*ಮಲ್ನಾಡ್ ಟ್ರಸ್ಟ್ ವತಿಯಿಂದ ಬಿ-ಹ್ಯೂಮನ್ ಸಂಸ್ಥಾಪಕ ಆಸಿಫ್ ಡೀಲ್ಸ್ ಗೆ ಸನ್ಮಾನ*


ಸೌದಿ ಅರೇಬಿಯದಲ್ಲಿ ಕಾರ್ಯಾಚರಿಸುತ್ತಿರುವ ಸಾಮಾಜಿಕ ಸೇವಾ ಸಂಸ್ಥೆ ಮಲ್ನಾಡ್ ಗಲ್ಫ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಟೀಂ ಬಿ-ಹ್ಯೂಮನ್ ಸಂಸ್ಥಾಪಕರಾದ ಆಸಿಫ್ ಡೀಲ್ಸ್ ರವರಿಗೆ ಸನ್ಮಾನ ಕಾರ್ಯಕ್ರಮವು ಸೌದಿ ಅರೇಬಿಯದ ಜುಬೈಲ್ ನಲ್ಲಿರುವ ಕುಕ್ ಝೋನ್ ಹೋಟೆಲ್ನಲ್ಲಿ ಇತ್ತೀಚೆಗೆ ನಡೆಯಿತು.

ಮಲ್ನಾಡ್ ಟ್ರಸ್ಟ್ ನ ಅಧ್ಯಕ್ಷರಾದ ಜನಾಬ್ ಅಬೂಬಕ್ಕರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಬಷೀರ್ ಅಲ್ ಫಲಕ್ ರವರು ಆಗಮಿಸಿದ್ದರು ಹಾಗೂ ಟ್ರಸ್ಟ್ ನ ಸದಸ್ಯರಾದ ಅಸ್ಲಂ, ರಫೀಕ್, ಝಹೀರ್, ಶಮೀಂ, ಶರೀಫ್ ಸಾಮ್ಕೊನ್, ಬಷೀರ್, ಫಾರೂಕ್, ಲತೀಫ್ ಮುಂತಾದವರು ಉಪಸ್ಥಿತರಿದ್ದರು.

ಕೊರೋನ ಸಾಂಕ್ರಾಮಿಕದ ಪ್ರಥಮ ಅಲೆಯ ಸಂಧರ್ಭದಲ್ಲಿ ಚಿಕ್ಕಮಗಳೂರು, ಮೂಡಿಗೆರೆ, ಹಾಸನ , ಮಡಿಕೇರಿ ಮುಂತಾದ ಕಡೆಗಳಿಂದ ಚಿಕಿತ್ಸೆಗಾಗಿ ಮಲ್ನಾಡ್ ಗಲ್ಫ್ ಟ್ರಸ್ಟ್ ನವರು ಕಳುಹಿಸಿದ ಅನೇಕ ರೋಗಿಗಳ ಸಂಪೂರ್ಣ ಜವಾಬ್ದಾರಿ ವಹಿಸಿ ಅವರಿಗೆ ಚಿಕಿತ್ಸೆಯನ್ನು ಸಕಾಲದಲ್ಲಿ ನಿರ್ವಹಿಸಿದ ಟೀಂ ಬಿ-ಹ್ಯೂಮನ್ ತಂಡದ ಮಾನವೀಯ ಸೇವೆಗೆ ಕೃತಜ್ಞತಾಪೂರ್ವಕವಾಗಿ ಈ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಮಾತನಾಡಿದ ಶರೀಫ್ ಸಾಮ್ಕೊನ್ ರವರು ಟೀಂ ಬಿ-ಹ್ಯೂಮನ್ ರವರ ಮಾನವೀಯ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು. ಇವರ ಸೇವೆಯಿಂದ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ಅನೇಕ ರೋಗಿಗಳಿಗೆ ಆದ ಪ್ರಯೋಜನಗಳನ್ನು ವಿವರಿಸಿದರು. ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಟೀಂ ಬಿ-ಹ್ಯೂಮನ್ ಮಾಡುತ್ತಿರುವ ಅಧ್ವಿತೀಯ ಕೊಡುಗೆಗಳನ್ನು ಶ್ಲಾಘಿಸಿದರು.

ಟೀಂ ಬಿ-ಹ್ಯೂಮನ್ ಸಂಸ್ಥಾಪಕರಾದ ಆಸಿಫ್ ಡೀಲ್ಸ್ ರವರು ಪವಿತ್ರ ಉಮ್ರ ಯಾತ್ರೆಗಾಗಿ ಸೌದಿ ಅರೇಬಿಯ ಪ್ರವಾಸದಲ್ಲಿದ್ದು ಜುಬೈಲ್ ನಲ್ಲಿದ್ದಂತಹ ಸಂಧರ್ಬದಲ್ಲಿ ಮಲ್ನಾಡ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಈ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು.