*ಕಾನೂನು ಪದವಿಯಲ್ಲಿ (LLB) Second Rank ಪಡೆದ ಅಡ್ವಕೇಟ್ ಸುಹಾನ ಸಫರ್ ರವರಿಗೆ ಸನ್ಮಾನ*

*ಕಾನೂನು ಪದವಿಯಲ್ಲಿ (LLB) ಕರ್ನಾಟಕಕ್ಕೆ Second Rank ಪಡೆದು ಕೀರ್ತಿ ತಂದ ಪ್ರತಿಭಾವಂತ ಸಾಧಕಿ ಅಡ್ವಕೇಟ್ ಸುಹಾನಾ ಸಫರ್ ಉಳ್ಳಾಲ್ ರವರಿಗೆ ಸನ್ಮಾನ ಕಾರ್ಯಕ್ರಮವು ಅಡ್ವಕೇಟ್& ನೋಟರಿ ಶೇಖ್ ಇಸಾಖ್ ಕೋಡಿಂಬಾಳ ಮತ್ತು ಶಿಕ್ಷಣ ತಜ್ಞ ರಫೀಕ್ ಮಾಸ್ಟರ್ ವತಿಯಿಂದ ದೇರಳಕಟ್ಟೆಯಲ್ಲಿರುವ ಶೇಖ್ ಇಸಾಖ್ ರವರ ಕಚೇರಿಯಲ್ಲಿ ನಡೆಯಿತು.*

ಸನ್ಮಾನ ಕಾರ್ಯಕ್ರಮದಲ್ಲಿ ಅಡ್ವಕೇಟ್ ಅಸ್ಗರ್ ಮುಡಿಪು, ಅಡ್ವಕೇಟ್ ಅಬೂ ಹಾರಿಸ್ ಪಜೀರ್, ಮೊಹಮ್ಮದ್ ಅಲ್ ಮದೀನ ಸೂಪರ್ ಬಜಾರ್, ಅಬ್ದುಲ್ ಹಮೀದ್ ಆಯಿಷಾ ಮೆಡಿಕಲ್, ಸಂದೀಪ ಮೊಬೈಲ್ ಸೆಂಟರ್, ಶಮೀರ್ ಕೋರ್ನಿಸ್ ಐಸ್ ಕ್ರೀಂ ಪಾರ್ಲರ್, ಇಸ್ಮಾಯಿಲ್ ಕಾಯಾರ್ ಫ್ಯಾಮಿಲಿ ವಿದ್ಯಾನಗರ, ನಾರಾಯಣ ಟೈಲರ್, ಅಬ್ಬಾಸ್ ಮಾಜಿ ಅಧ್ಯಕ್ಷರು ದೇರಳಕಟ್ಟೆ ಮಸೀದಿ, ಯಾಸಿರ್ ದೇರಳಕಟ್ಟೆ, ರಫೀಕ್ ಕಾನಕೆರೆ, ಜಮಾಲ್ ಕಿಲೋ ಬಜಾರ್ ಮೊದಲಾದವರು ಉಪಸ್ಥಿತರಿದ್ದರು

*ಆತಿಕಾ ರಫೀಕ್ ಮತ್ತು ಸುಹಾನ ರವರ ತಾಯಿ ರುಖ್ಯ ರವರು ಅಡ್ವಕೇಟ್ ಸುಹಾನಾ ಸಫರ್ ರವರಿಗೆ ಶಾಲು ಹೊದಿಸಿ, ಹಾರಾರ್ಪಣೆ ಮಾಡಿ, ಫಲವಸ್ತುಗಳು, ಸ್ಮರಣಿಕೆ, ನಗದು ನೀಡಿ ಸನ್ಮಾನಿಸಿದರು.*

ರಫೀಕ್ ಮಾಸ್ಟರ್ ಸ್ವಾಗತಿಸಿ ಅಡ್ವಕೇಟ್ ಅಸ್ಕರ್ ಮುಡಿಪು ಶುಭ ಹಾರೈಸಿದರು. ಅಡ್ವಕೇಟ್ ಶೇಖ್ ಇಸಾಖ್ ಧನ್ಯವಾದ ಗೈದರು.

*ಪ್ರಸ್ತುತ ಅಡ್ವಕೇಟ್ ಸುಹಾನ ಸಫರ್ ರವರು ಅಡ್ವೋಕೇಟ್ & ನೋಟರಿ ಶೇಖ್ ಇಸಾಖ್ ಕೋಡಿಂಬಾಳ ರವರ ಕಚೇರಿಯಲ್ಲಿ ವಕೀಲರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.*