*ದ್ವಿತೀಯ ಪಿಯುಸಿ ಫಲಿತಾಂಶ – ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿಗೆ ಉತ್ತಮ ಫಲಿತಾಂಶ*

ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜು ದೇರಳಕಟ್ಟೆ ಇದರ 2021-22 ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದ್ದು , ಪರೀಕ್ಷೆಗೆ ಹಾಜರಾದ ಒಟ್ಟು 148 ವಿದ್ಯಾರ್ಥಿನಿಯರಲ್ಲಿ 56 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ (PCMB/PCMC) 21 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. *ಅಝ್ಕಿಯಾ ರಿಫಾಖಾನ್ 586*, *ಶಮೀಮಾ ತಶ್ವ 562*, *ಆಯಿಶತುಲ್ ಅಫ್ಲಾ 562* , *ಅಶ್ಫಿಯಾ ಇಲ್ಯಾಸ್ 557* ಅಂಕಗಳಿಸಿರುತ್ತಾರೆ .
ವಾಣಿಜ್ಯ ವಿಭಾಗದ ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ) ವಿಭಾಗದಲ್ಲಿ 27 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗುತ್ತಾರೆ . *ಇರ್ಶಾನ 586, ರೀಝಾ ನಸೀಲಾ 578, ಸಾರಮ್ಮ ನಿಶಾ 572,ಸುಹೈಲಾ ಬಾಶಿತಾ 572, ಆಯಿಶತ್ ನಿಶಾನ 570* ಅಂಕ ಗಳಿಸಿರುತ್ತಾರೆ .
ವಾಣಿಜ್ಯ ಇತಿಹಾಸ ವಿಭಾಗದಲ್ಲಿ 2 ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ . *ಸನಾ ಫಾತಿಮಾ 564, ಆಯಿಶಾ ಸಂಶುನ್ನಿಶಾ 557 ಅಂಕಗಳಿಸಿರುತ್ತಾರೆ.* ಕಲಾವಿಭಾಗದಲ್ಲಿ *6* ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ ಪಾಸಾಗಿರುತ್ತಾರೆ. *ಖದೀಜಾ ಜಸೀಲಾ 551,ಫಾತಿಮತ್ ಸಫ್ವಾ 546, ಆಯಿಶಾ ಆಶಿಫಾ 536* ಅಂಕಗಳಿದ್ದಾರೆ.
ವಿಜ್ಞಾನ ವಿಭಾಗದಲ್ಲಿ *97. 29%*, ವಾಣಿಜ್ಯ ವಿಭಾಗದ ಗಣಕವಿಜ್ಞಾನ *(ಕಂಪ್ಯೂಟರ್ ಸೈನ್ಸ್)* ವಿಭಾಗದಲ್ಲಿ *100%* *ಇತಿಹಾಸ ವಾಣಿಜ್ಯ ವಿಭಾಗದಲ್ಲಿ 96.10%* ಮತ್ತು *ಕಲಾ ವಿಭಾಗದಲ್ಲಿ 100%* ಫಲಿತಾಂಶ ಪಡೆದಿರುತ್ತಾರೆ .
ಪರೀಕ್ಷೆಗೆ ಹಾಜರಾದ *148* ವಿದ್ಯಾರ್ಥಿನಿಯರಲ್ಲಿ *56* ವಿದ್ಯಾರ್ಥಿನಿಯರು ಅತ್ಯುತ್ತಮ ಶ್ರೇಣಿಯಲ್ಲಿ, 82 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ, ಎರಡು ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ, 4 ವಿದ್ಯಾರ್ಥಿನಿಯರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಒಟ್ಟು *97.29%* ಫಲಿತಾಂಶ ಬಂದಿದೆ.
*ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರುಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳ ವತಿಯಿಂದ ಅಭಿನಂದನೆಗಳು.*