ಪ್ರಜಾಪ್ರಭುತ್ವದ ಮಗ್ಗಲು ಮುರಿದ ದಿನಗಳಿವು…….!!

ಪ್ರಜಾಪ್ರಭುತ್ವ ಎದುರಿಸುತ್ತಿರುವ ಅಪಾಯಗಳು……

ಮೊನ್ನೆ ಈ ಜಿಂಬಾಬೆ ನಾಯಕ ರಾಬರ್ಟ್ ಮೊಗಾಬೆ ನೆನಪಾದ ಈತ (zanu- pf ) ಪಾರ್ಟಿಯ ನಾಯಕ ಅತೀ ಹೆಚ್ಚು ಸಲ ಆ ದೇಶದ ಅಧ್ಯಕ್ಷನಾಗಿ ಮತ್ತೆ ಮತ್ತೆ ಬಹುಮತದಿಂದ ಆಯ್ಕೆಯಾಗಿ ಬಂದು ಆಡಳಿತ ನಡೆಸಿದ.ಯಾಕೆ ನೆನಪಾದ ಗೊತ್ತ್ ಈ ಪಾಪ್ಯುಲರ್ ಮ್ಯಾoಡೇಟ ಬಗ್ಗೆ ಬಹು ಚರ್ಚೆ ಆಯ್ತು ಜನ ಮೂರ್ಖರ ಒಬ್ಬ ಪ್ರಬಲ ನಾಯಕನನ್ನ ನನ್ನ ದೇಶದ ಜನ ಆಯ್ಕೆ ಮಾಡಿದ್ದಾರೆ ಅದು ಎಂದೂ ಇಲ್ಲದ ಬಹುಮತದಿಂದ ಅಂತಾ ಪುಂಖಾನೂ ಪುಂಕ ಸಮರ್ಥನೆಯೊಂದಿಗೆ ಆ ಕಾರಣಕ್ಕೆ ಈ ರಾಬರ್ಟ್ ನೆನಪಾದ….ಆತನು ಜನಮತ ಪಡೆದೆ ಗೆಲ್ಲುತ್ತಿದ್ದ ಆದ್ರೆ ಇಲ್ಲಿ ಗೆಲ್ಲಲು ಅನುಸರಿಸಿದ ಮಾರ್ಗಗಳು ಇತಿಹಾಸದಲಿ ಕಪ್ಪು ಚುಕ್ಕೆ ಆಗಿ ಉಳಿದವು. ಅಧಿಕಾರಕ್ಕೆ ಬಂದ ಮೇಲೆ ತನ್ನ ಅಧಿಕಾರ ವ್ಯಾಪ್ತಿಯ ಹೆಚ್ಚಿಸಿಕೊಂಡ ತನ್ನ ಪ್ರಸ್ನಾತೀತ ಮಾಡಿಕೊಂಡ ಮಾಧ್ಯಮಗಳ ಹಿಡಿತದಲ್ಲಿ ಇಟ್ಟು ಕೊಳ್ಳಲು ಪ್ರಯತ್ನಿಸಿದ ತನ್ನ ಸರ್ಕಾರದ ತಪ್ಪು ನೀತಿ ಬಗ್ಗೆ ಚಕಾರ ಎತ್ತುವ ಪತ್ರಕರ್ತರ,ಸಾಮಾಜಿಕ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ಹಾಕಿಸಿದ,ಕೊಲೆ ಮಾಡಿಸಿದ,ಹಿಂಸೆ ಕೊಟ್ಟ.ಪ್ರತಿಪಕ್ಷಗಳ ಪ್ರತಿಭಟನೆಗಳ ಹತ್ತಿಕ್ಕಿದ,ಜೊತೆಗೆ ಮಾಧ್ಯಮಗಳು ಪ್ರತಿಪಕ್ಷಗಳನ್ನೇ ಟಿಕೀಸುವಂತೆ ಸರ್ಕಾರದ ಕೆಲಸಗಳ ಬರೀ ಹೊಗಳುವಂತೆ ನಿಯಂತ್ರಣ,ನಿಗಾ ವಹಿಸಿದ,ಜೊತೆಗೆ ಆ ದೇಶದ ಸುಪ್ರೀಂ ಕೋರ್ಟಿನ ತೀರ್ಪುಗಳನ್ನೂ ಉಲ್ಲಂಘನೆ ಮಾಡಿದ,ನ್ಯಾಯಧೀಶರನ್ನೂ ಒತ್ತಡಕ್ಕೆ ಒಳ ಪಡಿಸಿ ತನಗೆ ಅನುಕೂಲಕರ ತೀರ್ಪುಗಳು ಬರುವಂತೆ ನೋಡಿಕೊಂಡ….ಹೀಗೆ ಪ್ರಜಾತಾಂತ್ರಿಕವಾಗಿ ಆಯ್ಕೆಯಾಗಿ ಬಂದ್ ಜನಪ್ರಿಯ ನಾಯಕ ನಡೆದುಕೊಂಡ.ಇದು ಒಂದಾದರೇ ಇನ್ನೊಂದು ನಮ್ಮದೆ ಪಕ್ಕದ ರಾಷ್ಟ್ರ ಶ್ರೀಲಂಕಾ ದೇಶದ ಘಟನೆಗಳು ಅದು ಸುಮಾರು1956ರ ವರ್ಷ ಅಲ್ಲಿನ ಸರ್ಕಾರ ಬಹುಸಂಖ್ಯಾ ತರ ಓಲೈಕೆಗೆ ಕಾನೂನುಗಳ ತಿದ್ದುಪಡಿ ಗೊಳಿಸುತ್ತೆ..ಅದೇನೆಂದರೆ
*ಅಲ್ಪ ಸಂಖ್ಯಾತ ತಮಿಳುರು,ಕ್ರಿಶ್ಚಿಯನ್ ರು,ಮುಸ್ಲಿಂ ರನ್ನ ವಿಶ್ವಾಸಕ್ಕೆ ತೆಗೆದು ಕೊಳ್ಳದೆ ಏಕ ಮುಖವಾಗಿ ಸಿಂಹಳ ಭಾಷೆಯನ್ನು ಅಧಿಕೃತ ಭಾಷೆ ಆಗಿ ಘೋಷಣೆ ಮಾಡುತ್ತೆ..

* ಬಹುಸಂಖ್ಯಾತ ಸಿಂಹಳಿಯರ ಧರ್ಮವಾದ ಬೌದ್ಧ ಧರ್ಮವನ್ನು ಪೋಷಣೆ ಮಾಡುವ ಕಾನೂನು ಪಾಸು ಮಾಡುತ್ತೆ..

ಇಷ್ಟೇ ಅಲ್ಲದೇ

* ಸಿಂಹಳಿಯರಿಗೆ ವಿಶ್ವ ವಿದ್ಯಾಲಯಗಳಲ್ಲಿ,ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕೂಡ ಕೊಟ್ಟು ಬಿಡುತ್ತೆ….

ಹೀಗೆ ಕೇವಲ ಮತ ಬ್ಯಾಂಕ್ ರಾಜಕಾರಣಕ್ಕೆ ತಮಿಳರ ಮತ್ತು ಇತರ ಸಮುದಾಯದ ಅಸ್ತಿತ್ವವನ್ನೂ ನಿರ್ಲಕ್ಷ ಮಾಡಿದ್ದು ಮುಂದೆ ಒಂದ್ ದೊಡ್ಡ ಪ್ರತಿಭಟನೆಗೆ ಕಾರಣವಾಗುತ್ತೆ ಅಲ್ಲದೇ ತಮಿಳರ ಬೇಡಿಕೆಗೆ ಸರ್ಕಾರ ಒಪ್ಪದಿದ್ದಾಗ…ಅಭದ್ರತೇ ಕಾಡಿ ಅದು ಜನಾಂಗೀಯ ಹತ್ಯಾಕಾಂಡಕ್ಕೂ ಕಾರಣವಾಗಿ ಇತಿಹಾಸದಲ್ಲಿ ಕಪ್ಪು ಚುಕ್ಕಿ ಆಗಿ ಉಳಿಯುತ್ತೆ….ಇವೆಲ್ಲಾ ಇವತ್ತು ಏಕೆ ಹೇಳಬೇಕು ಅನಿಸಿತು ಅಂದ್ರೆ ಇವತ್ತಿನ ಭಾರತ ಸರ್ಕಾರದ ನಡವಳಿಕೆ ಇದಕ್ಕಿಂತ ಭಿನ್ನ ಅನ್ನಿಸದಿರದು…NRC, ಮತಾಂತರ ನಿಷೇದಕಾಯ್ದೆ, ಗೊಹತ್ಯಾ ನಿಷೇದ ಕಾಯ್ದೆ,( ಗೋಮಾಂಸ ರಫ್ತು ಮಾಡುವ ಕಂಪನಿ ಒಡೆಯರು ಈ ಕಟ್ಟಾ ಆರ್ ಎಸ್ ಎಸ್ ನ ಬಹುಮುಖ್ಯರ ನಿಕಟವರ್ತಿಗಳು ಅನ್ನೊದು ಮರೆತು ಬಿಡಿ 😂)ಈ ಕಾಯ್ದೆಗಳು ಯಾರ್ ಓಲೈಕೆಗಾಗಿ ಅನ್ನೋದು ಬೇರೆ ನಾನು ಹೇಳಬೇಕಿಲ್ಲ.

* ಒಂದ್ ಟೀಕೆಯ ಟ್ವಿಟ್ ಕಾರಣಕ್ಕೆ ಖ್ಯಾತ ಪಾಪ್ ಗಾಯಕಿಯ ಮೇಲೆ ಕೇಸು ಜಡಿಯುವ,ಟೂಲ್ ಕಿಟ್ ಎಂಬ ಸೆಲ್ಫ್ ಡಿಫೆನ್ಸ್ ಪ್ರಕರಣದ ಕಾರಣಕ್ಕೆ ಸಾಮಾಜಿಕ ಕಾರ್ಯ ಕರ್ತೆಯ ಬಂಧನ ಗೊಳಿಸುವ ಈ ಸರ್ಕಾರದ ದಮನ ಕಾರೀ ನೀತಿ…ಆದ್ರೆ ಕೂಗಳತೆಯ ದೂರದಲ್ಲಿ ಇರುವ 1ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮಾತನಾಡಿಸಲು ಸಮಯವಿರದ ಸರ್ಕಾರ,ಮುಖ್ಯ ಸ್ಥರು…ಎನ್ ಹೇಳೋದು ಇದಕ್ಕೆ..ಇನ್ನೂ ಅಚ್ಚರಿ ಅಂದ್ರೆ anti- government ಸುದ್ದಿಗಳು ಮಾಧ್ಯಮದ ಯಾವ ಭಾಗದಲ್ಲೂ ಬಾರದಿರಲೆಂದು ನಿಗಾ ವಹಿಸಲೆಂದೆ 150ಸಿಬ್ಬಂದಿಗಳ ಹಗಲು ರಾತ್ರಿ ದುಡಿಸುವ ಈ ಸರ್ಕಾರದಿಂದ ಪ್ರಾಮಾಣಿಕತೆ ನಿರೀಕ್ಷೆ ಮಾಡುವುದಾದರೂ ಹೇಗೆ….?

* ಮೊದಲೂ ಸರ್ಕಾರಗಳಿದ್ದವು ಮೊದಲೂ ಪ್ರತಿ ಪಕ್ಷಗಳಿದ್ದವು ಮೊದಲೂ ಟೀಕೆಗಳಾಗುತ್ತಿದ್ದವು ಆದ್ರೆ ವ್ಯತ್ಯಾಸ ಇರುವುದೇ ಇಲ್ಲಿ ಸರ್ಕಾರ ಟೀಕಿಸಿದವರೆಲ್ಲ ನಗರ ನಕ್ಸಲರೋ,ದೇಶ ದ್ರೋಹಿಗಳೋ,ಭಯೋತ್ಪಾದಕರ ಸಮರ್ಥಕರೋ,ಹಿಂದೂ ವಿರೋಧಿಗಳೊ ಅನ್ನಿಸಿಕೊಳ್ಳುವ ಅಪಾಯ ಇರಲಿಲ್ಲ ಆದ್ರೆ ಇವತ್ತು ಹಾಗೆ ಅನ್ನಿಸಿಕೊಳ್ಳುವ ಜೊತೆಗೆ ಕೇಸ್ ಕೋರ್ಟ್ ಇತ್ಯಾದಿ ಜೊತೆಗೆ ತಣ್ಣನೆಯ ಹತ್ಯೆ ಕೂಡ ಆಗಬಹುದು.ಉದಾಹರಣೆಗೆ ಸರ್ಕಾರಿ ಪ್ರಾಯೋಜಕತ್ವದ ಹತ್ಯೆ ಎನಿಸಿಕೊಂಡ ಸ್ಟಾನ್ ಸ್ವಾಮಿ ಮರಣವನ್ನು ಹೇಗೆ ಮರೆಯುವುದು…?(ಇನ್ನು ದಾಬೋಲ್ಕ್ ರ್,ಪನ್ಸಾರೆ,ಗೌರಿ ಲಂಕೇಶ್,ಎಂ ಎಂ ಕಲ್ಬುರ್ಗಿ ಇತ್ಯಾದಿ ಕೊಲೆಗಳು ಯಾವ ಅಡಿ ನಡೆದದ್ದು ಕಾರಣ,ತನಿಖೆ ಗೆದ್ದಲು ಹಿಡಿದು ದಫನ್ ಆದವು ಎಂದು ಬೇರೆ ಹೇಳಬೇಕಿಲ್ಲ.ಈ ಹತ್ಯೆಗಳಿಗೆ ನಿಮಗೆ ಬೇಕಾದ ಒಂದು ಹೆಸರು ಕೊಟ್ಟುಕೊಳ್ಳಿ……!)

* ಶ್ಯಾಯಿನ ಬಾಗ್ ನ ಪ್ರತಿಭಟನೆಯ ಹೆಣ್ಣು ಮಕ್ಕಳು,ಜವಾಹರ ನೆಹರು ಯೂನಿವರ್ಸಿಟಿಯ ಪ್ರತಿಭಟನೆಯ ಕನಯ್ಯಾ,ಇಲ್ಲಾ ಟಿಕರಿಯ ಪ್ರತಿಭಟನಾ ನಿರತ ರೈತರು ಇವರುಗಳಿಗೆ ದೇಶ ದ್ರೋಹಿಗಳ ಪಟ್ಟ ಕಟ್ಟಿದ್ದು ಅಲ್ಲದೇ ಪ್ರತಿಭಟನನಿರತ ರೈತರ ಮೇಲೆ ಕೇಂದ್ರ ಮಂತ್ರಿಯ ಮಗನೆ ಕಾರು ಹರಿಸಿ ಹತ್ಯೆ ಮಾಡಿದ್ದು ಹಿಟ್ಲರ್ ನನ್ನು ಫ್ಯಾಸಿಸಂ ಅನ್ನು ನೆನಪಿಸದೆ ಇರದು…ಇವತ್ತಿನ ಸರ್ಕಾರ ಅಧಿಕಾರ ಇದ್ದಾಗ ಮಾಡುವ ಈ ರೀತಿಯ ಕೃತ್ಯ ಗಳು ಪ್ರಜಾಪ್ರಭುತ್ವದಡಿಯ ಮೂಲಭೂತ ದಮನ ಕಾರಿ ಕೃತ್ಯಗಳಲ್ಲದೆ, ಹೇಡಿತನ,ಪುಕ್ಕಲುತನ ಅಧಿಕಾರ ಲಾಲಸೆಯ ಹಪಾ ಹಪಿಯ ಭಯವನ್ನೇ ಸೂಚಿಸುತ್ತವೆ ಅಷ್ಟೇ….

* ಈ ರೀತಿಯ ಸರ್ಕಾರಗಳು ಫ್ಯಾಸಿಸ್ಟ್ ಮನೋಸ್ಥಿಯಿಂದಾಗಿ ವ್ಯವಸ್ಥಿತ ರೀತಿಯಲ್ಲಿ ನ್ಯಾಯಾಂಗ ಮತ್ತು ಮಾಧ್ಯಮವನ್ನೂ ಕೂಡ ಮುಕ್ತವಾಗಿ ಕಾರ್ಯ ನಿರ್ವಹಿಸಲು ಬಿಡುವುದಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತು ಆಗುತ್ತಲೇ ಇದೆ ಯಾವ ನ್ಯಾಯ ವ್ಯವಸ್ಥೆ ಸಾಮಾನ್ಯ ಜನರ ಭರವಸೆಯ ಕೊನೆಯ ಮಿಣುಕು ದೀಪವಾಗಿತ್ತೋ ಅದರ ಅತ್ಯುನ್ನತ ಸ್ಥಾನದ ಮುಖ್ಯ ಸ್ಥರೆ ತಮ್ಮ ಮೇಲೆ ಬಂದ್ ಲೈಂಗಿಕ ದುರ್ಬಳಕೆ ಆಪಾದನೆಯ ತಾವೇ ವಿಚಾರಣೆ ಮಾಡಿದ್ದು ಅಲ್ಲದೇ ದೋಷ ಮುಕ್ತತೆತೆ ಪಡೆದಿದ್ದು ಈ ದೇಶ ಕಂಡ ದೊಡ್ಡ ದುರಂತಗಳಲ್ಲಿ ಒಂದು,( ಮುಂದೆ ಅವರು ಯಾವ ತೀರ್ಪು ನೀಡಿದರು,ಅವರಿಗೆ ನಿವೃತ್ತಿಯ ನಂತರ ಯಾವ ಸಭೆಗೆ ನೇಮಕಗೊಂಡರು ಅದು ಚರ್ಚಿತ ವಿಷಯವೇ )ಇನ್ನೂ ಯಾವದೇ ಪ್ರೈವೇಟ್ ರಾಷ್ಟ್ರೀಯ ವಾಹಿನಿಗಳನ್ನೇ ಗಮನಿಸಿ ಅವು ಹಿಂದಿ ಆದ್ರೂ ಸರಿ ಇಂಗ್ಲಿಷ್ ಆದ್ರೂ ಸರಿ ಅವು ಸರ್ಕಾರದ ಮುಖವಾಣಿಯಂತೆ ಕೆಲಸ ಮಾಡುತ್ತಿರುವುದನ್ನ ಗಮನಿಸಿದರೆ ಹಣಬಲ, ಅಧಿಕಾರಬಲ ಮತ್ತು ಈ ಚಾನೆಲ್ ಗಳ ಒಡೆಯರಾದ ಕಾರ್ಪೊರೇಟ ಸಂಸ್ಥೆಗಳಮೇಲೆ ಸರ್ಕಾರದ ಬಿಗಿ ಹಿಡಿತ ಗಮನಕ್ಕೆ ಬಾರದೆ ಇರದು……

* ಇನ್ನೊಂದು ವಿಷಯ ಇಲ್ಲಿ ಹೇಳಲೇ ಬೇಕು ಈ ಪ್ಯಾಸಿಸ್ ಮನೋಸ್ಥಿತಿಯ ಸರ್ಕಾರಗಳು ಪ್ರಾದೇಶಿಕ ರಾಜ್ಯಗಳಲ್ಲೂ ತಮ್ಮ ನೇತೃತ್ವದ ಸರ್ಕಾರ ಸ್ಥಾಪಿಸಲು ಅನುಸರಿಸುವ ಮಾರ್ಗಗಳು ಉದಾಹರಣೆಗೆ ಗೋವಾ,ಕರ್ನಾಟಕ,ಜಾರಖಂಡ್ ಹುಕ್ ಅಂಡ್ ಕುಕ್ ಅಧಿಕಾರ ಹಿಡಿಯಲು ಚುನಾಯಿತ ಎಂ ಲ್ ಎ ಗಳನ್ನೂ ಕಾಳ ಸಂತೆಯಲ್ಲಿಯ ದನಕರುಗಳಂತೆ ಕೊಂಡು ಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುವುದನ್ನು ನೋಡಿದಾಗ ಪ್ರಜಾಪ್ರಭುತ್ವ ಪ್ರಾಥಮಿಕ ಮೆಟ್ಟಿಲುಗಳೇ ಬುಡಮೇಲು ಆದಂತೆ ಎನ್ನಿಸದೆ ಇರದು

ಸಂವಿಧಾನದ ನಾಲ್ಕು ಅಕ್ಷರ ಓದಿದವರಿಗೂ ಒಂದು ಸ್ಪಷ್ಟತೆ ಇರುತ್ತೆ ಈ ದೇಶ ಇಲ್ಲಿ ವಾಸಿಸುವ ಎಲ್ಲ ಧರ್ಮದವರಿಗೂ ಸೇರಿದ್ದು ಹಿಂದುಗಳು,ಮುಸ್ಲಿಂ ರು,ಕ್ರಿಶ್ಚಿಯನ್ ರು,ಸಿಕ್ಕರು,ಪಾರ್ಸಿಗಳು,ಜೈನರು,ಬೌದ್ಧರು….ಹೀಗೆ ಆದ್ರೆ ಸರ್ಕಾರವೇ ಬಹುಸಂಖ್ಯಾತರ ಓಲೈಕೆಗೆ ನಿಲ್ಲಲು ಜೈ ಹಿಂದ್ ಇರುವ ಜಾಗದಲ್ಲಿ ಜೈ ಶ್ರೀ ರಾಮ ಅರಚಲು ಪ್ರಾರಂಭ ಮಾಡಿದರೆ ಕಥೆ ಏನು ಅಂತಾ ಅಂದ್ರ್ ಜೈ ಶ್ರೀ ರಾಮ ಅದರ ಮುಖ ವಾಣಿ ಆಗಬಾರದು ಹಾಗೆ ಆದ್ರೆ ಉಳಿದ ಅಲ್ಪ ಸಂಖ್ಯಾತರಿಗೆ ಅದು ತಲುಪಿಸುತ್ತಿರುವ ಸಂದೇಶವೇನು ಅನ್ನೋದು ಅಷ್ಟೇ ಪ್ರಶ್ನೆ…?ಇನ್ನೂ ಒಂದು ಪ್ರಶ್ನೆ ಉದ್ಭವಿಸುತ್ತೆ ಇಲ್ಲಿ ರಾಮ ಸರ್ಕಾರದ ಆಸ್ತಿಯೇ…? ಇಲ್ಲಾ ತಾನೇ. ಅವನು ಜನರ ಆಸ್ತಿ ….ಜನರ ಆಸ್ಥೆಯ,ನಂಬಿಕೆಯ ಆಸ್ತಿ,ಅವ್ಹಾ ಜನರ ಸ್ವತ್ತು….ಹೀಗಿರುವಾಗ ಹೋದ ಬಂದ ಕಡೆಯಲೆಲ್ಲ ಸರ್ಕಾರದ ಮುಖ್ಯಸ್ಥರೇ ಮತ ಬ್ಯಾಂಕ್ ರಾಜಕಾರಣಕ್ಕೆ ಮತಿಗೆಟ್ಟು ಹೀಗೆ ಅರಚಿದರೆ ಹೇಗೆ ? ರಾಮನೋ ಪಿತೃವಾಕ್ಯ ಪರಿಪಾಲನೆಗೆ ರಾಜ್ಯಪಟ್ಟವನ್ನೇ ತಿರಸ್ಕರಿಸಿ ವನವಾಸಕ್ಕೆ ಹೋದವನು,ಇವರೋ ಲಿಖಿತ ರೂಪದಲ್ಲಿ ಕೋರ್ಟಿಗೆ ಕೊಟ್ಟ ಮಾತಗೆ ತಿಲಾoಜಲಿ ಇಟ್ಟು, ಕೊಟ್ಟ ಮಾತನ್ನು ಮುರಿದು ಮಸೀದಿ ಕೆಡವಿದ ಇವರ ದ್ರೋಹವನ್ನ ಹೇಗೆ ರಾಮನಾದ್ರೂ ಕ್ಷಮಿಸಿಯಾನು….?ಭಾರತವನ್ನ ಹಿಂದು ರಾಷ್ಟ್ರ ಮಾಡುವೆವು ಎಂದು ಪ್ರಣಾಳಿಕೆಯಲ್ಲಿ ಬರೆದು ಕೊಂಡವರಿಗೆ ಸಂವಿಧಾನ ಪ್ರಜಾಪ್ರಭುತ್ವ ಲೆಕ್ಕಕ್ಕೆ ಬರುವುದುoಟೆ…?ಇದು ಒಂದು ಕಡೆ ಇರಲಿ….

* ಯಾವುದೇ ಸರ್ಕಾರಕ್ಕೆ ರಸ್ತೆ,ನೀರು,ನಿರುದ್ಯೋಗ,ಬಡತನ,ಆರೋಗ್ಯ ಇವುಗಳು ಮುಖ್ಯ ವಿಷಯಗಳಾಗಬೇಕು ಚುನಾವಣೆಗೆ ಆಗಲಿ ಅದರಾಚೆಗೂ ಸರ್ಕಾರದ ಕೈ ಹಿಡಿದು ನಡೆಸಬಲ್ಲ ವಿಷಯಗಳು ಆಗಿರುತ್ತವೆ ಮತ್ತೆ ಇವುಗಳು ಜನರ ಜೀವನಕ್ಕೆ ನೇರ ಸಂಬಂಧ ಹೊಂದಿವೆ…ಇವುಗಳಲ್ಲಿ ಜನರ ನಿರೀಕ್ಷೆಗೆ ಸರ್ಕಾರ 50% ಪ್ರತಿಸ್ಪಂದನೆ ಕೊಟ್ಟರೂ ಸಹ ಅದು ಮತ್ತೆ ಮತ್ತೆ ಪಾಕಿಸ್ತಾನ ನೆನಪಿಸಿಕೊಳ್ಳುವ,ಸೈನಿಕರ ಸಾವನ್ನು ಚುನಾವಣೆಯ ಅಸ್ತ್ರವಾಗಿಸುವ,ಧರ್ಮದ ಪ್ರವರ್ಥಕರ ಬಾಗಿಲು ತಟ್ಟುವ,ಪ್ರಧಾನಿಯ ಹತ್ಯೆಯ ಸಂಚು ಎಂದು ಇದ್ದಕ್ಕಿದ್ದಂತೆ ಹುಯಿಲು ಎಬ್ಬಿಸುವ,ಇವರು ರೈತರಲ್ಲ ದೇಶ ದ್ರೋಹಿಗಳು ಎಂದು ಬೊಬ್ಬೆ ಇಟ್ಟ ಸರ್ಕಾರವೇ ಇಲ್ಲಾ ಇಲ್ಲಾ ಅವರು ರೈತರು ಎಂದು ಹೇಳಿದಾಗ ಸ್ವಲ್ಪ ಆದ್ರೂ ಆತ್ಮ ಸಾಕ್ಷಿ ನಾಲಿಗೆ ತೊದಲಿಲ್ಲ ಅದೆಷ್ಟು ನಿರ್ಲಜ್ಜರಿರಬೇಕು ಅನಿಸಿತು…..

* 100 ದಿನಗಳಲ್ಲಿ ಕಪ್ಪು ಹಣ ವಾಪಸ್ ತರುತ್ತೇನೆ.ಪ್ರತಿಯೊಬ್ಬರ ಖಾತೆಗೂ 15 ಲಕ್ಷ ತುಂಬಿಸುತ್ತೇನೆ ಎಂದು ಚುನಾವಣೆಯ ಭಾಷಣಗಳಲ್ಲಿ ಹೇಳೋರು ಈಗ ವಾಪಸ್ ಬರೋದ್ ಇರಲಿ ಎಲ್ಲಿ ಹೋಯ್ತು ಕಪ್ಪು ಹಣ? ನೋಟ್ ಬ್ಯಾನಿ ನಿಂದ್ ಆದ ಲಾಭ ನಷ್ಟ ಕುರಿತಾಗಿ ಒಂದ್ ಸಣ್ಣ ಲೆಕ್ಕ ಕೊಡಲು ಆಗದಿದ್ದರೆ ಜನ ಪ್ರಶ್ನೆ ಮಾಡಬಾರದು ಅಂತಾ ನಿರೀಕ್ಷೆ ಮಾಡಿದರೆ ಹೇಗೆ…? ಸರ್ಕಾರಗಳಿಗೆ ಉತ್ತರದಾಯತ್ವ ಇರಬಾರದ.ಹೋಗಲಿ ಬ್ಯಾಂಕ್ ಗಳ ಸರದಿ ಸಾಲುಗಳಲ್ಲಿ ತಾವು ದುಡಿದ ಹಣ ಬಿಡಿಸಿಕೊಳ್ಳಲು ನಿಂತು 100ಕ್ಕೂ ಹೆಚ್ಚು ಜನರು ಸತ್ತಾಗ ಒಂದ್ ಸಣ್ಣ ವಿಷಾದ ವ್ಯಕ್ತ ಪಡಿಸದೇ 80 ವರ್ಷದ ಹೆತ್ತ ತಾಯಿಯನ್ನು ಬ್ಯಾಂಕಿನ ಸಾಲಿನಲ್ಲಿ ನಿಲ್ಲಿಸಿ ಪತ್ರಿಕೆಯಲ್ಲಿ ಬರೋಹಾಗೆ ನೋಡಿ ಕೊಳ್ಳುವ ಈ ಮಾರ್ಕೆಟಿಂಗ್ ಮನೋಸ್ಥಿತಿಯ ಬಗ್ಗೆ ಒಂದ್ ಆಕ್ಷೇಪ ಇರಲೇಬೇಕು.

* ಕರೋನಾ ಕಾಲಗಟ್ಟದಲ್ಲಿ ರಾತ್ರೋ ರಾತ್ರಿ ಬಂದು ದೇಶಕ್ಕೆ ಬೀಗ ಜಡಿದರು.ಹೌದು ಅದು ಜೀವ ರಕ್ಷಣೆಗೆ ಅನಿವಾರ್ಯ ಕೂಡ ಇರಬಹುದು.ಆದ್ರೆ ನೂರಾರು ಕಿಲೋಮೀಟರ್ ನಡೆದು ಮನೆ ಸೇರಲು ಪರದಾಡಿದ ದಿನಗೂಲಿ ಕಾರ್ಮಿಕರ ಕಥೆ ಏನು ನೂರಾರು ಬಡ ಕುಟುಂಬಗಳ ಆಹಾರದ ಕಥೆ ಏನು ಈ ಪ್ರಶ್ನೆಗಳು ಅವರಿಗೆ ಕಾಡದೆ ಅವರ ಹೊಟ್ಟೆ ಚಿಂತೆ ಮಾಡದೆ? ಒಂದಿಷ್ಟು ಅವರ ಬದುಕಿನ ಚಿಂತೆ ಕಾಡದೆ ಜಾಗಟೆ ಬಾರಿಸಿ,ಗಂಟೆ ಬಾರಿಸಿ,ದೀಪ ಹಚ್ಚಿ ಅಂದ್ರೆ ಹೇಗೆ ಸುಮ್ನೆ ಇರೋಕೆ ಸಾಧ್ಯ.ಅದರ ಜೊತೆಗೆ ಆಸ್ಪತ್ರೆಯಲ್ಲಿ ಸತ್ತ ಜನರ ಶವ ಸಂಸ್ಕಾರ ಮಾಡಲು ಕೂಡ ಚಿತಾಗಾರಗಳ ಕೊರತೆ ಕಾಡಿ ಹೊಸ ಸುಡುಗಾಡುಗಳ ಹುಟ್ಟು ಹಾಕಿದ್ದು, ಆಕ್ಸಿಜನ್ ಸಿಲೆಂಡರಗಳ ಕೊರತೆ ಕಾಡಿ ಸತ್ತವರ ಲೆಕ್ಕ ಕಡಿಮೆಯೇ..? ಇಂತಹ ಸಂಧರ್ಭದಲ್ಲೂ ಚುನಾವಣೆಯ ಭಾಷಣದ ಹುಕಿ ಇದ್ದ ಪ್ರಧಾನಿಯ ನಾನು ಈ ಪಾಟಿ ಜನ ಸಮೂಹ ನೋಡಿರಲಿಲ್ಲ ಅನ್ನೋ ಪ್ರಧಾನಿಯ ಅಮಾನವೀಯತೇ ಕೂಡ ಟೀಕಿಸದೇ ಇರೋದು ಹೇಗೆ…? ಇನ್ನು ಗಂಗೆಯಲ್ಲಿ ತೇಲಿ ಬಂದ್ ಹೆಣಗಳನ್ನೂ ಮರೆತು ಬಿಡಿ ಸರಕಾರದ ಗುಣಗಾನ ಮಾಡಿ ಅನ್ನೋರನ್ನು ಏನ್ ಅನ್ನೊದು..? ಅದಕ್ಕೆ ನನಗೆ ಇವುಗಳನ್ನು ಹೇಳಿ ದೇಶ ದ್ರೋಹಿ ಅನ್ನಿಸಿಕೊಳ್ಳೋದು ವಾಸಿ ಎನ್ನಿಸಿದ್ದು ಸುಳ್ಳಲ್ಲ 😂 ಕೊನೆ ಪಕ್ಷ ಮನುಷ್ಯತ್ವ ಜೀವಂತ ಇರುತ್ತೆ ಅನ್ನೋ ಕಾರಣಕ್ಕೆ ಅಷ್ಟೇ. ನನಗೆ ಈ ಗಂಟೆ,ಜಾಗಟೆ,ದೀಪ ಹಚ್ಚಿ ಅನ್ನುತ್ತಲೇ ಬಾಲಿವುಡ್ಡಿನ ಪ್ರಸಿದ್ಧ ನಟರೊಡನೆ ವನಸುತ್ತಿ ಸುದ್ದಿ ಆಗುವವರನ್ನು ಕಂಡಿದ್ದೇನೆ ಅದಕ್ಕೆ ನನಗೆ ಈ ಮಾರ್ಕೆಟಿಂಗ್ ಮನೋಸ್ಥಿತಿ ಬಗ್ಗೆ ಆಕ್ರೋಶ ಅಷ್ಟೇ.

* ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮಾರುವ,ಖಾಸಗಿಕರಣ ಗೊಳಿಸುವ ಹುಕಿ ಕೂಡ ಈ ಸರ್ಕಾರಕ್ಕಿದೆ ಅದು ಓ ಎನ್ ಜಿ ಸಿ,ಏರ್ ಇಂಡಿಯಾ,ಬ್ಯಾಂಕುಗಳು,ಬಿ.ಎಚ್.ಇ.ಎಲ್ ಹೀಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗಿ ಕರಣ ಗೊಳಿಸುವ ಇಲ್ಲಾ ಮಾರುವ ತುರ್ತಿಗೆ ಸರ್ಕಾರ ಬಿದ್ದಿದೆ.

ಹೀಗೆ ಮಾರಾಟ ಮಾಡುವ ಮನೋಸ್ಥಿತಿ ನೋಡಿ ಕವಿತೆ ಒಂದು ನೆನಪು ಆಯ್ತು ಸುಮಾರು ದಿನಗಳ ಹಿಂದೆ ಬರೆದಿದ್ದು ಸುಮ್ನೆ ಒಮ್ಮೆ ಓದಿ

ಮಾರಿ ಬಿಡಿ…..!!
*************

ಸತ್ಯದ ಎದೆಗೆ ಗುಂಡಿಕ್ಕಿ
ಕೊಂದು ಬಿಡಿ…
ಸುಳ್ಳನ್ನೆ ಸತ್ಯವಾಗಿಸುವ
ಹುನ್ನಾರ ಹೆಣಿದು ಬಿಡಿ…

ಹಗಲು ವೇಷಧಾರಿಗಳು
ಎಲುಬಿನ ಹಂದರದ ಮೇಲೆ
ಟಾರುರಸ್ತೆಯ ನಿರ್ಮಿಸಿದವರಲ್ಲವೇ..?
ನೀರ ಬದಲಾಗಿ ಬಡವರ
ರಕ್ತವನೇ ಕುಡಿದು ಬಿಡಿ…..!

ಕುರ್ಚಿಯ ಕಾಲಿಗೆ ಯಾರ ಯಾರ
ಶವದ ಮೆಟ್ಟಿಲು ಸಾಲು ಸಾಲು
ಮಾಡಿದ್ದಿರಿ…!!
ಹುತಾತ್ಮ ಸೈನಿಕರು ಮತ ಪೆಟ್ಟಿಗೆಗೆ
ಕೀಲಿ ಕೈಯಾಗುವ ಜಮಾನಾ ಗೆಳೆಯ…!!
ಸರಕಾರದ ಟೀಕೆ ಕೂಡ
ದೇಶ ದ್ರೋಹವಾಗಿರಲು..
ಸತ್ಯದ ಗೋರಿಗೆ ನಾಲ್ಕು
ಮೊಳೆ ಜಡಿದು ಬಿಡಿ….!!

ನೋವಿನ ನೆತ್ತರು ಬಳ್ಳಿಗೆ
ನೆನಪು ಕ್ಷಣಿಕ….
ಮತ್ತೇನಿದೆ ಮಂದಿರದ ಗಂಟೆಯ
ಸದ್ದನ್ನೇ ಎವಡುಗಚ್ಚುವ
ಹಾಗೆ ಬಾರಿಸಿ ಬಿಡಿ….
ಕಾಶಿಯಿಂದ ಕಾಶ್ಮೀರದವರೆಗೆ
ಮತ್ತೆ ಅಧಿಕಾರದ ಚುಕ್ಕಾಣಿ
ನಿಮ್ಮವರಿಗೆ ನಿಸಂಶಯ ಬಿಡಿ….!!

ಕೋರ್ಟಿನ ತಕ್ಕಡಿ
ಮುರಿದಾಗಿದೆ…!
ಸಂವಿಧಾನದ ಚಕ್ಕಡಿಯ
ಕೀಲು ಕಿತ್ತಾಗಿದೆ…!
ಮತ್ತೇನು ಸಂದೇಶ
ರಾಶಿ ರಾಶಿ ಚಾನಲ್ ಗಳ ಕೊಂಡಾಗಿದೆ….!
ಸತ್ಯದ ಎದೆಗೆ ಗುಂಡಿಕ್ಕಿ
ಕೊಂದಾಗಿದೆ….!
ದೇಶ ಪ್ರೇಮದ ಹೆಸರಲ್ಲಿ
ದೇಶವನೇ ಮಾರಿ ಬಿಡಿ…!!!!!

– ದೇವರಾಜ್ ಹುಣಸಿಕಟ್ಟಿ.
ಶಿಕ್ಷಕರು,ರಾಣೇಬೆನ್ನೂರ್