ಉಳ್ಳಾಲ ಮಾರ್ಚ್ 20: ಹಿರಿಯ ಕಾಂಗ್ರೆಸ್ ಮುಖಂಡ, ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಂಸದ ಉಳ್ಳಾಲ ಶ್ರೀನಿವಾಸ ಮಲ್ಯ ರವರು ಕರಾವಳಿ ಕರ್ನಾಟಕದ ಅಭಿವೃದ್ಧಿಯಲ್ಲಿ ತುಂಬಾ ಶ್ರಮ ಪಟ್ಟಿದ್ದರು. ಅವರ ದೂರದೃಷ್ಟಿ ಮತ್ತು ನಿರಂತರ ಪರಿಶ್ರಮ ದಿಂದ ಮಂಗಳೂರಿಗೆ ಹಲವು ಯೋಜನೆಗಳು ಬಂದಿದ್ದವು . ಈಗಿನ ರಾಜಕಾರಣಿಗಳಿಗೆ ಅವರ ನಿಸ್ವಾರ್ಥ ಸೇವಾಮನೋಭಾವ ಸ್ಪೂರ್ತಿದಾಯಕ ಎಂದು ಶಾಸಕ ಯು ಟಿ ಖಾದರ್ ಹೇಳಿದರು.

ಇಂದು ಇಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶ್ರೀನಿವಾಸ ಮಲ್ಯ ಸ್ಮರಣಾರ್ಥ ಶಿಬಿರ ಆಯೋಜಿಸಲಾಗಿತ್ತು. ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ, ಉಳ್ಳಾಲ ನಗರಸಭೆ, ಯೇನಪೋಯ ಆಸ್ಪತ್ರೆ, ಲಯನ್ಸ್ ಕ್ಲಬ್ , ಬೀಡಿ ಕಾರ್ಮಿಕರ ಆಸ್ಪತ್ರೆ .ಮತ್ತಿತರ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಶಿಬಿರ ನಡೆಯಿತು. ದಂತ ಚಿಕಿತ್ಸೆ ಆರೋಗ್ಯ ತಪಾಸಣೆ ,ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ , ರಕ್ತದೊತ್ತಡ ಪರೀಕ್ಷೆ, ಮಧುಮೇಹ ತಪಾಸಣೆ ನಡೆಸಲಾಯಿತು.

ಉಳ್ಳಾಲ ನಗರಸಭೆ ಅಧ್ಯಕ್ಷ  ಚಿತ್ರಕಲಾ ಅಧ್ಯಕ್ಷತೆ ವಹಿಸಿದ್ದರು.  ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷ ಅಯೂಬ್ ಮಂಚಿಲ, ಶೇಖರ್, ಪ್ರವೀಣ್, ಡಾಕ್ಟರ್ ರಾಮಕೃಷ್ಣ ಭಟ್, ಡಾಕ್ಟರ್ ಬದ್ರುದ್ದೀನ್, ಶ್ರೀನಿವಾಸ ಮಲ್ಯರ ಅವರ ಮೊಮ್ಮಗ ವಿನೋದ್ ಮಲ್ಯ , ಹುಸೇನ ಕೆ ಮೊನಾಕ, ಕೌನ್ಸಿಲರ್ ಮಹಮ್ಮದ್ ಮುಕ್ಕಚೇರಿ, ಇಲಾಖೆಯ ಹಿರಿಯ ಅಧಿಕಾರಿಗಳು ನಗರಸಭೆಯ ಕೌನ್ಸಿಲರ್ ಗಳು ಮತ್ತಿತರರು ಉಪಸ್ಥಿತರಿದ್ದರು .