*ಜನಪರವಾದ ಜನತಾ ಬಜೆಟ್ಗಾಗಿ SDPI ಹಕ್ಕೊತ್ತಾಯ*

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿ 14ರಂದು 2022-23ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್ ಜನಪರವಾಗಿರಬೇಕು ಹಾಗೂ ಬಡವರು, ಮಧ್ಯಮವರ್ಗ *ಪರಿಶಿಷ್ಟ ಜಾತಿ/ವರ್ಗಗಳು ಹಾಗು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು* ಸೇರಿದಂತೆ ಸಮಾಜದ ಎಲ್ಲಾ ವರ್ಗದವರಿಗೆ ಅನುಕೂಲವಾಗಿರಬೇಕು ಎಂಬ ಹಕ್ಕೊತ್ತಾಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಾಡುತ್ತಿದೆ.

*ಶಿಕ್ಷಣ*
* ಅಂಗನವಾಡಿಯಿಂದ ಉನ್ನತ ವ್ಯಾಸಂಗದವರೆಗೂ ಏಕರೂಪವಾದ ಮತ್ತು ಸಂಪೂರ್ಣ ಉಚಿತವಾದ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು ಮತ್ತು ಇದಕ್ಕಾಗಿ ಸುಸಜ್ಜಿತ ಶಾಲೆ ಲ, ಕಾಲೇಜುಗಳ ನಿರ್ಮಾಣವಾಗಬೇಕು.
* ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವ, ಇಡೀ ಶಿಕ್ಷಣ ವ್ಯವಸ್ಥೆಯನ್ನೇ ವ್ಯಾಪಾರೀಕರಣಗೊಳಿಸಲು ಸಜ್ಜಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನ ಮಾಡುವುದಿಲ್ಲವೆಂದು ವಿಧಾನ ಸಭೆಯಲ್ಲಿ ನಿರ್ಣಯ ಅಂಗೀಕರಿಸಬೇಕು. ಕೇಂದ್ರ ಸರ್ಕಾರವು ಶಿಕ್ಷಣಕ್ಕೆ ಹೆಸರು ವಾಸಿಯಾದ ಕರ್ನಾಟಕಕ್ಕೆ ಕನಿಷ್ಠ 30 ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡಲು ಒತ್ತಾಯ ಮಾಡಬೇಕು. ಎಲ್ಲ ತಾಲ್ಲೂಕು ಕೇಂದ್ರ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಕನಿಷ್ಠ ಒಂದೊಂದು ಸರಕಾರಿ ಪದವಿ ಕಾಲೇಜು ನಿರ್ಮಿಸಬೇಕು.
* ಪ್ರತಿ ತಾಲೂಕು ಮತ್ತು ಹೋಬಳಿಗಳ ಮಟ್ಟದಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕು. ಈಗ ಇರುವ ವಿದ್ಯಾರ್ಥಿ ನಿಲಯಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಪ್ರತಿ ವಿದ್ಯಾರ್ಥಿಯ ಊಟದ ಭತ್ಯೆಯನ್ನು ಹೆಚ್ಚಿಸಬೇಕು.
* ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ಅದರಲ್ಲೂ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಕಟ್ಟಡಗಳು ಬಹಳಷ್ಟು ಶಿಥಿಲಾವಸ್ಥೆಯಲ್ಲಿವೆ. ಅವುಗಳ ಪುನರ್ನಿರ್ಮಾಣ ಆಗಬೇಕು. ಶಾಲಾ ಕಾಲೇಜುಗಳಲ್ಲಿ ವ್ಯವಸ್ಥಿತವಾದ ಶೌಚಾಲಯಗಳು, ಆಟದ ಮೈದಾನ, ಪ್ರಯೋಗ ಶಾಲೆಗಳಗೆ ಹೆಚ್ಚಿನ ಒತ್ತು ನೀಡಬೇಕು. ಖಾಲಿ ಇರುವ ಶಿಕ್ಷಕರು ಮತ್ತು ಪಠ್ಯೇತರ ಸಿಬ್ಬಂದಿಗಳ ಹುದ್ದೆಗಳನ್ನು ತಕ್ಷಣ ನೇಮಕ ಮಾಡಲು ಕ್ರಮವಹಿಸಬೇಕು.
* ಶಹೀದ್ ಟಿಪ್ಪುಸುಲ್ತಾನ್ ಹೆಸರಿನಲ್ಲಿ ಅಮೆರಿಕೆಯ ಮಾದರಿಯಲ್ಲಿ ಕರ್ನಾಟಕದಲ್ಲಿ ಏರೋಸ್ಪೇಸ್ & ಏರೋನಾಟಿಕಲ್ ಸಂಶೋಧನಾ ಕೇಂದ್ರದ ಸ್ಥಾಪನೆ.
* ಶಹೀದ್ ಟಿಪ್ಪುಸುಲ್ತಾನ್ ಹೆಸರಿನಲ್ಲಿ ಅಧ್ಯಯನ ಕೇಂದ್ರ ಅಥವಾ ವಿಶ್ವವಿದ್ಯಾಲಯ ಸ್ಥಾಪನೆ.
* ರಾಜ್ಯದಲ್ಲಿ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಇಲ್ಲದ ಜಿಲ್ಲೆಗಳಲ್ಲಿ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಬೇಕು.

 

*ಆರೋಗ್ಯ*
* ಪ್ರತಿಯೊಬ್ಬ ಪ್ರಜೆಗೂ ಉಚಿತ ಆರೋಗ್ಯ ಸೇವೆ ಒದಗಿಸಬೇಕು. ಎಲ್ಲ ಸೌಲಭ್ಯಗಳುಳ್ಳ ಮತ್ತು ಎಲ್ಲ ರೀತಿಯ ಖಾಯಿಲೆಗಳಿಗೂ ಉಚಿತ ಚಿಕಿತ್ಸೆ ದೊರೆಯುವ ಅತ್ಯಾಧುನಿಕ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ನಿರ್ಮಿಸಬೇಕು.
* ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕು.

*ಅಲ್ಪಸಂಖ್ಯಾತರ ಇಲಾಖೆ*
* ಅಲ್ಪಸಂಖ್ಯಾತರ ಇಲಾಖೆಯ ಬಜೆಟ್ ಅನ್ನು ಹತ್ತು ಸಾವಿರ ಕೋಟಿ ರೂ.ಗೆ ಏರಿಸಬೇಕು.
* ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಶಿಕ್ಷಣದ ಅರಿವು ಮೂಡಿಸುವ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸಾಲ ಯೋಜನೆಯ ಅನುದಾನದ ಮೊತ್ತವನ್ನು ದ್ವಿಗುಣಗೊಳಿಸಬೇಕು ಮತ್ತು ಸಂಪೂರ್ಣವಾಗಿ ಬಡ್ಡಿರಹಿತ ಸಾಲ ನೀಡಬೇಕು.
* ರಾಜ್ಯದ ಅತಿ ದೊಡ್ಡ ಭಾಷೆಯಾದ ಉರ್ದು ಅಭಿವೃದ್ಧಿಗೆ ಉರ್ದು ಯುನಿವರ್ಸಿಟಿಯನ್ನು ಉತ್ತರ ಕರ್ನಾಟಕ ಬಾಗದಲ್ಲಿ ಸ್ಥಾಪಿಸಲು ಕ್ರಮ ವಹಿಸಬೇಕು. ಉರ್ದು ಅಕಾಡೆಮಿಗೆ ಹೆಚ್ಚಿನ ಅನುದಾನ ನೀಡಬೇಕು.
* ಕನ್ನಡ ಮತ್ತು ಉರ್ದು ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಬೇಕು. ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು.

*ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ*
* ಪರಿಶಿಷ್ಟ ಜಾತಿ/ ವರ್ಗಗಳು ಹಾಗು ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಅನುಧಾನವನ್ನು ಕಡ್ಡಾಯವಾಗಿ ಅದೇ ಉದ್ದೇಶಕ್ಕೆ ಬಳಸಬೇಕು. ಅನುದಾನವನ್ನು ಯಾವುದೇ ಕಾರಣಕ್ಕೂ ಇತರೆ ಇಲಾಖೆಗಳಿಗೆ ವರ್ಗಾಹಿಸಬಾರದು.
* ಪರಶಿಷ್ಟ ಜಾತಿ / ವರ್ಗಗಳಿಗೆ ಹಾಗು ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಅನುಧಾನವನ್ನು ಸಮರ್ಪಕವಾಗಿ ಬಳಸದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ವಹಿಸಬೇಕು.

*ಜಸ್ಟೀಸ್ ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ*
* ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲದಿಂದ ಅಸ್ಪೃಶ್ಯ ಸಮುದಾಯಗಳ ಬೇಡಿಕೆಯಾದ ಸದಾಶಿವ ಆಯೋಗದ ವರದಿಯ ಜಾರಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಅತಿ ಜರೂರು ಕ್ರಮ ವಹಿಸಬೇಕು.‌ ಈ ವರದಿಯ ಮೂಲಕ ಅಸ್ಪೃಶ್ಯ ಸಮುದಾಯಗಳನ್ನು ವಂಚಿಸಿ ರಾಜಕೀಯ ಲಾಭ ಪಡೆಯುವ ಕೃತ್ಯಕ್ಕೆ ತಕ್ಷಣವೇ ಅಂತ್ಯ ಹಾಡಬೇಕು.

*ಕಾಂತರಾಜ್ ಆಯೋಗದ ವರದಿ ಬಿಡುಗಡೆ ಆಗಲಿ*
* ರಾಜ್ಯದ ಜನತೆಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ಮೂಲಕ ಸರ್ಕಾರಿ ಸವಲತ್ತುಗಳ ಸಮಾನ ಹಂಚಿಕೆಯ ಉದ್ದೇಶದಿಂದ ಆಯೋಗ ರಚಿಸಿ ಇಲ್ಲಿಯವರೆಗೂ ಸುಮಾರು 200ಕೋಟಿ ರೂಪಾಯಿಗಳವರೆಗೂ ಖರ್ಚು ಮಾಡಿ, ಬಿಡುಗಡೆ ಮಾಡದೆ ಮುಚ್ಚಿಟ್ಟಿರುವ ಕಾಂತರಾಜ್ ಆಯೋಗದ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು.

*ಆದಿವಾಸಿ, ಅಲೆಮಾರಿ, ಬುಡುಕಟ್ಟುಗಳ ಕಲ್ಯಾಣ ಕಾರ್ಯಕ್ರಮ*
* ರಾಜ್ಯದ ಆದಿವಾಸಿ, ಅಲೆಮಾರಿ, ಬುಡುಕಟ್ಟುಗಳ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಮೀಸಲಿಟ್ಟಿರುವ ಅನುಧಾನಗಳು ಸಮರ್ಪಕವಾಗಿ ಬಳಕೆ ಆಗದೆ, ಇವರ ಬದುಕಿನ್ನೂ ಅತಂತ್ರ ಸ್ಥಿತಿಯಲ್ಲೇ ಇವೆ. ರಾಜ್ಯದ ಸುಮಾರು 47ಕ್ಕೂ ಹೆಚ್ಚು ಸಮುದಾಯಗಳು ಈಗಲೂ ಸರ್ಕಾರದ ದಾಖಲೆಗಳಲ್ಲಿ ಕಂಡು ಬಾರದೆ ಇರುವುದು ಈ ನಾಡಿನ ದುರಂತ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಆದಿವಾಸಿ, ಅಲೆಮಾರಿ, ಬುಡುಕಟ್ಟುಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 5 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಟ್ಟು ಸಮರ್ಪಕ ಬಳಕೆಗೆ ಕಾಯ್ದೆ ರೂಪಿಸಬೇಕು.

*ಸ್ಥಳೀಯಾಡಳಿತ*
* ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ ಮತ್ತು ನಗರಸಭೆಗಳಿಗೆ ರಾಜ್ಯದ ಅನುದಾನ ದ್ವಿಗುಣ ಗೊಳಿಸಬೇಕು. ಚುನಾಯಿತ ಸದಸ್ಯರಿಗೆ ಮಾಸಿಕ ಗೌರವಧನ ಹೆಚ್ಚಿಸಬೇಕು. ವಸತಿ ಯೋಜನೆ ಭೂಮಿ ಹಂಚಿಕೆಯ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು. ನಗರಾಭಿವೃದ್ಧಿ ನಿಧಿಯ ಬಳಕೆಯ ಸಂಪೂರ್ಣ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು. ಶಾಸಕರ ಹಸ್ತಕ್ಷೇಪಕ್ಕೆ ಯಾವುದೇ ಅವಕಾಶ ನೀಡಬಾರದು.

*ಶಾಂತಿ-ಸೌಹಾರ್ದತೆ*
* ರಾಜ್ಯದಲ್ಲಿ ಧರ್ಮ, ಜಾತಿ, ಲಿಂಗ, ಭಾಷೆಯ ತಾರತಮ್ಯ ಕೊನೆಗೊಳಿಸಲು ಮತ್ತು ಶಾಂತಿ ಸೌಹಾರ್ದತೆ ಶಾಶ್ವತವಾಗಿ ನೆಲೆಗೊಳ್ಳುವಂತೆ ವಿಶೇಷ ಜನಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳು, ಶಿಬಿರಗಳು, ಶಿಕ್ಷಣ ಸಂಸ್ಥೆ ಮತ್ತು ವಿವಿಧ ಸರಕಾರಿ ಇಲಾಖೆಗಳ ಮೂಲಕ ನಡೆಸಬೇಕು. ಇದಕ್ಕಾಗಿ ಕನಿಷ್ಠ ಒಂದು ಸಾವಿರ ಕೋಟಿ ರೂ.ನಿಧಿ ಮೀಸಲು ಇಡಬೇಕು.
* ಮತೀಯ ದ್ವೇಷ ಹಾಗೂ ಕೋಮುಗಲಭೆಗಳಲ್ಲಿ ಜೀವ ಹಾನಿ, ಆಸ್ತಿ – ಪಾಸ್ತಿ, ವಹಿವಾಟಿಗೆ ಆಗುವ ನಷ್ಟಕ್ಕೆ ಪರಿಹಾರ ನೀಡಲು ಕನಿಷ್ಠ ವಾರ್ಷಿಕ ರೂ. 2 ಸಾವಿರ ಕೋಟಿ ನಿಗದಿ ಮಾಡಲು ಕ್ರಮವಹಿಸಬೇಕು.
* ಮತೀಯ ಹಾಗೂ ಜಾತ್ಯಾಧಾರಿತ ದೌರ್ಜನ್ಯ ನಿಷೇಧ ಕಾಯ್ದೆ ಜಾರಿಗೊಳಿಸಬೇಕು.

*ಉದ್ಯೋಗ*
* ಬರಗಾಲ, ಹಣದುಬ್ಬರ, ಸಾಂಕ್ರಾಮಿಕ ರೋಗಗಳಿಂದ ನಿರುದ್ಯೋಗ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಲಕ್ಷಾಂತರ ಉದ್ಯೋಗಗಳು ನಾಶವಾಗಿವೆ. ಉದ್ಯಮಗಳು ನೆಲ ಕಚ್ಚಿವೆ. ಇವುಗಳ ಪುನಶ್ಚೇತನಕ್ಕೆ ಹೆಚ್ಚಿನ ಒತ್ತು ನೀಡಬೇಕು.
* NSSO (ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫ್ ಇಂಡಿಯಾ) ಪ್ರಕಾರ ದೇಶದ ಇತಿಹಾಸದಲ್ಲೇ ಇಂದೆಂದೂ ಕಂಡರಿಯದ ರೀತಿಯಲ್ಲಿ ದೇಶದ ನಿರುದ್ಯೋಗ ಹೆಚ್ಚಾಗಿದೆ. ಯುವ ಜನಕ್ಕೆ ಉದ್ಯೋಗವಿಲ್ಲದೆ ಭಾರತದ ಭವಿಷ್ಯ ಮಂಕಾಗುತ್ತಿದೆ. ಯುವಕರಿಗೆ ಸ್ವಂತ ಉದ್ಯೋಗ ಪ್ರಾರಂಭಿಸಲು ಅಗತ್ಯ ಸಾಲ ಸೌಲಭ್ಯ ಕಲ್ಪಿಸಬೇಕು ಮತ್ತು ಅಲ್ಲಿಯವರೆಗೂ ನಿರುದ್ಯೋಗಿಗಳಿಗೆ ಮಾಸಿಕ ಐದು ಸಾವಿರ ರೂ.ಭತ್ಯೆ ನೀಡಬೇಕು.
* ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ನೀತಿ ಅಳವಡಿಸಿಕೊಳ್ಳುವ ಸಂಸ್ಥೆ/ಕಂಪನಿಗಳಿಗೆ ತೆರಿಗೆ ವಿನಾಯಿತಿ/ಪ್ರೋತ್ಸಾಹ ಧನ ನೀಡಿಕೆ.
* ಖಾಲಿ ಬಿಟ್ಟಿರುವ ಸರಕಾರಿ ಉದ್ಯೋಗಗಳನ್ನು ತುಂಬಲು ಕೂಡಲೇ ಕ್ರಮವಹಿಸಬೇಕು.
* ಖಾಸಗಿ ಕಾರ್ಪೊರೇಟ್ ಮತ್ತಿತರ ಸರ್ಕಾರೇತರ ಸಂಸ್ಥೆಗಳ ಉದ್ಯೋಗಗಳಲ್ಲಿ ಕನಿಷ್ಠ 30% ಉದ್ಯೋಗಗಳನ್ನು ಆರ್ಥಿಕ ದುರ್ಬಲರು, ಪರಿಶಿಷ್ಟ ಜಾತಿ/ ಪಂಗಡ ಹಾಗೂ ಹಿಂದುಳಿದ ವರ್ಗಗಳು ಹಾಗು ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಮೀಸಲಿಡಲು ಕಠಿಣ ಕ್ರಮ ವಹಿಸಬೇಕು.
* ಒಂದು ಕುಟುಂಬಕ್ಕೆ ಕನಿಷ್ಠ ಒಂದು ಸರ್ಕಾರಿ ಉದ್ಯೋಗ ನೀತಿ ಕಡ್ಡಾಯವಾಗಿ ಜಾರಿಯಾಗಬೇಕು.

*ತೆರಿಗೆ ನೀತಿ*
* ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಲು ರಾಜ್ಯದ ತೆರಿಗೆ ಕಡಿಮೆ ಮಾಡಬೇಕು ಹಾಗೂ ಇವೆರಡನ್ನೂ GST ವ್ಯಾಪ್ತಿಗೆ ತರಲು ಕೇಂದ್ರಕ್ಕೆ ಒತ್ತಾಯಿಸಬೇಕು
* ದಿನ ಬಳಕೆಯ ವಸ್ತುಗಳು ಮತ್ತು ಆಹಾರ ದಾನ್ಯಗಳ ಮೇಲಿನ GST ತೆರಿಗೆಯನ್ನು ರದ್ದುಗೊಳಿಸಲು ಕೇಂದ್ರಕ್ಕೆ ಹಕ್ಕೊತ್ತಾಯ ಮಾಡಬೇಕು.
* ಜಿಎಸ್ ಟಿ ಸೇರಿದಂತೆ ಇತರ ರೂಪದ ತೆರಿಗೆಗಳ ಸಂಗ್ರಹದಲ್ಲಿ ರಾಜ್ಯ ಸರ್ಕಾರಗಳ ಹಕ್ಕು ಬಾಧ್ಯತೆಗಳಿಗೆ ಧಕ್ಕೆ ಉಂಟಾಗುತ್ತಿದೆ. ರಾಜ್ಯ ಸರ್ಕಾರಗಳನ್ನು ಆದಾಯ
ಮೂಲಗಳಿಲ್ಲದ ಬರಡು ಖಜಾನೆಯನ್ನಾಗಿಸಲಾಗುತ್ತಿದೆ. ಜಿ ಎಸ್ ಟಿ ನಿಯಮಗಳನ್ನು ತಕ್ಷಣ ಜನಸ್ನೇಹಿಯಾಗಿಸಬೇಕು ಹಾಗೂ ಆಯಾ ರಾಜ್ಯಗಳ ಪಾಲನ್ನು ಸಕಾಲದಲ್ಲಿ ಪಾವತಿಸಲು ಸ್ವಯಂಚಾಲಿತ ಹಣಕಾಸು ಪದ್ಧತಿಯನ್ನು ಜಾರಿಗೊಳಿಸಬೇಕು.

*ಕೈಗಾರಿಕೆ*
* ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲಿ ಕೈಗಾರಿಕೆ ಮತ್ತು ಮೂಲಸೌಕರ್ಯಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಆದರೆ, ಕಳೆದ ಬಾರಿಯ ಬಜೆಟ್ನಲ್ಲಿ ಈ ವಲಯಗಳ ಅಭಿವೃದ್ಧಿಗೆ ಬೆಳವಣಿಗೆಯ ನಿಟ್ಟಿನಲ್ಲಿ ಯಾವುದೇ ಮಹತ್ವದ ಘೋಷಣೆಗಳು ಆಗಲಿಲ್ಲ. ಆದುದರಿಂದ ಈ ಬಾರಿಯ ಬಜೆಟ್ ನಲ್ಲಿ ಸರ್ಕಾರ ಈ ಸಂಬಂಧ ನಿಗಾ ವಹಿಸಬೇಕಾಗಿದೆ. ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೂಡುವ ಮೂಲಕ ರಾಜ್ಯದಲ್ಲಿ ಉಲ್ಬಣವಾಗಿರುವ ನಿರುದ್ಯೋಗ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಬೇಕು.
* ಸಣ್ಣ ಕೈಗಾರಿಕೆಗಳು, ಹೆಚ್ಚಿನ ಉದ್ಯಮಪತಿಗಳು ಮತ್ತು ಉದ್ಯೋಗವನ್ನು ಸ್ರಷ್ಠಿಸುತ್ತದೆ, ಆದ್ದರಿಂದ ಸಣ್ಣ ಕೈಗಾರಿಕೆಗಳಿಗೆ ವಿಶೇಷ ಉತ್ತೇಜನ ನೀಡಬೇಕು.

*ಆಡಳಿತದಲ್ಲಿ ಸುದಾರಣೆ*
* ಸುಭಿಕ್ಷ ಮತ್ತು ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದ ಯಡಿಯೂರಪ್ಪನವರ ನೇತೃತ್ವದ ಸರ್ಕಾರ, ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಲು ಇಲಾಖಾವಾರು ವಿಂಗಡಿಸದೇ ಆರು ವಲಯಗಳನ್ನಾಗಿ ವಿಂಗಡಿಸಿ ಆಯವ್ಯಯ ಮಂಡನೆ ಮಾಡಿತ್ತು. ಯಡಿಯೂರಪ್ಪರವರ ಅಂದಿನ ಆ ನಿರ್ಧಾರ ಅವೈಜ್ಞಾನಿಕವಾಗಿದ್ದು, ಇದರಿಂದ ಇಲಾಖಾವಾರು ಅಭಿವೃದ್ಧಿ ಆಗಲಿಲ್ಲ. ಆದುದರಿಂದ ಮುಂದಿನ ಬಜೆಟ್ ನಲ್ಲಿ ಅನುದಾನವನ್ನು ಇಲಾಖಾವಾರು ಆಧಾರದಲ್ಲಿ ಮೀಸಲಿಡಬೇಕು.
*ವಿಶ್ವ ಬ್ಯಾಂಕ್ ನ ಅಣತಿಯಂತೆ ಜಾರಿಗೊಳಿಸಿರುವ Fiscal Responsibility Act 2002. ಹಾಗೂ ಇತರ ನಿರ್ಬಂಧಕಾರಿ ಹಣಕಾಸು ನಿಯಮಗಳ ಸಡಿಲಿಕೆಗಾಗಿ ಒತ್ತಾಯಿಸುವುದು. ಏಕೆಂದರೆ ಈ Karnataka Govt structural Adjustment Loan ಪಡೆದು ಈಗಾಗಲೆ 2 ದಶಕವಾಗಿದ್ದು ಈಗಿನ ಸ್ಥಿತಿಗತಿಯ ಪರಿಶೀಲನೆಯನ್ನು ತಜ್ಞರ ಸಮಿತಿಯ ಮೂಲಕ ನಡೆಸುವಂತೆ ಒತ್ತಾಯಿಸಬೇಕು.
* ಕಬ್ಬಿಣ, ತಾಮ್ರ, ಗ್ರಾನೈಟ್ ಚಿನ್ನ ಮತ್ತಿತರ ನೈಸರ್ಗಿಕ ಸಂಪನ್ಮೂಲಗಳ ಗಣೆಗಾರಿಕೆಗೆ ಹೊಸ ನೀತಿ ಜಾರಿ ಅಗತ್ಯ, ತೆರಿಗೆ ಸಂಗ್ರಹಕ್ಕೆ ಸರಳ ಪದ್ದತಿ ಜಾರಿಗೊಳಿಸಬೇಕು.

*ನಂಜುಂಡಪ್ಪ ವರದಿ, ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹ*
* ಅಭಿವೃದ್ಧಿಯ ವಿಷಯದಲ್ಲಿ ಅಸಮಾನತೆಗೆ ಒಳಗಾಗಿ ಅತಿ ಹಿಂದುಳಿದ ತಾಲೂಕುಗಳ ಸಮಗ್ರ ಅಭಿವೃದ್ಧಿಗಾಗಿ ನಂಜುಂಡಪ್ಪ ವರದಿಯ ಶಿಫಾರಸ್ಸುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಆದ್ಯತೆ ನೀಡಬೇಕು
* ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನೆ ಸರಿಪಡಿಸಲು ಚುನಾಯಿತ ಸದಸ್ಯರು ಹಾಗೂ ತಜ್ಞರ ಸಮಿತಿ ನೇಮಕ ಮಾಡಬೇಕು.
ಅನ್ಯ ರಾಜ್ಯದಿಂದ ಬರುವ ವಲಸಿಗರಿಗೂ, ಇಲ್ಲಿನವರಿಗೂ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಆಗಬೇಕು ಮತ್ತು ಕನ್ನಡಿಗರಿಗರಿಗೆ ಗರಿಷ್ಠ ಉದ್ಯೋಗ ಮೀಸಲಿಡುವುದು.
* ಅಭಿವೃದ್ಧಿಯ ವಿಚಾರದಲ್ಲಿ ಅತಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಉತ್ತರ ಕರ್ನಾಟಕ ಮತ್ತು ಕೊಡಗು ಜಿಲ್ಲೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.

*ರಾಜೇಂದ್ರ ಸಾಚಾರ್ ವರದಿ ಮತ್ತು ಜಸ್ಟೀಸ್ ರಂಗನಾಥ ಮಿಶ್ರಾ ಆಯೋಗದ ವರದಿ ಜಾರಿಗೆ ಇನ್ನು ವಿಳಂಬ ಧೋರಣೆ ಬೇಡ.*

*ಕೃಷಿ*
* ರೈತರ ಸಂಪೂರ್ಣ ಸಲ ಮನ್ನಾ ಘೋಷಣೆಯಾಗಬೇಕು. ರೈತಸ್ನೇಹಿ ಆರೋಗ್ಯ ಮತ್ತು ಜೀವವಿಮೆ ಯೋಜನೆಗಳು ಉತ್ತಮಗೊಳ್ಳಬೇಕು.
* ರೈತರ ಬೆಂಬಲ ಬೆಲೆ, ಮಾರುಕಟ್ಟೆ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಸುಧಾರಿಸಬೇಕು. ದಲ್ಲಾಳಿಗಳ ನಿಯಂತ್ರಣಕ್ಕೆ ಕಠಿಣ ಕಾನೂನು ತರಬೇಕು.
* ರೈತರ ಸಾಲ ಯೋಜನೆಗಳು ಇನ್ನಷ್ಟು ಸರಳೀಕರಣಗೊಳ್ಳಬೇಕು.
* ಗೋಹತ್ಯೆ ನಿಶೇಧ ಕಾಯ್ದೆಯಿಂದ ನಶ್ಟಕ್ಕೀಡಾಗಿರುವ ರೈತರ ಗೊಡ್ಡು ರಾಸುಗಳಿಗೆ ಬೆಂಬಲ ಬೆಲೆ.
* ಬಲಾಢ್ಯರಿಂದಾಗಿರುವ ಸರ್ಕಾರಿ ಭೂ ಒತ್ತುವರಿಗಳ ತೆರವಿಗೆ ಇಠಿಣ ಕಾನೂನು ಜಾರಿಯಾಗಬೇಕು. ವಶಪಡಿಸಿಕೊಳ್ಳಲಾದ ಭೂಮಿಗಳ, ಭೂಮಿ ಬ್ಯಾಂಕ್ ತೆರೆದು ಭೂ ಹೀನ ರೈತರಿಗೆ ಹಂಚಿಕೆಯಾಗಬೇಕು.
* ಭೂ ಹೀನ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ರೈತ ಕುಟುಂಬಗಳಿಗೆ ತಲಾ ಎರಡು ಎಕರೆ ಸರ್ಕಾರಿ ಭೂಮಿ ನೀಡಬೇಕು. ಸರ್ಕಾರದ ಭೂಮಿವಿಲ್ಲದ ಕಡೆ ಖಾಸಗಿಯವರಿಂದ ಖರೀದಿಸಿ ನೀಡಬೇಕು. ಇದಕ್ಕಾಗಿ ಕನಿಷ್ಠ 30 ಸಾವಿರ ಕೋಟಿ ರೂಪಾಯಿ ಮೀಸಲಿಡಬೇಕು.

*ವಸತಿ ಮತ್ತು ಸೇವೆ*
* ಗುಡಿಸಲು ಮುಕ್ತ ರಾಜ್ಯವೆಂಬ ಎಲ್ಲ ಪಕ್ಷಗಳ ಘೋಷಣೆಗಳು ಕೇವಲ ಘೋಷಣೆಗಳಾಗಿಯೇ ಹೋಗಿವೆ. ಈಗಲಾದರೂ ರಾಜ್ಯವನ್ನು ಗುಡಿಸಲು ಮುಕ್ತ ಮತ್ತು ನಿರಾಶ್ರಿತರ ಮುಕ್ತ ರಾಜ್ಯವನ್ನಾಗಿ ಮಾಡುವಲ್ಲಿ ಸಫಲ ಕಾರ್ಯಯೋಜನೆಗಳು ಸಿದ್ಧವಾಗಬೇಕು.
* ನಿರ್ದಿಷ್ಟ ಪ್ರಮಾಣದ ವಿದ್ಯುತ್ ಮತ್ತು ಕುಡಿಯುವ ನೀರು ಪ್ರತಿ ಮನೆಗೂ ಉಚಿತವಾಗಿ ನೀಡಬೇಕು.

*ಕಾರ್ಮಿಕ ಕಲ್ಯಾಣ*
ಕಾರ್ಮಿಕ ಇಲಾಖೆ ಮತ್ತು ಅಸಂಘಟಿತ ವಲಯ
* ಕಾರ್ಮಿಕ ಕಲ್ಯಾಣ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಅಸಂಘಟಿತ ಕಾರ್ಮಿಕರು, ಆಟೋ, ಲಾರಿ ಮತ್ತು ಟ್ಯಾಕ್ಸಿ ಚಾಲಕರು, ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮನೆಗೆಲಸದವರಿಗೆಲ್ಲರಿಗೂ ಸಂಪೂರ್ಣ ಉಚಿತ ಆರೋಗ್ಯ, ಜೀವ ವಿಮೆ, ಆಪತ್ ಧನ, ಮರಣ ಪರಿಹಾರಗಳು ಲಭ್ಯವಾಗಬೇಕು.
* ರಾಜ್ಯದ ಎಲ್ಲಾ ಆಟೋ ಚಾಲಕರು, ಕ್ಯಾಬ್ ಚಾಲಕರು, ಸರಕು ಸಾಗಾಣೆ ಹಾಗೂ ಆಂಬುಲೆನ್ಸ್ ಚಾಲಕರಿಗೆ ವಿವಿಧ ಯೋಜನೆಗಳಡಿ ನೆರವಾಗಲು ಪ್ರತೀ ವರ್ಷ 500 ಕೋಟಿ ರೂಪಾಯಿಗಳ ಅನುದಾನ ಮೀಸಲಿಡಬೇಕು.
* ಕರ್ನಾಟಕ ರಾಜ್ಯ ಅಟೋ, ಟ್ಯಾಕ್ಸಿ ಮತ್ತು ಸರಕು ಸಾಗಾಣಿಕೆ ಚಾಲಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ 500. ಕೋಟಿ ರೂಪಾಯಿಗಳ ಅನುದಾನ ನೀಡಬೇಕು.
*ಇಂಧನ ಇಲಾಖೆ*
* ಕೃಷಿ ಆಧಾರಿತ ಚಟುವಟಿಕೆಗಳು ಮತ್ತು ಕಿರು ಉದ್ಯಮಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು.
ಕರ್ನಾಟಕ ರಾಜ್ಯದಲ್ಲಿ ಅಂದಾಜು 20 ಲಕ್ಷಕ್ಕೂ ಹೆಚ್ಚು ಕೃಷಿ ಪಂಪ್ ಸೆಟ್ ಗಳಿದ್ದು ಅವುಗಳಿಗೆ ಸಂಪೂರ್ಣ ಉಚಿತ ವಿದ್ಯುತ್ ನೀಡಬೇಕಿದೆ. ಅಲ್ಲದೆ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ಸಂಪೂರ್ಣ ಉಚಿತ ಸೌಲಭ್ಯ.
* ವಿದ್ಯುತ್ ಇಲಾಖೆಗೆ ಸಂಪೂರ್ಣ ಕಾಯಕಲ್ಪ.
* ಕರ್ನಾಟಕ ವಿದ್ಯುತ್ ಸುಧಾರಣಾ ಕಾಯ್ದೆ 1999 ಹಾಗೂ ಇತರ ಕಾಯ್ದೆಗಳಲ್ಲಿರುವ ಬಳಕೆದಾರ ವಿರೋಧಿ ಧೋರಣೆಗಳ ಮರುಪರಿಶೀಲನೆಗಾಗಿ ತಜ್ಞರ ಸಮಿತಿ ರಚನೆಯಾಗಬೇಕು.
* ಭಾರತ ಒಕ್ಕೂಟದಲ್ಲಿ ವಿದ್ಯುತ್ ಉತ್ಪಾದನೆ-ವಿತರಣೆಯಲ್ಲಿ ಸೆಂಟ್ರಲ್ ಗ್ರೀಡ್ ನ ಹತೋಟಿ ಹೆಚ್ಚಾಗುತ್ತಿದ್ದು ರಾಜ್ಯ ಸರ್ಕಾರಗಳ ಸ್ವಾಯತ್ತತೆಗಾಗಿ ಒತ್ತಾಯಿಸಲು ಸಮಿತಿ ನೇಮಕ ಮಾಡಬೇಕು.
* ಜನ ಸಾಮಾನ್ಯರೆಲ್ಲರಿಗೂ ವಿದ್ಯುತ್ ಶುಲ್ಕ ಹೊರೆಯಾಗದಂತೆ ತೆರಿಗೆ ಪದ್ಧತಿ ಮತ್ತು ವಿದ್ಯುತ್ ಉತ್ಪಾದನೆ ಮತ್ತು ವಿತರಣಾ ವ್ಯವಸ್ಥೆಯನ್ನು ಸರ್ಕಾರಿ ಸಂಸ್ಥೆಗಳ ಮೂಲಕ ನಡೆಸಬೇಕು.

*ಸಾರಿಗೆ*
* ಸಾರಿಗೆ ಇಲಾಖೆಗೆ ಹೊಸ ಆದಾಯದ ಸಂಗ್ರಹಣೆಗೆ ಅಂಚೆ ಇಲಾಖೆ ಹಾಗೂ ಕರ್ನಾಟಕ ಹಾಲು ಮಹಾಮಂಡಲಗಳೊಂದಿಗೆ ಸಮಾಲೋಚಿಸಿ ಪರಸ್ಪರ ಸಹಕಾರ ಮತ್ತು ಲಭ್ಯ ಸೌಲಭ್ಯಗಳ ಗರಿಷ್ಠ ಬಳಕೆಗೆ ಪ್ರಯತ್ನವಾಗಬೇಕು.
*ವಿದ್ಯಾರ್ಥಿಗಳ ಬಸ್ ಪಾಸ್ ಗಳಿಗೆ ಸಾಂಕೇತಿಕ ಕಡಿಮೆ ಶುಲ್ಕ ನಿಗದಿ ಮಾಡಬೇಕು.

*ನಿಗಮ – ಮಂಡಳಿ*
* ಬಿಲ್ಲವ ಅಭಿವೃದ್ಧಿ ನಿಗಮ ಸ್ಥಾಪನೆಗೆ 500 ಕೋಟಿ ರೂ ನಿಗದಿ ಮಾಡಲು ಒತ್ತಾಯ, ಆ ಮೂಲಕ ಕರಾವಳಿಯ ಬಿಲ್ಲವ ಯುವಜನತೆಗೆ ಸ್ವಯಂ ಉದ್ಯೋಗ, ಮತ್ತಿತರ ಚಟುವಟಿಕೆಗಳನ್ನು ನಡೆಸಲು ಅವಕಾಶ ಸಿಗಲಿದೆ.
*ಮಹಿಳಾ ಸಬಲೀಕರಣ, ಕೌಶಲ್ಯಾಭಿವೃದ್ಧಿ*

* ಕೌಶಲ್ಯಾಭಿವೃದ್ದಿ ತರಬೇತಿ*
* ರಾಜ್ಯದ ಎಲ್ಲಾ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿ ಕೌಶಲ್ಯ ತರಬೇತಿ ಸೌಲಭ್ಯ ಕಲ್ಪಿಸಬೇಕು.

*ಮಹಿಳಾ ಮತ್ತು ಮಕ್ಕಳ ಕಲ್ಯಾಣ*
ಮಕ್ಕಳ ಪೌಷ್ಟಿಕಾಂಶ ಕೊರತೆ ನಿವಾರಣೆಗೆ ಹೆಚ್ಚಿನ ಒತ್ತು ನೀಡಬೇಕು.

*ಪ್ರಕೃತಿ ವಿಕೋಪ*
* ನೆರೆ ಮತ್ತು ಬರ ಪರಿಹಾರಕ್ಕೆ ಕನಿಷ್ಠ ಮುವ್ವತ್ತು ಸಾವಿರ ಕೋಟಿ ರೂಪಾಯಿಗಳ ಹಣವನ್ನು ಕಾಯ್ದಿರಿಸಬೇಕು.

*ತುರ್ತು ಕ್ರಮಗಳು*
* ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಕ್ರಮ ವಹಿಸಬೇಕು.
* ಪ್ರತಿ ಕಂದಾಯ ಗ್ರಾಮಗಳಲ್ಲಿ ಜನಸೇವಾ ಕೇಂದ್ರಗಳ ಸ್ಥಾಪನೆ ಆಗಬೇಕು.

*ಒಟ್ಟಾರೆ ಬಜೆಟ್ನ ನಿಲುವುಗಳು*
– ತೆರಿಗೆ ನೀತಿಯು ಜನರಿಂದ ವಸೂಲಿ, ಶ್ರೀಮಂತರಿಗೆ ಜಾಲೀ ಎಂಬಂತಾಗಿದೆ. ಇದನ್ನು ಬದಲಿಸಿ ಜನರಿಂದ ಸರ್ಕಾರಕ್ಕೆ ಸರ್ಕಾರದಿಂದ ಮರಳಿ ಜನರಿಗೆ ಎಂಬ ತೆರಿಗೆ ನೀತಿಗಾಗಿ ಎಲ್ಲರೂ ದನಿಗೂಡಿಸಬೇಕಿದೆ.
* ಕರ್ನಾಟಕ ಸರ್ಕಾರದ ಒಟ್ಟಾರೆ ವಾರ್ಷಿಕ ಆದಾಯದ ಶೇ 24 ರಷ್ಟು ಮೊತ್ತವನ್ನು ಸಾಲಗಳ ಬಡ್ಡಿ ಪಾವತಿಗಾಗಿ ಕೊಡಲಾಗುತ್ತಿದೆ. ಯಾವ ಯಾವ ಕಾರಣಕ್ಕಾಗಿ ಸಾಲ ಮಾಡಲಾಗುತ್ತಿದೆ, ಅದು ಉತ್ಪಾದಕ ಯೋಜನೆಗಳಿಗಾಗಿಯೋ ಅಥವಾ ಅನುತ್ಪಾದಕ ವೆಚ್ಚಗಳಿಗಾಗಿಯೋ ಎಂಬ ಬಗ್ಗೆ ಪಾರದರ್ಶಕ ನೀತಿ ಅಳವಡಿಸಬೇಕು.
– ಇನ್ನು ಮುಂದೆ ಹೊಸ ಸಾಲಗಳನ್ನು ಮಾಡುವಾಗ ‘ ಸರ್ವ ಪಕ್ಷ ಸದಸ್ಯರು ಹಾಗೂ ಆಯ್ದ ತಜ್ಞರ ಸಮಿತಿಯ ಪರಿಶೀಲನೆ /ಅನುಮೋದನೆ ಪಡೆಯುವ ಹೊಸ ನೀತಿ ಜಾರಿಯಾಗಬೇಕು.
– ಕರ್ನಾಟಕದಲ್ಲಿ ಹುಟ್ಟಿ ಬೆಳೆದಿರುವ ಬ್ಯಾಂಕ್ ಗಳನ್ನು ಉತ್ತರ ಭಾರತದ ಇತರ ಬ್ಯಾಂಕ್ ಗಳೊಂದಿಗೆ ವಿಲೀನಗೊಳಿಸದಂತೆ ಒತ್ತಾಯಿಸಬೇಕು.
– ರಾಜ್ಯದ ಒಟ್ಟು ಸಾಲಗಳ ಮೇಲಿನ ಬಡ್ಡಿ ಪಾವತಿಯ ಹೊರೆಯು ಜನ ಸಾಮಾನ್ಯರ ಮೇಲೆ ಹೆಚ್ಚಾಗುತ್ತಿದೆ ಅನಗತ್ಯವಾಗಿ ಹೊಸ ಸಾಲ ಮಾಡದಂತೆ ಒತ್ತಾಯ.
– ಇದುವರೆಗೂ ಮಾಡಲಾಗಿರುವ ಸಾಲಗಳ ಬಗ್ಗೆ ಶ್ವೇತಪತ್ರ ಹೊರಡಿಸಲು ಆಗ್ರಹ ( White Paper )
– ರಸ್ತೆ ಸುಂಕ, ಸೇತುವೆ, ರೈಲ್ವೆ, ಜಲಸಾರಿಗೆಯ ಮೂಲಕ ಲಭ್ಯವಾಗುವ ಹಣದಲ್ಲಿ ರಾಜ್ಯಗಳ ನ್ಯಾಯಯುತ ಪಾಲಿಗಾಗಿ ಒತ್ತಾಯಿಸಬೇಕು.