*ಟೀಂ, ಬಿ ಹ್ಯೂಮನ್ ಸೇವಾ ಸಂಸ್ಥೆಯ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ರೋಗಿಗಳಿಗೆ ನೆರವಾಗಲು ಡಯಾಲಿಸೀಸ್ ಸೆಂಟರ್ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದುಡಿಯಲು ಕಮ್ಯೂನಿಟಿ ಸೆಂಟರ್ ನಿರ್ಮಾಣಕ್ಕೆ ಯೋಜನೆಯ ಸಮಾಲೋಚನಾ ಸಭೆ, ಹೊಸ ಯುನಿಟ್ ಗಳ ನಿರ್ಮಾಣಕ್ಕೆ ಕಾರ್ಯತಂತ್ರ….*

ಕರಾವಳಿ ಜಿಲ್ಲೆಗಳಲ್ಲಿ ವ್ಯವಸ್ಥಿತ ಕಾರ್ಯಾಚರಣೆಗಳ ಮೂಲಕ ಮಾನವ ಕಲ್ಯಾಣ ಕಾರ್ಯದಲ್ಲಿ ದುಡಿಯುತ್ತಿರುವ ಟೀಂ ಬಿ ಹ್ಯೂಮನ್ ಸಂಸ್ಥೆಯ ಮಂಗಳೂರು ಯುನಿಟ್ ನ ಸಮಾಲೋಚನಾ ಸಭೆ ಇತ್ತೀಚೆಗೆ ನಡೆಯಿತು. 2016 ರಲ್ಲಿ ಆರಂಭಗೊಂಡ ಟೀಂ ಬಿ ಹ್ಯೂಮನ್ ಸೇವಾ ಸಂಸ್ಥೆ ಕಳೆದ ಆರು ವರ್ಷದ ಅವಧಿಯಲ್ಲಿ ವಿಭಿನ್ನವಾದ ಆಲೋಚನೆಯೊಂದಿಗೆ ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಮೂಲಸೌಲಭ್ಯ ಅಭಿವೃದ್ದಿ ಸೇರಿದಂತೆ ಸಾಮರಸ್ಯದ ನಾಡನ್ನು ಕಟ್ಟಲು ಪರಿಣಾಮಕಾರಿಯಾಗಿ ದುಡಿಯುತ್ತಿದೆ. ಕಳೆದ ಲಾಕ್ ಡೌನ್ ಸಂದರ್ಭದಲ್ಲಂತು ಸಂಸ್ಥೆಯ ಸೇವೆ ಮಾದರಿಯಾಗಿದ್ದನ್ನು ಸ್ಮರಿಸಬಹುದು.

ಟೀಂ ಬಿ ಹ್ಯೂಮನ್ ಈಗಾಗಲೇ ತನ್ನ ಯುನಿಟನ್ನು ಜುಬೈಲ್, ಬಹರೈನ್, ಆರಂಭಿಸಿದ್ದು ದುಬಾಯಿ, ಕತ್ತಾರ್ , ದಮಾಮ್, ಕಾಸಿಮ್, ಬುರೈದ ಮತ್ತು ಜಿದ್ದಾದಲ್ಲಿ ಶೀಘ್ರದಲ್ಲಿ ಸ್ಥಾಪಿಸಲಿದೆ. ಸಮಾಜದ ಎಲ್ಲಾ ವರ್ಗದ ಸಮಾನ ಮನಸ್ಕರನ್ನು ಸೇರಿಸಿ ಜಿಲ್ಲೆಯ ಜನರ ಸೇವೆಯನ್ನು ಮಾಡುತ್ತಿರುವ ಸಂಸ್ಥೆಯು ಪುತ್ತೂರು, ಸುಳ್ಯ, ಉಡುಪಿಯಲ್ಲೂ ತನ್ನ ಸೇವಾಕಾರ್ಯಕರ್ತರ ತಂಡವನ್ನು ಹೊಂದಿದೆ. ಮಂಗಳೂರು ಯುನಿಟ್ ನ ಸಮಾಲೋಚನಾ ಸಭೆಯಲ್ಲಿ ಮುಂದಿನ ಯೋಜನೆ ಹಾಗೂ ಕಾರ್ಯತಂತ್ರಗಳ ಕುರಿತು ಚರ್ಚಿಸಲಾಯಿತು ಸಮಾಲೋಚನೆಯಲ್ಲಿ ಪ್ರಮುಖವಾಗಿ ಆರೋಗ್ಯ ಕ್ಷೇತ್ರದಲ್ಲಿ ಡಯಾಲಿಸೀಸ್ ಅಗತ್ಯ ಇರುವ ರೋಗಿಗಳಿಗೆ ಸಹಾಯವಾಗಲು ಹಾಗೂ ಡಯಾಲಿಸೀಸ್ ಸೆಂಟರನ್ನು ನಿರ್ಮಿಸಲು ಯೋಜನೆ ತಯಾರಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ದುಡಿಯಲು ಪುತ್ತೂರು ಕಮ್ಯೂನಿಟಿ ಸೆಂಟರಿನ ಮಾದರಿ ಪದ್ದತಿಯನ್ನು ಮಂಗಳೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಯಿತು.

ಆರೋಗ್ಯ ಕ್ಷೇತ್ರದಲ್ಲಿ ಇದುವರೆಗೂ ಮೂರು ಸಾವಿರಕ್ಕಿಂತ ಹೆಚ್ಚು ಜನರಿಗೆ ನೆರವಾಗಿರುವ ಸಂಸ್ಥೆ, ಲಾಕ್ ಡೌನ್ ನಲ್ಲಿ ಆಹಾರ, ಆಕ್ಸಿಜನ್ ಸಿಲೀಂಡರ್, ಪ್ಲಾಝ್ಮಾ, ಆಂಬುಲೆನ್ಸ್ ವ್ಯವಸ್ಥೆ, ಮರಣ ಕಾರ್ಯ ನಿರ್ವಹಣೆ, ಆಸ್ಪತ್ರೆಗಳ ಮಾಹಿತಿ ನೀಡುವ ಕೇಂದ್ರ, ವ್ಯಾಕ್ಸಿನೇಷನ್ ನೀಡುವ ಮೂಲಕ ಒಟ್ಟು ಏಳು ಸಾವಿರಕ್ಕಿಂತ ಹೆಚ್ಚು ಜನರ ಸೇವೆಯನ್ನು ಮಾಡಿದೆ.

ಸಂಸ್ಥೆಯು ಯುವ ಉತ್ಸಾಹಿ ತರುಣರ ತಂಡವನ್ನು ಹೊಂದಿದ್ದು, ಸಾಮಾಜಿಕ ಕಾಳಜಿ ಹೊಂದಿರುವ ಸೇವಾ ಕಾರ್ಯಕರ್ತರ ಸಹಯೋಗ, ಹಿರಿಯರ ಮಾರ್ಗದರ್ಶನ ಪಡೆದು, ಎಲ್ಲಾ ಧರ್ಮೀಯರ ಸಹಕಾರದಿಂದ ಸಮಾಜದ ಬಡವರ, ಅಸಾಹಯಕರ, ಸಂಕಷ್ಟಿತರ ಮತ್ತು ರೋಗಿಗಳ ಸೇವೆಯನ್ನು ಮಾಡುತ್ತಿದೆ. ಹಲವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನೂ ನೀಡುತ್ತಿದೆ. ಈ ಎಲ್ಲಾ ಯೋಜನೆಯನ್ನು ಇನ್ನಷ್ಟೂ ಪರಿಣಾಮಕಾರಿಯಾಗಿ ನಡೆಸಲು ಸಂಸ್ಥೆ ತೀರ್ಮಾನಿಸಿದೆ. ಇದಕ್ಕಾಗಿ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಹೈಕೊರ್ಟ್ ಅಡ್ವಕೇಟ್ ಮುಝಪ್ಪರ್, ಸುಹೈಲ್ ಕಂದಕ್, ಬಶೀರ್ ಅಲ್ ಫಲಕ್, ವಕೀಲರಾದ ಝೀಷಾನ್, ಅಬ್ಬಾಸ್ ಉಚ್ಚಿಲ್ ಸೇರಿದಂತೆ ಹೊಸ ಸೇರ್ಪಡೆಗೊಂಡ 12 ಸದಸ್ಯರಿದ್ದರು.

ಟೀಂ ಬಿ ಹ್ಯೂಮನ್ ನ ಸದಸ್ಯತ್ವ ಪಡೆಯಲು ಈ ಕೆಳಗಿನ ವಾಟ್ಸಾಪ್ ನಲ್ಲಿ (+91-9880232388) ಸಂದೇಶ ಕಳುಹಿಸಬಹುದು ಅಥವಾ ಲಿಂಕ್ ನ ಮೂಲಕ ಸೇರಿಕೊಳ್ಳಬಹುದು …….
!!!!!!!!!!!!!!!!!!!!!!!!!!!!!!!!!!!!!
𝙇𝙞𝙠𝙚/𝙁𝙤𝙡𝙡𝙤𝙬/𝙎𝙝𝙖𝙧𝙚/𝙎𝙪𝙗𝙨𝙘𝙧𝙞𝙗𝙚/𝙑𝙞𝙨𝙞𝙩
!!!!!!!!!!!!!!!!!!!!!!!!!!!!!!!!!!!!!
𝙁𝙖𝙘𝙚𝙗𝙤𝙤𝙠: B.Human.in
𝙄𝙣𝙨𝙩𝙖𝙜𝙧𝙖𝙢: B_human.in
𝙏𝙬𝙞𝙩𝙩𝙚𝙧: B_Human_in
𝙔𝙤𝙪𝙩𝙪𝙗𝙚: B-Human Serving Humanity
𝙒𝙚𝙗: b-human.in
**
𝘾𝙤𝙣𝙩𝙖𝙘𝙩: WhatsApp
+91 9880232388 / +91 9880012388
—————————————-