ನೇತ್ರಾವತಿಯಲ್ಲಿ ನೆತ್ತರು ಪುಸ್ತಕ ಬಿಡುಗಡೆ ಕಾರ್ಯಕ್ರಮ ಅಭೂತಪೂರ್ವವಾಗಿ ನಡೆಯಿತು. ನನ್ನ ಇಷ್ಟದವರೆಲ್ಲರೂ ವೇದಿಕೆ ಮತ್ತು ಸಭಾಂಗಣದಲ್ಲಿ ತುಂಬಿ ಹೋಗಿದ್ದರು. ಕೋಮುವಾದಿಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಸಾವಿಗೀಡಾದ ಹುಸೇನಬ್ಬರ ಮಗ ಮಹಮ್ಮದ್ ಶಹೀದ್ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಹಿರಿಯ ಚಿಂತಕ ಡಾ ಕೆ ಮರುಳಸಿದ್ದಪ್ಪ, ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ನಿವೃತ್ತ ಎಸಿಪಿ ಬಿ ಕೆ ಶಿವರಾಮ್, ಹೋರಾಟಗಾರರಾದ ಮಾವಳ್ಳಿ ಶಂಕರ್, ಕವಿ ಸಾಹಿತಿ ಕೆ ಶರೀಫಾ ಮಾತನಾಡಿದರು. ಹೋರಾಟಗಾರ್ತಿ ಕೆ ಎಸ್ ವಿಮಲಾ ಕಾರ್ಯಕ್ರಮ ನಿರೂಪಿಸಿದ್ದು, ಕ್ರಿಯಾ ಪ್ರಕಾಶನದ ವಸಂತರಾಜ್ ಧನ್ಯವಾದ ಅರ್ಪಿಸಿದರು.
(ಕಾರ್ಯಕ್ರಮದಲ್ಲಿ ನಮ್ಮ ಗೆಳೆಯ ಭೈರಪ್ಪ ಹರೀಶ್ ಕುಮಾರ್ ಇರಬೇಕಿತ್ತು. ಅವರೇ ಓಡಾಡಿ ಕಾರ್ಯಕ್ರಮ ನಡೆಸಿಕೊಡಬೇಕಿತ್ತು. ಆದರೆ 18.06.2022 ರಂದು ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿಯು ಪ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಸಂಘಪರಿವಾರದ ಹುನ್ನಾರವನ್ನು ತಡೆದಿದ್ದಕ್ಕಾಗಿ ಹರೀಶ್ ಮೇಲೆ ಎಫ್ಐಆರ್ ದಾಖಲಾಗಿದೆ. ಹರೀಶ್ ಅನುಪಸ್ಥಿತಿಯಲ್ಲಿ ಕೋಮುವಾದಿಗಳ ಹುನ್ನಾರಗಳು, ಅಪಾಯಗಳ ಬಗ್ಗೆ ಚರ್ಚೆ ನಡೆಯಿತು. ಯಾವ ಜೈಲುಗಳೂ, ಕೇಸುಗಳು ಕ್ರಾಂತಿಯನ್ನು ತಡೆಯಲಾರದು)

Book by Naveen Soorunje