ಅಲ್ಪಸಂಖ್ಯಾತರ ಇಲಾಖೆಯಿಂದ ನಿಧಿ ದುರುಪಯೋಗ ಸದನದಲ್ಲಿ ಧ್ವನಿಯೆತ್ತಿದ ಬಿಎಂ ಫಾರೂಕ್

ಬೆಂಗಳೂರು, ಮಾರ್ಚ್ 17 :- ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತರ ಇಲಾಖೆಯ ನಿಧಿಯನ್ನು ಖಾಸಗಿ ಸಂಸ್ಥೆಗೆ ನಿಯಮಬಾಹಿರವಾಗಿ ಬಿಡುಗಡೆಮಾಡಲಾಗಿದೆ. ಕೇವಲ ಇಲಾಖೆಯ ಬಗ್ಗೆ ಮಾಹಿತಿಯನ್ನು ಒದಗಿಸಲು ಲಕ್ಷಾಂತರ ರೂಪಾಯಿ ನೀಡಲಾಗಿದೆ. ಯಾವುದೇ ಟೆಂಡರ್ ಕರೆಯದೆ ಹಣ ನೀಡಿರುವುದು ಕಾನೂನುಬಾಹಿರ. ಅಲ್ಲದೆ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮದ ಹೆಸರಿನಲ್ಲಿ ಇದೇ ಖಾಸಗಿ ಸಂಸ್ಥೆಗೆ ಕನ್ಸಲ್ಟೆಂಟ್ ಹೆಸರಲ್ಲೂ ನಿಧಿ ಬಿಡುಗಡೆ ಮಾಡಲಾಗಿದೆ. ಎಂದು ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್ ಆರೋಪಿಸಿದರು. ಬೆಂಗಳೂರು ನಗರ ಲೋಕಸಭಾ ಸದಸ್ಯರ ಆಪ್ತರೊಬ್ಬರು ಈ ನಿಧಿಯನ್ನು ಪಡೆದಿರುತ್ತಾರೆ. ಸರಕಾರ ಈ ಅಕ್ರಮ ನಿಧಿ ಬಿಡುಗಡೆ ವಿರುದ್ಧ ತನಿಖೆ ಮಾಡಬೇಕೆಂದು ವಿನಂತಿಸಿದ್ದರು. ಪ್ರತಿಕ್ರಿಯೆ ನೀಡಿದ ಸಭಾಧ್ಯಕ್ಷರು ಈ ವಿಷಯದಲ್ಲಿ ಅಲ್ಪಸಂಖ್ಯಾತರ ಇಲಾಖೆ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿ ನಿಮ್ಮ ಈ ಪ್ರಸ್ತಾವನೆಯನ್ನು ಸರ್ಕಾರದ ಗಮನಕ್ಕೆ ಬಂದಿದೆ ಎಂದರು.