ಪ್ರೀಯರೇ……
ನಮಸ್ಕಾರ,

ಇಂದು ನನ್ನ ಮಿತ್ರರಾದ ಶ್ರೀ Vivekananda H K ರವರ ಮನವಿಯಂತೆ ಗುಲಾಬಿ ಹೂ , ಸಂವಿಧಾನ ಓದು, ಗಾಂಧಿಯೊಳಗಿನ ಪತ್ರಕರ್ತ ಪುಸ್ತಕ ,ಮನವಿ ಪತ್ರವನ್ನು ಕೊಟ್ಟು , ಮುಖ್ಯ ಕನ್ನಡ ಖಾಸಗಿ ವಾರ್ತಾ ವಾಹಿನಿಗಳಾದ #PubicTV , #ಸುವರ್ಣ ಟಿ.ವಿ,
#ಬಿಟಿವಿ, #ಟಿವಿ9 ,…. ರವರಲ್ಲಿ ದೇಶದ /ರಾಜ್ಯದ ಮಾಧ್ಯಮಲೋಕವನ್ನು ಎಂದೆಂದೂ ಆಳುವ ಪಕ್ಷದ ಮಾರ್ಗದರ್ಶಕರಾಗಿ , ಸದಾ ವಿರೋಧ ಪಕ್ಷವಾಗಿ- ಎಂಬ ಮಾಧ್ಯಮ ಧ್ಯೇಯವನ್ನು ನೆನಪಿಸುವ ಪಿಸುಮಾತನ್ನು ಹೇಳಲು ಹೊರಟೆ.

ಬೆಂಗಳೂರು ಯಶವಂತಪುರ ಬೆಮನಸಾ ನಿಲ್ದಾಣದ ೭ನೇ ಮೇಲ್ಚಾವಣಿಯಲ್ಲಿ Public TV. 9.೦೦ಗಂಟೆಗೆ ತಲುಪಿದೆ. ಒಬ್ಬೊಬ್ಬರಾಗಿ ಬರುತ್ತಿದ್ದರು. ಯಶವಂತಪುರ ಠಾಣೆಯ ಮಹಿಳಾ ಅರಕ್ಷಕರೂ ಸೇರಿದಂತೆ ಸುಮಾರು 20ಕ್ಕಿಂತ ಅಧಿಕ ಪೋಲಿಸರಿದ್ದರು. ಅವರಲ್ಲಿ ನಾನು, Vivekananda HK , ಯುವರಾಜ್ ಎಂ ಆಹಾರ ಸಂರಕ್ಷಣೆ ವಿಷಯವನ್ನು ವಿವರಿಸಿದೆವು. ಅಲ್ಲಿನ ಪ್ರಯಾಣಿಕರು, ಬಿಎಂಟಿಸಿ ನೌಕರರು ಎಲ್ಲರೂ ಎಲ್ಲವನ್ನೂ ಕೇಳಿ ಶುಭಹಾರೈಸಿದ್ದು ನಮಗೆಲ್ಲಾ ಬಹಳಾ ಪುಳಕಿತವಾಯಿತು. ಇದನ್ನೆಲ್ಲಾ ಕಂಡು ಕೇಳಿ ಪೋಲಿಸರು ನಮ್ಮಲ್ಲೊಬ್ಬರಾದರು ಎಂಬುವುದು ಅತ್ಯಾದ್ಭುತ……
Public TVಯ ಕಛೇರಿಗೆ ನಾವು ಹೋಗುವಂತಿಲ್ಲ. ಅವರಿಂದ ಯಾರೂ ನಮ್ಮನ್ನು ಕಾಣಲು ಬರುವಂತಿಲ್ಲ ಎಂಬ ಪೋಲಿಸರ ಆಜ್ಞೆ ನಮ್ಮ ಮಾನವೀಯ ಮೌಲ್ಯಗಳ ಮಾತಿನ ಮುಂದೆ ನತಮಸ್ತಕವಾಯಿತು. ಅವ(ಪೋಲಿಸ)ರೆಲ್ಲಾ ಸೇರಿ, ನಮ್ಮನ್ನು Public TV ೭ನೇ ಮೇಲ್ಚಾವಣಿ ಕಛೇರಿಯ‌ ಮುಂದೆ ಕರೆದುಕೊಂಡೇ ಹೋದರು. ನಾವು ಎಲ್ಲರೂ , ಅದರಲ್ಲಿ 80ರ ಹರೆಯದ ಇಬ್ಬರು ಹಾಗೂ ತೊಂಬತ್ತರ ಹರೆಯದ ಇನ್ನೊಬ್ಬರನ್ನು ಪೋಲಿಸರು ಕುಳಿತುಕೊಳಲು ಆಸನ ಒದಗಿಸಿದರು. ನಾವೆಲ್ಲಾ ಘೋಷಣಾ ಫಲಕವನ್ನು ಎತ್ತಿ ಹಿಡಿದು, ಮೌನವಾಗಿ ಒಂದೆರಡು ನಿಮಿಷ ನಿಂತು, ನಂತರ “ರಘುಪತಿ ರಾಘವ ರಾಜಾರಾಮ್……” ಹಾಡಿದಾಗ ನಮಗೆ ಮುಖಾಮುಖಿಯಾಗಿ ನಿಂತಿದ್ದ Public TV ಯವರು ಯಾಥಾಚಿತ್ ಅರಿಯದೆ ಧ್ವನಿಗೂಡಿಸಿ ಹಾಡಿದಾಗ, ಇನ್ನೂ ಅವ(Public TV)ರಲ್ಲಿ ಭಾರತೀಯತೆ ಉಳಿದಿದೆ ಎಂಬ ಸಂದೇಹ ಸುಮ್ಮನೆ ಮಿಡಿಯದಿರಲಿಲ್ಲ..

ನಂತರ ನಾವು Public TV ಯವರಿಗೆಲ್ಲಾ ಕೆಂಪು ರೋಜಾ ಹೂವು ಕೊಟ್ಟೆವು. ವಿವೇಕಾನಂದರು , ಯುವರಾಜ್ ಹಾಗೂ ಉಳಿದವರು Public TV ಯವರಿಗೆ ಸಂವಿಧಾನ ಓದು, ಗಾಂಧಿಯೊಳಗಿನ ಪತ್ರಕರ್ತ , ಮುಂತಾದ ಪುಸ್ತಕ ಗಳನ್ನು ಕೈಗೆ ಕೊಟ್ಟು, ಕೈ ಜೋಡಿಸಿ ನಮಸ್ಕಾರಿಸಿ, ಹೊರಟೆವು. ಹೊರಡುವಾಗ ಯಶವಂತಪುರ ಠಾಣೆಯ ಎಲ್ಲಾ ಪೋಲಿಸರಿಗೂ–ನಮ್ಮ‌ ಮಾತುಗಳನ್ನು ಕಿಂಚಿತ್ ಆದರೂ ಆಲಿಸಿದ Public TV ಯವರಿಗೆ ವಿವೇಕಾನಂದ HK ಹದಯಾಂತರಾಳದ ಕೃತಜ್ಞತೆಯನ್ನು ಎಲ್ಲರ ಪರವಾಗಿ ಸಲ್ಲಿಸಿದರು.

ಪೋಲಿಸರು ಇಂತಹಾ ಅಭಿಯಾನ ನಾವೆಂದೂ ನೋಡಿಲ್ಲ ನಿಮಗೆ ಶುಭವಾಗಲಿ ಎಂದು ಹಾರೈಸಿ ಕಳುಹಿಸಿದರು.

ಮುಂದೆ ನಾವು ಒಪ್ಪಂದದ ಮೇರೆಗೆ ಮಾಡಿದ (ಖಾಸಗೀ)ಬಸ್ಸಿನಲ್ಲಿ ಹತ್ತಿ ಸಂತೋಷದಿಂದ ಮುಂದಿನ ವಾಹಿನಿಗಳಾದ ಸುವರ್ಣ , BTV, TV9 ….ಕಡೆ ಹೊರಟೆವು. ಎಲ್ಲರ ಮನದಲ್ಲಿ ಹುರುಪು ಇತ್ತು, ಉತ್ಸಾಹದ ಕಣ್ಣುಗಳು ಇತ್ತು, ನಮ್ಮ ಭಾರತೀಯತೆಯ ಕೂಗು ವಾಹಿನಿ ಮಾಧ್ಯಮದವರ ಹೃದಯದ ಬಾಗಿಲಿಗೆ ನೇವರಿಸುವಂತೆ ತಲುಪುತ್ತಿದೆ ಎಂಬ ವಿಶ್ವಾಸವಿತ್ತು.

ಬಸ್ಸು ಇಳಿದು ಶಿವಾನಂದ ವೃತ್ತದಿಂದ ಖುಷಿಯಾಗಿ ನಡೆಯುತ್ತಾ , ಅಲ್ಲಿರುವ ಜನಾರ್ದನ ಹೋಟೆಲ್ ಬಳಿ ತಿರುಗಿತ್ತಿದ್ದಂತೆ, ಆ ಪರಿಸರ(area)ದ ಪೋಲಿಸ್ ಅಧಿಕಾರಿ ನಮ್ಮನ್ನು ತಡೆದು ನೀವು ಈ ರಸ್ತೆ ಮೇಲೆ ಕಾಲಿಡುವಂಗಿಲ್ಲ ಎಂದು ತಡೆದರು. ನಾವು ನಾವೆಲ್ಲರೂ ಅವರಲ್ಲಿ ನಗು ನಗುತ್ತಾ ಯಶವಂತಪುರದಲ್ಲಿ ಮಾಡಿದ ಫಾರ್ಮುಲಾ ಸಿಂಪಡಿಸತೊಡಗಿದೆವು.
ಅಷ್ಟರಲ್ಲಿ ನಮ್ಮ ಜೊತೆ ಇದ್ದ ಇಬ್ಬರು ವಯಸ್ಕರು ಬಸ್ಸು ಹೋದ ಮೇಲೂ ದೂರದಲ್ಲಿ ರೋಡ್ ಕ್ರಾಸ್ ಮಾಡಲು ಆಗದೆ ಚಡಪಡಿಸುತ್ತಿದ್ದರು ಹಾಗೂ ನನಗೆ Amith C.g ಕೆರೆಯೂ ಬಂತು. ಅಮಿತ್ ನಲ್ಲಿ ಮಾತನಾಡುತ್ತಾ ಮರಳಿ ಬಂದ ದಾರಿಗೆ ದಾಪುಗಾಲು ಹಾಕುತ್ತಾ ಆ 80ರ ಹಾಗೂ 90ರ ಹಿರಿಯರ ಪಕ್ಕ ಹೋಗಿ ಅವರನ್ನು ನಿಧಾನಕ್ಕೆ ರಸ್ತೆ ದಾಟಿಸಿ ಬಂದು ನೋಡುತ್ತೇನೆ. ಜೊತೆಗೆ ಬಂದ ಯಾರೂ ಆ ಜನಾರ್ದನ ಹೋಟೆಲ್ ಮುಂದೆ ತಿರುವಿನಲ್ಲಿ ಕಾಣುತ್ತಿಲ್ಲ, ಪೋಲಿಸರೂ ಇಲ್ಲ!!!! ಏನಾಯಿತು ಎಂದು ವಿವೇಕಾನಂದ ರಿಗೆ ಕರೆ ಮಾಡಿದಾಗ, ತಮ್ಮನ್ನೆಲ್ಲಾ ಅರೆಸ್ಟ್ ಮಾಡಿದ್ದಾರೆಂದು ಉತ್ತರ. ಯಾವ ಠಾಣೆ ಎಂದೂ ನಮಗೆ ಗೊತ್ತಾಗಿಲ್ಲ. ಸಂಪರ್ಕ ಕಡಿತವಾಯಿತು.

ಆ ವಯಸ್ಸಾದ ಹಿರಿಯರಿಬ್ಬರನ್ನು ಅಲ್ಲೇ ಒಂದು ಕಾಂಪೌಂಡ್ ವಾಲಿನ ಮೇಲೆ ಕುಳ್ಳಿರಿಸಿ , ನಾನು ಅತ್ತಿತ್ತ ನಡೆದು ನೋಡಿದೆ, ಯಾರೂ ಇಲ್ಲ. ಇದೇನಾಯ್ತು .. ಎಂದು ಚಿಂತಿಸುತ್ತಿದ್ದಾಗ, ಅಲ್ಲೇ ಇದ್ದ ಆಟೋ ಚಾಲಕ ಹಾಗೂ ಎಳನೀರು ಮಾರುವವರು ವಿಷಯ ವಿವರಿಸಿದರು…. ನಿಮ್ಮವರು ತುಂಬಾ ನಗು ನಗುತಾ ಮಾತನಾಡುತ್ತಿದ್ದರು, ಪೋಲಿಸರು ಬಹಳಾ ಕೆಟ್ಟದಾಗಿ ಅಗೌರವವಾಗಿ ಮಾತನಾಡಿ, ಅವರನ್ನೆಲ್ಲಾ ದೂಡಿ ನೂಕಿ ಪೋಲೀಸು ವ್ಯಾನಿನಲ್ಲಿ ಸೇರಿಸಿದರು. ನಿಮ್ಮವರ ಕೈಯಲ್ಲಿದ್ದ ರೋಜಾ ಹೂಗಳು ನೋಡಿ ಅವರು ಆ ಮೋರಿಯಲ್ಲಿ ಎಸೆದಿದ್ದಾರೆ ಎಂದರು. ನಿಮ್ಮವರನ್ನು ಕರೆದುಕೊಂಡು ಹೋದ ಠಾಣೆ ಯಾವುದೆಂದು ಹುಡುಕಿ ಹೋಗಬೇಡಿ. ಈ ವಾಹಿನಿಯವರು ಈ ರಸ್ತೆ ಅವರದೆಂದು ನಮ್ಮನ್ನೆಲ್ಲಾ ತುಂಬಾ ಹಿಂಸೆ ಕೊಡುತ್ತಾರೆ ಸಾರ್…. ಇಂದು ಈ ರಸ್ತೆ ಅವರದು, ನಾಳೆ ಈ ರಾಜ್ಯ ಎಲ್ಲಾ ಅವರದಾಗುತ್ತದೆ. ದಯವಿಟ್ಟು ಈ ಮುದುಕರನ್ನು ಕರೆದುಕೊಂಡು ಹೋಗಿ ಸಾರ್ …
ಆ ಟಿವಿ ಚಾನೆಲಿನವರು ತುಂಬಾ ಶ್ರೀಮಂತರು ನಮ್ಮನ್ನು ಅವರು ಕೊಂದರೂ ಯಾರೂ ಕೇಳುವವರಿಲ್ಲ ಸಾರ್…. ನಾವು ಇಲ್ಲಿ ಈ ನಡುವೆ ಬರೋದೇ ಇಲ್ಲ ಸಾ… ಹೋಗಿ ಸಾ… ಅವರನ್ನು ಕರ್ಕೊಂಡು ಹೋಗಿ….ಎಂದು ನನಗೆ ಒತ್ತಾಯಪೂರ್ವಕವಾಗಿ ವಿನಂತಿಸಿ ಅಲ್ಲಿಂದ ತೆರಳುವಂತೆ ಮಾಡಿದರು. ಆ ಆಟೋ ಚಾಲಕ -ಎಳನೀರು ಮಾರುವವರ ಕಣ್ಣುಗಳಲ್ಲಿ ಭಯ ಎದ್ದು ಕಾಣುತ್ತಿತ್ತು.

ಸಾರ್ವಜನಿಕನ ನೋವನ್ನು ತೋರಬೇಕಾದ ವಾಹಿನಿಗಳು, ನಮ್ಮಿಂದ ಒಂದು ಹೂ ಪಡೆಯಲು, ಪುಸ್ತಕ ಪಡೆಯಲು ನಿರಾಕರಿಸುವುದಲ್ಲದೆ…. ಈ ರಸ್ತೆಗೆ ಕಾಲಿಡಬಾರದು ಎನ್ನುವ ಫರ್ಮಾನು ಹೊಡೆಯುವವರು….. ನಮ್ಮ ಈ ಕನ್ನಡ ನಾಡಿನ ಜನರ ನಾಡಿ ಮಿಡಿತವಾಗಿದೆ ಎಂಬ ನೋವಿನ ನಗು ನನ್ನಿಂದ ದೂರವಾಗಲು ಇನ್ನು ಎಷ್ಟು ದಿನ ಹಿಡಿಯಬಹುದೋ……

ಯಾವ ನೇರ ಯಾವ ದಿಟ್ಟ?
ಬರೇ ನಿರಂತರ ರಾಜ್ಯದ ಜನರಿಗೆ ಹಿಂಸೆ…. ಭರವಸೆಯ ವಂಚನೆಯೇ…
ಬೆಳಕನ್ನು ಮೊಬ್ಬುಮಾಡುವ ದಬ್ಬಾಳಿಕೆಯೇ….!!!
ಏನೂ ನನಗೆ ಗೊತ್ತಾಗುತ್ತಿಲ್ಲ.

ಇಂತಹಾ ವಾಹಿನಿಯನ್ನು ಪ್ರೋತ್ಸಾಹಿಸುವವರು, ನೋಡುವವರಿಗೆ ಅನಂತ ಅನಂತ ನಮಸ್ಕಾರಗಳು.

ಪ್ರೋತ್ಸಾಹಿಸಿ ಪ್ರೀತಿಸಿ ಈ ವಾಹಿನಿಗಳನ್ನು ….

ದೂರವಾಗಿ ನನ್ನಂತವರಿಂದ…..

ಸತ್ತಂತಿಹರನ್ನು ಬಡೆದೆಚ್ಚರಿಸಬೇಕಾದ
ಕಚ್ಚಾಡುವವರನ್ನು ಕೂಡಿಸಿ ಒಲಿಸಬೇಕಾದ
ಕುವೆಂಪು ಮಾತುಗಳನ್ನು ಮರೆತುಬಿಡಿ….

ನಿಮ್ಮವ ನಲ್ಲ
*ರೂಪು*