*ರಾಷ್ಟ್ರದಾದ್ಯಂತ ಕಮ್ಯೂನಿಟಿ ಸೆಂಟರ್ ನಿರ್ಮಿಸಲು ಕೈ ಜೋಡಿಸುತ್ತೇವೆ -: ಜನಾಬ್ ಜಮಾಲ್ ಸಿದ್ದೀಕಿ*

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಜನಾಬ್ ಜಮಾಲ್ ಸಿದ್ದೀಕಿ ಅವರಿಗೆ ಪುತ್ತೂರು ಕಮ್ಯೂನಿಟಿ ಸೆಂಟರಿನ ಶೈಕ್ಷಣಿಕ ಯೋಜನೆಗಳ ಮಾಹಿತಿ ನೀಡಲಾಯಿತು. ಬೆಂಗಳೂರಿನಲ್ಲಿ ಇಂದು ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಸಮಾಲೋಚನಾ ಸಭೆಗೆ ಆಗಮಿಸಿದ್ದ ಅವರು ನಮ್ಮ ಸೆಂಟರಿನ ನಿಯೋಗದೊಂದಿಗೆ ಎರಡು ತಾಸು ವ್ಯಯಿಸಿದರು. ರಾಷ್ಟ್ರದಾದ್ಯಂತ ಇಂತಹ ಸೆಂಟರ್ ಗಳು ನಿರ್ಮಾಣವಾಗಬೇಕು ಎಲ್ಲಾ ಧರ್ಮೀಯ ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು ಎಂದು ಹೇಳಿದ ಅವರು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಹೇಳುವ ಮುಸ್ಲಿಮ್ ವಿದ್ಯಾರ್ಥಿಗಳ ಒಂದು ಕೈಯಲ್ಲಿ ಕಂಪ್ಯೂಟರ್ ಇನ್ನೊಂದು ಕೈಯಲ್ಲಿ ಕುರಾನ್ ಎಂಬ ಕಲ್ಪನೆಯನ್ನು ಸೆಂಟರ್ ಸಾಕಾರಗೊಳಿಸುತ್ತಿದೆ ರಾಷ್ಟ್ರೀಯ ಮಟ್ಟದಲ್ಲಿ ಇದರ ಜೊತೆ ನಾವು ಕೈ ಜೋಡಿಸುತ್ತೇವೆ, ಈ ಸಂದರ್ಭದಲ್ಲಿ ನಾವು ಭವಿಷ್ಯದ ಪೀಳಿಗೆಯನ್ನು ತರಬೇತುಗೊಳಿಸಿ, ಸರಿಯಾದ ದಾರಿಯಲ್ಲಿ ಮುನ್ನಡೆಸಲು ಇದು ಪರಿಣಾಮಕಾರಿ ಯೋಜನೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಯ್ಯದ್ ಸಲಾಂ, ಕರ್ನಾಟಕ ಮೈನಾರಿಟಿ ಡೆವಲಪ್ಪ್ ಮೆಂಟ್ ಕಾರ್ಪೊರೇಶನ್ ನ ಚೆಯರ್ ಮ್ಯಾನ್ ಜನಾಬ್ ಮುಖ್ತಾರ್ ಪಠಾಣ, ರಾಷ್ಟ್ರೀಯ ಬಿಜೆಪಿ ಮೈನಾರಿಟಿ ಮೋರ್ಚಾದ ಉಪಾದ್ಯಕ್ಷರಾದ ಶ್ರೀ ಅಬ್ದುಲ್ ಸಲಾಂ ಮತ್ತು ಮೇಥ್ಯು, ರಾಜ್ಯ ಉಪಾದ್ಯಕ್ಷರಾದ ನೂರ್ ಬಾಷಾ ಮತ್ತು ಜನಾಬ್ ಫೀರ್ ಝಾದೆ, ಬಿಜೆಪಿ ಮೈನಾರಿಟಿ ಮೋರ್ಚಾ ಮಾಜಿ ರಾಜ್ಯಾಧ್ಯಕ್ಷರಾದ ಪೀರ್ ಹುಸೈನ್, ಕೆ.ಎಂ.ಡಿ.ಸಿ ನಿರ್ಧೇಶಕರಾದ ಸಿರಾಜುದ್ದೀನ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.