• *ಟೀಂ -ಬಿ ಹ್ಯೂಮನ್ ಟ್ರಸ್ಟಿ ಸಲಹೆಗರಾರ ಸಭೆಯಲ್ಲಿ ಸಂಘ-ಸಂಸ್ಥೆಗಳೊಂದಿಗೆ ಸಮನ್ವಯತೆ ಸಾಧಿಸಿ ಮುಂದಿನ ಯೋಜನೆ*
    !!!!!!!!!!!!!!!!!!!!!!!!!!!!!!!!!!!!!!!!!!
    ಪರಸ್ಪರ ನಂಭಿಕೆ ಮತ್ತು ಮುಕ್ತ ಸಂವಾದದ ಮೂಲಕ ಸಾಮಾಜಿಕ ಕ್ಷೇತ್ರದಲ್ಲಿ ವಿಭಿನ್ನವಾಗಿ ಕಾರ್ಯಾಚರಿಸುತ್ತಿರುವ ಸಂಘಟನೆಯಾಗಿದೆ ಟೀಂ ಬಿ ಹ್ಯೂಮನ್. ಸಮಾಜದ ಅಭಿವೃದ್ದಿಗೆ ಸುಲಭ ಉಪಾಯಗಳು, ಸ್ವತಂತ್ರ ಆಲೋಚನೆ ಮತ್ತು ಪರಿಣಾಮಕಾರಿ ಯೋಜನೆಗಳನ್ನು ಯಾರು ಮಾಡಿದರೂ ಅವರೊಂದಿಗೆ ಸಹಯೋಗಕ್ಕೆ ಟೀಂ ಬಿ ಹ್ಯೂಮನ್ ಸಿದ್ದವಿದೆ ಎನ್ನುವ ನಿರ್ಧಾರವನ್ನು ಇತ್ತೀಚೆಗೆ ನಡೆದ ಸಂಸ್ಥೆಯ ಟ್ರಸ್ಟಿಗಳ, ಸಲಹೆಗರಾರ ಸಭೆಯಲ್ಲಿ ಒಮ್ಮತದಿಂದ ಅಂಗೀಕರಿಸಲಾಯಿತು. ನಾವು ಒಂದು ಸಮುದಾಯ, ಜಾತಿ, ವರ್ಗಕ್ಕೆ ಮೀಸಲಾಗಿಲ್ಲ. ನಮ್ಮೂರಿನಲ್ಲಿ ಜನಸೇವೆ ಮಾಡುವ, ದೊಡ್ಡ ಮಟ್ಟದಲ್ಲಿ ಸಮಾಜಿಕ ಕಲ್ಯಾಣಕ್ಕೆ ಶ್ರಮಿಸುವ ಸಂಘಟನೆಗಳು, ಸಂಸ್ಥೆಗಳು ಇದೆ. ಹೀಗಿರುವಾಗ ನಮ್ಮ ಸಣ್ಣ ಪ್ರಯತ್ನಗಳಲ್ಲಿ ನಾವು ಸಹಯೋಗದೊಂದಿಗೆ ಮಾಡಬೇಕಾಗಿದೆ ಎನ್ನುವ ಸಲಹೆಯನ್ನೂ ಈ ಸಂದರ್ಭ ಟ್ರಸ್ಟಿಗಳು ಅಂಗೀಕರಿಸಿದರು.

ಟೀಂ ಬಿ ಹ್ಯೂಮನ್ ಈಗ ವಿದೇಶದಲ್ಲೂ ತನ್ನ ಸಂಘಟನೆಯ ಸಹಯೋಗವನ್ನು ವಿಸ್ತರಿಸಿದೆ. ಹೆಚ್ಚಿನ ಉದ್ಯಮಿಗಳು, ಸಾಮಾಜಿಕ ಸೇವಾ ಕಾರ್ಯಕರ್ತರು ಇದರೊಂದಿಗೆ ಕೈ ಜೋಡಿಸುತ್ತಿದ್ದಾರೆ. ಪ್ರಮುಖವಾಗಿ ಆರೋಗ್ಯ ಕ್ಷೇತ್ರದಲ್ಲಿ ಡಯಾಲಿಸೀಸ್ ಮೆಷಿನ್ ಅಗತ್ಯತೆ ಕಂಡು ಸುಮಾರು ಸ್ಥಳೀಯ ಆಸ್ಪತ್ರೆಗಳ ಸಹಯೋಗದಲ್ಲಿ ಇಪ್ಪತ್ತು ಡಯಾಲಿಸೀಸ್ ಮೆಷಿನ್ ಹಾಕುವ ಯೋಜನೆಯನ್ನು ಸಂಸ್ಥೆ ಕೈಗೆತ್ತಿಕೊಂಡಿದೆ. ಅದರ ನಿರ್ವಹಣೆ ಮತ್ತು ಕಾರ್ಯ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಕಿಡ್ನಿ ರೋಗಿಗಳ ಹತಾಶ ಮನಸ್ಥಿತಿ ಮತ್ತು ಯಾತನೆಗೆ ಶಮನ ನೀಡುವ ಈ ಮಹಾ ಕಾರ್ಯದಲ್ಲಿ ಎಲ್ಲರೂ ಸಹಕರಿಸಲು ಸಂಸ್ಥೆಯ ಟ್ರಸ್ಟಿಯಾದ ಬಿ.ಎಂ. ಶರೀಫ್ ಜೋಕಟ್ಟೆ ಇವರು ವಿನಂತಿಸಿದರು. ಈಗಾಗಲೇ ಈ ಯೋಜನೆಯ ನಿರ್ವಹಣೆಗಾಗಿ ಆರೋಗ್ಯ ಕ್ಷೇತ್ರದಲ್ಲಿ ದುಡಿದು ಅನುಭವ ಇರುವವರನ್ನು ಸೇರಿಸಿ ಕೊಳ್ಳಲಾಗಿದೆ. ವೈಧ್ಯರ, ಆಸ್ಪತ್ರೆಗಳ ಕಣಚೂರು, ಏನಪಯ, ಫಾದರ್ ಮುಲ್ಲರ್ಸ್ ಆಸ್ಪತ್ರೆಗಳ ಸಹಕಾರವನ್ನು, ಅಭಿಪ್ರಾಯವನ್ನೂ ಪಡೆಯಲಾಗಿದೆ.

ಸಮಾಲೋಚನಾ ಸಭೆಯಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ ಮತ್ತು ಬಂಟ್ವಾಳ ಉಡುಪಿ, ಮಣಿಪಾಲ್ ನಲ್ಲೂ ಅಲ್ಲಿನ ಸ್ಥಳೀಯ ಸಮಾಜ ಸೇವಾ ಸಂಘಟನೆ ಹಾಗೂ ಸೇವಕರೊಂದಿಗೆ ಈಗಾಗಲೇ ಸಮಾಲೋಚಿಸಿ ಅಲ್ಲೂ ಟೀಂ ಬಿ ಹ್ಯೂಮನ್ ನ ತಂಡವನ್ನು ರೂಪಿಸಿ, ಹೆಚ್ಚು ಯುವಕರನ್ನು ಸಾಮಾಜಿಕ ಕೆಲಸದಲ್ಲಿ ತೊಡಗಿಸಲು ನಿರ್ಧರಿಸಲಾಯಿತು. ಕಮ್ಯೂನಿಟಿ ಸೆಂಟರ್ ಮಾದರಿಯ ಯೋಜನೆಯನ್ನು ಬಂಟ್ವಾಳ, ಬೆಳ್ತಂಗಡಿ ಮತ್ತು ಮಂಗಳೂರಿನಲ್ಲಿ ಟೀಂ ಬಿ ಹ್ಯೂಮನ್ ಸಹಯೋಗದಲ್ಲಿ ಮಾಡುವ ತೀರ್ಮಾನವನ್ನು ತಿಳಿಸಲಾಗಿದ್ದು, ಇದಕ್ಕಾಗಿ ಇನ್ನೊಂದು ಸುತ್ತಿನ ಮಾತುಕತೆಯನ್ನೂ ನಡೆಸಲು ಟ್ರಸ್ಟಿ ಯೂನುಸ್ ಮನಿಪಾಲ್ ರವರ ಸಲಹೆಯ ಮೇರೆಗೆ ಸಮಯ ನಿಗದಿ ಪಡಿಸಲಾಯಿತು. ಟ್ರಸ್ಟಿ ಮತ್ತು ಸಲಹೆಗಾರರ ಸಭೆಯನ್ನು ಬಿ.ಎಂ ಶರೀಫ್ ರವರ ಪ್ಲಾಟ್ ನಲ್ಲಿ ನಲ್ಲಿ ನಡೆಸಲಾಯಿತು.

ಟ್ರಸ್ಟಿಗಳಾದ ಅಡ್ವಕೇಟ್ ಮುಝಪ್ಪರ್ , ರಿಯಾಝ್ ಬಿ.ಕೆ., ಆಸಿಪ್ ಡೀಲ್ಸ್.*

*ಸಲಹಾ ಸಮೀತಿ ಸದಸ್ಯರಾದ*
ಶೈಕ್ ಕರ್ನಿರೆ , ಅಬ್ಬಾಸ್ ಪಿ ಉಚ್ಚಿಲ್ ಮಸ್ಕತ್,
ಶಾಹುಲ್ ಉಜಿರೆ , ಸುಹೈಬ್ , ಬಶೀರ್ ಅಲ್ ಫಲಕ್, ಇಮ್ರಾನ್ ಬಹರೈನ್,
*ಸದಸ್ಯರಾದ*
ಇಕ್ಬಾಲ್ ಬಂಟ್ವಾಳ್, ಅಹ್ನಾಫ್ ಡೀಲ್ಸ್ , ಸಲ್ವಾನ್, ಇಮ್ತಿಯಾಝ್ ಪಾರ್ಲೆ, ಶೊಹೈಬ್ ಬೊಳಾರ್, ಹನೀಫ್ ತೊಡಾರ್ , ಅಡ್ವಕೇಟ್ ಜಿಷಾನ್ ಭಾಗವಹಿಸಿದ್ದರು. ಕಮ್ಯೂನಿಟಿ ಸೆಂಟರಿನ ಹನೀಫ್ ಪುತ್ತೂರು ರವರು ಸೆಂಟರಿನ ಯೋಜನೆಯ ಕುರಿತಂತೆ ಈ ಸಂದರ್ಭ ಸಭೆಗೆ ಮಾಹಿತಿ ನೀಡಿದರು.