11.80 ಕೋಟಿ ರೂ. ಮೌಲ್ಯದ 11.17 ಎಕರೆ ಪ್ರದೇಶ ಒತ್ತುವರಿ ತೆರವು: ಜೆ. ಮಂಜುನಾಥ್
ಬೆಂಗಳೂರು ನಗರ ಜಿಲ್ಲೆ, ಮೇ 07 (ಕರ್ನಾಟಕ ವಾರ್ತೆ) : ಬೆಂಗಳೂರು ನಗರ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಸರ್ಕಾರಿ ಜಮೀನುಗಳಾದ ಕೆರೆ, ಕುಂಟೆ, ಗೋಮಾಳ, ಸ್ಮಶಾನ, ರಾಜಕಾಲುವೆ ಮತ್ತು ಇತರೆ ಸರ್ಕಾರಿ ಜಮೀನುಗಳನ್ನು ರಕ್ಷಿಸಲು ಮೇ 07 ರಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ಅವರ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 6-04 ವಿಸ್ತೀರ್ಣದ ಒಟ್ಟು ಮೂರು ಕೆರೆಗಳು ಒತ್ತುವರಿಯಾಗಿದ್ದು ಅದರ ಅಂದಾಜು ಸುಮಾರು ರೂ.6.16 ಕೋಟಿ ಮೌಲ್ಯವಾಗಿದೆ. ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ-2 ಹೋಬಳಿಯ ಮಾದನಾಯಕನಹಳ್ಳಿ ಆರ್ಕಾವತಿ ನದಿಪಾತ್ರದ 0-10 ವಿಸ್ತೀರ್ಣದ ರೂ.36 ಲಕ್ಷ, ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕಾಡ ಆಗ್ರಹಾರ ಗ್ರಾಮದ 4-28 ವಿಸ್ತೀರ್ಣ ರೂ.4.6 ಕೋಟಿ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ತಟ್ಟಗುಪ್ಪೆ ಗ್ರಾಮದ 1-06 ವಿಸ್ತೀರ್ಣ ರೂ 1.2 ಕೋಟಿ ಮೌಲ್ಯದ ಕೆರಗಳ ಒತ್ತುವರಿ ಮಾಡಿ ತೆರೆವುಗೊಳಿಸಲಾಗಿದೆ.
ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಕಾಚಮಾರನಹಳ್ಳಿ ಗ್ರಾಮದ 2-00 ವಿಸ್ತೀರ್ಣದ ರೂ.3.64 ಕೋಟಿ ಮತ್ತು ಸೂಲಿಕುಂಟಿ ಗ್ರಾಮದ 0-02 ವಿಸ್ತೀರ್ಣದ ರೂ. 11 ಲಕ್ಷ ಹಾಗೂ ಬಿದರಹಳ್ಳಿ ಹೋಬಳಿಯ ಮಂಡೂರು ಗ್ರಾಮದ 1-00 ವಿಸ್ತೀರ್ಣದ ರೂ. 1.10 ಕೋಟಿ ಮೌಲ್ಯದ ಸರ್ಕಾರಿ ಗೋಮಾಳ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ.