*_ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಸೆಂಟರ್ ಗೆ ಚಾಲನೆ_*
.🔹🔹🔹🔹🔹🔹🔹
*_ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಸಂಕೀರ್ಣದ ಒಳಗೆ ಇಂದು ಡಯಾಲಿಸಿಸ್ ಸೆಂಟರ್ ಗೆ ಮೇಲ0ಗಡಿ ಮೊಹಿಯ್ದ್ದೀನ್ ಹೊಸ ಪಳ್ಳಿಯ ಇಮಾ0 ಮಹಮ್ಮದ್ ಅಲಿ. ಮದನಿ ಯವರ ದು :ವಾ ದೊಂದಿಗೆ ಶಾಸಕ UT ಖಾದರ್ ರವರು ಇಂದು ಸಾಯಂಕಾಲ ಚಾಲನೆ ನೀಡಿದರು_*

*_ಈ ಬಗ್ಗೆ ಮಾತನಾಡಿದ ಶಾಸಕರು ದಾನಿಗಳ ಸಹಾಯ ಹಾಗೂ ಶಾಸಕರ ನಿಧಿಯಿಂದ ಒಟ್ಟು 10 ಬೆಡ್ ಗಳಿಗೆ ಬೇಕಾಗುವ 10 ಡಯಾಲಿಸಿಸ್ ಯಂತ್ರ ಗಳು ಮತ್ತು ಅದಕ್ಕೆ ಬೇಕಾಗುವ ಉಪಕರಣ ಗಳು ದೊರಕಲಿದೆ_* …

*_ಇಲ್ಲಿ ಯಾನಪೊಯಾ ಆಸ್ಪತ್ರೆಯ ವೈದ್ಯರು ಮತ್ತು ಟೆಕ್ನಿಶನ್ ಗಳ ತಾಂತ್ರಿಕ ಸಹಕಾರ ದೊಂದಿಗೆ ಶೀಘ್ರವೇ ಈ ಸೆಂಟರ್ ಇಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು_* .

*_ಆರೋಗ್ಯ ಕೆಂದ್ರದ ಮುಖ್ಯ ವೈದ್ಯಾಧಿಕಾರಿ ಪ್ರಶಾಂತ್ ಅಮೀನ್. ಹಿರಿಯ ವೈದ್ಯ ವಿದ್ಯಾಸಾಗರ್. ನಗರ ಸಭಾ ಅಧ್ಯಕ್ಷೆ /ಉಪಾಧ್ಯಕ್ಷ. ಚಿತ್ರಕಲಾ. ಅಯ್ಯುಬ್ ಉಳ್ಳಾಲ್. ಸೈಯದ್ ಮದನಿ ಆಡಳಿತ ಸಮಿತಿಯ ಅಧ್ಯಕ್ಷ ರಶೀದ್ ಹಾಜಿ. ಆಸ್ಪತ್ರೆಯ ಆಡಳಿತ ಸಮಿತಿ ಅಧ್ಯಕ್ಷ ಮುಸ್ತಫ ಅಬ್ದುಲ್ಲಾ. ಸಮಿತಿ ಸದಸ್ಯ ರವಿ ಕಾಫಿಕಾಡ್.  ಮಾಧ್ಯಮ ಸಲಹೆಗಾರ ರಾದ ಅಕ್ರಮ್ ಹಸನ್._*

*_ನಗರ ಸಭಾ ಸದಸ್ಯ ರಾದ U. A ಇಸ್ಮಾಯಿಲ್. ಬಾಝಿಲ್ ಡಿ ‘ ಸೋಜಾ. ಇಬ್ರಾಹಿಂ ಅಶ್ರಫ್. ಕಾಂಗ್ರೆಸ್ ಕಾರ್ಮಿಕ ಸಂಘಟನೆಯ ನಾಯಕ ದಿನೇಶ್ ಕು0ಪಲ_ ಮಾಜಿ _ನಗರ ಸಭಾ ಮಾಜಿ ಅಧ್ಯಕ್ಷ ಕುಂಞ ಮೊನಾಕ. ಉಳ್ಳಾಲ ಕಾಂಗ್ರೆಸ್ ಯೂನಿಟ್ ಸೇವಾ ದಳ ಅಧ್ಯಕ್ಷ ನಾಗೇಶ್. ಮಾಜಿ ಕ್ರೀಡಾ ನಿರ್ದೇಶಕ ಸಾಜಿದ್ ಉಳ್ಳಾಲ್. ಮುಂತಾದವರು ಉಪಸ್ಥಿತರಿದ್ದರು_*_