. ಈ ನಡುವೆ, ಕೋಮು ವೈಷಮ್ಯದಿಂದ ನಡೆದ ಈ ಕೊಲೆಯನ್ನು ವ್ಯವಹಾರಿಕ ಕಲಹದಿಂದ ನಡೆದ ಕೊಲೆ ಎಂದು ಬಿಜೆಪಿ ನಾಯಕರು ಬಿಂಬಿಸುತ್ತಿದ್ದಾರೆ. ಇದು ತನಿಖೆಯ ಹಾದಿ ತಪ್ಪಿಸುವ ಪ್ರಯತ್ನವಾಗಿದ್ದು, ಈ ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವುದೇ ಸೂಕ್ತವಾಗಿದೆ.

ಸಂಘಪರಿವಾರ ದುಷ್ಕರ್ಮಿಗಳಿಂದ ಹತ್ಯೆಯಾದ‌ ಮಸೂದ್‌ ಬಗ್ಗೆ ಮೌನ ವಹಿಸಿ ಮಾಧ್ಯಮಗಳೂ ಪ್ರವೀಣ್ ಘಟನೆಯನ್ನು ವೈಭವೀಕರಿಸಿಕೊಂಡು ಸುದ್ದಿ ಪ್ರಸಾರ ಮಾಡಿದವು. ಈ ಮೂಲಕ ದ್ವೇಷ, ಅಸಹನೆ‌ ಬಿತ್ತಿದ್ದ ಕೆಲವೊಂದು ಪೂರ್ವಾಗ್ರಹಪೀಡಿತ ಮಾಧ್ಯಮಗಳು ಕೂಡ ಪಾಝಿಲ್ ಹತ್ಯೆಯ ಹೊಣೆಯನ್ನು ಹೊರಬೇಕಾಗಿದೆ ಎಂದು ಇಜಾಝ್ ಅಹ್ಮದ್ ಪ್ರಕಟ‌ನೆಯಲ್ಲಿ ಹೇಳಿದ್ದಾರೆ.

###

ಫಾಝಿಲ್ ಯಾವ ಸಂಘಟನೆಗೂ ಸೇರಿದವನಲ್ಲ. ಫಾಝಿಲ್ ಈವರೆಗೂ ಯಾವ ಕೋಮುಗಲಭೆಗಳಲ್ಲೂ, ಗದ್ದಲದಲ್ಲೂ ಭಾಗಿಯಾದವಲ್ಲ. ಫಾಝಿಲ್ ಬದುಕು ಕರಾವಳಿಗರ ಕಣ್ಣು ತೆರೆಸಬೇಕಿತ್ತು. ಫಾಝಿಲ್ ಬದುಕು ಕೇವಲ ಫಾಝಿಲನದ್ದು ಮಾತ್ರವಲ್ಲ. ಇಡೀ ಕರಾವಳಿ ಈ ಬಗ್ಗೆ ಯೋಚಿಸಬೇಕಿತ್ತು.‌ ದುರಾದೃಷ್ಟವಶಾತ್ ಕರಾವಳಿಗರು ಕೋಮುಗಲಭೆಗಳಲ್ಲಿ ಮುಳುಗಿದ್ದಾರೆ.

ಮಂಗಳೂರಿನಲ್ಲಿ ದೇಶದ ಬಹುದೊಡ್ಡ ಪೆಟ್ರೋಲಿಯಂ ರಿಫೈನರಿಯಿದೆ. ಮಂಗಳೂರು ವಿಶೇಷ ಆರ್ಥಿಕ ವಲಯವೂ ಇದೆ. ಇಲ್ಲಿ ಪೆಟ್ರೋಲ್, ಡಿಸೇಲ್, ಗ್ಯಾಸ್, ಡಾಂಬರು ತುಂಬಿಸಿಕೊಂಡು ಸರಬರಾಜು ಮಾಡಲು ದೇಶದಾದ್ಯಂತ ಟ್ಯಾಂಕರ್ ಗಳು ಬರುತ್ತದೆ. ಹೆದ್ದಾರಿಯಿಂದ ಸುರತ್ಕಲ್ ಮಾರ್ಗವಾಗಿ ಎಂಆರ್ ಪಿಎಲ್ ಒಳಗೆ ಟ್ಯಾಂಕರ್ ಗಳು ಪ್ರವೇಶಿಸುತ್ತದೆ. ಈ ಟ್ಯಾಂಕರ್ ಉದ್ಯಮದ್ದೇ ಒಂದು ಮಾಫಿಯಾ. ಟ್ಯಾಂಕರ್ ನಲ್ಲಿ ಡ್ರೈವರ್ ಜೊತೆ ಕ್ಲೀನರ್ ಕೂಡಾ ಇರಬೇಕು. ಸಂಬಳ ಉಳಿಸಲು ಟ್ಯಾಂಕರ್ ನಲ್ಲಿ ಡ್ರೈವರ್ ಮಾತ್ರ ಬರುತ್ತಾರೆ. ಎಂಅರ್ ಪಿಎಲ್ ಒಳ ಹೋಗಬೇಕಾದರೆ ಕ್ಲೀನರ್ ಇರಲೇಬೇಕು ಎಂಬುದು ನಿಯಮ.

ಹಾಗಾಗಿ ಟ್ಯಾಂಕರ್ ಡ್ರೈವರ್ ಗಳು ಎಂಅರ್ ಪಿಎಲ್ ಗೇಟ್ ಬಳಿ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡಿ ಕ್ಲೀನರ್ ಗಳಿಗಾಗಿ ಕಾಯುತ್ತಾರೆ. ಮಂಗಳೂರಿನ ಹುಡುಗರು ಕ್ಲೀನರ್ ಆಗಿ ಎಂಅರ್ ಪಿಎಲ್ ಒಳಹೋಗಲು ಕಾಯುತ್ತಿರುತ್ತಾರೆ. ಹೀಗೆ ಕಾಯುತ್ತಿದ್ದ ಹುಡುಗರನ್ನು ಟ್ಯಾಂಕರ್ ಹತ್ತಿಸಿ ಎಂಆರ್ ಪಿಎಲ್ ಒಳಗೆ ಕರೆದೊಯ್ಯಲಾಗುತ್ತದೆ. ಗ್ಯಾಸ್, ಪೆಟ್ರೋಲ್, ಡಾಮಾರು ತುಂಬಿಸಲು ಸಹಾಯ ಮಾಡುವುದು ಕ್ಲೀನರ್ ಕೆಲಸ. ಹಾಗೆ ತುಂಬಿದ ಟ್ಯಾಂಕರ್ ಹೊರ ಬಂದ ಮೇಲೆ ಗೇಟ್ ನಲ್ಲಿ ಕ್ಲೀನರ್ ಇಳಿಯಬೇಕು. ಇದು ಮಂಗಳೂರಿಗೆ ಬಂದ ಬೃಹತ್ ಕೈಗಾರಿಕೆಗಳು ಮಂಗಳೂರಿಗರಿಗೆ ಕೊಟ್ಟ ಉದ್ಯೋಗ.

ನೋಡೋಕೆ ಸಿನೇಮಾ ಹೀರೋ ತರಹ ಕಾಣುವ ಫಾಝಿಲ್ ಇದೇ ಕೆಲಸ ಮಾಡುತ್ತಿದ್ದ. ಮಂಗಳಪೇಟೆಯ ಬಡ ಕುಟುಂಬದಲ್ಲಿ ಹುಟ್ಟಿರುವ ಫಾಝಿಲ್ ಎಂಅರ್ ಪಿಎಲ್ ಗೆ ಬರೋ ಟ್ಯಾಂಕರ್ ಗಾಗಿ ಕಾಯುತ್ತಾನೆ. ಮಂಗಳಪೇಟೆಯೆಂದರೆ ಎಂಆರ್ ಪಿಎಲ್ ನ ಕಂಪೌಂಡಿಗೆ ತಾಗಿಕೊಂಡಿರುವ ಗ್ರಾಮ. ಎಂಆರ್ ಪಿಎಲ್ ನ ಎತ್ತರದ ಚಿಮಿಣಿಯ ನೆರಳೂ, ಚಿಮಣಿಯ ಬೆಂಕಿಯ ಬೆಳಕೂ ಮಂಗಳಪೇಟೆಗೆ ಬೀಳುತ್ತದೆ. ಅಂತಹ ಮಂಗಳಪೇಟೆಯ ಹುಡುಗ ಫಾಝಿಲ್ ಉದ್ಯೋಗಕ್ಕಾಗಿ ದಿನಾ ಎಂಆರ್ ಪಿಎಲ್ ಗೇಟ್ ಎದುರು ಟ್ಯಾಂಕರ್ ಗಾಗಿ ಕಾಯಬೇಕು.

ಮಂಗಳೂರಿನ ಕೋಮುದ್ವೇಷಕ್ಕೆ ಮುಸ್ಲೀಮ್ ಹುಡುಗರ ಫ್ಯಾಶನ್ ಕೂಡಾ ಕಾರಣ. ಈ ರೀತಿ ಬ್ಯಾರಿ ಮುಸ್ಲಿಂ ಹುಡುಗರು ಸಿನೇಮಾ ಹೀರೋಗಳಂತೆ ಕಾಣಲು ಅವರ ಕಠಿಣ ಪರಿಶ್ರಮ ಕಾರಣ. ಬೆಳಿಗ್ಗೆದ್ದು ಮೀನು ಮಾರಾಟ, ಗುಜರಿ, ಕ್ಲೀನರ್ ಕೆಲಸ ಮಾಡುವ ಬ್ಯಾರಿ ಹುಡುಗರು ಬದುಕನ್ನು ಸಂಭ್ರಮಿಸುತ್ತಾರೆ. ಇದು ನಿರುದ್ಯೋಗಿಗಳ ಅಸೂಯೆಗೆ ಕಾರಣವಾಗಿ ಕೋಮುದ್ವೇಷ ಉಂಟಾಗುವುದೂ ಒಂದು ಕಾರಣ. ಈ ಆರ್ಥಿಕ, ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು, ಬ್ಯಾರಿಗಳಂತೆಯೇ ಆರ್ಥಿಕವಾಗಿ ಸದೃಡರಾಗಲು ಎಂಅರ್ ಪಿಎಲ್, ಎಸ್ ಇಝಡ್ ಗಳಲ್ಲಿ ಖಾಯಂ ಉದ್ಯೋಗಕ್ಕಾಗಿ ಹೋರಾಟ ಮಾಡಬೇಕಿತ್ತು. ಸುರತ್ಕಲ್ ನಲ್ಲಿ ಸಾವಿಗೀಡಾದ ಶ್ರಮಿಕ ಫಾಝಿಲ್ ಬದುಕನ್ನು ನಾವು ಹೀಗೆ ನೋಡಬೇಕಿದೆ.

– ನವೀನ್ ಸೂರಿಂಜೆ

#₹₹₹₹₹₹₹₹₹₹

ಗೌರವಾನ್ವಿತ ಮುಖ್ಯಮಂತ್ರಿಗಳೇ
ತಾವು ಒಂದು ಸಮುದಾಯದ ಮುಖ್ಯಮಂತ್ರಿಯೇ
ಅಲ್ಲ ಕರ್ನಾಟಕದ ರಾಜ್ಯದ ಮುಖ್ಯಮಂತ್ರಿಯೇ?
ಎಂಬುದನ್ನು ಬಹಿರಂಗಪಡಿಸಿ
ಎಲ್ಲಾ ಜಾತಿ ಧರ್ಮ ಪಂಗಡಗಳಿಗೆ ಸಮಾನ ಅವಕಾಶ ಮಾಡಿ ಕೊಟ್ಟು ರಾಜ್ಯದಲ್ಲಿ ಶಾಂತಿ ಸೌಹಾರ್ದತೆಯಿಂದ ಬಾಳಿ ಬದುಕಲು ಅನುವು ಮಾಡಿಕೊಡುತ್ತೇನೆಂದು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಮುಖ್ಯಮಂತ್ರಿ ಆದಂತಹ ತಾವುಗಳು
ಮೊನ್ನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಹತ್ಯೆಯಾದ ಸಹೋದರ ಪ್ರವೀಣ್ ನೆಟ್ಟಾರು ರವರ ಮನೆಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದೀರಿ ಅದುಸ್ವಾಗತಾರ್ಹ,
ಇನ್ನೂ ಸ್ವಲ್ಪ ಜಾಸ್ತಿಯೇ ಕೊಡಬೇಕಿತ್ತು ಎಂಬುದಾಗಿದೆ ನನ್ನ ಅಭಿಪ್ರಾಯ,
ಆದರೂ ಅದೇ ಊರಲ್ಲಿ ಅದಕ್ಕಿಂತಲೂ ಮೂರು ದಿವಸ ಮುಂಚೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಹತ್ಯೆಯಾದಂತಹ ಸಹೋದರ ಮಸ್ಹೂದ್ ರವರ ಮನೆಗೆ ಹೋಗಿ ಸಾಂತ್ವನ ಹೇಳಿ ಪರಿಹಾರ ಘೋಷಿಸಸಿದ್ದು ಎಷ್ಟು ಸರಿ ?
ಸರಕಾರದ ಖಜಾನೆಯು ಬರೇ ಒಂದು ಸಮುದಾಯದ್ದು ಮಾತ್ರವಲ್ಲ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ,
ಮತ್ಯಾಕೆ ಸಾರ್ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಸುರಿಸುವುದು ?
ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಇಂತಹ ತಾರತಮ್ಯ ನೀತಿ ದೇವರಿಗೆ ಮಾಡುವ ಅನ್ಯಾಯವಲ್ಲವೇ ?
‘ಆಕ್ಷನ್ ಗೆ ರಿಯಾಕ್ಷನ್ ‘ ಎಂಬ ತಮ್ಮ ಹೇಳಿಕೆಯು ಎಷ್ಟು ಸರಿ ಇಂತಹ ಹೇಳಿಕೆಗಳಿಂದ ಸಾರ್ವಜನಿಕರಿಗೆ ಸಿಗುವಂತಹ ಮೆಸೇಜಾದರೂ ಏನು?
ರಾಜಕಾರಣಿಗಳು ಯಾರೇ ಆಗಿರಲಿ ಶವವನ್ನಿಟ್ಟು ರಾಜಕಾರಣ ಮಾಡುವುದನ್ನು ಬಿಟ್ಟು ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗಿ ಎಲ್ಲಾ ಸಮುದಾಯದವರು ನಮ್ಮ ದೇಶದ ಪ್ರಜೆಗಳೆಂದು ಭಾವಿಸಿ ಮುನ್ನಡೆದರೆ ಮಾತ್ರ ನಮ್ಮ ರಾಜ್ಯ ಹಾಗೂ ದೇಶ ವಿಶ್ವಕ್ಕೆ ಮಾದರಿಯಾಗುವುದು,
ಇದೀಗ ನಮ್ಮ ಜಿಲ್ಲೆಯಲ್ಲಿ ಮೂರು ಅಮಾಯಕರ ಜೀವ ಹೋಯಿತು,
ಈ ಮೂರು ಅಮಾಯಕರ ರಕ್ತದ ಬಣ್ಣವು ಕೆಂಪೇ ಆಗಿತ್ತು
ನಂತರ ಎಲ್ಲರೂ ಕರೆದಂತಹ ಹೆಸರು ಶವ ಎಂಬುದಾಗಿತ್ತು,
ಮತ್ತೆ ಯಾಕೆ ಈ ತಾರತಮ್ಯನೀತಿ
ಇನ್ನಾದರೂ ಪ್ರಜೆಗಳು ಎಚ್ಚೆತ್ತುಕೊಂಡು ದೇಶದ ಭವಿಷ್ಯಕ್ಕಾಗಿ ಮುನ್ನಡೆಯೋಣ ನಾವೆಲ್ಲರೂ ಭಾರತೀಯರು
ಇನ್ಮುಂದೆ ರಕ್ತ ಚೆಲ್ಲುವುದಾದರೆ ನಮ್ಮ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಚೀನ ಮುಂತಾದ ದೇಶಗಳ ವಿರುದ್ಧವಾಗಲಿ
ಮೂರು ಅಮಾಯಕರ ಕುಟುಂಬಕ್ಕೆ ದೇವರು ಶಾಂತಿ ಸಮಾಧಾನ ನೀಡಲಿ

ತಬೂಕ್ ದಾರಿಮಿ ✍️

############

*ಶಾಂತಿ ಕಾಪಾಡಲು ಮನವಿ*

ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಅಹಿತಕರ ಘಟನೆಗಳು ಖಂಡನೀಯ ಮತ್ತು ದುಃಖಕರ. ಸಂಬಂಧ ಪಟ್ಟ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ.
ಮೇಲಿನ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಯಾರೂ ಉದ್ವೇಗಕ್ಕೊಳಗಾಗದೆ ದೇಶದ, ರಾಜ್ಯದ ಕಾನೂನನ್ನು ಗೌರವಿಸಿ ಎಲ್ಲರೂ ಶಾಂತಿ ಸೌಹಾರ್ದ ಕಾಪಾಡಬೇಕಾಗಿ ವಿನಂತಿಸುತ್ತೇನೆ.
ಮಸ್ಜಿದ್ ಖತೀಬ್ ಮತ್ತು ಇಮಾಂಗಳು ಜುಮುಅಃ ದ ನಂತರ ಜನರಿಗೆ ಸೌಹಾರ್ದ ಸಂದೇಶ ನೀಡಬೇಕೆಂದು ಕೇಳಿಕೊಳ್ಳುತ್ತೇನೆ.

*ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಕೂರತ್*
*ಉಳ್ಳಾಲ ಖಾಝಿ*

#########₹₹#

 

*ಸುರತ್ಕಲ್ ಪಾಝಿಲ್ ಎಂಬ ಯುವಕನ ಹತ್ಯೆ,ಶಾಸಕ ಯು.ಟಿ.ಖಾದರ್ ಖಂಡನೆ,ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ,ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯ.*

ಸುರತ್ಕಲ್ ಮಂಗಳಪೇಟೆ ನಿವಾಸಿ ಪಾಝಿಲ್ ಎಂಬ ಯುವಕನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.ಅರೋಪಿಗಳು ಯಾರೇ ಆಗಲಿ ಶೀಘ್ರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಳು ಸಂಭವಿಸುತ್ತಿದ್ದು, ಕೋಮು ಸೌಹಾರ್ದತೆ ಹಾಳಾಗುವ ಸೂಚನೆ ದಟ್ಟವಾಗಿದೆ.ಆದುದರಿಂದ ಇದನ್ನು ಸರಕಾರ ಹಾಗೂ ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಉಳಿಸಲು ತಕ್ಷಣ ಕಾರ್ಯ ಪ್ರವೃತ್ತರಾಗಿ ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

####
ಸುರತ್ಕಲ್ನಲ್ಲಿ ನಡೆದ ಫಾಝಿಲ್ ಹತ್ಯೆಗೆ BJP Karnataka ದ ಮಂತ್ರಿಗಳ, ಶಾಸಕರ ಪ್ರಚೋದನಾತ್ಮಕ ಹೇಳಿಕೆಗಳು ಮತ್ತು ಬಹುತೇಕ ಮಾಧ್ಯಮಗಳ ಪ್ರಚೋದನಾತ್ಮಕ ವರಧಿಗಳೇ ಕಾರಣ.

ರಾಜ್ಯದಲ್ಲಿ ಹಿಂದೂಗಳ ಕೊಲೆ ನಡೆದರೆ ಅದನ್ನು SDPI ತಲೆಗೆ ಕಟ್ಟಿ, ಅದರಿಂದ ರಾಜಕೀಯ ಲಾಭ ಪಡೆಯುವುದೇ BJP ಯ ಉದ್ದೇಶ ಎಂದು sdpi ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿಳಿಸಿದ್ದಾರೆ.

##########