*ಎಲ್ಲಾ ಪಕ್ಷಗಳಿಂದ ಅಲೆಮಾರಿ ಕೊರಮ- ಕೊರಚ ಸಮಾಜ ನಿರ್ಲಕ್ಷ್ಯ ಮಾಜಿ ಶಾಸಕ ಜಿ ಚಂದ್ರಣ್ಣ ಆಕ್ರೋಶ*

ಬೆಂಗಳೂರು: ನಗರದ ಅಲ್ನುಮಿ ಅಸೋಸಿಯೇಷನ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ (ರಿ)( ಕೊರಮ- ಕೊರಚ- ಕೊರವ ಸಮುದಾಯಗಳ ಒಕ್ಕೂಟ) ಬೆಂಗಳೂರು ನಗರ ಸಮಿತಿ ವತಿಯಿಂದ
*ಕುಳುವರ ಜಾಗತಿಕ ಅಸ್ಮಿತೆ ಸಮಕಾಲೀನ ರಾಜಕೀಯ ಸವಾಲುಗಳು ಮತ್ತು ಅವಕಾಶಗಳು is* ವಿಚಾರಣ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯವನ್ನು ಉಧ್ಘಾಟಿಸಿ ಮಾತನಾಡಿದ ಮಾಜಿ ಶಾಸಕರಾದ ಜಿ.ಚಂದ್ರಣ್ಣ ದೇವನಹಳ್ಳಿ ಇವರು ಮಾತನಾಡಿ ರಾಜ್ಯದ ಪರಿಶಿಷ್ಟ ಜಾತಿಯಲ್ಲೇ 5 ನೇ ಅತಿದೊಡ್ಡ 12 ಲಕ್ಷ ಜನಸಂಖ್ಯೆ ಇರುವ ಕೊರಮ -ಕೊರಚ -ಕೊರವ ( ಕುಳುವ) ಸಮುದಾಯವನ್ನು ಕಳೆದ 20 ವರ್ಷಗಳಿಂದ ನಿರಂತರವಾಗಿ ಎಲ್ಲಾ ರಾಜಕೀಯ ಪಕ್ಷಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದ್ದು ಎಲ್ಲಾ ಸಂವಿಧಾನ ಬದ್ದ ಮೀಸಲಾತಿಯಿಂದ ವಂಚಿಸುತ್ತಿರುವುದು ಅತ್ಯಂತ ನೋವಿನ ಸಂಗತಿ 90 ದಶಕದಲ್ಲಿ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಮಾತ್ರ ಕುಳುವ ಸಮಾದಾಯಕ್ಕೆ ರಾಜಕೀಯ ಅವಕಾಶಗಳು ಸಿಕ್ಕಿದ್ದವು.
ನಂತರದ ದಿನಗಳಲ್ಲಿ ಈ ಸಮಾಜಕ್ಕೆ ರಾಜಕೀಯ ಅವಕಾಶಗಳು ಮರೀಚಿಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು

2002ರ ನಂತರದಲ್ಲಿ ಕುಳುವ ಸಮಾಜವನ್ನು ಕೆಲವು ರಾಜಕೀಯ ಪಟ್ಟಭದ್ರಹಿತಾಶಕ್ತಿಗಳು ಉದ್ದೇಶಪೂರ್ವಕವಾಗಿ ರಾಜಕೀಯ ಕ್ಷೇತ್ರದಲ್ಲಿ ವಂಚಿಸುವಲ್ಲಿ ಕುತಂತ್ರ ನೆಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2013 ರ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಕೊರಮ‌- ಕೊರಚ ಅಭಿವೃದ್ಧಿ ನಿಗಮವನ್ನು ಅನುಷ್ಠಾನಕ್ಕೆ ಅನುದಾನ ನೀಡದೇ ಉದ್ದೇಶ ಪೂರ್ವಕವಾಗಿ ವಂಚಿಸಿದ್ದಾರೆ ಎಂದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು

2022-23 ನೇ ಸಾಲಿನ ಬಜೆಟ್ ನಲ್ಲಿ ಕೊರಮ ಕೊರಚ ಅಭಿವೃದ್ಧಿ ನಿಗಮ ಕಾಯಕಲ್ಪ ಕ್ಕೆ ಅನುದಾನ ನೀರಿಕ್ಷೆ ಮಾಡಲಾಗಿತ್ತು ಆದರೆ ಮುಖ್ಯಮಂತ್ರಿ ಬೊಮ್ಮಯಿರವರು ಈ ಬೇಡಿಕೆಯನ್ನು ಈಡೇರಿಸದೇ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಕಡೆಯ ಪಕ್ಷ ಕುಳುವ ಸಮುದಾಯ ಬಸವಣ್ಣನವರ ಸಮಕಾಲಿನ ಶಿವಶರಣರಾಸ
ಶ್ರೀ ನುಲಿಯ ಚಂದಯ್ಯನವರ ಜಯಂತಿಯನ್ನು ಸಹ ಅಚರಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಸಮಾಜದ ನಿಯೋಗ ಮನವಿ ಸಲ್ಲಿಸಿದ್ಯಾಗೂ ಅದನ್ನು ಸಹ ನಿರ್ಲಕ್ಷ್ಯ ಮಾಡಿದ್ದಾರೆ.

ಆದ್ದರಿಂದ ಇದನ್ನು ಸರಿಪಡಿಸಿಕೊಂಡು ಕೊರಮ ಕೊರಚ ಸಮಾಜದ ಅಭಿವೃದ್ಧಿಗಾಗಿ ಮುಂಬರುವ ಪೂರಕ ಬಜೆಟ್ ನಲ್ಲಿ ಕೊರಮ ಕೊರಮ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಕನಿಷ್ಠ 200 ಕೋಟಿ ಅನುದಾನವನ್ನು ಘೋಷಣೆ ಮಾಡಬೇಕು ಎಂದು ಆಗ್ರಪಡಿಸಿದರು

ಯಾವುದೇ ಸರ್ಕಾರಗಳು ಕುಳುವ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರಹೋರಾಟ ನೆಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ BJP ಎಸ್.ಸಿ ಮೋರ್ಚಾ ರಾಜ್ಯ ಖಜಾಂಚಿ ದೇವನಹಳ್ಳಿ ನಾಗೇಶ್ ಮಾತನಾಡಿ ಈ ಕೂಡಲೇ ಈ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸಮುದಾಯದ ಮುಖಂಡರ ಸಭೆಯನ್ನು ಕರೆದು ಕುಳುವರ ಸಮಾಜದ ಕುಂದು ಕೊರತೆಯನ್ನು ಆಲಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು.
ಕಾರ್ಯದಲ್ಲಿ ಇತೀಚೆಗೆ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಜಲಮಂಡಳಿ ಆರ್ ರಾಮಚಂದ್ರಪ್ಪ ರವರಿಗೆ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ AKMS ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ, SC ST ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾ ಸಭಾ (ರಿ) ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ
ಜಿಲ್ಲಾಧ್ಯಕ್ಷರಾದ ಶ್ರೀ ವಿಜಯ್ ರಂಗಪ್ಪ, ಬಾಲಾಜಿ, ತಿಲಕ್ ಪ್ರಸಾದ್, ವಿಷ್ಣುಮೂರ್ತಿ, ಆಪ್ ಮುಖಂಡ ಅರವಿಂದ ಜಯರಾಮ್ ಮಂಜುನಾಥ್ ದಾಯತ್ಕರ್, ಸುಗುಣಾ ಅಶ್ಚಥ್, ಭೀಮಪುತ್ರಿ ನಾಗಮ್ಮ,
ಇತರರು ಭಾಗವಹಿಸಿದ್ದರು.

ಇಂತಿ..
ಅಖಿಲ‌ ಕರ್ನಾಟಕ ಕುಳುವ ಮಹಾ ಸಂಘ (ರಿ)
ಬೆಂಗಳೂರು ನಗರ ಜಿಲ್ಲೆ