* *11-5-2022 ಬುಧವಾರ 10.30 ಗಂಟೆಗೆ ಫ್ರೀಡಂ ಪಾರ್ಕಿನಲ್ಲಿ ಕ್ರೈಸ್ತ ಮುಖಂಡರ ಮೊದಲ ಹಂತದ ಸಾಂಕೇತಿಕ ಪ್ರತಿಭಟನೆ*
××××××÷÷÷÷÷÷==÷

*ಸಬ್ಕಾ ಸಾಥ್+ ಸಬ್ಕಾ ವಿಕಾಸ್ ಘೋಷಣೆಯ ಹರಿಕಾರ ಮೊಟ್ಟ ಮೊದಲ ಬಾರಿಗೆ ಭಾರತವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಪ್ರಪಂಚದ ಪ್ರಮುಖ ಮುಖಂಡರ ಜೊತೆ ಮೊದಲ ಸರದಿಯಲ್ಲಿ ಎದ್ದುಕಾಣುವ ಈ ದೇಶದ ಪ್ರಧಾನ ಮಂತ್ರಿ ಗೌರವಾನ್ವಿತ ಮೋದಿರವರಿಗೆ ಮುಂದಿನ ದಿನಗಳಲ್ಲಿ ವಿದೇಶದಲ್ಲಿ ಮುಜುಗರ ಉಂಟು ಮಾಡಲು ದೇಶದ ಕ್ರೈಸ್ತ ಸಮುದಾಯದ ವಿರುದ್ಧ ದಾಳಿ, ಹಲ್ಲೆ, ದೌರ್ಜನ್ಯ ಮಾಡುತ್ತಿರುವ ಶ್ರೀರಾಮ ಸೇನೆ ಮತ್ತು ಭಜರಂಗದಳವನ್ನು ನಿಷೇಧ ಮಾಡಿ ಮುಖಂಡರ ವಿರುದ್ಧ ಗೂಂಡಾ ಕಾಯ್ದೆಯನ್ನು ಹಾಕುವಂತೆ ಒತ್ತಾಯಿಸೋಣ*

+ .ಶ್ರೀರಾಮಸೇನೆಯ
ಶ್ರೀ ಮುತಾಲಿಕ್, ಹಾಗೂ ಬಜರಂಗದಳದ ಕೆಲವರು
*ಕ್ರೈಸ್ತ ಸಮುದಾಯದ ವಿರುದ್ಧ ಆಧಾರರಹಿತ ಸುಳ್ಳು ಆರೋಪಗಳನ್ನು ಮಾಡುತ್ತಾ ಸಮುದಾಯದ ವಿರುದ್ದ ದೌರ್ಜನ್ಯ ವಾಗಿ ವರ್ತಿಸುತ್ತಾ ವಿಗ್ರಹಗಳ ಧ್ವಂಸ, ಅತಿಕ್ರಮ ಪ್ರವೇಶ ಮಾಡಿ ಮತಾಂತರದ ನೆಪದಲ್ಲಿ ಬೆದರಿಕೆಗಳನ್ನು ಒಡ್ಡುತ್ತಾ ಕಾನೂನನ್ನು ಕೈಗೆತ್ತಿಕೊಂಡು ಸರ್ಕಾರದ ಪ್ರತಿನಿಧಿಗಳಂತೆ ಪ್ರಾರ್ಥನೆ ಮಾಡುವವರನ್ನು, ಹುಟ್ಟುಹಬ್ಬ ಆಚರಣೆ ಅಥವಾ ಇನ್ಯಾವುದಾದರೂ ಹಬ್ಬ-ಹರಿದಿನ ದಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ ಮತಾಂತರ ಮಾಡುತ್ತಿದ್ದಾರೆ ಎಂದು ಬಲವಂತ ವಾಗಿ ಎಳೆದುಕೊಂಡು ಹೋಗಿ ಪೊಲೀಸ್ ಸ್ಟೇಷನ್ ನಲ್ಲಿ ಸುಳ್ಳು ಮಾಹಿತಿ ನೀಡಿ ನಾನಾ ನಿಯಮಗಳಡಿ ಪ್ರಕರಣವನ್ನು ದಾಖಲಿಸುತ್ತಿದ್ದಾರೆ*

+ ಸರ್ಕಾರ ವಿಫಲರಾಗಿ ಇವರಿಗೆ ಪರವಾನಿಗೆಯನ್ನು ನೀಡಿದ್ದಾರೆಯೇ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಇಲ್ಲದಿದ್ದರೆ ಏಕೆ ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು

× . ನೈತಿಕ ಪೊಲೀಸ್ ಗಿರಿ ಮಾಡುವ ಸಂದರ್ಭದಲ್ಲಿ ಬೆಲೆಬಾಳುವ ವಸ್ತುಗಳು ಕಾಣೆಯಾಗುತ್ತವೆ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ . ಮರ್ಯಾದೆಗೆ ಹೆದರಿಕೆಯಿಂದ ದೂರು ಕೊಡಲು ಹಿಂಜರಿಯುತ್ತಿದ್ದಾರೆ ಎಂಬ ಆರೋಪಗಳು ದಕ್ಷಿಣ ಕನ್ನಡ ,ಉಡುಪಿ ,ಕೊಡಗು ಜಿಲ್ಲೆಗಳಲ್ಲಿ ಇವರ ದೌರ್ಜನ್ಯವನ್ನು ತಡೆದುಕೊಳ್ಳಲು ಸಾಧ್ಯವಾಗದೇ ತಮ್ಮ ಆಸ್ತಿಪಾಸ್ತಿಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಿ ಹೆಣ್ಣುಮಕ್ಕಳ ಮರ್ಯಾದೆಯನ್ನು ಉಳಿಸಿಕೊಳ್ಳಲು ಬೇರೆ ಕಡೆ ಹೋಗಿರುವ ನಿದರ್ಶನಗಳು ಆಗುತ್ತಿವೆ ಎಂಬ ಆರೋಪಗಳಿವೆ ಭಯದ ವಾತಾವರಣದಲ್ಲಿರುವ ಕ್ರೈಸ್ತ ಸಮುದಾಯ ಜೀವಭಯದಿಂದ ಘಟನೆಗಳಿಗೆ ಸಾಕ್ಷಿಗಳನ್ನು ಮತ್ತು ಪುರಾವೆಗಳನ್ನು ನೀಡಲು ಖಂಡಿತವಾಗಿಯೂ ಸಾಧ್ಯವಾಗುವುದಿಲ್ಲ ಈ ವಿಷಯದಲ್ಲಿ ಸರ್ಕಾರ ಅಥವಾ ಯಾವುದೇ ತನಿಖಾ ಸಂಸ್ಥೆ ಘಟನೆಗೆ ಸಂಬಂಧಪಟ್ಟಂತೆ ಮಾಹಿತಿ ನೀಡಿ ,ಸಾಕ್ಷಿ ನೀಡಿ ಎಂದು ಕೇಳುವ ಬದಲು ಇಂತಹ ಕೃತ್ಯಗಳನ್ನು ಮಾಡುವವರ ವಿರುದ್ಧ ಗೂಂಡಾಕಾಯ್ದೆಯಡಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಂಡರೆ ಇಂತಹ ಘಟನೆಗಳು ಉದ್ಭವವಾಗುವುದಿಲ್ಲ ಭಯದ ವಾತಾವರಣದಲ್ಲಿ ಜೀವಿಸುತ್ತಿರುವ ಕ್ರೈಸ್ತ ಸಮುದಾಯ ಶಾಂತಿ ಸಮಾಧಾನದಿಂದ ಬದುಕಬಹುದು

* . *ರಾಜ್ಯದಲ್ಲಿ ಚುನಾಯಿತ ಸರಕಾರ ಇದ್ದರು ಕಾನೂನು ಸುವ್ಯವಸ್ಥೆ ಕುಸಿದಾಗ ಗೂಂಡಾ ಪ್ರವೃತ್ತಿಯ ವ್ಯಕ್ತಿಗಳು ಕಾನೂನನ್ನು ತಮ್ಮ ಕೈಗೆತ್ತಿಕೊಂಡು ದೌರ್ಜನ್ಯ ಮಾಡಿ ವರ್ತಿಸಿದ ಹಾಗೆ ಕ್ರೈಸ್ತ ಸಮುದಾಯದ ವಿರುದ್ಧ ಇವರು ದೌರ್ಜನ್ಯ ವಾಗಿ ವರ್ತಿಸುತ್ತಾರೆ*

+. ಸರ್ಕಾರ ಇವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣವನ್ನು ದಾಖಲಿಸಿ ಇವರ ಅತಿರೇಕದ ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕಾಗಿತ್ತು ಸರ್ಕಾರ ಯಾವುದೇ ಕ್ರಮ ತೆಗೆದು ಕೊಳ್ಳದೇ ಇರುವುದರಿಂದ ಅನಿವಾರ್ಯವಾಗಿ ಸರ್ಕಾರದ ಗಮನಸೆಳೆಯಲು ಸಮುದಾಯದ ಮುಖಂಡರು

*ದಿನಾಂಕ 11- 5- 2022 ರಂದು ಬುಧವಾರ ಬುಧವಾರ 10.30 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಸಾಂಕೇತಿಕವಾಗಿ ಮೊದಲ ಹಂತದಲ್ಲಿ ಪ್ರತಿಭಟನೆಯನ್ನು ಆಯೋಜಿಸಿರುತ್ತಾರೆ*

ಮೊದಲ ಹಂತದ ಸಾಂಕೇತಿಕ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಕ್ರೈಸ್ತ ಮುಖಂಡರು ಭಾಗವಹಿಸಿ ಇವರ ದೌರ್ಜನ್ಯವನ್ನು, ಅತಿರೇಕವನ್ನು ಶಾಂತಿಯಿಂದ ಖಂಡಿಸೋಣ.

*ಈ ದೇಶದ ಅಭಿವೃದ್ಧಿಗೆ ಕ್ರೈಸ್ತ ಸಮುದಾಯ ನೀಡುತ್ತಿರುವ ನಾನಾ ರೀತಿಯ ಕೊಡುಗೆಗಳನ್ನು ಹಿಂದೂ ಸಮುದಾಯದ ಗಣ್ಯಾತಿಗಣ್ಯರು ,ಪೂಜ್ಯo ಸ್ವಾಮೀಜಿಗಳು , ಪ್ರಮುಖ ಮಠಾಧೀಶರು , ವಿಚಾರವಂತರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ* ಈ ಸಂದರ್ಭದಲ್ಲಿ ಹಿಂದೂ ಧರ್ಮದ ರಕ್ಷಕರು ಎಂದು ಹೇಳಿಕೊಂಡು ಶ್ರೀರಾಮಸೇನೆ, ಬಜರಂಗದಳ ಕೆಲವೇ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಜನರ ಭಾವನೆಗಳಿಗೆ ಧಕ್ಕೆ ಬರುವಂತೆ ಸಮುದಾಯಗಳ ಮಧ್ಯೆ ವೈಷಮ್ಯ ಹೆಚ್ಚಾಗಿ ಆಂತರಿಕ ಘರ್ಷಣೆ ಮಾಡಲು ಇವರು ಪ್ರಯತ್ನಿಸುತ್ತಿದ್ದಾರೆ
ಹಿಂದೂ ಸಮುದಾಯದ ತತ್ವ-ಸಿದ್ಧಾಂತಗಳು ಇವರು ಮೊದಲು ಅರಿಯಬೇಕು ಹಿಂದೂ ಸಮಾಜಕ್ಕೆ ಇವರ ಕೊಡುಗೆಯೇನು? ಯಾವ ದೇವಸ್ಥಾನಕ್ಕೆ ಸುಣ್ಣ-ಬಣ್ಣ ಬಳಿದಿದ್ದಾರೆ ಎಷ್ಟು ದೇವಾಲಯಗಳ ಜೀರ್ಣೋದ್ಧಾರ ಮಾಡಿದ್ದಾರೆ ಎಷ್ಟು ಮಂದಿ ಹಿಂದೂ ಯುವಕರಿಗೆ ಉದ್ಯೋಗ ನೀಡಿದ್ದಾರೆ ಕೌಶಲ್ಯ ತರಬೇತಿ ನೀಡಿದ್ದಾರೆ ಮಾರ್ಗದರ್ಶನ ನೀಡಿದ್ದಾರೆ ಎಂದು ದಾಖಲೆಗಳನ್ನು ಬಹಿರಂಗ ಮಾಡಿ ತಾವು ಹಿಂದೂಪರ ಎಂದು ತೋರಿಸಿದ ನಂತರ ಇವರ ಪೌರುಷ ತೋರಿಸಬೇಕು ಅಲ್ಲವೇ

ಇತರ ಸಮುದಾಯದವರು ಹಿಂದೂ ಧರ್ಮದ, ಸಂಸ್ಕೃತಿಯ ಮೇಲೆ ದಾಳಿ ಮಾಡಿದಾಗ ಹಿಂದೂ ಧರ್ಮದ ಗಣ್ಯರು ಸ್ವಾಮೀಜಿಗಳು ಹಿತಚಿಂತಕರು ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡುತ್ತಾರೆ
*ಹಿಂದೂ ಧರ್ಮಕ್ಕೆ ಅನ್ಯಾಯವಾಗುತ್ತಿದೆ ಯಾವ ಹಂತದಲ್ಲಿ ಆಗುತ್ತಿದೆ ಹೇಗೆ ಆಗುತ್ತದೆ ಎಂಬ ಬಗ್ಗೆ ಬಹಿರಂಗ ಆದನಂತರ ಹಿಂದೂ ಸಮುದಾಯದ ಗಣ್ಯರು ಪ್ರಮುಖ ಮಠಾಧೀಶರು ಕಂಡೂಕಾಣದಂತೆ ಇದ್ದಾಗ ನಾವೇ ಹಿಂದೂ ಧರ್ಮದ ಸಾಕ್ಷಾತ್ ಅವತಾರ ಪುರುಷರು ಎಂದು ಪ್ರತಿಭಟನೆ ಹೋರಾಟ ಮಾಡುತ್ತಿದ್ದಲ್ಲಿ ದೇಶ, ವಿದೇಶದಲ್ಲಿ ಇವರಿಗೆ ಗೌರವ ಸಿಗುತ್ತಿತ್ತು*

ಕೆಲಸ ಇಲ್ಲದವನು ಹೊಟ್ಟೆಪಾಡಿಗಾಗಿ ಮೈಪರಚಿಕೊಂಡು ಚೀರಾಡುತ್ತಿದ್ದ ಅವರಂತೆ ಕೆಲವರು ಮತಾಂತರ ಮಾಡುತ್ತಿದ್ದಾರೆ ಎಂದು ವಿಕಾರವಾಗಿ ಅರಚುತ್ತಾ ನಾಟಕ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಇವರ ಧೋರಣೆಯನ್ನು ಖಂಡಿಸುವ

*ದಯವಿಟ್ಟು ಗಮನಿಸಿ*. ಸರ್ಕಾರದ ದಾಖಲೆಗಳ ಪ್ರಕಾರ ಕ್ರೈಸ್ತ ಸಮುದಾಯ ಕೇವಲ 11:30 ಲಕ್ಷ ಮತಾಂತರ ಆಗುತ್ತಿದ್ದಲ್ಲಿ 35 , 40 ಲಕ್ಷ ಆಗುತ್ತಿತ್ತು ಅಲ್ಲವೇ ಸರ್ಕಾರ ದಯವಿಟ್ಟು ಮತಾಂತರ ಆಗುತ್ತಿದ್ದ ಬಗ್ಗೆ ದಾಖಲೆಗಳನ್ನು ಜನರ ಮುಂದೆ ಇಡಲಿ ತದನಂತರ ಏನು ಬೇಕಾದರೂ ಕ್ರಮ ತೆಗೆದುಕೊಳ್ಳಲಿ ಅಲ್ಲವೇ

ಕ್ರೈಸ್ತ ಸಮುದಾಯದ ವಿರುದ್ಧ ಉದ್ದೇಶಪೂರ್ವಕವಾಗಿ ಮತಾಂತರ ಮತ್ತು ಇನ್ನಿತರ ವಿಷಯಗಳ ಬಗ್ಗೆ ಇವರು ಬಹಳ ದೊಡ್ಡದಾಗಿ ಸುದ್ದಿಗಳನ್ನು ಮಾಡುತ್ತಾ ಆರೋಪಗಳನ್ನು ಮಾಡುತ್ತಾರೆ ಇದರ *ಸತ್ಯಾಸತ್ಯತೆಯನ್ನು ಅರಿಯಲು ಸರ್ಕಾರ ನಿವೃತ್ತ ನ್ಯಾಯಾಧೀಶರನ್ನು ಅಥವಾ ಉನ್ನತ ಮಟ್ಟದ ಏಜೆನ್ಸಿಗೆ ತನಿಖೆಗೆ ನೀಡಿ ವರದಿ ತರಿಸಿಕೊಂಡು ಕ್ರಮ ತೆಗೆದು ಕೊಂಡರೆ ಹಿಂದು ಸಮುದಾಯಕ್ಕೆ ಕಂಟಕವಾಗಿರುವ ಹಿಂದು ಸಮುದಾಯಕ್ಕೆ ಕಪ್ಪುಚುಕ್ಕೆ ಬರುವ ರೀತಿಯಲ್ಲಿ ವರ್ತಿಸಿರುವ ಈ ಕಪಟ ಹಿಂದೂ ರಕ್ಷಕರ ಬಣ್ಣವನ್ನು ಬಯಲು ಮಾಡಬಹುದು* . ತನಿಖೆ ಮಾಡಿ ವರದಿ ಬಂದ ನಂತರ ಸತ್ಯಾಸತ್ಯತೆಯ ಬಹಿರಂಗಗೊಂಡು ಕ್ರೈಸ್ತ ಸಮುದಾಯದ ವಿರುದ್ಧ ನಡೆಯುತ್ತಿರುವ ಹಲ್ಲೆಗಳಿಗೆ ದೌರ್ಜನ್ಯಗಳಿಗೆ ಆರೋಪಗಳಿಗೆ ಕಡಿವಾಣ ಹಾಕಬಹುದಾಗಿದೆ

+. *ಕ್ರೈಸ್ತ ಸಮುದಾಯದ ವಿರುದ್ಧ ಮಾಡುತ್ತಿರುವ ಉದ್ದೇಶಪೂರ್ವಕ ಷಡ್ಯಂತರ ಗಳಿಗೆ ಸರ್ಕಾರ ಕಡಿವಾಣ ಹಾಕಬೇಕು ಮತ್ತು ರಾಜ್ಯದಲ್ಲಿ ಶಾಂತಿ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸುವ ಕೆಲವೇ ವ್ಯಕ್ತಿಗಳ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಈ ಸಂಘಟನೆಗಳಿಗೆ ನಿಷೇಧ ಹೇರಬೇಕು ಈ ಮುಖಂಡರನ್ನು ಗಡಿಪಾರು ಮಾಡಬೇಕು ಎಂದು ಮನವಿ ಮಾಡುತ್ತೇವೆ*🙏🏿

ಗಮನಿಸಿ : *ಮೊಟ್ಟಮೊದಲ ಬಾರಿಗೆ ಇಡೀ ವಿಶ್ವವೇ ಭಾರತ ವನ್ನು ಬೆರಗುಗಣ್ಣಿನಿಂದ ನೋಡುತ್ತದೆ ಭಾರತದ ಪ್ರಧಾನ ಮಂತ್ರಿ ಎಂದರೆ ಲೋಕ ರಕ್ಷಕರು, ಅತ್ಯಂತ ಬಲಿಷ್ಠ ವ್ಯಕ್ತಿ ಎಂದು ವಿಶ್ವದಲ್ಲೇ ಬಿಂಬಿತರಾಗಿದ್ದಾರೆ. ಕಪಟ ಹಿಂದೂ ರಕ್ಷಕ ರಿಂದ ಪ್ರಧಾನಮಂತ್ರಿಗಳಿಗೆ ವಿದೇಶಗಳಲ್ಲಿ ಮುಂದಿನ ದಿನಗಳಲ್ಲಿ ಭಾರಿ ಮುಜುಗರ ಆಗಬಹುದು* ಇದನ್ನು ತಡೆಯಬೇಕಾದರೆ ಕರ್ನಾಟಕ ಸರ್ಕಾರ ಇಂತಹ ಶಕ್ತಿಗಳಿಗೆ ಕೂಡಲೇ ಕಡಿವಾಣ ಹಾಕಬೇಕು

* ಕ್ರೈಸ್ತ ಸಮುದಾಯದ ನೋವು ಭರಿತ ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದಲ್ಲಿ ದುಂಡುಮೇಜಿನ ಸಭೆಯನ್ನು ಕರೆದು ಚರ್ಚೆ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ

ಸಬ್ ಕಾ ಸಾಥ್ . ಸಬ್ಕಾ ವಿಕಾಸ್ ಮುಂದಿನ ದಿನಗಳಲ್ಲಿ ಯಾವ ಧರ್ಮದ ಮೇಲು ದೌರ್ಜನ್ಯ ಆಗಬಾರದು ಕ್ರೈಸ್ತ ಸಮುದಾಯದ ವಿರುದ್ಧ ದುಷ್ಟಶಕ್ತಿಗಳು ಹೋರಾಟ ಮಾಡಿದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರ ಗಮನಕ್ಕೆ ತಿಳಿಸುತ್ತೇವೆ

*ವಿಶೇಷ ಸೂಚನೆ* ದೇಶದ ಮೇಲೆ ಗೌರವ ಇರುವ ಪ್ರತಿಯೊಬ್ಬ ಪ್ರಜೆ ಭೇದ ಭಾವ, ಜಾತಿಯನ್ನು ನೋಡದೆ ಈ ವ್ಯಕ್ತಿಗಳ ಅಟ್ಟಹಾಸಕ್ಕೆ,. ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಹೋರಾಟಕ್ಕೆ ಕೈಜೋಡಿಸಬೇಕಾಗಿ ಮನವಿ
ಮಾಡುತ್ತೇವೆ

ಕಾರ್ಯಕ್ರಮದ ಸಂಘಟನೆಯ ಪರವಾಗಿ Harry D’Souza