ಇದು “ಹಲ್ಲಿಲ್ಲದ” ಬೆಲೆಯೇರಿಕೆ ಆಯಿತೇಕೆ?
– – – – – – – – – –
2014ರ ತನಕ ನಿಯಂತ್ರಣ ತಪ್ಪಿ ಏರಿದ ಬೆಲೆಗೆ ಸರ್ಕಾರಗಳನ್ನು ಉರುಳಿಸುವ ಶಕ್ತಿ ಇತ್ತು. ಈಗ ಬೆಲೆಗಳು ಈ ಪಾಟಿ ನಿಯಂತ್ರಣದ ನಿಯಂತ್ರಣವೇ ತಪ್ಪಿ ಏರುತ್ತಿದ್ದರೂ ಜನ ಸಹಿಸಿಕೊಂಡು, ಹಲ್ಲು ಕಚ್ಚಿಕೊಂಡು ಸುಮ್ಮನಿದ್ದಾರಲ್ಲ ಯಾಕೆ?

ಈ ಅಸಹನೀಯ “ಸಹನೆಗೆ” ಕಾರಣಗಳನ್ನು ಅರಸುತ್ತಿದ್ದೇನೆ, ಬನ್ನಿ ನೀವೂ ಸೇರಿಕೊಳ್ಳಿ. ಈ ಪಟ್ಟಿಗೆ ನಿಮಗೆ ತೋಚಿದ ಕಾರಣಗಳನ್ನು ಸೇರಿಸಿ:

೧. ಬೆಲೆಯೇರಿಕೆಗೆ ಮೊದಲ ಉರಿ ಹತ್ತಿಕೊಳ್ಳಬೇಕಿದ್ದ ಮಧ್ಯಮ ವರ್ಗದ “ಥ್ರೆಷ್ ಹೋಲ್ಡ್” ಈಗ ಉದಾರೀಕರಣದ ಕಾರಣದಿಂದಾಗಿ ಸ್ವಲ್ಪ ಇನ್ನೂ ಎತ್ತರದಲ್ಲಿದೆ. ಏರಿರುವ ಬೆಲೆ ಅದನ್ನಿನ್ನೂ ತಲುಪಿಲ್ಲ. ಜನರಲ್ಲಿ ಕೊಳ್ಳುವ ಶಕ್ತಿ ಇದೆ, ಕೊಳ್ಳುತ್ತಿದ್ದಾರೆ.

೨. ಈ ಹಿಂದೆ ವಿರೋಧಪಕ್ಷ ಆಗಿದ್ದ ಹಾಲೀ ಆಳುವ ಪಕ್ಷ, ಬೆಲೆ ಏರಿಕೆ ಥ್ರೆಷ್‌ಹೋಲ್ಡ್ ತಲುಪಿರದಿದ್ದರೂ “ರಾಜಕೀಯ ಕಾರಣಕ್ಕೆ” ಬೆಲೆ ಏರಿಕೆಯ “ಜ್ವರ” ಬರಿಸುತ್ತಿತ್ತು. ಈಗಿನ ವಿರೋಧಪಕ್ಷಗಳಿಗೆ “ಜ್ವರ” ಬರಿಸುವ ತಂತ್ರ ಗೊತ್ತಿಲ್ಲ.

೩. ಬೆಲೆ ಏರಿಕೆಯ ಬಿಸಿಯನ್ನು ಸರ್ಕಾರಗಳಿಗೆ ತಟ್ಟಿಸಬೇಕಾದ ಮಾಧ್ಯಮಗಳು ಸರ್ಕಾರದ ಗುಲಾಮಗಿರಿಯಲ್ಲಿ ತೊಡಗಿವೆ. ಅವು ಬೆಲೆ ಏರಿಕೆಯ ಕುರಿತು ಮಾತನಾಡದಿರಲು ನಿರ್ಧರಿಸಿವೆ.

೪. ಒಟ್ಟು ಪರಿಸ್ಥಿತಿ ಕೆಟ್ಟಿದೆ. ಎಲ್ಲಾ ಕೊರೋನಾ ಕಾರಣ. ಅವರು ಪಾಪ, ಏನೋ ಕಷ್ಟಪಟ್ಟು ಅಧಿಕಾರ ನಡೆಸುತ್ತಿದ್ದಾರೆ, ಮೋದಿ ಅಲ್ಲದಿದ್ದರೆ ಪರಿಸ್ಥಿತಿ ಇನ್ನೂ ಕೆಟ್ಟಿರುತ್ತಿತ್ತು ಎಂಬ ಭಾವನೆಯನ್ನು ಜನಸಾಮಾನ್ಯರ ಮನದಲ್ಲಿ ಆಳವಾಗಿ ಬಿತ್ತಲಾಗಿದೆ.

೫. ಆಡಳಿತದಲ್ಲಿ ಏನೇ ವೈಫಲ್ಯ/ಭ್ರಷ್ಟಾಚಾರ ಇದ್ದರೂ, ನಮ್ಮ ಧರ್ಮ ರಕ್ಷಣೆ ಮಾಡುವ ಸರ್ಕಾರ ಇದು, ಹಾಗಾಗಿ ನಾವು ಎಷ್ಟೇ ಕಷ್ಟ ಬಂದರೂ ಸಹಿಸಿಕೊಳ್ಳುತ್ತೇವೆ, ಅವರು ಏನೇ ಅಪದ್ಧ ಮಾಡಿದರೂ ಕಾಣಿಸದವರಂತೆ ಇದ್ದುಬಿಡುತ್ತೇವೆ ಎಂಬ ಅಭಿಪ್ರಾಯ ದೇಶದ ಬಹುಸಂಖ್ಯಾತ ಜನಸಮುದಾಯದಲ್ಲಿದೆ.

೬. ಸಬ್ಸಿಡಿ ಇಳಿಕೆ ಕಾಂಗ್ರೆಸ್ ಕದ್ದುಮುಚ್ಚಿ ಮಾಡುತ್ತಿತ್ತು. ಈಗ ಜಾಗತಿಕ ಒತ್ತಡ, ಡೆಡ್‌ಲೈನ್‌ಗಳಿರುವ ಕಾರಣಕ್ಕೆ ಸಬ್ಸಿಡಿ ಇಳಿಸುವುದು ಅನಿವಾರ್ಯ. ಹಾಗಾಗಿ ಸಹಿಸಿಕೊಳ್ಳದೇ ಬೇರೆ ದಾರಿ ಇಲ್ಲ.

#PriceHike #inflation #EconomicCrisis #ಬೆಲೆಏರಿಕೆ #ನಮ್ದೇಕತೆ #ಡಿಯರ್_ಮೀಡಿಯಾ

By Rajaram Tallur