ವಿವಿ ಕಾಲೇಜು: ವಿಶ್ವ ಪೇಪರ್ ಬ್ಯಾಗ್ ದಿನಾಚರಣೆ*

ಮಂಗಳೂರುವಿ ಕಾಲೇಜು, ಮಂಗಳೂರು ಇಲ್ಲಿಯ ಗ್ರಂಥಾಲಯ, ಸಸ್ಯಶಾಸ್ತ್ರ ವಿಭಾಗ ಮತ್ತು ಪರಿಸರ ಸಂಘ ವತಿಯಿಂದ ಮಂಗಳವಾರ ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಗ್ರಂಥಪಾಲಕಿ ಡಾ. ವನಜಾ, ಪ್ರತಿ ವರ್ಷ ಜುಲೈ 12 ರಂದು ವಿಶ್ವ ಪೇಪರ್ ಬ್ಯಾಗ್ ದಿನವನ್ನು ಆಚರಿಸಲಾಗುತ್ತದೆ. ಪರಿಸರ ಸ್ನೇಹಿ ಪರ್ಯಾಯಗಳ ಬಳಕೆಯನ್ನು ಉತ್ತೇಜಿಸಲು ಮತ್ತು ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ದಿನ ಬಹು ಸೂಕ್ತ, ಎಂದರು. ಪರಿಸರ ಸಂಘದ ಸಂಯೋಜಕ ಡಾ. ಸಿದ್ಧರಾಜು ಎಂ ಎನ್, ಪರಿಸರ ತ್ಯಾಜ್ಯ ಕೊಳೆಯಲು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತದೆ. ಇದರ ಬದಲಾಗಿ ಸುಲಭವಾಗಿ ಮರುಬಳಕೆ ಮಾಡಬಹುದಾದ ಪೇಪರ್ ಬ್ಯಾಗ್ಗಳ ಬಳಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಎಂದರು.

“ನೀವು ಅಸಾಮಾನ್ಯರಾಗಿದ್ದರೆ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಲು ನಾಟಕೀಯವಾದ ಏನನ್ನಾದರೂ ಮಾಡಿ. ಪೇಪರ್‌ ಬ್ಯಾಗ್‌ ಬಳಸಿ,” ಎಂಬುದು ಈ ದಿನದ ಥೀಮ್. ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದರಿಂದ ನಮ್ಮ ಪ್ರಕೃತಿಗೆ ಹಾನಿಯನ್ನುಂಟುಮಾಡುವುದನ್ನು ತಡೆಯುವುದು ಮತ್ತು ಭವಿಷ್ಯದ ಪೀಳಿಗೆಗೆ ಪರಿಸರವನ್ನು ಉಳಿಸುವ ಸಲುವಾಗಿ ಪರಿಸರ ಸ್ನೇಹಿ ಉತ್ಪನ್ನಗಳತ್ತ ಹೊರಳುವಂತೆ ಉತ್ತೇಜಿಸುವುದು ಇದರ ಉದ್ದೇಶ.

ಪೇಬ್ಯಾಗ್‌ ನ ಇತಿಹಾಸ 

ಅಮೆರಿಕನ್ ಸಂಶೋಧಕ ಫ್ರಾನ್ಸಿಸ್ ವೊಲ್ಲೆ, 1852 ರಲ್ಲಿ ಮೊದಲ ಕಾಗದದ ಚೀಲ ಯಂತ್ರವನ್ನು ರಚಿಸಿದರು. ನಂತರ 1871 ರಲ್ಲಿ, ಮಾರ್ಗರೆಟ್ ಇ.ನೈಟ್, ಫ್ಲಾಟ್-ಬಾಟಮ್ ಪೇಪರ್ ಬ್ಯಾಗ್ಗಳನ್ನು ಉತ್ಪಾದಿಸಲು ಮತ್ತೊಂದು ಯಂತ್ರವನ್ನು ಪರಿಚಯಿಸಿ “ದಿ ಮದರ್ ಆಫ್ ದಿ ಗ್ರೋಸರಿ ಬ್ಯಾಗ್” ಎಂದು ಖ್ಯಾತಿ ಪಡೆದರು. 1883 ಮತ್ತು 1912 ರಲ್ಲಿ ಆವಿಷ್ಕಾರಕರಾದ ಚಾರ್ಲ್ಸ್ ಸ್ಟಿಲ್ವೆಲ್ ಮತ್ತು ವಾಲ್ಟರ್ ಡ್ಯೂಬೆನರ್ ರಿಂದ ಉತ್ತಮ ಪೇಪರ್ ಬ್ಯಾಗ್ ವಿನ್ಯಾಸಗಳು ಮತ್ತು ಉತ್ಪಾದನಾ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಿತು

/###$$$$$$$$$$$$$$$$$$$$$$$$##

ಸಂಧ್ಯಾ ಕಾಲೇಜು: ಸಂವಾದಾತ್ಮಕ ಮಾರ್ಗದರ್ಶನ ಕಾರ್ಯಕ್ರಮ*

  • ಮಂಗಳೂರು: ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನಲ್ಲಿ ವೃತ್ತಿ ಭವಿಷ್ಯವನ್ನು ರೂಪಿಸುವÀ ಸಂವಾದ ಮಾರ್ಗದರ್ಶನ ಕಾರ್ಯಕ್ರಮ ಎಂಬ ಎರಡು ದಿನಗಳ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಶಿವರಾಮ ಕಾರಂತ ಭವನದಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮದಲ್ಲಿ ಎಂಕಾA ಹಾಗೂ ಎಂಬಿಎ ಸಂಯೋಜಕ ಡಾ. ಜಗದೀಶ್ ಬಿ., ಕೊಂಕಣಿ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ದೇವದಾಸ್ ಪೈ, ತುಳು ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ. ಮಾಧವ ಎಂ ಕೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ಜ್ಙಾನಾರ್ಜನೆಗೆ ಶಿಕ್ಷಣಕ್ಕಿಂತ ಉತ್ತಮವಾದ ಹಾಗೂ ಸದೃಶವಾದ ಬೇರಾವುದೇ ಮೂಲಗಳಿಲ್ಲ, ಎಂದರು.

ಮೊದಲ ದಿನ, ‘ವೃತ್ತಿ ಮಾರ್ಗ – ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಣದ ಮೂಲಕ ನಕ್ಷೆ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ರಾಘವೇಂದ್ರ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಸಂತೋಷ್ ಮಾಡರೇಟರ್ ಆಗಿದ್ದರು. ಅರ್ಥಶಾಸ್ತç ಉಪನ್ಯಾಸಕಿ ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.

‘ಕಲಾ ಶಿಕ್ಷಣದಲ್ಲಿ ಬಹು ಆಯಾಮದ ಅವಕಾಶಗಳು’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಉಪನ್ಯಾಸಕ ಮಧುಶ್ರೀ ಜೆ ಶ್ರೀಯಾನ್ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಡಾ. ಮೋಹನ್ ಮಾಡರೇಟರ್ ಆಗಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಜೋಯ್ಸ್ ವಿರೇಂಧ್ರಿತ ಈ ಸಂವಾದ ನಡೆಸಿಕೊಟ್ಟರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ಮಮತ ಸ್ವಾಗತಿಸಿ, ವರ್ಷ ರೈ ವಂದಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಅಶ್ವಿನಿ ಅನುಶ್ ಕಾರ್ಯಕ್ರಮ ನಿರೂಪಿಸಿದರು.
//