ಪಠ್ಯದ ಬ್ರಾಹ್ಮಣೀಕರಣ -(ಅಕ್ಷರ ಜಗತ್ತಿನ ತಣ್ಣನೆಯ ಕ್ರೂರತೆ )

ನನ್ನ ಆತ್ಮೀಯ ಮಿತ್ರರೇ,

ಎಲ್ಲರಿಗೂ ನಿಮ್ಮ ಮಿತ್ರನ ಪ್ರಣಾಮಗಳು. ಈ ದಿನ ನಾನು ನಿಮ್ಮ ಎದುರಿಗೆ ಬರಲು ಪ್ರಮುಖ ಕಾರಣ ಈ ಶಾಲಾ ಪಠ್ಯದಲ್ಲಿ ಮುಂದೆ ಬರಬಹುದಾದ ಆತಂಕಕಾರೀ ಬೆಳವಣಿಗೆಗಳ ಬಗ್ಗೆ ಒಂದು ಅಭಿಪ್ರಾಯ ಹಂಚಿಕೊಳ್ಳಲು ಮತ್ತೂ ಭವಿಷ್ಯದ ನನ್ನ ಮುಂದಿನ ಪೀಳಿಗೆಯ ಬೌದ್ಧಿಕ ಸ್ವಾಸ್ತ್ಯದ ಜೊತೆಗೆ ಆಟ ಆಡಲು ಬಯಸುತ್ತಿರುವ ಸರ್ಕಾರಿ ಪ್ರಾಯೋಜಿತ ಸಂಘದ ಅಜೆಂಡಾ ಕುರಿತು ತಿಳಿಸಲು. 2017-18 ರಲ್ಲಿ ಬರಗೂರು ರಾಮಚಂದ್ರಪ್ಪ ರವರ ಅಧ್ಯಕ್ಷತೆಯಲ್ಲಿ ಕೂಡ ಪಠ್ಯ ಕ್ರಮ ಪರಿಷ್ಕರಣೆ ಗೊಂಡಿತ್ತು.ಆಗ ಅದು ತೆಗೆದುಕೊಂಡ ಅವಧಿ ಸುಮಾರು ಒಂದುವರೇ ವರ್ಷ ಮತ್ತು ಅದರಲ್ಲಿ ಪಾಲ್ಗೊಂಡ ಸದಸ್ಯರ ಅಂದರೆ ಶಿಕ್ಷಣ ತಜ್ಞರ ಸಂಖ್ಯೆ ಕೂಡ ಸುಮಾರು 175.ಯಾಕಾಗಿ ಈಗ ಇದು ನೆನಪು ಮಾಡಬೇಕಾಗಿದೆ ಅಂದರೆ ಇವತ್ತು ಪಠ್ಯ ಪರಿಷ್ಕರಣೆ ಮಾಡುತ್ತಿರುವ ಚಕ್ರತೀರ್ಥ ಅಧ್ಯಕ್ಷತೆಯ ಸಮಿತಿ ತೆಗೆದುಕೊಂಡ ಅವಧಿ ಕೇವಲ ಒಂದುವರೇ ತಿಂಗಳು.ಮತ್ತು ಸದಸ್ಯರ ಸಂಖ್ಯೆ ಕೂಡ 8 ಅಲ್ಲಿಗೆ ಅದರ ಪರಿಶ್ರಮ ಆಳ ಅರಿವಿಗೆ ಬರಲು ಸಾಕಿಷ್ಟು.

ಇನ್ನೂ ಅಂದಿನ ಪಠ್ಯ ಪರಿಷ್ಕರಣೆ ಮಾಡುವಾಗ ಬರಗೂರರು ಲಿಂಗ ಸಮಾನತೆ,ಪ್ರಾದೇಶಿಕ ಪ್ರಾತಿನಿಧ್ಯ,ಸಾಮಾಜಿಕ ಸಾಮರಸ್ಯ ಇವುಗಳನ್ನ ಗಮನದಲ್ಲಿ ಇರಿಸಿ ಕೊಂಡು ಪರಿಷ್ಕರಣೆ ಮಾಡಲಾಗಿದೆ ಅಂತಾ ದೃಡೀಕರಿಸಿತ್ತು ಅಷ್ಟೇ ಅಲ್ಲದೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಗಮನದಲ್ಲಿ ಇರಿಸಿಕೊಂಡು ಪರಿಷ್ಕರಣೆ ಮಾಡಿತ್ತು.ಆದರೆ ಇಂದಿನ ಪಠ್ಯ ಪರಿಷ್ಕರಣೆಯ ಹೊಣೆ ಹೊತ್ತ ಸಮಿತಿಯ ಮುಖ್ಯಸ್ಥರು ಭಾಷೆಯ ಪಠ್ಯ ಇರುವುದು ಲಿಂಗ ಸಮಾನತೆ,ಸಾಮಾಜಿಕ ನ್ಯಾಯ ಇತ್ಯಾದಿ ವಿಷಯಗಳನ್ನು ತುರುಕುವುದಕ್ಕಲ್ಲ ಅಂತಾ ಹೇಳಿದೆ.ಈಗ ಮೂಲ ಪ್ರಶ್ನೆ ಏನಪ್ಪಾ ಅಂದ್ರ್ ಭಾಷೆಯನ್ನು ಕೇವಲ ಭಾಷೆಯ ಪರಿಧಿಯಲ್ಲಿ ಕಲಿಸಲು ಹೇಗೆ ಸಾಧ್ಯ? ಅದು ಸಮಾಜ,ಪರಿಸರ,ಪ್ರಾದೇಶಿಕ ವೈವಿದ್ಯತೆ,ಸಾಮಾಜಿಕ ನ್ಯಾಯ ಇತ್ಯಾದಿ ವಿಷಯಗಳನ್ನು ಒಳಗೊಂಡು ಕಲಿಸುವ ವಿಷಯ ಅಂತಾ ಎಂತ ಸಾಮಾನ್ಯ ಶಿಕ್ಷಣ ತಜ್ಞರಿಗೂ ಅರಿವಿಗೆ ಇರಬೇಕಾದ ಮುಖ್ಯ ಅಂಶ.ಇದನ್ನೇ ಅಲ್ಲಗಳಿಯುವ ಒಬ್ಬ ಸಂಘದ ಕಾರ್ಯಕರ್ತನಿಂದ ಎಂತ ಪಠ್ಯ ನಿರೀಕ್ಷೆ ಮಾಡಬಹುದು ಎಂಬುದು ಈಗಿರುವ ಪ್ರಶ್ನೆ.

ಈಗ ಸಮಿತಿಯ ಸದಸ್ಯರು ಯಾರು ಯಾರು ಅಂತಾ ಒಮ್ಮೆ ಕಣ್ಣಾಡಿಸುವ

ರೋಹಿತ ಚಕ್ರತೀರ್ಥ ( ಬ್ರಾಹ್ಮಣ )
ರಾಜಾರಾಮ ಹೆಗಡೆ ( ಬ್ರಾಹ್ಮಣ )
ಸತ್ಯ ಪ್ರಕಾಶ ( ಬ್ರಾಹ್ಮಣ )
ಬಿ.ಜೆ.ವಾಸುಕಿ ( ಬ್ರಾಹ್ಮಣ )
ಡಾ.ಅನಂತ ಕೃಷ್ಣ ಭಟ್ ( ಬ್ರಾಹ್ಮಣ )
ವಿಠಲ್ ಪೋತೆದಾರ ( ಬ್ರಾಹ್ಮಣ )

ಮೇಲಾಗಿ ಇವರಲ್ಲಿ ಹೆಚ್ಚಿನವರು ಬೆಂಗಳೂರಿನವರು.ಇವರು ಅದ್ಹೇಗೆ ಕಲ್ಯಾಣ ಕರ್ನಾಟಕ,ಕರಾವಳಿ ಕರ್ನಾಟಕ,ಹೈದರಾಬಾದ್ ಕರ್ನಾಟಕ,ಮದ್ಯ ಕರ್ನಾಟಕದ ಜನರ ಅಸ್ಮಿತೆಯ ಪ್ರತಿನಿಧಿಸ ಬಲ್ಲರು..? ಪ್ರಶ್ನೆ ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತೆ.ಮತ್ತೂ ಇಡೀ ಸಮಿತಿಯಲ್ಲಿ ಹಿಂದುಳಿದವರ ಪ್ರಾತಿನಿದ್ಯವೇನು? ಅಲ್ಪ ಸಂಖ್ಯಾತರ ಪ್ರಾತಿನಿದ್ಯ ವೇನು..? ಅಥವಾ ಶ್ರೇಣಿ ಕೃತ ವ್ಯವಸ್ಥೆಯ ಉಳಿದ ವರ್ಗದವರ ಪ್ರಾತಿನಿದ್ಯವೇನು? ಹಾಗಾದರೆ ಸಾಮಾಜಿಕ ವೈವಿದ್ಯತೆ ಹಾಗೂ ಭಿನ್ನ ದನಿಗೆ ಅವಕಾಶದ ಅವಶ್ಯಕತೆ ಇಲ್ಲವೇ..? ಕೇವಲ ಬ್ರಾಹ್ಮಣರ ಅದಿಪತ್ಯ ಇದಲ್ಲವೇ?

ಈಗ ಇಂತಹ ಒಂದು ವೈಧಿಕರೇ ತುಂಬಿರುವ ಸಮಿತಿ ಕನ್ನಡ ಭಾಷಾ ವಿಷಯದಲ್ಲಿ ಕೈ ಬಿಟ್ಟಿರುವ ಲೇಖಕರ ಹೆಸರಗಳ ಮೇಲೆ ಒಮ್ಮೆ ಕಣ್ಣಾಡಿಸುವ….

ಬಿ.ಟಿ.ಲಲಿತಾನಾಯಕ ( ದಲಿತ ಕವಿಯತ್ರಿ )
ಅರವಿಂದ ಮಾಲಗತ್ತಿ ( ದಲಿತ ಲೇಖಕ)
ಸಾರಾ ಅಬೂಬಕರ್ ( ಮುಸ್ಲಿಂ ಲೇಖಕಿ )
ಪಿ.ಲಂಕೇಶ್
ಕೆ.ನೀಲಾ
ಎಲ್.ಬಸವರಾಜು
ಎ.ಎನ್.ಮೂರ್ತಿ ರಾವ ಹೀಗೆ….. ( ಇವರೆಲ್ಲ ಬ್ರಾಹ್ಮಣತರ ಸಮುದಾಯಕ್ಕೆ ಸೇರಿದ ಲೇಖಕರು ) ಇದು ಅವರ ಮನಸ್ಥಿತಿ ತೋರಿಸುತ್ತೆ.ತೆಗೆದ ಪಠ್ಯವಾದರೂ ಎಂಥವು…

ಬುದ್ಧನ ಕುರಿತ ಪದ್ಯ
ಕೋಮು ಸಾಮರಸ್ಯದ ಕನ್ನಡ ಮೌಲ್ವಿ
ಕೋಮು ಸಾಮರಸ್ಯದ ರಂಜಾನ್ ಸುರುಕುಂಬಾ
ಸ್ವಾಮಿ ವಿವೇಕಾನಂದರ ಚಿಂತನೆಯ ಪೂರಕ ಪಾಠ
ಭಗತ್ ಸಿಂಗ್ ಕುರಿತಾದ ಗದ್ಯ
ಊರು ಭಂಗ
ಪೆರಿಯಾರ್
ಸುಕುಮಾರ ಸ್ವಾಮಿ ಕಥೆ

ಇದೆಲ್ಲಾ ಏನನ್ನ ಹೇಳುತ್ತೆ..? ಭಗತ್ ಸಿಂಗ್ ಬೇಡವೇ..? ಬುದ್ಧನೂ ಬೇಡವೇ…? ಇನ್ನೂ ವಿವೇಕಾನಂದರ ಚಿಂತನೆಗಳೂ ಹೇಗೆ ಬೇಡವಾದವು.ಇದು ವೈಚಾರಿಕತೆಯ ಮೇಲೆ,ಸಮಾಜದ ಸಾಮರಸ್ಯದ ಮೇಲೆ,ಚಿಂತನಾ ಲಹರಿಯ ಮೇಲೆ ನಡೆಸಬಯಸಿದ ಅಕ್ಷರ ಭಯೋತ್ಪಾದಕ ದಾಳಿ ಅಲ್ಲದೇ ಮತ್ತೇನೂ ಅಲ್ಲ.

ಈಗ ಅವರು ಸೇರಿಸಿರುವ 10 ಪಠ್ಯ ಗಳಲ್ಲಿ 9 ಲೇಖಕರು ಬ್ರಾಹ್ಮಣರು ಈಗ ಇದನ್ನೇ ಹೇಗೆ ಅರ್ಥೈಸಿ ಕೊಳ್ಳುವುದು.”ಅಂಗೈ ಹುಣ್ಣಿಗೆ ಕನ್ನಡಿ ಬೇಕೆ..?” ಇದು ಗಾದೆ ಇದಕ್ಕೆ ಈ ಮೇಲಿನ ಉದಾಹರಣೆಗೆ ಸೂಕ್ತ ಅಲ್ಲವೇ…?

ಪಠ್ಯ ಸೇರಿರುವ ಲೇಖರ ಹೆಸರು

ಗಜಾನನ ಶರ್ಮ ( ಬ್ರಾಹ್ಮಣ )
ಗಣೇಶ್ ಶತಾವಧಾನಿ ( ಬ್ರಾಹ್ಮಣ )
ಬನ್ನಂಜೆ ಗೋವಿಂದಾಚಾರ್ಯ ( ಬ್ರಾಹ್ಮಣ )
ಕೆ.ಬಿ.ಹೆಗ್ಡೆವಾರ್ ( ಬ್ರಾಹ್ಮಣ
ಎಸ್.ಎಲ್.ಭೈರಪ್ಪ ( ಬ್ರಾಹ್ಮಣ )
ಎನ್ ರಂಗನಾಥ ಶರ್ಮ ( ಬ್ರಾಹ್ಮಣ )
ಎಸ್.ವಿ.ಪರಮೇಶ್ವರ್ ಭಟ್ ( ಬ್ರಾಹ್ಮಣ )
ಸುಶ್ರುತ್ ದೊಡ್ಡೇರಿ (ಬ್ರಾಹ್ಮಣ )…
ಹೀಗೆ…

ಸರಿ ಈಗ ಸೇರಿರುವ ಪಠ್ಯವಾದ್ರೂ ತೆಗೆದ ಪಠ್ಯದ ಕೊರತೆ ತುಂಬುತ್ತಾ ಅಂದ್ರ್ ದೇವರೂ ಕಾಪಾಡೋದ ಕಷ್ಟ ಹಾಗಿದೆ ಪರಿಸ್ಥಿತಿ.ಒಮ್ಮೆ ಸುಮ್ನೆ ಅವಲೋಕಿಸಿ..

ಲಿಂಗ ತಾರತಮ್ಯ ಬೋಧಿಸುವ ಶುಕಾಸನ ಉಪದೇಶ
ಹೆಗ್ಡೆವಾರರ ಗೋಜಲು ಭಾಷಣ
….ಹೀಗೆ

ಇನ್ನೂ ಇದಕ್ಕಿಂತ ಮುಖ್ಯ ಅಂಶ ಅಂದ್ರ್ ಈ ಸಮಿತಿಯ ನೇತೃತ್ವ ವಹಿಸಿದ ರೋಹಿತ್ ಚಕ್ರತೀರ್ಥ ಅವರ ಬೌದ್ಧಿಕ ಅಧಪತನದ ಬಗ್ಗೆ ವ್ಯಾಪಕ ಟೀಕೆಗಳು ಮೊದಲಿಂದ ಕೇಳಿ ಬರುತ್ತಲೇ ಇವೆ.ಅದು ಕುವೆಂಪು ಕುರಿತು ಅವರ ಅಭಿಪ್ರಾಯ ಇರಬಹುದು ಇಲ್ಲಾ ನಾಡಗೀತೆ ತಿರುಚಿ ಬರೆದ ಅವಹೇಳನ ಕಾರೀ ಕೃತ್ಯ ಇರಬಹುದು.ಸರಕಾರ ಇವರನ್ನು ನೇಮಕ ಮಾಡುವಾಗ ಇದನ್ಯಾವುದನ್ನೂ ಗಮನಿಸಿಲ್ಲವೇ….? ಯಾರ ಕೃಪಾ ಕಟಾಕ್ಷದ ಮೇರೆಗೆ ಅಂತಹ ದೊಡ್ಡ ಜವಾಬ್ದಾರಿ ಕೊಡಲಾಯಿತು ಎಂಬುದು ಒಂದು ಪ್ರಶ್ನೆಯಾಗಿಯೇ ಉಳಿಯುತ್ತೆ.
ಅದಕ್ಕೆ ಇದನ್ನ ಇತಿಹಾಸ ಕ್ಷಮಿಸದ ಅಪರಾಧವಾಗಿ ನಾನು ನೋಡುತ್ತೇನೆ.ದಯವಿಟ್ಟು ಇದು ಬ್ರಾಹ್ಮಣಕೆಯ ಹೇರಿಕೆ.ಪ್ರಾದೇಶಿಕ ವಿವಿಧ ಸಮಾಜದ ದನಿ ಉಡಿಗಿಸುವ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ.ವೈಧಿಕ ಪರಂಪರೆಯ ಮರು ಸ್ಥಾಪನೆಯ ಯತ್ನವಲ್ಲದೆ ಮತ್ತೇನೂ ಅಲ್ಲ.ಇದು ನಮ್ಮನ್ನು ನಮ್ಮ ಚಿಂತನೆಯನ್ನೂ ಸಾವಿರ ವರ್ಷಕ್ಕೂ ಮಿಕ್ಕಿ ಹಿಂದಕ್ಕೆ ಒಯ್ಯುವ ವ್ಯವಸ್ಥೆಯ ವ್ಯವಸ್ಥಿತ ಪಿತೂರಿ.ಇದನ್ನು ಎಲ್ಲ ಪ್ರಜ್ಞಾವಂತರು ಖಂಡಿತ ಖಂಡಿಸುವ ತುರ್ತು ಇವತ್ತಿನದು.ಗೆಳೆಯರೇ ಇದನ್ನ ಅರಿಯಿರಿ ಮತ್ತು ದನಿಗೂಡಿಸಿ ಖಂಡಿಸಿ.

ಇಂತಿ,
ದೇವರಾಜ್ ಹುಣಸಿಕಟ್ಟಿ.
ಕವಿಗಳು