ದಿ ಮೈಸೂರ್ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಸ್ಥಾನವನ್ನು ಇಂದು ಮಾನ್ಯ ಮುಖ್ಯಮಂತ್ರಿಗಳ ಆದೇಶದ ಅನುಸಾರ ಸರಕಾರಕ್ಕೆ ಹಸ್ತಾಂತರಿಸಿದ್ದೇನೆ.
ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ಅಧಿಕಾರಿ ವರ್ಗದವರು ಕಾರ್ಮಿಕ ವರ್ಗದವರು ಸೇರಿ ನನಗೆ ಬೀಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಿದ್ದರು. ಅತೀವ ಸಂತೋಷದಿಂದ ಭಾವನಾತ್ಮಕವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷಣಗಳು.
ಈ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಪರಿಣಾಮಕಾರಿ ಬದಲಾವಣೆ ತಂದು ಸರಕಾರಿ ಆದೀನದಲ್ಲಿರುವ ಸಂಸ್ಥೆಗೆ ಮಾದರಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದೆ ಎನ್ನುವ ತೃಪ್ತಿ ಇದೆ. ಮಾನ್ಯ ರಾಜ್ಯಾಧ್ಯಕ್ಷರು ಶ್ರೀ ನಳಿನ್ ಕುಮಾರ್ ಕಟೀಲ್ ಮತ್ತು ಮಾನ್ಯ ಮುಖ್ಯಮಂತ್ರಿಗಳು ನೀಡಿರುವ ಜವಾಬ್ದಾರಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದ ಸಂತುಷ್ಠ ಭಾವನೆಯಿಂದ ಹೊರ ಬಂದಿದ್ದೇನೆ. ಈ ಸಂಸ್ಥೆಯ ಒಬ್ಬೊಬ್ಬ ಕಾರ್ಮಿಕನು ನನ್ನನ್ನು ಭಾವನಾತ್ಮಕವಾಗಿ ಹೃದಯ ಮುಟ್ಟಿರುತ್ತಾನೆ. ಹಾಗಾಗಿ ಇಷ್ಟು ಸಮಯ ಈ ಸಂಸ್ಥೆಯಲ್ಲಿ ಯಶಸ್ವೀ ಜವಾಬ್ದಾರಿ ನಿಭಾಯಿಸಲು ನನ್ನೊಂದಿಗೆ ಸಹಕರಿಸಿದ ನನ್ನೆಲ್ಲಾ ಆತ್ಮೀಯ ಅಧಿಕಾರಿ ವರ್ಗಕ್ಕೂ ಕಾರ್ಮಿಕ ಭಾಂದವರಿಗೂ ನನ್ನ ಹೃದಯಾಂತರಾಳದ ವಂದನೆಗಳು🙏