ಬೆಂಗಳೂರು 29  ಜನವರಿ ;   ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶಾಫಿ ಸಅದಿ, ಕರ್ನಾಟಕ ಹಜ್ ಕಮಿಟಿ ಅಧ್ಯಕ್ಷರಾದ ರೌಫುದ್ದೀನ್ ಕಚರಿವಾಲಾ, ಬೀದರ್

ಹಜ್ ಹಾಗೂ ವಕ್ಫ್ ಸದಸ್ಯರಾದ ಯಾಕೂಬ್, ಚಾಂದ್ ಪಾಷಾ ಹಾಗೂ ಮೊಯೀನ್ ರವರು ಬೆಂಗಳೂರಿನಲ್ಲಿರುವ ವಿಧಾನ ಪರಿಷತ್ ಶಾಸಕರೂ, ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ,ಕರ್ನಾಟಕ ಸರ್ಕಾರದ ಭರವಸೆ ಸಮಿತಿಯ ಅಧ್ಯಕ್ಷರೂ ಆದ ಬಿ.ಎಂ ಫಾರೂಕ್ ರವರ ಕಚೇರಿಗೆ ಭೇಟಿ ನೀಡಿ ಹಜ್ ಹಾಗೂ ವಕ್ಫಿನ ಬಗ್ಗೆ ಮಾತುಕತೆ ನಡೆಸಿದರು . ರಾಜ್ಯ ಮತ್ತು ಮುಸ್ಲಿಂ ಸಮುದಾಯದಲ್ಲಿನ ಕೆಲವು ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಅದೇ ರೀತಿ ಸಮುದಾಯದ ಅಭಿವದ್ಧಿ ಬಗ್ಗೆಯೂ ವಿಸ್ತೃತವಾಗಿ ವಿಚಾರ ವಿನಿಮಯ ಮಾಡಲಾಯಿತು