ಕರಾವಳಿ ಸುರಕ್ಷಿತವೇ ಒಂದು ಜಿಜ್ಞಾಸೆ.
____________________&&_______
ರಾಜ್ಯ ವಿಧಾನಪರಿಷತ್ತಿನಲ್ಲಿ ಬಜೆಟ್ ಮೇಲಿನ ಚರ್ಚೆ ನಡೆದಾಗ ಕರಾವಳಿ ಜಿಲ್ಲೆಯ ಸದಸ್ಯರಾದ ಶ್ರೀ ಬಿ.ಎಂ ಫಾರೂಕ್ ರವ ರು ಗಂಭೀರವಾದ ವಿಚಾರವನ್ನು ಸದನದಲ್ಲಿ ಮಂಡಿಸಿದ್ದರು. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ,ಬಂದರು ಎಂಆರ್ಪಿಎಲ್ ಸಂಸ್ಕರಣೆ ಘಟಕ ಬಿಎಸ್ಸೆಫ್ ಎಂಬ ರಾಸಾಯನಿಕ ಕಾರ್ಖಾನೆ ಮತ್ತು ದೇಶದ ಅಗತ್ಯಕ್ಕಾಗಿ ಭೂಮಿಯಡಿಯಲ್ಲಿ ಹುದುಗಿ ಇಡಲಾದ ಅಪಾರ ಪ್ರಮಾಣದ ತೈಲ ಸಂಗ್ರಹ ಮುಂತಾದ ಸೂಕ್ಷ್ಮಾತಿಸೂಕ್ಷ್ಮ ಘಟಕಗಳನ್ನು ಹೊಂದಿರುವ ಮಂಗಳೂರು ಸುರಕ್ಷಿತವಾಗಿದೆಯೇ ಎಂಬ ಪ್ರಶ್ನೆಯನ್ನು ಹಿರಿಯರ ಮನೆಯ ಘನ ಸದಸ್ಯರನ್ನು ಸರಕಾರವನ್ನು ಗಮನಸೆಳೆಯುವ ಪ್ರಯತ್ನ ಮಾಡಿದರು. ಶ್ರೀ ಫಾರೂಕ್ ರಾಜಕಾರಣಿಯಲ್ಲ (ರಂಗ ಎಸೆಸೆಲ್ಸಿ ಮಾದರಿಯಲ್ಲ ) ಅವರು ಇಂಜಿನಿಯರಿಂಗ್ ಪದವೀಧರರು ಹಾಗೂ ಎಂ. ಬಿ.ಏ.ಪದವಿಯನ್ನು ಹೊಂದಿರುವವರು. ರಾಜ್ಯದ ಪವನ ವಿದ್ಯುತ್ ನಿರ್ಮಾಣದಲ್ಲಿ ಇವರೇ ಹಿರಿಯರು. ಸದನದಲ್ಲಿ ಅವರು ಪಾಂಡಿತ್ಯಪೂರ್ಣ ಭಾಷಣ ಮಾಡಿ ರಾಜ್ಯದ ಅದರಲ್ಲೂ ಕರಾವಳಿ ಭಾಗದ ಜನರ ಕ್ಷೇಮಕ್ಕಾಗಿ ತುರ್ತಾಗಿ ಮಾಡಬೇಕಾದ ವ್ಯವಸ್ಥೆಯನ್ನು ಆಗ್ರಹಪೂರ್ವಕವಾಗಿ ಒತ್ತಾಯಿಸಿದ್ದು ಅವರ ಶಾಸಕತ್ವದ ಘನತೆಯನ್ನು ಹೆಚ್ಚಿಸು ವಂತಿತ್ತ್ತು ಇದನ್ನು ಕೆಲವು ಚಾನಲ್ಗಳು ಪ್ರಸಾರ ಮಾಡಿದವು. ವಿಪರ್ಯಾಸವೆಂದರೆ ನೈಜ ಕಾಳಜಿ ಹಾಗೂ ಕಳಕಳಿಯಿಂದ ಮಾಡಿದ ಮಾತುಗಳನ್ನು ಅರ್ಥ ಮಾಡದೆ ವ್ಯಂಗ್ಯ ಮತ್ತು ಹಾಸ್ಯದೊಂದಿಗೆ ತೀರ ಬಾಲಿಶವಾಗಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಏಕವಚನವನ್ನು ಬಳಸಿದ್ದಾರೆ ಶಾಸಕರ ಭಾಷಣದಲ್ಲಿ ಸರಕಾರವನ್ನಾಗಲೀ ಯಾವುದೇ ಪಕ್ಷವನ್ನಾಗಲಿ ಅವರು ಟೀಕಿಸಿರಲಿಲ್ಲ. ಅಂಕಿ-ಅಂಶಗಳೊಂದಿಗೆ ರಾಜ್ಯದ ಸುರಕ್ಷತೆ ಮತ್ತು ಅಭಿವೃದ್ಧಿಗೆ ಅಗತ್ಯವಿರುವ ಕಾರ್ಯಯೋಜನೆಗಳ ಬಗ್ಗೆ ಅವರು ಪ್ರಸ್ತಾಪನೆಯನ್ನು ಸಲ್ಲಿಸಿದ್ದರು. ರಷ್ಯಾ ಮತ್ತು ಯುಕ್ರೇನ್ ಮದ್ಯೆ ಪ್ರಸ್ತುತ ನಡೆಯುತ್ತಿರುವ ಸಮರವನ್ನು ಸಾಂದರ್ಭಿಕವಾಗಿ ಅಲ್ಲಿಂದ ಮಿಸೈಲ್ ಬಡಿದರೆ ಏನಾಗಬಹುದೆಂದು ಕಣ್ಣಿಗೆ ಕಾಣುವಂತೆ ಉದಾಹರಣೆಯಾಗಿ ಬಳಸಿದ್ದರು. ನಿಮಗೆ ನೆನಪಿರಬಹುದು 2010ನೇ ಇಸವಿಯಲ್ಲಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ನಡೆದ ಅಪಘಾತದಲ್ಲಿ 158 ಮಂದಿ ಕರಕಲಾದ ಸಂದರ್ಭದಲ್ಲಿ ಸೂಕ್ತ ಅಗ್ನಿ ನಿವಾರಕ ವ್ಯವಸ್ಥೆ. ಇಂದೂ ಇಲ್ಲ.! ಎಂಆರ್ಪಿಎಲ್ ತನ್ನ ಉದ್ಯಮವನ್ನು ವಿಸ್ತರಿಸುತ್ತಾ ಹೋಗುತ್ತಿದೆ ಅದರ ಗಗನಚುಂಬಿ ಕೊಳವೆಗಳ ಮೂಲಕ ಬೆಂಕಿಯನ್ನು ಉಗುಳಿಯದರ ಹೊಗೆ ಆಕಾಶದಲ್ಲಿ ಲೀನ ವಾಗುತ್ತಿದೆ . ಇಡೀ ಕರಾವಳಿ ಹವಾಮಾನವನ್ನು ಗರಿಷ್ಠ ಉಷ್ಣಾಂಶ ಕ್ಕೆ ಏರಿಸುತ್ತಿದೆ.ಮುಂಬೈನ ಬಿಪಿಸಿಎಲ್ ತೈಲ ಸಂಸ್ಕರಣಾ ಘಟಕದಲ್ಲಿ 2018ರಲ್ಲಿ ಬೆಂಕಿ ಅವಘಡ ಸಂಭವಿಸಿದಾಗ 40 ಮಂದಿಗೆ ಗಾಯಗಳಾಗಿದ್ದವು. ಆದರೆ ಆಧುನಿಕ ಸುರಕ್ಷತಾ ವ್ಯವಸ್ಥೆಗಳಿದ್ದು ಹೆಚ್ಚಿನ ದುರಂತ ಸಂಭವಿಸಲಿಲ್ಲ ಮುಂಬೈನಲ್ಲಿ ಫೈಯರ್ ಬ್ರಿಗೇಡ್ ಜಾಗೃತವಾಗಿದೆ ಮತ್ತು ಆಧುನಿಕ ತಂತ್ರಜ್ಞಾನದ ವ್ಯವಸ್ಥೆಯನ್ನು ಹೊಂದಿದೆ ಮಂಗಳೂರಿನಲ್ಲಿ ದೇಶದ ಮಿಲಿಟರಿ ಅಗತ್ಯಕ್ಕಾಗಿ ಸಂಗ್ರಹಿಸಿರುವ ಅಪಾರ ಪ್ರಮಾಣದ ತೈಲ ವಿದೆಹಾಗೂ ಅಪಾಯಕಾರಿ ರಾಸಾಯನಿಕ ಕಾರ್ಖಾನೆಗಳು ಜಿಲ್ಲೆಯನ್ನು ಬೆಂಕಿಯ ಕೆನ್ನಾಲಗೆ ತುದಿಯಲ್ಲಿ ನಿಲ್ಲಿಸಿವೆ .ಮಿಸೈಲ್ಅಲ್ಲ ಯಾವುದೇ ರೀತಿಯ ಸ್ಫೋಟವಾದ ರೂ ಜನರ ಜೀವನಕ್ಕೆ ಸಸ್ಯಸಂಕುಲ ಗಳಿಗೆ ಅಪಾಯವಿದೆ ಎಂಬುದು ಗೋಡೆಯ ಮೇಲಿನ ಬರಹ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗತ್ಯವಿರುವ ಉದ್ದನೆಯ ಏಣಿ ಸಹಿತಇಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಕಸ್ಟ.ಕ್ಷುಲ್ಲಕವಾಗಿ ಟೀಕಿಸುವ ಬದಲು ಇಂತಾ ಗಂಭೀರ ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಿಕೇಂದ್ರದಿಂದ ಸೌಲಭ್ಯ ಗಳನ್ನು ಪಡೆಯಲು ಒತ್ತಡ ಹೇರುವ ಮೂಲಕ ಫಾರೂಕ್ ರವರು ಅಭಿನಂದನೆಗೆ ಅರ್ಹರಾಗಿದ್ದಾರೆ. ಟೀಕಿಸುವ ಭರದಲ್ಲಿ ಕೆಲವೇ ಕೆಲವು ಮಂದಿ ಬಳಸಿದ ಭಾಷೆ ಮತ್ತು ಧೋರಣೆಗಳು ದೇಶದಲ್ಲಿ ಕುಸಿಯುತ್ತಿರುವ ಸಾರ್ವಜನಿಕ ಜೀವನದ ಸಭ್ಯತೆಯನ್ನು ತೋರಿಸಿದೆ.
ಮುಂದುವರಿದು ಫಾರೂಕ್ ರವರು ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ ದೃಷ್ಟಿಯಿಂದ ಡಾಟಾ ಸೆಂಟರನ್ನು ತೆರೆಯಬೇಕೆಂದು ಸಾಕಷ್ಟು ಮಂದಿ ಯುವಕರು ಇದರಲ್ಲಿ ಪರಿಣಿತರಾಗಿದ್ದಾರೆ ಎಂಬುದನ್ನು ಸದನದಲ್ಲಿ ಮಂಡಿಸಿದರು ಜೊತೆಗೆ ಕಡಲ್ಕೊರೆತದ ಹೆಸರಿನಲ್ಲಿ ಇದುವರೆಗೆ ಸಾವಿರಾರು ಕೋಟಿ ವ್ಯಯಿಸಲಾಗಿದೆ . ಪ್ರತಿವರ್ಷ ಇದು ಕೆಲವರ ಕಿಸೆಗೆ ಇಳಿಯುತ್ತದೆ. ವಿದೇಶದಲ್ಲಿ ಆಧುನಿಕ ರೀತಿಯಲ್ಲಿ ವೈಜ್ಞಾನಿಕವಾಗಿ ನಡುಗಡ್ಡೆಯನ್ನು ರಚಿಸಿ ಕಡಲ್ಕೊರೆತ ವನ್ನು ನಿಲ್ಲಿಸಲಾಗಿದೆ .ಸಮುದ್ರ ದಂಡೆಯಲ್ಲಿ ಉದ್ಯಮವನ್ನುನಿರ್ಮಿಸಲಾಗಿದೆ ಪ್ರವಾಸೋದ್ಯಮ ಅಭಿವೃದ್ಧಿಗೆ ಒಳಿತಾಗಲಿ ದೆ ಎಂದಿದ್ದರು.
ಗೋವಾ ರಾಜ್ಯದಲ್ಲಿ ಶೇಕಡ 23 ರಷ್ಟು ಆದಾಯ ಪ್ರವಾಸೋದ್ಯಮದಿಂದ ಬರುತ್ತಿದೆ ಕರ್ನಾಟಕದಲ್ಲಿ ವಿಶಾಲವಾದ ಸಮುದ್ರತೀರ ಮತ್ತು ಆಕರ್ಷಣೀಯ ಪ್ರವಾಸಿಗರ ತಾಣಗಳಿದ್ದು ನಮ್ಮ ರಾಜ್ಯಕ್ಕೆ ಪ್ರವಾಸೋದ್ಯಮದಿಂದ ಕೇವಲ ಎರಡು ಶೇಕಡ ಆದಾಯ ಬರುತ್ತಿದೆ ಎಂಬ ವಿಚಾರವನ್ನು ತಿಳಿಸಿದರು.
ಯಾರು ಏನೇ ಟೀಕೆ ಮಾಡಲಿ ಅದು ಅವರ ಹಕ್ಕು. ಆದರೆ ಕರಾವಳಿ ಜಿಲ್ಲೆಯ ಶಾಸಕನೊಬ್ಬ ಗಂಭೀರ ವಿಚಾರ ಮತ್ತು ಅಭಿವೃದ್ಧಿಯ ಕಾಳಜಿಯಿಂದ ವಿಧಾನಪರಿಷತ್ತಿನಲ್ಲಿ ಧ್ವನಿಯೆತ್ತಿ ಮಾತನಾಡಿರುವುದು ನಮ್ಮ ಜಿಲ್ಲೆಗೆ ಸಂದ ಗೌರವ ಎಂದು ನಾನು ಭಾವಿಸುತ್ತೇನೆ.

ಬರಹ :- ಎಂ. ಬಿ. ಸದಾಶಿವ.