*ಮುಸ್ಲಿಮ್ ಸಮುದಾಯದ ಸತ್ಯ ಮತ್ತು ಪ್ರಾಮಾಣಿಕತೆಯೇ ಹಿಜಾಬು ವಿಷಯ ಇಷ್ಟೊಂದು ಸಮಸ್ಯೆ ಆಗಲು ಕಾರಣ ಆಯಿತೇ -?*

*ಪ್ರಾರಂಭದಲ್ಲಿ ಹಿಜಾಬು ನಿಷೇಧ ಉಡುಪಿಗೆ ಸೀಮಿತವಾದ ಪ್ರಾದೇಶಿಕ ವಿಷಯ ಎಂದು ಭಾವಿಸಿ ಅಲ್ಲಿಯವರೇ ಬಗೆ ಹರಿಸಲಿ ಎಂಬ ಸದುದ್ದೇಶದಿಂದ ಪ್ರಾಮಾಣಿಕತೆಯಿಂದ ಹೆಚ್ಚಿನ ಮುಸ್ಲಿಮ್ ಮುಖಂಡರು ಉಲೆಮಾಗಳು ಮಧ್ಯೆ ಪ್ರವೇಶ ಮಾಡಲಿಲ್ಲ*

*ಆದರೆ ಹಿಜಾಬು ನಿಷೇಧ ಪ್ರಾರಂಭ ಮಾಡಿದ ಆರೆಸ್ಸೆಸ್ಸ್ ಬಿಜೆಪಿ ಸಂಘಪರಿವಾರದವರಿಗೆ ದೇಶಾದ್ಯಂತ ಇದನ್ನು ಹರಡಿ ಮುಸ್ಲಿಮ್ ಹೆಣ್ಣುಮಕ್ಕಳ ವಿಧ್ಯಾಭ್ಯಾಸವನ್ನು ಮತ್ತು ಶರೀಅತ್ ನಿಯಮವನ್ನು ಎದುರಿಸುವ ಎರಡು ಕೆಟ್ಟ ಅಜೆಂಡಾಗಳು ಇತ್ತು.*

*ಶಾಲಾ ಕಾಲೇಜುಗಳಲ್ಲಿ ದಾಂಧಲೆ ಗೂಂಡಾ ವರ್ತನೆ ನಡೆಸಲು ಪ್ರಚೋದಿಸಿ ಎಬಿವಿಪಿ ಗೂಂಡಾಗಳಿಗೆ ಕೇಸರೀ ಶಾಲು, ಪೇಟಾ ಧೀಕ್ಷೆ ಕೊಟ್ಟು ಕಳಿಸಿರುವುದು ,*
*ಕೇಸರೀ ಶಾಲು ಧರಿಸಿ ಜೈಶ್ರೀರಾಮ್ ಘೋಷಣೆ ಯೊಂದಿಗೆ ನಡೆಸಿದ ಭಯೋತ್ಪಾದನೆ ಕೃತ್ಯಗಳು ಇದನ್ನು ಸಾಬೀತು ಪಡಿಸುತ್ತದೆ.*

*ಇದರ ಹಿಂದಿರುವ ಬಿಜೆಪಿ ಸಂಘಪರಿವಾರದವರ ಅಜೆಂಡಾ ಏಕ ಸಿವಿಲ್ ಕೋಡ್ ಜಾರಿ ಮಾಡುವ ಮುಖ್ಯ ಭಾಗವಾದ ಈ ಷಡ್ಯಂತರದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮುಸ್ಲಿಮ್ ಸಮುದಾಯವನ್ನು C F I ವಿಧ್ಯಾರ್ಥಿ ಸಂಘಟನೆ ಎಚ್ಚರಿಸಿದ್ದಾರೆ.*

*ಪ್ರಾದೇಶಿಕ ಮಟ್ಟದಲ್ಲಿ ಇದನ್ನು ಮುಗಿಸಲು C F I ವಿಧ್ಯಾರ್ಥಿ ಸಂಘಟನೆ , ಉಡುಪಿಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟ , ಜಿ ಎ ಬಾವಾರವರ ತಂಡ ಪ್ರಾಮಾಣಿಕವಾಗಿ ತುಂಬಾ ಪ್ರಯತ್ನ ನಡೆಸಿದ್ದಾರೆ ಆದರೆ ಹಿಡನ್ ಅಜೆಂಡಾ ಇಟ್ಟು ಕೊಂಡು ಪ್ರಾರಂಭಿಸಿದ ರಘುಪತಿ ಭಟ್ಟನ ಆಡಳಿತ ಸಮಿತಿ, ಪ್ರಾಂಶುಪಾಲ ಯಾವುದೇ ರೀತಿಯ ಮಾನವೀಯತೆ ತೋರದೇ ಕ್ಲಾಸ್ ನಲ್ಲಿ ಅವಕಾಶವೇ ಕೊಡುವುದಿಲ್ಲ ಎಂಬ ಧರ್ಪ ಹಠಮಾರಿ ತನ ತೋರಿದರು.*

*ಅದರ ಮಧ್ಯೆ ಬಿಜೆಪಿ ಸಂಘಪರಿವಾರದ ಷಡ್ಯಂತರ ವನ್ನು ತಿಳಿಯುವ ಬುದ್ದಿ ಇಲ್ಲದ ಸೋಕೋಲ್ಡ್ ಮುಖಂಡರು ಹಿಜಾಬನ್ನು ಹಾಕದೇ ಕ್ಲಾಸ್ ಗೆ ಹೋಗಲು ವಿಧ್ಯಾರ್ಥಿ ಗಳಿಗೂ ಪೇರೆಂಟ್ಸ್ ಗಳಿಗೂ ತುಂಬಾ ಒತ್ತಡ ಹಾಕಿ ಮನಪರಿವರ್ತನೆಯ ಪ್ರಯತ್ನ ಮಾಡಿ ವಿಫಲರಾಗಿ ಗೊಂದಲ ಮೂಡಿಸುವ ಅಸ್ಪಷ್ಟ ಹೇಳಿಕೆ ಗಳನ್ನು ಕೊಟ್ಟು ಬಿಜೆಪಿ ಯವರಿಗೆ ಬೆಂಬಲ ಒದಗಿಸಿದರು.*

*ಈ ಎಲ್ಲಾ ಪರಿಸ್ಥಿತಿಯನ್ನು ಕಾಣುತ್ತಿದ್ದ ರಾಜ್ಯ ಸರಕಾರ ಮತ್ತು ಸೆಕ್ಯುಲರ್ ಪಕ್ಷಗಳು ಮೌನವಾಗಿ ರಾಜಕೀಯ ಲೆಕ್ಕಾಚಾರದ ಚೆಂದ ನೋಡುತ್ತಿತ್ತು.*

*ಸಮಸ್ಯೆ ಬಗೆ ಹರಿಸಲು ಪ್ರಾರಂಭದಲ್ಲೇ ಪ್ರಯತ್ನ ನಡೆಸಿದ ತಂಡಕ್ಕೆ ಇದರ ಹಿಂದೆ ಬಿಜೆಪಿ ಸರಕಾರ ನಿಂತಿದೆ ಎಂದು ಕೆಲವು ಸಚಿವರ , ಮುಖಂಡರ ಪ್ರಚೋದನಾತ್ಮಕ ಹೇಳಿಕೆ ಯಿಂದ ಅರ್ಥ ಮಾಡಿಕೊಂಡು ಇನ್ನು ಮುಂದಿರುವ ದಾರಿ ಕಾನೂನಾತ್ಮಕವಾಗಿಯೇ ಹೋರಾಟಕ್ಕೆ ನ್ಯಾಯಾಲಯದ ಮುಂದೆ ಹೋಗಲು ಬೆಂಬಲ ನೀಡಿದರು*

*ನ್ಯಾಯಾಲಯಕ್ಕೆ ಪ್ರವೇಶ ಮಾಡಿದ ತಕ್ಷಣ ರಾಜ್ಯ ಸರಕಾರ ಶಿಕ್ಷಣ ಇಲಾಖೆಯ ನಿರ್ದೇಶಕಿಯನ್ನು ತರಾತುರಿ ಯಾಗಿ ವರ್ಗಾವಣೆ ಮಾಡಿ ವಸ್ತ್ರ ಸಂಹಿತೆ ಬಗ್ಗೆ ಅನಗತ್ಯ ಮಧ್ಯಂತರ ಆದೇಶವನ್ನು ಹೊರಡಿಸಿ ಅಧಿಕೃತವಾಗಿ ಹಿಜಾಬು ವಿರೋಧಿಗಳಿಗೆ ಬೆಂಬಲ ನೀಡಿತು.*

*ಉಡುಪಿ ಹಿಜಾಬು ವಿಷಯಕ್ಕೆ ಸಂಬಂಧಿಸಿದಂತೆ ಈಗ ನಡೆದ ನೈಜ ವಿಷಯಗಳನ್ನು ಮುಂದಿಟ್ಟುಕೊಂಡು ಚರ್ಚೆ, ಡಿಬೇಟ್ ಗಳು ಕೆಲವು ಟಿವಿ ಚಾನೆಲ್ ಮಾಧ್ಯಮಗಳು ನಡೆಸದೇ ವಿಧ್ಯಾರ್ಥಿಗಳನ್ನು ಮುಸ್ಲಿಮ್ ಸಮುದಾಯವನ್ನು ಮತ್ತು ಹಿಜಾಬನ್ನು ಅಪರಾಧಿಗಿಯಾಗಿ ಬಿಂಬಿಸಿ ಜನರಲ್ಲಿ ಪರಸ್ಪರ ದ್ವೇಷ ಶತ್ರುತ್ವ ಹೆಚ್ಚಿಸುವ ನೀಚ ಕೆಲಸವನ್ನು ಮಾಡುತ್ತಿದೆ.*

*ಇಡೀ ಮುಸ್ಲಿಮ್ ಸಮುದಾಯ ಏಕ ಸಿವಿಲ್ ಕೋಡ್ ಜಾರಿಯ ಮುಖ್ಯ ಭಾಗವಾದ ಶರೀಅತ್ ನಿಯಮ ತೆಗೆದು ಹಾಕುವ ಈ ಹಿಜಾಬು ಅಜೆಂಡಾವನ್ನು ಚೆನ್ನಾಗಿ ಅರ್ಥ ಮಾಡಿ ಕೊಂಡು ಸಂವಿಧಾನ ಬದ್ಧವಾಗಿ ನ್ಯಾಯಪರವಾದ ಕಾನೂನಾತ್ಮಕವಾದ,ಪ್ರಜಾಸತ್ತಾತ್ಮಕವಾದ ಹೋರಾಟಕ್ಕೆ ಧುಮುಕುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.*

*ಜಾಫರ್ ಸಾಧಿಕ್ ಫೈಝೀ (ರಾಷ್ಟ್ರೀಯ ಸಮಿತಿ ಸದಸ್ಯರು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್.

______________________________

*ಏನಿದು ಹಿಜಾಬ್*

ಸಮವಸ್ತ್ರದ ಬಟ್ಟೆಯನ್ನು ಹೆಚ್ಚುವರಿಯಾಗಿ ತಲೆಗೆ ಹಾಕಲು ಅನುಮತಿ ಕೇಳುವುದನ್ನು ಅರ್ಥವಿಲ್ಲದ ಹಿಜಾಬ್ ವಿವಾದ ಎಂದು ಹೇಳುತ್ತಾ ಅಂತರಾಷ್ಟ್ರೀ ಯ ಮಟ್ಟದಲ್ಲಿ ವಿವಾದವನ್ನೇ ಸೃಷ್ಟಿಸಲಾಗಿದೆ.
ಮಾಧ್ಯಮಗಳು ಚರ್ಚಿಸುತ್ತಿರುವ ಹಿಜಾಬ್ / ಬುರ್ಖ ಎಂಬ ಪದ ಕುರ್ ಆನ್ ನಲ್ಲಿ ಹೆಣ್ಣಿನ ಉಡುಗೆಯ ಬಗ್ಗೆಯಾಗಲಿ,ತಲೆವಸ್ತ್ರದ ಬಗ್ಗೆಯಾಗಲಿ ಹೇಳುವಾಗ ಬಳಸಲಾಗಿಲ್ಲ.
ಹೆಣ್ಣಿನ ಉಡುಗೆಯ ಬಗ್ಗೆ ಹೇಳುವಾಗ
ಬಿಕುಮುರಿಹಿನ್ನ ಅಲಾ ಜುಯೂಬಿಹಿನ್ನ
(ಅನ್ನೂರ್ ಅಧ್ಯಾಯ) ಅರ್ಥಾತ್ ತಮ್ಮ ಎದೆಯ ಮೇಲೆ ತಮ್ಮ ಮೇಲು ಹೊದಿಕೆಯ ಸೆರಗನ್ನು ಹಾಕಿಕೊಂಡಿರಲಿ ಎಂದಷ್ಟೇ ಹೇಳಲಾಗಿದೆ. ಅನ್ನೂರ್ ನಲ್ಲಿ ನೀಡಲಾದ ಆದೇಶಗಳು ಖಡ್ಡಾಯವಾಗಿದೆ.
ಪ್ರವಾದಿ ಪತ್ನಿ ಆಯಿಶಾ(ರ) ರ ಮಾತುಗಳು ಇದಕ್ಕೆ ಬಲನೀಡುತ್ತದೆ.

ಹಾಗೆಯೇ ಅಹ್ ಝಾ ಬ್ ಅಧ್ಯಾಯದಲ್ಲಿ ಯುದ್ ನೀನ ಅಲೈಹಿನ್ನ ಮಿನ್ ಜಲಾಬೀಬಿಹಿನ್ನ ಎನ್ನಲಾಗಿದೆ.
ಇದರ ಅರ್ಥ ವಿಶ್ವಾಸಿನಿಯರು ತಮ್ಮ ಮೇಲೆ ತಮ್ಮ ಚಾದರಗಳ ಸೆರಗನ್ನು ಇಳಿಸಿಕೊಳ್ಳಿರಿ ಎಂದಾಗಿದೆ. ಇಲ್ಲಿಯೂ ಹಿಜಾಬ್ ಪದ ಇಲ್ಲ.

*ಜಿಲ್ ಬಾಬ್ * ಎಂದರೆ ಅರಬಿಯಲ್ಲಿ ದೊಡ್ಡ ಚದ್ದರ.
ಇದ್ ನಾ ಪದದ ಮೂಲಾರ್ಥ ಸುತ್ತಿಕೊಳ್ಳು ಅಥವಾ ಹತ್ತಿರಗೊಳಿಸು.*
(ಚಾದರವನ್ನು ಸುತ್ತಿಕೊಳ್ಳು,ಹತ್ತಿರಗೊಳಿಸು,ಇಳಿಸಿಬಿಡು)ಎಂದಾಗುತ್ತದೆ.

ಮದೀನಾದಲ್ಲಿ ಈ ಸೂಕ್ತಗಳನ್ನು ಆಲಿಸಿದ ವಿಶ್ವಾಸಿನಿಯರಾದ ಮಹಿಳೆಯರು ಎಲ್ಲ ತೆಳುವಾದ ವಸ್ತ್ರಗಳನ್ನು ತೊರೆದು ದಪ್ಪಗಿನ ವಸ್ತ್ರಗಳನ್ನು ಆಯ್ದುಕೊಂಡು ಅವುಗಳನ್ನು ದುಪ್ಪಟವಾಗಿ ಬಳಸಿದರು.
ಪ್ರಭಾತ ನಮಾಝಿಗೆ ಮಸ್ಜಿದ್ ನಬವಿಗೆ ಆಗಮಿಸಿದ ಮಹಿಳೆಯರು ಮೈತುಂಬಾ ಸೆರಗು ಹೊದ್ದಿದ್ದರು. ಕೆಲವರು ಚಾದರಗಳನ್ನು ಶಿರವಸ್ತ್ರದಂತೆ ಧರಿಸಿದ್ದರು ಎಂಬುದು ಪ್ರವಾದಿ ಪತ್ನಿ ಆಯಿಶಾ(ರ)ರಿಂದ ವರದಿಯಾಗಿದೆ.

ಹೆಣ್ಣಿಗೆ ರಕ್ತಸಂಬಂಧಿಗಳಲ್ಲದವರ ಮುಂದೆ ಮುಖ ಮತ್ತು ಕೈ ಹೊರತು ಪಡಿಸಿ ಉಳಿದ ಭಾಗಗಳು ಗೋಚರಿಸುವುದು ಧರ್ಮಬದ್ಧವಲ್ಲ ಎಂಬುದು ಆಯಿಶಾ(ರ) ವರದಿ ಮಾಡಿದ ಪ್ರವಾದಿ ಮುಹಮ್ಮದ್(ಸ) ರ ಅಧಿಕೃತ ವಚನವಾಗಿದೆ. ಈ ಕಾರಣಕ್ಕಾಗಿ ಪ್ರಭುದ್ಧಳಾದ ಮುಸ್ಲಿಮ್ ಹುಡುಗಿಯರು ತಲೆವಸ್ತ್ರ ಹಾಕುತ್ತಾರೆ. ಎದೆಗೆ ಸುತ್ತಿಕೊಳ್ಳುತ್ತಾರೆ.
ಖಡ್ಡಾಯವಾದ ಕಾರಣ ಬಣ್ಣ ಯಾವುದೇ ಆಗಿದ್ದರೂ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರದ ಬಣ್ಣದ ಹೆಚ್ಚುವರಿ ಬಟ್ಟೆಗಾಗಿ ಅನುಮತಿ ಕೇಳುತ್ತಾರೆ.
ಸ್ಕಾರ್ಫ್ ವಿವಾದ ಇಂದು ನಿನ್ನೆಯದಲ್ಲ. ಎಷ್ಟೋ ವರುಷಗಳಿಂದ ನಡೆದುಬರುತ್ತಿಧೆ.
ಹೆಚ್ಚಿನ ಕಡೆಗಳಲ್ಲಿ ಅನುಮತಿ ಇರುವುದರಿಂದ ಶಿಕ್ಷಣಕ್ಕೆ ಯಾವುದೇ ರೀತಿಯ ತೊಡಕಾಗಿಲ್ಲ.
ಶಿಕ್ಷಣ ಮತ್ತು ತಲೆವಸ್ತ್ರದ ಆಯ್ಕೆ ಬಂದಾಗ ಬಹುಪಾಲು ಹುಡುಗಿಯರು ಹಿಂದಿನಿಂದಲೂ ಶಿಕ್ಷಣವನ್ನು ಕಡೆಗಣಿಸಿದ್ದಾರೆ ಎಂಬುದು ಯಾರಿಗೂ ತಿಳಿಯದ ವಿಚಾರವೇನಲ್ಲ. ಪ್ರಾಥಮಿಕ ತರಗತಿಯಲ್ಲಿ ಸ್ಕಾರ್ಫ್ ಖಡ್ಡಾಯವಿಲ್ಲದ ಕಾರಣ ವಿವಾದವಾಗುವುದಿಲ್ಲ.
ಸ್ಕಾರ್ಫ್ ವಿವಾದವಾಗುವಂತಹ ವಿಷಯವೇ ಅಲ್ಲ. ಹಿಂದೆ ಎಲ್ಲ ಧರ್ಮೀಯರೂ ಧರಿಸುತ್ತಿದ್ದ,ಇಂದಿಗೂ ಎಲ್ಲ ಧರ್ಮೀಯರೂ ಧರಿಸುವಂತಹ ಮಾಮೂಲಿ ಉಡುಪು. ಅದಕ್ಕೆ *ಹಿಜಾಬ್ * ಎಂಬ ಅರಬಿ ಪದ ಬಳಸಿ ಮತಾಂಧರ ಉಡುಗೆ ಎಂಬಂತೆ ವೈಭವೀಕರಿಸಲಾಗಿದೆ.

‘ಸತಾಯಿಸಲ್ಪಡದಿರಲಿಕ್ಕಾಗಿ” ರುವ ಮಹಿಳೆಯ ಸರಳ ಉಡುಗೆ ಇಂದು ಸತಾಯಿಸಲ್ಪಡಲು ಕಾರಣವಾಗಿರುವುದರ ಬಗ್ಗೆ ಖೇದವಿದೆ.

✍️ಶಮೀರ ಜಹಾನ್