*ದ್ವೇಷ ರಾಜಕಾರಣದ ಭಾಗವಾಗಿದೆ ರಾಹುಲ್ ವಿಚಾರಣೆ.*
*<<<<<<<+>>>>>>>*

*ಪೊಲೀಸರ ಬ್ಯಾರಿಕ್ಯಾಡ್ ನಿಂದಲೋ,ಜಲ ಫಿರಂಗಿಯಿಂದಲೋ, ಲಾಠಿಯಿಂದಲೋ,ಸತ್ಯದ ಈ ಬಿರುಗಾಳಿಯನ್ನು ತಡೆದು ನಿಲ್ಲಿಸಲು ಯಾವ ದುಷ್ಟ ಶಕ್ತಿಯಿಂದಲೂ ಸಾಧ್ಯವಿಲ್ಲ.ಅಚಂಚಲವಾದ,ಅ “ಸತ್ಯದ ರೂಪವೇ.. ರಾಹುಲ್ ಗಾಂಧಿ”ಎಂದು ಬಾವನಾ ಪರವಶವಾಗಿ ಮಾಡಿರುವ ಟ್ವೀಟ್ ಇದಾಗಿದೆ.ರಾಹುಲ್ ಗಾಂಧಿ ಸಹೋದರಿ,ಕಾಂಗ್ರೇಸ್ ಪಕ್ಷದ ಜನರಲ್ ಸೆಕ್ರೆಟರಿಯಾದ ಪ್ರಿಯಾಂಕ ಗಾಂಧಿಯವರು “ಸತ್ಯಂ”ಎಂಬ ಪದದಿಂದ ಸಹೋದರ ರಾಹುಲ್ ಗಾಂಧಿಯನ್ನು ಸಂಭೋದಿಸಿದ್ದಾರೆ.ಈ ಮಾತನ್ನು ದೇಶದ ಜನತೆ ಅಕ್ಷರಸಃ ಸ್ವೀಕಾರ ಮಾಡಿರುತ್ತಾರೆ.*

*ದೇಶದ ವಿವಿಧ ರಾಜ್ಯಗಳಲ್ಲಿ ಬಹುದೊಡ್ಡ ರಾಷ್ಟ್ರೀಯ ಬಿರುಗಾಳಿಯಾಗಿ ರಾಹುಲ್ ಗಾಂಧಿಯವರಿಗೆ ಅನುಕೂಲಕರವಾದ ವಾತಾವರಣ ಸೃಷ್ಠಿಯಾಗುತ್ತಿದೆ.ಜೈಲ್ ಗಳು ತುಂಬಿ ತುಲುಕಿದರೂ,ಎಷ್ಟೇ ಕಷ್ಟ ಬಂದರೂ ಈ ಪ್ರತಿಭಟನೆ,ಪ್ರತಿರೋಧವನ್ನು ತಡೆದರೂ ಕಾಂಗ್ರೇಸ್ ಪಕ್ಷವನ್ನು ಹಿಮ್ಮೆಟಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲವೆಂದು ಕಾಂಗ್ರೆಸ್ ವಕ್ತಾರರು ವ್ಯಕ್ತ ಪಡಿಸಿದ್ದಾರೆ.*

*ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಇಡೀ ದೇಶಾದ್ಯಂತ ಹರಡುತ್ತಿದೆ.ಕೆ.ಸಿ ವೇಣುಗೋಪಾಲ್ ರವರಂತಹ ಕಾಂಗ್ರೇಸ್ಸಿನ ರಾಷ್ಟೀಯ ನಾಯಕರನ್ನು ಎಳೆದೊಯ್ದುಕೊಂಡು ಹೋಗುವುದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವ ಹಾದಿಯಲ್ಲಿ ಕಾಂಗ್ರೇಸ್ ನಾಯಕರಿಗೆ ದೈಹಿಕ ಹಲ್ಲೆ ನಡೆಸಲಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರರು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿರುತ್ತಾರೆ.*

*ಅಧಿಕಾರದಲ್ಲಿರುವ ಬಿಜೆಪಿಗೆ ತಡೆದು ನಿಲ್ಲಿಸಲು ಸಾಧ್ಯವಿಲ್ಲದಂತಹ ರೀತಿಯ ಪ್ರತಿಭಟನೆ (ಪ್ರತಿರೋಧ) ಜ್ವಾಲೆಯಾಗಿ ದೆಹಲಿಯಲ್ಲಿ ಪರಿಣಮಿಸಿದೆ.ಬಿಜೆಪಿ ಸರಕಾರ ಕನಸಿನಲ್ಲಿಯೂ ಎಣಿಸಿರದ ಪ್ರತಿರೋಧ ಜಂತರ್-ಮಂತರ್ ನಲ್ಲಿ ಗಾಂಧಿ ಗೀತೆಯೊಂದಿಗೆ ಆರಂಭವಾಗಿ ಒಂದು ಸುಂಟರಗಾಳಿಯಂತೆ ಬೀಸಿ ಇಡೀ ದೆಹಲಿ ಪ್ರದೇಶವನ್ನು ಮುತ್ತಿಕೊಂಡಿದೆ.ರಾಹುಲ್ ಗಾಂಧಿಯನ್ನು 9 ಗಂಟೆಗಳ ಕಾಲ ಇ.ಡಿ ವಿಚಾರಣೆ ನಡೆಸಿ ಬಿಟ್ಟು ಕಳಿಸಲು ತಯಾರಿಲ್ಲ.ಕಾರಣ ಇ.ಡಿ ಮಾಡುತ್ತಿರುವುದು ಕೇಂದ್ರ ಸರಕಾರದ ಧಮನ ನೀತಿಯ ಗುರಿ ಸಾಧಿಸುವುದಾಗಿದೆ.ಎಂದು ನಾಯಕರು ಅರೋಪಿಸುತ್ತಿದ್ದಾರೆ.*

*ಬಿಜೆಪಿಯ ಹರಕು ನಾಲಿಗೆಯ ವಕ್ತಾರರು ಹರಿದು ಬಿಟ್ಟ ಪ್ರವಾದಿ ಪೈಗಂಬರರ ನಿಂದನೆಯಿಂದ ವಿಶ್ವಾಧ್ಯಾಂತ ಭಾರತದ ವಿರುದ್ಧ, ಬಿಜಿಪಿ ಸರಕಾರದ ವಿರುದ್ಧ ಭುಗಿಲೆದ್ದ ಪ್ರತಿರೋಧವನ್ನು ಡೈವಾರ್ಟ್ ಮಾಡಿ ಜನರ ಶ್ರದ್ಧೆಯನ್ನು ಬೇರೆಡೆಗೆ ತಿರುಗಿಸುವ ತಂತ್ರವಾಗಿ,ಬಿಜೆಪಿ ಸರಕಾರದ ಆಜ್ಞೆ ಮೇರೆಗೆ ಇ.ಡಿ ರಾಹುಲ್ ಗಾಂಧಿಯವರನ್ನು ವಿಚಾರಣಾ ನೆಪದಲ್ಲಿ ಕೊಂಡು ಹೋಗಿರುವುದೆಂದು ಜಗಜ್ಜಾಹಿರತಾಗಿರುತ್ತದೆ.*

*ಇದೀಗ ರಾಹುಲ್ ಗಾಂದಿಯ ವಿರುದ್ದ ಅಮೇಠಿಯಲ್ಲಿ ಸ್ಪರ್ಧಿಸಿದ ಕೇಂದ್ರ ಸಚಿವೆ ಸೃತಿ ಇರಾನಿ ಬಹಳ ಕೆಟ್ಟ ಭಾಷೆಯಲ್ಲಿ ಪ್ರತಿಕರಣ ವ್ಯಕ್ತ ಪಡಿಸಿರುತ್ತಾರೆ. ಕಾಂಗ್ರೇಸ್ಸಿನ ಗಾಂಧಿ ಕುಟುಂಬಕ್ಕೆ ಸಿಕ್ಕಿರುವಂತ 2000 ಕೋಟಿ ರೂಪಾಯಿಯನ್ನು ಹೊರ ಜಗತ್ತಿಗೆ ಅರಿಯದ ರೀತಿಯಲ್ಲಿ ರಕ್ಷಣೆ ಮಾಡುವ ತಂತ್ರದ ಭಾಗವಾಗಿದೆ ಈ ಪ್ರತಿಭಟನೆ ಎಂದು ಅವರು ಅರೋಪಿಸಿದ್ದಾರೆ.*

*ನಿಜವಾಗಿಯೂ ಬಿಜೆಪಿಯ ಈ ಕುತಂತ್ರದಿಂದ ರಾಹುಲ್ ಗಾಂಧಿಯವರಿಗೆ ಅನುಕೂಲಕರವಾಗಿ ಬಹುದೊಡ್ಡ ಪರವಾದ ಅಲೆ ದೇಶದಾದ್ಯಂತ ಸೃಷ್ಠಿಯಾಗುತ್ತಿದೆ.ರಾಹುಲ್ ಗಾಂಧಿಯವರ ರಾಜಕೀಯ ಜೀವನದ ನಡುವೆ ಯಾವುದೇ ರೀತಿಯ ಹಗರಣವಾಗಲಿ,ಕಳಂಕವಾಗಲಿ ಮೆತ್ತಿಕೊಳ್ಳದೆ ತನ್ನ ರಾಜಕೀಯ ಜೀವನವನ್ನು ಶುಭ್ರವಾಗಿಟ್ಟುಕೊಂಡ ನಿಷ್ಕಾಳಂಕ ವ್ಯಕ್ತಿಯಾಗಿದ್ದಾರೆ ರಾಹುಲ್ ಗಾಂಧಿ.ಅವರ ಸಾರ್ವಜನಿಕ ಜೀವನವನ್ನು ಕಳಂಕಿತಗೊಳಿಸಲು ಬಿಜೆಪಿ ನೇತೃತ್ವದ ಸರಕಾರ ಶ್ರಮಪಟ್ಟಿದ್ದರೂ ರಾಹುಲ್ ಎಂಬ ನಿಷ್ಕಳಂಕ ವ್ಯಕ್ತಿಯನ್ನು ಒಂದೇ ಒಂದು ಹಗರಣದಲ್ಲಿ ಅಥವಾ ಪ್ರಕರಣದಲ್ಲಿ ಫಿಕ್ಸ್ ಮಾಡಲು NDA ಸರಕಾರಕ್ಕೆ ಸಾಧ್ಯವಾಗಿಲ್ಲ. ಅದರಿಂದಲೇ ಹಲವು ಬಾರಿ ನ್ಯಾಯಾಲಯ,ಪೊಲೀಸ್,ಅನ್ವೇಷಣಾ ಏಜೆನ್ಸಿಗಳು ಬಿಸಾಕಿದ ಪುರಾತನ ಹಳೆಯ ಒಂದು ಪ್ರಕರಣದ ಹಿಂಬಾಲವನ್ನು ಹಿಡಿದು ಕೊಂಡು ರಾಹುಲ್ ಗಾಂಧಿಯನ್ನು ಮತ್ತೊಮ್ಮೆ,ಮಗದೊಮ್ಮೆ ಎಂಬಂತೆ ವಿಚಾರಣೆ ನಡೆಸಲು E.D ಅಧಿಕಾರಿಗಳು ಕೇಂದ್ರ ಸರಕಾರದ ಕೈಗೊಂಬೆಯಾಗಿ ವಿಚಾರಣೆ ನಡೆಸಲು ತಯಾರಾಗಿದ್ದು,ಈ ವಿಚಾರಣೆಯನ್ನು ಬಹಳ ಚಾಣ ಚಕ್ಷತೆಯಿಂದ ನಡೆಸಬಹುದೆಂದು ಅಧಿಕಾರಿಗಳು ಭಾವಿಸಿರಬಹುದು. ಆದರೆ ದೇಶಾದ್ಯಂತವಿರುವ ಕಾಂಗ್ರೇಸ್ಸಿನ ಕಾರ್ಯಕರ್ತರು ಉಸಿರುಬಿಟ್ಟು,ಸೆಟೆದು ನಿಂತು ಪ್ರಕರಣದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವ ಪ್ರಸಂಗವನ್ನು ನಾವೀಗ ಕಾಣುತ್ತಿದ್ದೇವೆ.ಹಿರಿಯರಾದ ಕಾಂಗ್ರೇಸ್ ಪಕ್ಷದ ಮುತ್ಸದ್ಧಿ ನಾಯಕರು ಈ ಪ್ರತಿರೋಧಕ್ಕೆ ದೇಶದಾದ್ಯಂತ ಕೈ ಜೋಡಿಸಿದ್ದಾರೆ.*

*ಇಲ್ಲಿ ನಾವು ಗಮನಿಸಬೇಕಾದ ವಿಷಯವೇನೆಂದರೆ ರಾಹುಲ್ ಗಾಂಧಿಯವರೊಂದಿಗೆ ENFORCEMENT DIRECTOR ರವರ ಕಛೇರಿಗೆ ನಡೆದುಕೊಂಡು ಹೋಗಲು ಪ್ರಸಿದ್ಧಿ ಪಡೆದ ಮುತ್ಸದ್ಧಿ ಕಾಂಗ್ರೇಸ್ ನಾಯಕರು ಕೈ,ಕೈ ಜೋಡಿಸಿ,ಶಕ್ತಿ ಪ್ರದರ್ಶ‍ನ ಮೂಲಕ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಬ್ಯಾರಿಕೇಡ್ ಇಟ್ಟು ಪೊಲೀಸರು ತಡೆದರೂ ಆ ಬ್ಯಾರಿಕೇಡನ್ನು ಲೆಕ್ಕಿಸದೆ E.D ಕಛೇರಿವರೆಗೆ ರಾಹುಲ್ ಗಾಂಧಿಯವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋಗಲು ಕಾಂಗ್ರೇಸ್ ನಾಯಕರು ತೀರ್ಮಾನಿಸಿದರು,ಆ ತೀರ್ಮಾನವನ್ನು ಸರ್ಕಾರದ ಲಾಠಿಯಿಂದ,ಜಲ ಫಿರಂಗಿಯಿಂದ,ಪೊಲೀಸ್ ಬಲದಿಂದ ತಡೆದು ಹಿಮ್ಮೆಟ್ಟಿಸಲು ನೋಡಿದರೂ ಅಲ್ಲಿಯೂ ಆ ಪ್ರತಿರೋಧದ ತೀವ್ರತೆ ಅಂತ್ಯವಾಗಿಲ್ಲವೆಂದೇ ಭಾವಿಸಬಹುದು.*

*ದೇಶಾದ್ಯಂತ ಈ ಪ್ರತಿರೋಧವನ್ನು ಇನ್ನಷ್ಟು ಕಠಿಣ ರೀತಿಯಲ್ಲಿ ಮುಂದುವರಿಸಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿರುತ್ತದೆ. ಇದೀಗ ಪೊಲೀಸ್ ಠಾಣೆಯ ಲಾಕಪ್ಪಿನಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರನ್ನು ಭೇಟಿಯಾಗಲು, ಅವರಿಗೆ ಆತ್ಮ ಬಲ ನೀಡಿ,ದೈರ್ಯ ತುಂಬಲು ರಾಹುಲ್ ಸಹೋದರಿ ಪ್ರಿಯಾಂಕ ಗಾಂಧಿಯವರೇ ರಂಗ ಪ್ರವೇಶ ಮಾಡಿರುತ್ತಾರೆ.ಪ್ರಿಯಾಂಕ ಗಾಂಧಿಯವರ ಈ ನೇತೃತ್ವ ಕಾಂಗ್ರೆಸ್ ಕಾರ್ಯಕರ್ತರಿಗೆ ಬಹಳ ದೊಡ್ಡ ಆವೇಶವಾಗಿರುತ್ತದೆ. ಸ್ವಂತ ಸಹೋದರ ರಾಹುಲ್ ಗಾಂಧಿ ENFORCEMENT DIRECTOR ರವರ ಕಛೇರಿಯಲ್ಲಿ ವಿಚಾರಣೆ ಎದುರಿಸಲು ವಿಧೇಯನಾಗಿ ನಿಂತಿರುವಾಗ,ಹೊರಗಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಆತ್ಮಬಲ, ಧೈರ್ಯ ತುಂಬಲು ಸಹೋದರಿ ಪ್ರಿಯಾಂಕ ಗಾಂಧಿ ಸೂಕ್ತ ಸಮಯವಕಾಶದಲ್ಲಿ ರಂಗ ಪ್ರವೇಶ ಮಾಡಿ ಗೆದ್ದೇ ಬಿಟ್ಟರು ಎಂದು ಭಾವಿಸಬಹುದು.ಪ್ರಿಯಾಂಕಾ ಗಾಂಧಿಯವರ ಮುಂದಾಳತ್ವದ ಸಾನಿಧ್ಯದಿಂದ ಬಹಳ ಶಾಂತವಾಗಿ ನಿಂತ ಕಾಂಗ್ರೆಸ್ ಕಾರ್ಯಕರ್ತರು ಈ ಪ್ರತಿರೋಧವನ್ನು ಇನ್ನೂ ಬಹಳ ಗಂಭೀರವಾಗಿ, ಬಿರುಸಿನಿಂದ ಕೊಂಡೊಯ್ಯುವಂತೆ ಭಾಸವಾಗುತ್ತಿದೆ.*

*✍️. ಬಾವಾಪದರಂಗಿ*