*ಅವಕಾಶ ವಂಚಿತ ಪದವೀಧರ ಪರವಾಗಿ ವಿಧಾನಪರಿಷತ್ತಿನಲ್ಲಿ ದ್ವನಿಯೆತ್ತಲು ಅವಕಾಶಕೊಡಿ.*

—– ರಫತ್‌ಉಲ್ಲಾಖಾನ್
(ದಿನಾಂಕ 13-06-2022 ರಂದು ನಡೆಯುವ ಕರ್ನಾಟಕ ದಕ್ಷಿಣ ಪಧವೀದರರ ಕ್ಷೇತ್ರದ ಚುಣಾವಣೆ ನಡೆಯಲಿದೆ.
ಕಳೆದ ಒಂದು ವರ್ಷಗಳಿಂದ ಅವಕಾಶ ವಂಚಿತ ಮತ್ತು ಉದ್ಯೋಗವಂಚಿತರಾದ ಪಧವೀದರರ ಸಂಪರ್ಕದಲ್ಲಿರುವ ರಫತ್‌ಉಲ್ಲಾಖಾನ್ ರವರು ಎಸ್ಡಿಪಿಐ ಉಮೇದುವಾರರಾಗಿ ಚುಣಾವಣೆಗೆ ಸ್ಪರ್ದಿಸಲಿದ್ದು,ಇವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗಗಳು)

ಪ್ರಶ್ನೆ:- *ಹಣಬಲ,ಜಾತಿಬಲ,ಮತ್ತು ಬಲಾಡ್ಯಪಕ್ಷಗಳ ಅಭ್ಯರ್ಥಿಗಳ ಎದರು ತಮಗೆ ಫಲ ಸಿಗುವುದೇ* ?

ಉತ್ತರ:- ಎಸ್ಡಿಪಿಐ ಅಭ್ಯರ್ಥಿಯಾಗಿ ನಾನು ಸ್ಪರ್ದಿಸಿದ ಉದ್ದೇಶವೇ ಬಿನ್ನವಾಗಿದೆ.ಹಣಬಲ, ಜಂಗಾಬಲ, ಜಾತಿಬಲ,ಕೋಮುದೃವೀಕರಣ,ಮೇಲ್ಜಾಜಿಯ ರಾಜಕೀಯ ಯಜಮಾನಿಕೆ,ಶ್ರೀಮಂತರ ಲಾಬಿ,ಬಂಡವಾಳಶಾಹಿ ಪರವಿರುವ ರಾಜಕೀಯ ತೀರ್ಮಾನ,ಸರಕಾರಗಳ ಜನವಿರೋಧಿ ನೀತಿಯಿಂದಾಗಿ ಧರ್ಮ ಜಾತಿ ಬಾಷೆಯ ಹೆಸರಲ್ಲಿ ಜನರನ್ನು ವಿಭಜಿಸಿ ಮತಬ್ಯಾಂಕ್ ಸೃಷ್ಟಿಸಿ ಸಂವಿಧಾನ ಬಾಹಿರ ಕಾರ್ಯಗಳಿಗೆ ಸಡ್ಡುಹೊಡೆದು ಹೊಸ ರಾಜಕೀಯ ಸಂಸ್ಕೃತಿಯನ್ನು ದೇಶಕ್ಕೆ ಪ್ರಾಯೋಗಿಕವಾಗಿ ಅನುಷ್ಟಾನಗೊಳಿಸಲು ಕಟ್ಟಿದ ಪಕ್ಷ ಎಸ್ಡಿಪಿಐ.
ಇದೇ ಸಿದ್ದಾಂತದೊಂದಿಗೆ ಕಳೆದ 13 ವರ್ಷಗಳಿಂದ ದೇಶದ 23 ರಾಜ್ಯಗಳಲ್ಲಿ ಸಕ್ರಿಯವಾಗಿದೆ.ಕರ್ನಾಟಕದ 31 ಜಿಲ್ಲೆಗಳಲ್ಲಿ ಪಕ್ಷವು ಹೊರಾಟ ರಾಜಕೀಯ ಮತ್ತು ಚುನಾವಣಾ ರಾಜಕೀಯದೊಂದಿಗೆ ಜನಸೇವೆಯ ಮೂಲಕ ಎಲ್ಲಾ ವರ್ಗದ ಜನರ ಮನಸ್ಸನ್ನು ಗೆದ್ದಿರುವ ಪಕ್ಷದ ಟಿಕೆಟ್‌ನಿಂದ ಸ್ಪರ್ದಿಸುವವನಾದ್ದರಿಂದ ಜನಬಲ ಜಾತಿಬಲ ಮತ್ತು ಬಲಾಡ್ಯರಿಗಿಂತ ಬಿನ್ನವಾದ ಫಲಿತಾಂಶ ನಮ್ಮದಾಗಲಿದೆ.

ಪ್ರಶ್ನೆ:- *ಪ್ರಚಾರಕಾರ್ಯ ಹೇಗೆ ನಡೆಯುತ್ತಿದೆ.*

ಉತ್ತರ:-ಎಸ್ಡಿಪಿಐ ಕಾರ್ಯಕರ್ತರ ಆಧಾರಿತ ಪಕ್ಷ,ಮೂರು ವರ್ಷಗಳ ಹಿಂದೆ ಎಂಎಲ್‌ಸಿ ಚುಣಾವಣೆಗೆ ಸ್ಪರ್ದಿಸಬೇಕೆಂದು ಪಕ್ಷ ತೀರ್ಮಾನಿಸಿತ್ತು,ನಂತರ ಈ ಕ್ಷೇತ್ರ ಮೈಸೂರು,ಚಾಮರಾಜನಗರ, ಮಂಡ್ಯ,ಮತ್ತು ಹಾಸನ ಜಿಲ್ಲೆಗಳ ಪಕ್ಷದ ಎಲ್ಲಾ ಹಂತದ ಸಮಿತಿಗಳಲ್ಲಿ ಪಧವೀದರರನ್ನು ಗುರುತಿಸುವ ಕೆಲಸ ಮಾಡಿದ್ದೇವೆ.ಕಳೆದ ಎಂಟು ತಿಂಗಳಿನಿಂದ ಎಲ್ಲಾ ಮತದಾರರನ್ನು ಮುಖತಃ ಬೇಟಿಯಾಗಿ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದೇವೆ,ಮತ್ತು ಮತಯಾಚನೆಯ ಕೆಲಸವನ್ನು 4 ಜಿಲ್ಲೆಗಳಲ್ಲೂ ಚುರುಕಾಗಿ ಮಾಡಲಾಗುತ್ತಿದೆ.
ನಿರುದ್ಯೋಗಿಗಳು,ಸರಕಾರಿ ಸಿಬ್ಬಂದಿಗಳು ಮತ್ತು ಎಲ್ಲಾ ಪದವೀಧರರುಗಳಿಂದ ಉತ್ತಮ ಸ್ಪಂದನೆ ನೀಡಿದ್ದಾರೆ.ಸಾವಿರಾರು ಪಧವೀದರರು ಬದಲಾವಣೆ ಬಯಸಿ ನಿತ್ಯ ಸಂಪರ್ಕದಲ್ಲಿದ್ದು ಅವರ ಭರವಸೆಯ ನಂತರ ನಮ್ಮ ಮತಯಾಚನೆ ಕಾರ್ಯ ಇನ್ನಷ್ಟು ತೀವ್ರವಾಗಿ ನಡೆಸುತ್ತಿದ್ದೇವೆ.
ವಿಶೇಷವಾಗಿ ಅತೀ ಹಿಂದುಳಿದ ಸಣ್ಣ ಪುಟ್ಟ ಜಾತಿಗಳು ದಲಿತರು ಮುಸ್ಲಿಮರು ಕ್ರೈಸ್ತರು ಮಹಿಳೆಯರು ಮತ್ತು ಯುವಕರು ಅವಕಾಶ ವಂಚಿತ ಪದವೀಧರರು ನನ್ನನ್ನು ಗೆಲ್ಲಿಸುವಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ರಾಜಕೀಯ ಅಧಿಕಾರ ಬೆರಳೆಣಿಕೆಯ ಬಲಾಡ್ಯ ಜಾತಿಗಳ ಕೈಯಲ್ಲಿದೆ,ಅವಕಾಶ ವಂಚಿತ ಜನಸಮುದಾಯಗಳನ್ನು 70 ವರ್ಷಗಳಿಂದ ಅಧಿಕಾರದಿಂದ ದೂರವಿಡಲಾಗಿತ್ತು,ಈ ವರ್ಗದ ಮತದಾರರು ಖಂಡಿತ ಈಬಾರಿ ಎಸ್ಡಿಪಿಐಗೆ ಮತನೀಡಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ಆಶಾಭಾವನೆಯಲ್ಲಿದ್ದೇವೆ.

ಪ್ರಶ್ನೆ:- *ಗೆದ್ದಮೇಲೆ ತಮ್ಮ ಅದ್ಯತೆಯ ಯೋಜನೆಗಳೇನು* ?

ಉತ್ತರ:- ರಾಜ್ಯಸರಕಾರದಿಂದ ಪದವೀಧರರ ನಿಗಮ ಸ್ಥಾಪಿಸುವುದು,ಖಾಲಿ ಇರುವ ಸರಕಾರಿ ಹುದ್ದೆಗಳನ್ನು ಭರ್ತಿ ಮಾಡಲುಸದನದಲ್ಲಿ ಗಟ್ಟಿ ದ್ವನಿಯಲ್ಲಿ ಪ್ರಯತ್ನಿಸುವುದು,ಖಾಸಗಿ ಮತ್ತು ಕಾರ್ಪೋರೆಟ್ ಕಂಪನಿಗಳಲ್ಲಿ ಕನ್ನಡಿಗರಿಗೆ,ಮತ್ತು ಅಹಿಂದ ವರ್ಗದವರಿಗೆ ಉದ್ಯೋಗ ಮೀಸಲಾತಿ ಜಾರಿಗೊಳಿಸುವುದು,ಪಧವೀದರ ಸ್ವ‌ಉದ್ಯೋಗಿಗಳಿಗೆ ಸರಕಾರದಿಂದ ಬಡ್ಡಿರಹಿತ ಸಾಲಸೌಲಭ್ಯ ಮತ್ತು ಅನುದಾನ ಕೊಡಿಸುವುದು,ನಿರುದ್ಯೋಗ ಭತ್ಯೆ,ಮಹಿಳಾ ಪಧವೀದರರಿಗೆ ಗೃಹ ಕೈಗಾರಿಕೆಗಳ ತರಬೇತಿ,ತಾಲ್ಲೂಕು ಮಟ್ಟದಲ್ಲಿ ಪಧವೀದರ ನಿರುದ್ಯೋಗಿಗಳಿಗಾಗಿ ಮಾಹಿತಿಕೇಂದ್ರ,ಉದ್ಯೋಗಮೇಳ,ಉನ್ನತ ಮತ್ತು ಪ್ರಾಥಮಿಕ ಶಿಕ್ಷಣಕ್ಕಾಗಿ ಬಜೆಟ್ಟಿನಲ್ಲಿ ಗರಿಷ್ಟ ನಿಧಿ ಮಂಜೂರಾತಿ,ಅವಕಾಶವಂಚಿತ ಮತ್ತು ಬಡ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ,IAS,CET,NEET ಮೊದಲಾದ ತರಬೇತಿ ಕೇಂದ್ರಗಳನ್ನು ಎಲ್ಲಾ ತಾಲ್ಲೂಕು ಕೇಂದ್ರದಲ್ಲಿ ಸ್ಥಾಪನೆ,ಉನ್ನತ ಶಿಕ್ಷಣಕ್ಕಾಗಿ ಬಡ್ಡಿರಹಿತ ಸಾಲಸೌಲಭ್ಯ,ಸರಕಾರಿ ಶಾಲಾಕಾಲೇಜು ಅಭಿವೃದ್ಧಿ ಮತ್ತು ವ್ಯವಸ್ಥೆ ಸುಧಾರಣೆ,ಹೊರಗುತ್ತಿಗೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪಧವೀದರರ ಕಾಯಂ,ಅತೀ ಹಿಂದುಳಿದ, ಮುಸ್ಲಿಂ ಮತ್ತು ರೈತರ ಮಕ್ಕಳಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಪಾಲು ಹೆಚ್ಚಿಸುವುದು.
ಪಧವೀದರರಿಗೆ ಧರ್ಮ ಜಾತಿ ಮತ್ತು ಭಾಷೆಯ ನಡುವೆ ಸೌಹಾರ್ದ ವಾತಾವರಣ ನಿರ್ಮಿಸಲು ಸರಕಾರದಿಂದ ವಿಶೇಷ ನಿಧಿ ಬಿಡುಗಡೆ,ಮೊದಲಾದ ಹಲವಾರು ಜನಪರ ಕಾರ್ಯಗಳ ತ್ವರಿತ ಅನುಷ್ಟಾನ ಮಾಡುವ ಸದುದ್ದೇಶ ಹೊಂದಿದ್ದೇನೆ.
ಮತದಾರರು ಯಾವುದೇ ಒತ್ತಡ ಆಮಿಷಕ್ಕೆ ಒಳಗಾಗದೇ ಖಂಡಿತವಾಗಿ ಮೊದಲ ಪ್ರಾಶಸ್ತ್ಯದ ಮತನೀಡಿ ಗೆಲ್ಲಿಸುತ್ತಾರೆಂಬ ಆಶಾಭಾವನೆ ಹೊಂದಿದ್ದೇನೆ,ಪಕ್ಷದ ನಾಯಕರು ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ನಿರಂತರವಾಗಿ ಗರಿಷ್ಟ ಪ್ರಯತ್ನ ಮಾಡುತ್ತಿದ್ದಾರೆ.

ಸಂದರ್ಶನ:-
ಅಕ್ರಂ ಹಸನ್,ಉಳ್ಳಾಲ