ವಿಶ್ವದ ದೀರ್ಘಾಯಸ್ಸನ್ನು ಹೊಂದಿರುವ ಸಮುದಾಯ..
ಹುಂಜಾ ಸಮುದಾಯದ ವಿಶೇಷತೆ ಎಂದರೆ ಅದರ ಮಹಿಳೆಯರು 80 ವರ್ಷದಲ್ಲೂ 30-40 ವರ್ಷದವರಂತೆ ಕಾಣುತ್ತಾರೆ. ಈ ಸಮುದಾಯವು ಉತ್ತರ ಪಾಕಿಸ್ತಾನದ ಕಾರಕೋರಂ ಬೆಟ್ಟಗಳಲ್ಲಿರುವ ಹುಂಜಾ ಕಣಿವೆ ಎಂದು ಕರೆಯಲ್ಪಡುವ ಸ್ಥಳದಲ್ಲಿ ವಾಸಿಸುತ್ತಿದೆ. ಈ ಸಮುದಾಯದ ಜನರು ಸರಾಸರಿ 120 ರಿಂದ 150 ವರ್ಷಗಳ ಕಾಲ ಬದುಕುತ್ತಾರೆ ಎಂದು ಇಂಡಿಯಾ ಟೈಮ್ಸ್ ತನ್ನ ವರದಿಯಲ್ಲಿ ಹೇಳಿದೆ. ಈ ಜನರಿಗೆ ಇಲ್ಲಿಯವರೆಗೆ ಕ್ಯಾನ್ಸರ್ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಹುಂಜಾ ಸಮುದಾಯದ ಜನರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸದೃಢರಾಗಿದ್ದಾರೆ. ಒಂದೆಡೆ, ಅವರ ಮಹಿಳೆಯರು ವಯಸ್ಸಾದಾಗಲೂ ಯೌವನದ ವಯಸ್ಸಿನಂತೆ ಕಾಣುತ್ತಾರೆ, ಅಚ್ಚರಿ ಏನೆಂದರೆ ಈ ಸಮುದಾಯದ ಪುರುಷರು 90 ವರ್ಷಗಳಲ್ಲಿ ತಂದೆಯಾಗಬಹುದು. ಅವರ ಜೀವನಶೈಲಿಯೇ ಅವರ ಸುದೀರ್ಘ ಜೀವನದ ರಹಸ್ಯ ಎನ್ನಲಾಗಿದೆ. ಈ ಜನರು ಬೆಳಿಗ್ಗೆ 5 ಗಂಟೆಗೆ ಎದ್ದೇಳುತ್ತಾರೆ. ಇವರು ಕಾಲ್ನಡಿಗೆಯಲ್ಲಿ ಸಾಕಷ್ಟು ಪ್ರಯಾಣಿಸುತ್ತಾರೆ.
ದಿನಕ್ಕೆ ಎರಡು ಬಾರಿ ಮಾತ್ರ ಆಹಾರವನ್ನು ಸೇವಿಸುತ್ತಾರೆ ಎಂದು ಹೇಳಲಾಗುತ್ತದೆ. ದಿನದ ಮೊದಲ ಊಟ 12 ಗಂಟೆಗೆ ಮತ್ತು ನಂತರ ರಾತ್ರಿಯಲ್ಲಿ ಆಹಾರವನ್ನು ಸೇವಿಸುತ್ತಾರೆ.
ಇವರ ಆಹಾರವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಇದರಲ್ಲಿ ಯಾವುದೇ ರಾಸಾಯನಿಕಗಳನ್ನು ಬೆರೆಸಿರುವುದಿಲ್ಲ. ಹಾಲು, ಹಣ್ಣುಗಳು, ಬೆಣ್ಣೆ, ಎಲ್ಲಾ ವಸ್ತುಗಳು ಶುದ್ಧವಾಗಿವೆ. ತೋಟದಲ್ಲಿ ಕೀಟನಾಶಕಗಳನ್ನು ಸಿಂಪಡಿಸುವುದನ್ನು ಈ ಸಮುದಾಯದಲ್ಲಿ ನಿಷೇಧಿಸಲಾಗಿದೆ. ಅವರು ವಿಶೇಷವಾಗಿ ಬಾರ್ಲಿ, ರಾಗಿ, ಹುರುಳಿ ಮತ್ತು ಗೋಧಿ ತಿನ್ನುತ್ತಾರೆ. ಇವುಗಳಲ್ಲದೆ ಆಲೂಗಡ್ಡೆ, ಬಟಾಣಿ, ಕ್ಯಾರೆಟ್, ಟರ್ನಿಪ್, ಹಾಲು ಹೀಗೆ ಸಾಕಷ್ಟು ಪದಾರ್ಥಗಳನ್ನೂ ತಿನ್ನುತ್ತಾರೆ.
ಈ ಸಮುದಾಯವು ಮಾಂಸವನ್ನು ಕಡಿಮೆ ತಿನ್ನುತ್ತದೆ. ಮಾಂಸವನ್ನು ವಿಶೇಷ ಸಂದರ್ಭದಲ್ಲಿ ಮಾತ್ರ ಬೇಯಿಸಲಾಗುತ್ತದೆ, ಆದರೆ ಅದರಲ್ಲಿ ತುಂಡುಗಳು ತುಂಬಾ ಚಿಕ್ಕದಾಗಿ ಕತ್ತರಿಸಿ ತಿನ್ನುತ್ತಾರೆ. ಈ ರೀತಿಯ ಜೀವನಶೈಲಿಯಿಂದ, ಇವರು ಎಂದಿಗೂ ಕ್ಯಾನ್ಸರ್ನಂತಹ ಕಾಯಿಲೆಗೆ ಒಳಗಾಗುವುದಿಲ್ಲ.
* ಅಲೆಕ್ಸಾಂಡರ್ ದಿ ಗ್ರೇಟ್ ಸೈನ್ಯದ ವಂಶಸ್ಥರು
ಈ ಸಮುದಾಯದ ಜನರನ್ನು ಬುರುಶೋ ಎಂದೂ ಕರೆಯುತ್ತಾರೆ. ಅವರ ಭಾಷೆ ಬುರುಶಾಸ್ಕಿ. ಈ ಸಮುದಾಯಗಳು ಅಲೆಕ್ಸಾಂಡರ್ ದಿ ಗ್ರೇಟ್ ಸೈನ್ಯದ ವಂಶಸ್ಥರು ಎಂದು ಹೇಳಲಾಗುತ್ತದೆ. 4ನೇ ಶತಮಾನದಲ್ಲಿ ಇಲ್ಲಿಗೆ ಬಂದವರು. ಈ ಸಮುದಾಯ ಸಂಪೂರ್ಣ ಮುಸ್ಲಿಂ ಧರ್ಮಿಯಾಗಿದೆ. ಎಲ್ಲಾ ಚಟುವಟಿಕೆಗಳು ಮುಸ್ಲಿಮರಂತೆಯೇ ಇರುತ್ತವೆ.
ವಿಶೇಷ ಏನೆಂದರೆ ಈ ಸಮುದಾಯವು ಪಾಕಿಸ್ತಾನದ ಉಳಿದ ಸಮುದಾಯಗಳಿಗಿಂತ ಹೆಚ್ಚು ವಿದ್ಯಾವಂತರು.
ಹುಂಜಾ ಕಣಿವೆಯಲ್ಲಿ ಅವರ ಜನಸಂಖ್ಯೆ ಕೇವಲ 87 ಸಾವಿರ ಮಾತ್ರವಿದೆ. ಹುಂಜಾ ಕಣಿವೆ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣವಾಗಿದೆ. ಹುಂಜಾ ಕಣಿವೆಯು ಪಾಕಿಸ್ತಾನದ ಅತ್ಯಂತ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಪರ್ವತಗಳಲ್ಲಿ ಅಡಗಿರುವ ಸೌಂದರ್ಯವನ್ನು ನೋಡಲು ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಬರುತ್ತಾರೆ…
#BalajiMkambale