ರಬ್ಬರ್ ನೆಲಹಾಸು ವಿತರಣೆಗೆ ಅರ್ಜಿ ಆಹ್ವಾನ
ಬೆಂಗಳೂರು ನಗರ ಜಿಲ್ಲೆ, ಮೇ 23 (ಕರ್ನಾಟಕ ವಾರ್ತೆ): 2021-22ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರಾಸುಗಳ ರಬ್ಬರ್ (Cow Mat) ಮ್ಯಾಟ್ ಗಳನ್ನು ವಿತರಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಪ್ರತಿ ಫಲಾನುಭವಿಗಳಿಗೆ ಎರಡು ರಬ್ಬರ್ ನೆಲಹಾಸು (Cow Mat) ಮ್ಯಾಟ್ ಗಳನ್ನು ವಿತರಿಸಲಾಗುವುದು. ಫಲಾನುಭವಿಗಳು ಕಡ್ಡಾಯವಾಗಿ ಎರಡು ರಾಸುಗಳನ್ನು ಹೊಂದಿರಬೇಕು,
ಆಸಕ್ತ ರೈತರು ಅರ್ಜಿಗಳನ್ನು ಹತ್ತಿರದ ಪಶು ಆಸ್ಪತ್ರೆ ಅಥವಾ ಪಶುಚಿಕಿತ್ಸಾಲಯಗಳ ಕಚೇರಿಯನ್ನು ಸಂರ್ಪಕಿಸಿ ಅರ್ಜಿಯನ್ನು ಪಡೆದು ಸೂಕ್ತ ದಾಖಲೆಗಳೊಂದಿಗೆ ಮೇ 30 ರೊಳಗಾಗಿ ಸಲ್ಲಿಸಬಹುದು ಎಂದು ಆನೇಕಲ್ ತಾಲ್ಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ