Ullal , February 4 : Uroos celebration of the historically famous Dargah Shariff of Hazrat Seyyid Mohammed Shareeful Madani will be held for 25 days from February 10  to March 6, said president of the Dargah Abdul Rasheed Haji.

he said that the historically famous Urs fair was held once every five years at the Dargah Shariff at Ullal. Devotees from all over the state, as well as Kerala, Tamil Nadu, Andhra Pradesh and North India arrive to witness and be a part of the glorious celebrations, he said.

. The flag hoisting ceremony was held  earlier. The Urs will begin with the monthly Zikr and every night there will be special sermons by noted Ulama scholars, he said.devotees from various parts of the country were expected to participate in the Urs celebrations.

There will be monthly Zikr Majlees programme on the inaugural day, and several programmes during the duration of the Uroos including the valedictory ceremony of the Urs on march 6.

History

The histroy says that saint came to ullal around 500 year ago from the holy city of madina in Saudi arebia by floating across the sea on piece of chader or musalla. He camped at a small masjid in melangadi area, which is the present juma masjid for ullal,permannur, someshwar kotekar and jeppinamogeru villages. The Saint led a very pious and simple life. His simplicity and devotion of faith, love towords the poor attracted villagers. The villagers were poring towards in because he used to solve their problems through his prayers and spiritual powers. Hearing of his miraculous healing people irrespective of caste and creed flocked to ullal have a glimpse and blessing of the saint. Later on the saint married a girl from a poor and respectable family

ಐತಿಹಾಸಿಕ ಉಳ್ಳಾಲ ಉರೂಸ್ ಫೆ.10ರಿಂದ ಮಾರ್ಚ್ 6 ವರೆಗೆ

ಉಳ್ಳಾಲ : 4  ಫೆಬ್ರವರಿ : ಹಝ್ರತ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ತಂಙಳ್‍ರವರ 429ನೇ ವಾರ್ಷಿಕ ಮತ್ತು 21ನೇ ಪಂಚವಾರ್ಷಿಕ ಉರೂಸ್ ನೇರ್ಚೆ ಕಾರ್ಯಕ್ರಮವು ಫೆ.10ರಿಂದ ಪ್ರಾರಂಭಗೊಂಡು ಮಾರ್ಚ್ 6ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಉಳ್ಳಾಲ ದರ್ಗಾ ವಠಾರದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್‌ ರಶೀದ್ ತಿಳಿಸಿದರು.

ಉಳ್ಳಾಲ ಉರೂಸ್ ಬಗ್ಗೆ 2021 ಡಿಸೆಂಬರ್ 23ರಂದು ಪ್ರಾರಂಭಗೊಳ್ಳುವ ಬಗ್ಗೆ ದಿನಾಂಕ ನಿಗದಿಗೊಳಿಸಿ ಸುಮಾರು 1.5 ಕೋಟಿ ರೂ. ವೆಚ್ಚದ ಉರೂಸ್ ಕಾಮಗಾರಿ ಕೈಗೆತ್ತಿಕೊಂಡು ಕೋವೀಡ್ ಕಾರಣ ಉರೂಸ್ ಮುಂದೂಡಲ್ಪಟ್ಟು ಇದೀಗ 2022ರ ಫೆ. 10ರಂದು ಸಂಜೆ ನಾಲ್ಕು ಗಂಟೆಗೆ ದರ್ಗಾ ಝಿಯಾರತ್ ಹಾಗೂ ಮಾಸಿಕ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮವು ತಾಜುಲ್ ಉಲಮಾರ ಸುಪುತ್ರ ಕುರ್ರತುಸ್ಸಾದಾತ್ ಸಯ್ಯಿದ್ ಅವರು ನೇತೃತ್ವ ವಹಿಸುವರು ಎಂದು ಅಬ್ದುಲ್‌ ರಶೀದ್ ತಿಳಿಸಿದರು.

ಫೆ. 10ರಂದು ಸಂಜೆ ಏಳು ಗಂಟೆಗೆ ಉರೂಸ್ ಕಾರ್ಯಕ್ರಮ ಸಯ್ಯಿದುಲ್ ಉಲಮಾ ಜಿಪ್ರಿಮುತ್ತುಕೋಯ ತಂಙಳ್‍ ಉದ್ಘಾಟಿಸಲಿರುವರು, ಸಮಾರೋಪ ಕಾರ್ಯಕ್ರಮವನ್ನು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೆರವೇರಿಸಲಿರುವರು.

ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಸ್ವಾಗತಿಸಲಿದ್ದು, ಉಳ್ಳಾಲ ಶಾಸಕರಾದ ಯು.ಟಿ. ಖಾದರ್, ಸಂಸದ ನಳೀನ್ ಕುಮಾರ್ ಕಟೀಲ್, ಉಡುಪಿ ಖಾಝಿ ಮಾಣಿ ಉಸ್ತಾದ್, ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸ್ವಾದಿಕ್ ಅಲಿ ಶಿಹಾಬ್ ತಂಙಳ್, ಇಬ್ರಾಹಿಂ ಕಲೀಲ್ ತಂಙಳ್, ಕುರ್ರತುಸ್ಸಾದಾತ್ ಕೂರತ್ ತಂಙಳ್, ಅಲಿ ಕುಟ್ಟಿ ಮುಸ್ಲಿಯಾರ್, ಅಲಿ ಬಾಫಕಿ ತಂಙಳ್, ಅಹ್ಮದ್ ಅಲಿ ಶಿಹಾಬ್ ತಂಙಳ್, ಎಂ.ಟಿ ಉಸ್ತಾದ್, ಅಟಕ್ಕೋಯ ತಂಙಳ್ ಕುಂಬೋಲ್, ಅಲಿ ತಂಙಳ್ ಕುಂಬೋಲ್, ನಾಸಿರ್ ಹೈ, ತಂಙಳ್‍ ಕೋಯಿಕೋಡ್, ಜಮಲುಲ್ಲೈಲಿ ತಂಙಳ್, ಝೈನುಲ್ ಹಬೀಬಿ ತಂಙಳ್ ದುಗಲಡ್ಕ, ಸಚಿವರಾದ ಅಂಗಾರ,  ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ಸೌಹಾರ್ದ ಸಮ್ಮೆಳನದಲ್ಲಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಸಚಿವರುಗಳು, ಮಾಜಿ ಮುಖ್ಯಮಂತ್ರಿಗಳು ಹಾಗು ಅನೇಕ ಉಮರಾ ನಾಯಕರುಗಳು, ವಿದ್ವಾಂಸರುಗಳು ಆತಿಥಿಗಳಾಗಿ ಭಾಗವಹಿಸಲಿದ್ದಾರೆ.

ಫೆ.10 ರಿಂದ ಮಾ.4ರವರೆಗೆ ರಾತ್ರಿ ಧಾರ್ಮಿಕ ಮುಖಂಡರುಗಳಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ, ಸಿರಾಜುದ್ದೀನ್ ಖಾಸಿಮಿ, ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ, ಕಬೀರ್ ಬಾಖವಿ, ಫಾರೂಕ್ ನಈಮಿ ಕೊಲ್ಲಮ್, ನೌಶಾದ್ ಬಾಖವಿ, ಅಬ್ದುಲ್ ರಶೀದ್ ಝೈನಿ, ಜಲಾಲ್ ಮದನಿ ಆಲಪುಝ, ಖಲೀಲ್ ಹುದವಿ, ಅಬ್ದುಲ್ ದಾರಿಮಿ ಕುಕ್ಕಿಲ, ಹನೀಫ್ ನಿಝಾಮಿ, ಸಮೀರ್ ದಾರಿಮಿ, ಬಶೀರ್ ಮದನಿ ನೀಲಗಿರಿ, ಸಿಂಸಾರುಲ್ ಹಕ್ ಹುದವಿ, ಯಾಸೀನ್ ಮದನಿ ಜೌಹರಿ, ರಹ್ಮತುಲ್ಲ ಖಾಸಿಮಿ ಮುತ್ತೇಡಮ್, ಮುತ್ತಲಿಬ್ ಮದನಿ ಕುಟ್ಯಾಟಿ, ಸಿರಾಜುದ್ದೀನ್ ಅಝ್ಹರಿ ಕಮ್ಮಣಮ್, ಬಶೀರ್ ಪೈಝಿ ದೇಶಮಂಗಲಮ್, ಅಬ್ದುಲ್ ಸಮದ್ ಸಮದಾನಿ, ಇ.ಪಿ ಅಬೂಬಕ್ಕರ್ ಮುಸ್ಲಿಯಾರ್, ಅಬ್ದುಲ್ ಹಕೀಂ ಅಝ್ಹರಿ, ಅಝೀಝ್ ದಾರಿಮಿ ಚೊಕ್ಕಬೆಟ್ಟು ಸೇರಿದಂತೆ ಅನೇಕ ಉಲಮಾ ಶಿರೋಮಣಿಗಳಿಂದ ಪ್ರವಚನೆ ಕಾರ್ಯಾಕ್ರಮ ನಡೆಯಲಿದೆ.

ಉರೂಸ್ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರ, ಸನದುದಾನ ಮಹಾಸಮ್ಮೇಳನ, ಮದನಿ ಸಂಗಮ, ಮದನಿ ಮೌಲೂದ್ ಪಾರಾಯಣ, ಬೃಹತ್ ಮೆಡಿಕಲ್ ಕ್ಯಾಂಪ್, ಸರ್ವ ಧರ್ಮ ಮುಖಂಡರ ಸಮ್ಮೇಳನ, ಸಂದಲ್ ಮೆರವಣಿಗೆ, ಅನ್ನದಾನ ಕಾರ್ಯಕ್ರಮ ನಡೆಯಲಿದೆ.

ಉರೂಸ್ ಅನ್ನದಾನ ಕಾರ್ಯಕ್ರಮಕ್ಕೆ, ಸುಮಾರು 1500 ಆಡು/ಕುರಿ, 35000 ಕೆಜಿ ಗೀ ರೈಸ್(ಪ್ರಶಾಂತ್/ತಾಜ್ ಮಹಲ್), ಅನ್ನದಾನ ಕಾರ್ಯಕ್ರಮಕ್ಕೆ ಬಳಕೆಯಾಗಲಿದೆ. ಈ ಬಗ್ಗೆ ಆಸಕ್ತ ಭಕ್ತಾಧಿಗಳು  ಉರೂಸ್ ಸಮಾರಂಭಕ್ಕೆ ಹಾಗೂ ಅನ್ನದಾನಕ್ಕೆ ಬೇಕಾಗುವ ಮೇಲಿನ ಸಾಮಾಗ್ರಿಗಳನ್ನು ನೀಡಿ ಸಹಕರಿಸುವಂತೆ ಈ ಮೂಲಕ ಕೋರುತ್ತಿದ್ದೇವೆ. ಉಳ್ಳಾಲ ದರ್ಗಾವು ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಖ್ಯಾತಿ ಹೊಂದಿದ್ದು, ಜಾತಿ ಮತ ಭೇದವಿಲ್ಲದೇ ದರ್ಗ ಸಂದರ್ಶಿಸಿರುತ್ತಾರೆ,  ಉರೂಸ್ ಸಮಾರಂಭಕ್ಕೆ ಎಲ್ಲಾ ಜಾತಿ ಧರ್ಮ ಪಂಗಡದವರು  ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕಾಗಿ ಈ ಮೂಲಕ ಕೋರುತ್ತಿದ್ದೇವೆ ಎಂದು ದರ್ಗಾ ಅಧ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ತಿಳಿಸಿದ್ದಾರೆ.

ಈ ಸಂದರ್ಭ ಉಪಾದ್ಯಕ್ಷರಾದ ಯು.ಕೆ. ಮೋನು ಇಸ್ಮಾಯೀಲ್, ಪ್ರ.ಕಾರ್ಯದರ್ಶಿ ಹಾಜಿ ತ್ವಾಹ ಮುಹಮ್ಮದ್, ಜೊತೆ ಕಾರ್ಯದರ್ಶಿ, ನೌಷಾದ್ ಆಲಿ, ಲೆಕ್ಕ ಪರಿಶೋಧಕ ಯು.ಟಿ ಇಲ್ಯಾಸ್, ಉರೂಸ್ ಪ್ರಚಾರ ಸಮಿತಿ ಕನ್ವೀನರ್ ಹಾಜಿ ಎ.ಕೆ ಮೊಹಿಯದ್ದೀನ್, ಆಸಿಫ್ ಅಬ್ದುಲ್ಲ, ಉರೂಸ್ ಮೇಲ್ವಿಚಾರಣಾ ಸಮಿತಿ ಸದಸ್ಯ ಫಾರೂಕ್ ಉಳ್ಳಾಲ್ ಉಪಸ್ಥಿತರಿದ್ದರು.