ಉಪ್ಪಿನಂಗಡಿ:* ಉಪ್ಪಿನಂಗಡಿಯ ಹಳೇ ಗೇಟು ಎಂಬಲ್ಲಿ ಹಸಿ ಮೀನು ಸ್ಟಾಲ್ ನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ನಡೆದ ತಲ್ವಾರು ದಾಳಿಗೆ ಸಂಬಂಧಿಸಿದಂತೆ ಪಿಎಫ್ ಐ ನಾಯಕರ ಅಕ್ರಮ ಬಂಧನವನ್ನು ಖಂಡಿಸಿ ನಡೆಯುತಿದ್ದ ಪ್ರತಿಭಟನೆ ಹಠಾತ್ ಆಗಿ ಹಿಂಸೆಯರೂಪ ತಾಳಿದ್ದು ಪೊಲೀಸರ ಲಾಠೀ ಚಾರ್ಜ್’ಗೆ ೧೦ಕ್ಕೂ ಅಧಿಕ ಕಾರ್ಯಕರ್ತರು ಗಾಯಗೊಂಡಿದ್ದಾರೆ.
ಉಪ್ಪಿನಂಗಡಿಯ ಹಸಿ ಮೀನು ಸ್ಟಾಲ್ ನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲೆ ನಡೆದ ತಲ್ವಾರು ದಾಳಿಗೆ ಸಂಬಂಧಿಸಿದಂತೆ ಡಿ 14 ರಂದು ಬೆಳಿಗ್ಗೆ ಮೂವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿಸಿದ ಘಟನೆಗೆ ಸಂಬಂಧಿಸಿದಂತೆ ಠಾಣೆ ಮುಂಭಾಗ ಇಂದು ಬೆಳಗ್ಗಿನಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಸಂಜೆಯವರೆಗೆ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಸಂಜೆಯ ಬಳಿಗೆ ಪೋಲೀಸರಿಂದ ಹಠಾತ್ ಲಾಟಿ ಚಾರ್ಜ್ ನಡೆದಿದ್ದು ಹತ್ತಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಮಗ್ರಿಬ್ ನಮಾಝಿಗೆ ನೇತೃತ್ವ ನೀಡಿದ ಅಸೈದ್ ಅಲ್ ಹಾದಿ ಆತೂರ್ ತಂಙಳ್ ರವರು ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಸಂಜೆಯ ಬಳಿಕ ವಶಕ್ಕೆ ಪಡೆದುಕೊಂಡವರನ್ನು ಬಿಡುಗಡೆಗೊಳಿಸುತ್ತೇವೆ ಎಂದು ಪೊಲೀಸರು ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದರು. ರಾತ್ರಿ ವೇಳೆ ಇನ್ನೂ ಇಬ್ಬರು ಆರೋಪಿಗಳನ್ನು ಬಿಡುಗಡೆಗೊಳಿಸಲು ಆಗ್ರಹಿಸಿ ಜನ ಜಮಾಯಿಸಿದರು. ಈ ವೇಳೆ, ಪೊಲೀಸರು ಜನರನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಿದರು. ಮಂಗಳವಾರ ರಾತ್ರಿಯಿಂದ ಈ ಪ್ರದೇಶದಲ್ಲಿ ಸೆಕ್ಷನ್ 144ರಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪೋಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪಿಎಫ್‌ಐನ ಉಪ್ಪಿನಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷ ಅಬ್ದುಲ, ಎಸ್‌ಡಿಪಿಐ ನೆಕ್ಕಿಲಾಡಿ ಗ್ರಾಮ ಸಮಿತಿ ಅಧ್ಯಕ್ಷ ಝಕಾರಿಯಾ ಕೊಡಿಪ್ಪಾಡಿ ಹಾಗೂ ಉಪ್ಪಿನಂಗಡಿ ಬ್ಲಾಕ್ ಸಮಿತಿ ಅಧ್ಯಕ್ಷ ಮುಸ್ತಾಫ ಲತೀಫಿ ಅವರನ್ನು ತಲವಾರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಪಿಎಫ್‌ಐ ಮುಖಂಡರೊಂದಿಗೆ ಮಾತುಕತೆ ನಡೆಸಿದ ಬಳಿಕ ಪೊಲೀಸರು ವಶಕ್ಕೆ ಪಡೆದಿದ್ದ ಅಬ್ದುಲ್ ಹಮೀದ್ ಮೆಜೆಸ್ಟಿಕ್ ಅವರನ್ನು ಮಾತ್ರ ಬಿಡುಗೊಡೆಗೊಳಿಸಿದ್ದರು.
********************
ದ.ಕ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಮಾಯಕರ ಮೇಲಿನ ಹಲ್ಲೆ ಮತ್ತು ಹಿಂಸಾಚಾರ ನೋಡಿದರೆ, ಸಂಘ ಪರಿವಾರಕ್ಕೆ ಮತ್ತು ಪೋಲೀಸರಿಗೆ ಒಂದೇ ಅಜೆಂಡಾ ಇದೆಯೇ ಎಂದೆನಿಸುತ್ತಿದೆ.
ನಿನ್ನೆ ರಾತ್ರಿ ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ನಿರತರ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಮೇಲೆ ನಡೆದಿರುವ ಹಿಂಸಾಚಾರ ಕ್ರೌರ್ಯದ ವಿರುದ್ಧ ಇಂದು 15-12-2021 #ಪ್ಯಾಪ್ಯುಲರ್_ಫ್ರಂಟ್_ಆಫ್_ಇಂಡಿಯಾ #ಗುಂಡ್ಲುಪೇಟೆ ವತಿಯಿಂದ ಪ್ರತಿಭಟಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಗುಂಡ್ಲುಪೇಟೆಯ ತಾಲೂಕ ಅಧ್ಯಕ್ಷರು ಇಮ್ರಾನ್ ಖಾನ್ ಮಾತನಾಡಿ ಸುಳ್ಳು ಕೇಸಿನಲ್ಲಿ ಅಮಾಯಕರನ್ನು ಸಿಲುಕಿಸುವ ಪೊಲೀಸರ ಕ್ರಮ ಖಂಡನಾರ್ಹ ಅಮಾಯಕರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆಗೊಳಿಸಬೇಕು. ಅಮಾನವೀಯವಾಗಿ ಲಾಠಿ ಚಾರ್ಜ್ ನಡೆಸಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತುಪಡಿಸಬೇಕೆಂದು ಆಗ್ರಹಿಸಿದರು.ದ.ಕ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಮಾಯಕರ ಮೇಲಿನ ಹಲ್ಲೆ ಮತ್ತು ಹಿಂಸಾಚಾರ ನೋಡಿದರೆ, ಸಂಘ ಪರಿವಾರಕ್ಕೆ ಮತ್ತು ಪೋಲೀಸರಿಗೆ ಒಂದೇ ಅಜೆಂಡಾ ಇದೆಯೇ ಎಂದೆನಿಸುತ್ತಿದೆ.
ನಿನ್ನೆ ರಾತ್ರಿ ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ನಿರತರ ಪ್ಯಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಮೇಲೆ ನಡೆದಿರುವ ಹಿಂಸಾಚಾರ ಕ್ರೌರ್ಯದ ವಿರುದ್ಧ ಇಂದು 15-12-2021 #ಪ್ಯಾಪ್ಯುಲರ್_ಫ್ರಂಟ್_ಆಫ್_ಇಂಡಿಯಾ #ಗುಂಡ್ಲುಪೇಟೆ ವತಿಯಿಂದ ಪ್ರತಿಭಟಿಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಗುಂಡ್ಲುಪೇಟೆಯ ತಾಲೂಕ ಅಧ್ಯಕ್ಷರು ಇಮ್ರಾನ್ ಖಾನ್ ಮಾತನಾಡಿ ಸುಳ್ಳು ಕೇಸಿನಲ್ಲಿ ಅಮಾಯಕರನ್ನು ಸಿಲುಕಿಸುವ ಪೊಲೀಸರ ಕ್ರಮ ಖಂಡನಾರ್ಹ ಅಮಾಯಕರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆಗೊಳಿಸಬೇಕು. ಅಮಾನವೀಯವಾಗಿ ಲಾಠಿ ಚಾರ್ಜ್ ನಡೆಸಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತುಪಡಿಸಬೇಕೆಂದು ಆಗ್ರಹಿಸಿದರು.
*ಪ್ರತಿಭಟನಾ ನಿರತ ಪಿ.ಎಫ್.ಐ ಕಾರ್ಯಕರ್ತರ ಮೇಲೆ ಲಾಠಿ ಜಾರ್ಜ್ ಖಂಡನೀಯ – ಜಮಾಅತೆ ಇಸ್ಲಾಮಿ ಹಿಂದ್ ದಕ್ಷಿಣ ಕನ್ನಡ*
ಉಪ್ಪಿನಂಗಡಿ : ಉಪ್ಪಿನಂಗಡಿಯಲ್ಲಿ ಪ್ರತಿಭಟನಾ ನಿರತ ಪಿಎಫ್.ಐ ಸದಸ್ಯರು ಮತ್ತು ಕಾರ್ಯಕರ್ತರ
ಮೇಲೆ ಪೋಲೀಸರು ಲಾಟಿ ಬೀಸಿದ್ದು ನಿಜಕ್ಕೂ ಖಂಡನೀಯವಾಗಿದೆ. ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸುವುದು, ಬಿಡುಗಡೆ ಮಾಡುವುದು ಇಂತಹ ಘಟನೆಗಳು ನಡೆದರೆ ಜನರು ಉದ್ರಿಕ್ತಗೊಳ್ಳುತ್ತಾರೆ. ಪ್ರತಿಭಟನಾಕಾರರ ಜೊತೆ ಸಂಧಾನ ಮತ್ತು ಮಾತುಕತೆಯ ಮೂಲಕ ಶಾಂತಿ ಕದಡದಂತೆ ನೋಡಿಕೊಳ್ಳಬೇಕಾದ ಪೊಲೀಸರೇ ಶಾಂತಿ ಕಾಪಾಡುವ ಬದಲಿಗೆ ಹಿಂಸೆಯ ದಾರಿಯನ್ನು ತುಳಿಯುವುದು ಇನ್ನಷ್ಟು ಅರಾಜಕತೆಗೆ ಕಾರಣವಾಗುತ್ತದೆ. ಈ ಬಗ್ಗೆ ಉನ್ನತ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.
ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿ ಪುತ್ತೂರು ಉಪ್ಪಿನಂಗಡಿ ಪರಿಸರದಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಯುತ್ತಿದ್ದು, ಆ ಮೂಲಕ ಅಶಾಂತಿಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಆತಂಕಕಾರಿ ಮಾತ್ರವಲ್ಲದೆ ಇಂತಹ ಬೆಳವಣಿಗೆ ಖಂಡನೀಯವಾಗಿದೆ. ಪೊಲೀಸರು ಈ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ಎಲ್ಲಾ ನಾಗರಿಕ ಬಂಧುಗಳು ನಾಯಕರು, ವಿದ್ವಾಂಸರ ಇಂತಹ ಸಂದರ್ಭಗಳಲ್ಲಿ ಸರಿಯಾದ ಮಾರ್ಗದರ್ಶನ ಮಾಡಲು ಮುಂದೆ ಬರಬೇಕು. ದೌರ್ಜನ್ಯ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳದಂತೆ ಪ್ರಜ್ಞಾಪೂರ್ವಕವಾಗಿ ನೋಡಿಕೊಳ್ಳಬೇಕು.
ಹಾಗೆಯೇ ಯಾವುದೇ ಸಂದರ್ಭದಲ್ಲಿ ಸತ್ಯ, ನ್ಯಾಯ ಮತ್ತು ಕಾನೂನನ್ನು ಕಾಪಾಡಲು ಮತ್ತು ಶಾಂತಿಯ ವಾತಾವರಣ ರೂಪಿಸಲು ಪ್ರಯತ್ನ ಪಡಬೇಕು. ಕೋಮು ಸಂಘರ್ಷ, ಕೋಮು ಧ್ರುವೀಕರಣಗೊಳ್ಳದಂತೆ ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ವ ಬಂಧುಗಳು ಒಂದಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ.
_ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆ ಗಳ ಬಗ್ಗೆ ಮಂಗಳೂರು ಸೆಂಟ್ರಲ್ ಕಮಿಟಿ ತೀವ್ರ ಕಳವಳ_*
🔹🔹🔹🔹🔹🔹
*_ಕಳೆದ ಕೆಲವು ತಿಂಗಳಿಂದ ಜಿಲ್ಲೆಯಲ್ಲಿ_ ಅಲ್ಪಸಂಖ್ಯಾತರನ್ನೇ _ಗುರಿಯಾಗಿಟ್ಟು ಕೊಂಡು ನಡೆಯುತ್ತಿರುವ. ಘಟನೆ ಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಂಗಳೂರು ಸೆಂಟ್ರಲ್ ಕಮಿಟಿ_* …
*_ಇದರ ಬಗ್ಗೆ ಚರ್ಚಿಸಲು ಇಂದು ದಿನಾಂಕ 15-12-2021ನೇ ಬುಧವಾರ ಬೆಳಿಗ್ಗೆ 11.30ಕ್ಕೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ(The Muslim central committee) ಪದಾಧಿಕಾರಿಗಳ ಸಭೆಯು ಸಂಸ್ಥೆಯ ಕಚೇರಿ ಯಲ್ಲಿ ಅಧ್ಯಕ್ಷರಾದ ಅಲ್ ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ರವರ ಅಧ್ಯಕ್ಷತೆಯಲ್ಲಿ ಜರಗಿತು_* .
*_ಈ ಸಭೆಯಲ್ಲಿ ಪದಾಧಿಕಾರಿಗಳ ಸಲಹೆಯಂತೆ ಕರ್ನಾಟಕ ರಾಜ್ಯ ಮುಖ್ಯ ಮಂತ್ರಿಯಾದ ಶ್ರೀ ಎಸ್.ಆರ್. ಬೊಮ್ಮಾಯಿ, ಮುಖ್ಯ ಕಾರ್ಯದರ್ಶಿ, ಗೃಹ ಇಲಾಖಾ ಕಾರ್ಯದರ್ಶಿಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಲವು ಕೋಮುವಾದಿ ಸಂಘಟನೆಗಳು ಕಾನೂನುನನ್ನು ಕೈಗೆತ್ತಿಕೊಂಡು ಅಮಾಯಕ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಮೇಲೆ ದಾಳಿ ನಡೆಸುವುದು ಹಾಗೂ ಉದ್ರೇಕಕಾರಿ ಭಾಷಣ ಮಾಡಿ ಜಿಲ್ಲೆಯಲ್ಲಿ ಕೋಮು ಗಲಭೆಗೆ ಪ್ರಚೋದನೆ ನೀಡುವುದನ್ನು ತಕ್ಷಣದಿಂದ ನಿಲ್ಲಿಸುವಂತೆ ಹಾಗೂ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲು ನಿರ್ಧರಿಸಲಾಯಿತು._*
*_ಅಲ್ಲದೆ ಸಂವಿಧಾನ ಬದ್ಧವಾಗಿ ಎಲ್ಲಾ ಧರ್ಮಗಳಿಗೆ ನೀಡಲಾದ ಧಾರ್ಮಿಕ ಸ್ವಾತಂತ್ರ್ಯಕ್ಕೆ ದಕ್ಕೆ ತಾರದಂತೆ ಎಲ್ಲಾ ಸಮುದಾಯದವರು ಸಹಕರಿಸುವಂತೆ ಮನವಿ ಮಾಡಲು ನಿರ್ಧರಿಸಲಾಯಿತು_ .*_
*_ಈ ಸಭೆಯಲ್ಲಿ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಇಮ್ತಿಯಾಝ್ ಅಹ್ಮದ್ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಹಾಜಿ ಮೊಹಮ್ಮದ್ ಹನೀಫ್, ಕಾರ್ಯದರ್ಶಿಗಳಾದ ಅಬ್ದುಲ್ ಮಜೀದ್ ಸಿತಾರ್, U. B.ಸಲಿಂ, ಆಝಾದ್ ನಗರ – ಮಾಸ್ತಿ ಕಟ್ಟೆ. ಉಳ್ಳಾಲ್ ಡಾ.ಮೊಹಮ್ಮದ್ ಆರೀಫ್ ಮಸೂದ್, ಅಹ್ಮದ್ ಬಾವ ಪಡೀಲ್, ಎನ್.ಕೆ. ಅಬೂಬಕ್ಕರ್, ಸಿ.ಎಂ. ಮುಸ್ತಫ, ಎಂ.ಎ. ಅಶ್ರಫ್, ಅಬೀದ್ ಜಲಿಹಾಲ್, ಡಿ.ಎಂ. ಅಸ್ಲಂ, ಹಾಜಿ ಮೊಹಮ್ಮದ್ ಬಪ್ಪಳಿಗೆ, ಸಿ.ಎಂ.ಹನೀಫ್, ಮೊಯಿದಿನ್ ಮೊಣು, ಖಲೀಲ್ ಅಹ್ಮದ್ ಉಡುಪಿ, ಅಬ್ದುಲ್ ಖಾದರ್ ವಿಟ್ಲ, ನೂರುದ್ಧೀನ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು_
ಯು ಟಿ ಕಾದರ್
ದಯವಿಟ್ಟು ನೆಮ್ಮದಿಯಿಂದ ಜನರನ್ನು ಬದುಕಲು ಬಿಡಿ.!*
*ಮುಖ್ಯಮಂತ್ರಿಯ ಆಕ್ಷನ್-ರಿಯಾಕ್ಷನ್ ಹೇಳಿಕೆಯನ್ನು ಸದನದಲ್ಲಿ ತೀಕ್ಷ್ಣವಾಗಿ ಖಂಡಿಸಿದ ಯು.ಟಿ.ಖಾದರ್*
*ಸಮಾಜದಲ್ಲಿ ತ್ರಿಶೂಲ ದೀಕ್ಷೆಯ ನಂತರ ಹಲ್ಲೆ ಕೃತ್ಯಗಳು ಹೆಚ್ಚಾಗಿದೆ ಎಂಬ ಆರೋಪ ಇದೆ, ಈ ಬಗ್ಗೆ ಸೂಕ್ತ ತನಿಖೆ ನಡೆಯಲಿ.!!*
ಇವತ್ತು ಜಿಲ್ಲೆಯಲ್ಲಿ ಅನೈತಿಕ ಗೂಂಡಾಗಿರಿ ಹೆಚ್ಚುತ್ತಿದೆ, ಪರಸ್ಪರ ದ್ವೇಷದ, ಪ್ರಚೋದನಕಾರಿ ಭಾಷಣಗಳು ಹೆಚ್ಚಾಗುತ್ತಿದೆ.
ಪೋಲಿಸ್ ಇಲಾಖೆಗೆ ಒತ್ತಡ ಹೇರದೆ, ಯಾವುದೇ ತಾರತಮ್ಯ ಮಾಡದೇ ಮುಕ್ತವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಲು ಅವಕಾಶ ಕೊಡಿ ಎಂದು ಸರಕಾರವನ್ನು ಯು.ಟಿ.ಖಾದರ್ ಅವರು ಆಗ್ರಹಿಸಿದರು.
high
ಉಪ್ಪಿನಂಗಡಿಯಲ್ಲಿ ಪೋಲೀಸರಿಂದ ಅಮಾಯಕ ಯುವಕರಿಗೆ ಮಾರಣಾಂತಿಕ ಹಲ್ಲೆ,ಮುಸ್ಲಿಂ ಒಕ್ಕೂಟ ಉಳ್ಳಾಲ ಖಂಡನೆ.
ಪ್ರಾರ್ಥನೆಗೆ ಮನವಿ.
ಉಪ್ಪಿನಂಗಡಿಯ ಪಿ.ಎಫ್.ಐ. ನಾಯಕರ ಅಕ್ರಮ ಬಂಧನವನ್ನು ಪ್ರಶ್ನಿಸಿ ಇಂದು ಬೆಳಗ್ಗಿನಿಂದ ರಾತ್ರಿಯ ವರೆಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಪೋಲೀಸರು ಏನೂ ಮುನ್ಸೂಚನೆ ನೀಡದೆ ಲಘು ಲಾಟಿ ಪ್ರಹಾರ ಮಾಡಿದ್ದು ಅಲ್ಲದೆ ನ್ಯಾಯ ಕೇಳಲು ಹೋದ ಅಮಾಯಕ ಯುವಕರಿಗೆ ಮನ ಬಂದಂತೆ ಹೋಡಿದು ಹಲ್ಲೆ ಮಾಡಿದ್ದಾರೆ. ನಮಾಝ್ ಗೆ ನೇತೃತ್ವ ನೀಡಿದ ಆತೂರ್ ತಂಙಳ್ ರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಪೋಲೀಸರು ಅಮಾಯಕರ ಮೇಲೆ ನಡೆಸಿದ ಈ ಕ್ರೌರ್ಯಕ್ಕೆ ಮುಸ್ಲಿಂ ಒಕ್ಕೂಟ ಉಳ್ಳಾಲ ಕಟು ಶಬ್ದಗಳಿಂದ ಖಂಡಿಸುತ್ತದೆ.
ಪ್ರತಿಭಟನೆಯಲ್ಲಿ ಗಾಯಗೊಂಡ ಎಲ್ಲಾ ಸಹೋದರರಿಗೂ ಎಲ್ಲರೂ ದುಆ ಮಾಡಿ.
ಪ್ರತ್ಯೇಕವಾಗಿ ಆತೂರ್ ತಂಙಳ್ ರವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯತ್ತಿದ್ದು ಬಹು ಬೇಗ ಗುಣ ಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸ ಬೇಕಾಗಿ ಕಳ ಕಳಿಯ ಮನವಿ.
– ಇಸ್ಮಾಯಿಲ್ ಉಳ್ಳಾಲ್
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಸ್ಲಿಂ ಒಕ್ಕೂಟ ಉಳ್ಳಾಲ.
Nvidi
*ಪೊಲೀಸ್ ಅಧಿಕಾರಿ ನಾಗರಾಜ್ ವರ್ತನೆ ನೋಡಿ ದಂಗಾದೆ*
ನಿನ್ನೆ ಬೆಳಿಗ್ಗೆಯಿಂದಲೇ ಜನ ಎಲ್ಲಾ ಉಪ್ಪಿನಂಗಡಿ ಠಾಣೆ ಎದುರು ಸೇರುತ್ತಿದ್ದರು. ಘೋಷಣೆ ಕೂಗುತ್ತಿದ್ದರು. ಆರಂಭದಿಂದಲೂ ಶಿಸ್ತು ಎದ್ದು ಕಾಣುತ್ತಿತ್ತು. ಆಕ್ರೋಶ ಭರಿತರಾಗಿ ಘೋಷಣೆ ಕೂಗುತ್ತಿದ್ದರೂ ಕೈ ಎತ್ತುವುದು ಧ್ವನಿ ಮೊಳಗಿಸುವುದು ಎಲ್ಲದಕ್ಕೂ ಒಂದು ಅಚ್ಚುಕಟ್ಟು ಇತ್ತು. ನಾನು ದೈನಂದಿನವಾಗಿ ಮನೆಯಿಂದ ಪೇಟೆಗೆ ಬಂದರೆ, ಶೆಟ್ರ ಹೋಟೆಲಲ್ಲಿ ಚಾ ಕುಡಿದು ಪೇಪರ್ ಓದಿ ಹೋಗುವುದು, ಆದರೆ ನಿನ್ನೆ ಈ ಮುಸ್ಲಿಂ ಯುವಕರ ಪ್ರತಿಭಟನೆ ಶೈಲಿ ನೋಡಿ ನಿಂತು ಬಿಟ್ಟೆ. ಹೀಗೂ ಪ್ರತಿಭಟನೆ ಆಗುತ್ತದಾ ಎಂದು ಆಲೋಚಿಸಿದೆ. ಆ ಮೇಲೆ ಸ್ವಲ್ಪ ಹೊತ್ತಲ್ಲಿ ಅಲ್ಲಿಂದ ಹೊರಡಿದೆ. ನಿನ್ನೆ ಮನೆಯಲ್ಲೇ ಇದ್ದವನು ಸಂಜೆ ಹೊತ್ತು ಪೇಟೆಗೆ ಬರುತ್ತೇನೆ ಆ ಹುಡುಗರು ಅಲ್ಲೇ ಇದ್ದಾರೆ. ನಾನು ಮಧ್ಯಾಹ್ನ ಮುಗಿಸಿಕೊಂಡು ಹೋಗಿರಬಹುದೆಂದು ಅಂದು ಕೊಂಡಿದ್ದರೆ ಇದೂ ಇನ್ನೂ ನಡೆಯುತ್ತಿದೆಯಾ? ಯಾಕೆ ಹೀಗೆ ಎಂದು ನನಗೆ ಆಯಿತು. ಮತ್ತೆ ನಾನು ಹೋಗಿ ಸ್ವಲ್ಪ ಹೊತ್ತಲ್ಲಿ ಮಗ ಮನೆಗೆ ಬಂದಾಗ ಹೇಳಿದ “ಉಪ್ಪಿನಂಗಡಿಡ್ ಗಲಾಟೆ ಆಪುಂಡು ಇತ್ತ” ಎಂದು, ನನಗೆ ಏನೋ ಕಸಿವಿಸಿ ಆ ಯುವಕರ ಶಿಸ್ತು ಎಲ್ಲಾ ನೋಡಿ. ನನ್ನ ಮಗ ಹೇಳಿದರೆ ಅದು ಆಗಿರಬಹುದು ಎಂದೇ ಆಯಿತು. ಅವನು ಬಿಜೆಪಿ, ಸಂಘ ಅಂತೆಲ್ಲ ಹೋಗುತ್ತಾ ಇರುತ್ತಾನೆ, ಹಾಗಾಗಿ ನಾನು ಉಬರ್ ವಕೀಲರಿಗೆ ಕರೆ ಮಾಡಿದಾಗ ವಿಷಯ ಸ್ವಲ್ಪ ಜೋರಾಗಿಯೇ ಇದೆ ಎಂದು ಹೇಳಿದಾಗ ನಾನು ಹೋರಟು ಸೀದ ಉಪ್ಪಿನಂಗಡಿ ಮಸೀದಿ ಹತ್ತಿರ ಬಂದೆ. ನನ್ನ ಮನೆ ಅಲ್ಲೇ ಪಕ್ಕದಲ್ಲಿ ದೇವಸ್ಥಾನ ಹತ್ತಿರ. ನಾನು ಬಂದು ನೋಡ್ತೇನೆ ಯುವಕರು ಶಾಂತವಾಗಿ ಇದ್ದಾರೆ, ಅವರ ನಾಯಕರು ಎಲ್ಲವನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ ಅಲ್ಲಿಗೆ ನಮ್ಮ ನಾಗರಾಜ್ ಸರ್ಕಲ್ ಬಂದು ನಿಂತರು. ಬಂದದ್ದೇ ಏನೆಲ್ಲಾ ಮಾತಾಡಲಿಕ್ಕೆ ಆರಂಭಿಸಿದರು. ನಾನು ಮತ್ತು ಕೃಷ್ಣಣ್ಣ ಎಲ್ಲವನ್ನೂ ನೋಡ್ತನೇ ಇದ್ದೇವೆ. ತುಂಬಾನೇ ದರ್ಪ, ಬರೀ ಉದ್ರೇಕಗೊಳಗಾಗುತ್ತಿದ್ದಾರೆ ನಾಗರಾಜ್ ಅವರು. ಕೊನೆಗೆ ಹೇಳಿದರು ನಮ್ಮಲ್ಲಿ Ak47 ಇದೆ, ಲಾಠಿ ಇದೆ ನಾನು 365 ದಿನ ಇದೆಲ್ಲಾ ಮಾಡಲಿಕ್ಕೆ ಇರುವುದು ಯಾವುದರಲ್ಲೂ ನನಗೆ ಹಿಂಜರಿಕೆ ಇಲ್ಲ ಎಂದೆಲ್ಲಾ ಹೀಗೆ ಏನೆಲ್ಲಾ ಹೇಳುತ್ತಿದ್ದರು. ಇದು ಇಂದಿರಾರ ಕಾಲದಲ್ಲಿ ಎಮರ್ಜೆನ್ಸಿ ಆದಾಗ ಈ ರೀತಿ ನಾನು ಮಂಗಳೂರು ನಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮಾತಾಡುವುದು ನೋಡಿದ್ದೆ ಆದರೆ ಈ ನಾಗರಾಜ್ ವರ್ತನೆ ಅದಕ್ಕಿಂತಲೂ ಮೇಲೆ ಹೋಗಿತ್ತು.ನಾಗರಾಜ್ ಮಾತಾಡುತ್ತಲೇ ಯುವಕರನ್ನು ರೊಚಿಗೆಬ್ಬಿಸಲು ಪ್ರಯತ್ನಿಸಿದರೂ, ಅವರ ಘೋಷಣೆಯಷ್ಟೇ ಜೋರಾಯಿತು. ಎದೂರಿನಲ್ಲಿ ಒಬ್ಬ ಪಳ್ಳಿಯ ಗುರು ನಿಂತಿದ್ದರು ಅವರು ಶಾಂತವಾಗಿಯೇ ಘೋಷಣೆ ಕೂಗುತ್ತಿದ್ದರು. ಈ ಸರ್ಕಲ್ ನಾಗರಾಜ್ ಪ್ರಚೋದಿಸಿ ಪರಿಸ್ಥಿತಿ ಕೈ ಮೀರುವ ಹಾಗೆ ಮಾಡಿ ಲಾಟಿ ಚಾರ್ಜ್ ಮಾಡಲು ಅವಕಾಶ ಮಾಡಿಯೇ ಬಿಟ್ಟರು. ಆ ಯುವಕರಿಗೆ ಅಷ್ಟು ಕ್ರೂರವಾಗಿ ಹೊಡೆದರೂ ಅವರು ಹಿಂಜರಿಯಲೇ ಇಲ್ಲ. ಆ ಧರ್ಮ ಗುರು ಗಳ ತಲೆ ಹೊಡೆದು ರಕ್ತ ಹರಿಯಲಾರಾಂಭಿಸಿತು. ಪಕ್ಕದಲ್ಲಿ ಸುಮ್ಮಗೆ ಇದ್ದ ಮಹಿಳೆಯರಿಗೂ ಯಾವುದೇ ಕನಿಕರ ತೋರದೆ ಇದೇ ನಾಗರಾಜ್ ಹಲ್ಲೆ ನಡೆಸಲು ಅವಕಾಶ ನೀಡಿದರು. ಇಡೀ ವಾತಾವರಣವೇ ಪ್ರಕ್ಷುಬ್ದಗೊಂಡಿತು. ಅದಕ್ಕಿಂತ ಸ್ವಲ್ಪ ಹೊತ್ತು ಮುಂಚೆ ಹಿಂಬದಿ ದೇವಸ್ಥಾನದ ಸರಸ್ವತರ ಪಲ್ಲಕಿ ಈ ಪ್ರತಿಭಟನೆಗಾರರ ನಡುವಲ್ಲೇ ಯಾವುದೇ ತೊಂದರೆ ಇಲ್ಲದೆ ಸಾಗಿತ್ತು. ಅದು ಸಾಗಲು ಅವರೇ ಚೈನ್ ಮಾಡಿ ಅವಕಾಶ ಮಾಡಿ ಕೊಡುವುದು ನಾನು ನೋಡಿದ್ದೆ. ಅವರು ಅಶಾಂತಿ ಉಂಟು ಮಾಡುವವರಾಗಿದ್ದರೆ ಆಗಲೇ ಆಗ ಬಹುದಿತ್ತು. ನಾನು ಆಗಲೇ ಆಲೋಚಿಸಿದೆ ಒಂದು ವೇಳೆ ಈ ಮುಸ್ಲಿಮ್ ಯುವಕರು ಇರುವ ಜಾಗದಲ್ಲಿ ನಮ್ಮ ಯುವಕರು ಇದ್ದರೆ ಒಂದು ಮುಸ್ಲಿಂರ ಮೆರವಣಿಗೆ ಸಾಗುತ್ತಿದ್ದರೆ ಏನಾಗುತ್ತಿತ್ತು ಎಂದು. ಹೀಗೆ ನಾಗರಾಜ್ ಅವರಿಗೆ ತುಂಬಾನೇ ಚೆನ್ನಾಗಿ ಎಲ್ಲವನ್ನು ನಡೆಸ ಬಹುದಿತ್ತು. ಆದರೆ ಅವರ ವರ್ತನೆ ನೋಡಿ ನಾನು ದಂಗಾಗಿ ನಿಂತು ಬಿಟ್ಟು. ಒಂದು ವರ್ಗದ ಮೇಲೆ ಹೀಗೇಯೂ ಆಗ ಬಹುದೇ ಎಂದು. ಆಗಲೇ ನನಗೆ ಗೊತ್ತು ಇವರೆಲ್ಲ ಕೆಎಫ್ಡಿ ಹುಡುಗರೆಂದು, ಕೂಡಲೇ ಅಲ್ಲಿ ನಿಲ್ಲಲಾಗದೆ ಆ ಜಾಗದಿಂದ ಮನೆಗೆ ಬಂದು ಕೂತು ಬಿಟ್ಟೆ. ಸಹಿಸಿ ಕೊಳ್ಳಲು ಆಗಿಲ್ಲ ನನಗೆ. ಉಬಾರ್ ವಕೀಲರಿಗೆ ಕರೆ ಮಾಡಿದಾಗ ಅವರು ಅಗ್ನಡಿಯ ಒಬ್ಬ ವಕೀಲರ ನಂಬರ್ ಕೊಟ್ಟು ಇವರು ಅದೇ ಸಂಘಟನೆ ಅವರು ಮಾತಾಡಿ ಎಂದರು. ನಾನು ಕರೆ ಮಾಡಿದೆ ತುಂಬಾ ರಿಂಗ್ ಆದಾಗ ಎತ್ತಿದರು. ನಾನು ಯಾರೆಂದು ಹೇಳಿದಾಗ ಅವರಿಗೆ ಗೊತ್ತಾಯಿತು ತುಂಬಾನೇ ಗೌರವದಲ್ಲಿ ಮಾತಾಡಿದರು. ಕೊನೆಗೆ ನಾನೇ ಅವರಿಗೆ ಹೇಳಿ ಬಿಟ್ಟೆ ನಾಗರಾಜ್ ವಿರುದ್ಧ ನೀವು ಒಂದು ವೇಳೆ ಕೇಸ್ ಫೈಲ್ ಮಾಡುವುದಾದರೆ ನಾನೇ ಸಾಕ್ಷಿ ಹಾಕುತ್ತೇನೆ ಎಂದು. ಅವರು ಆ ರೀತಿ ಬೆಳವಣಿಗೆ ಇದ್ದರೆ ಕರೆ ಮಾಡುತ್ತೇನೆ ಎಂದರು. ವಿಷಯ ಇಷ್ಟೇ ಆ ಸರ್ಕಲ್ ಇನ್ಸ್ಪೆಕ್ಟರ್ ತೋರಿದ ವರ್ತನೆ, ಪೊಲೀಸರು ನಡೆಸಿದ ದೌರ್ಜನ್ಯ ನನ್ನನ್ನು ತುಂಬಾನೇ ಗಾಬರಿಯಾಗಿಸಿತು. ಈ ರೀತಿ ಅನ್ಯಾಯ ನಡೆದಾಗ ನಾನು ಕೇವಲ ಮೂಕ ಪ್ರೇಕ್ಷಕನಾಗಿದ್ದೆ. ನನಗೆ ಒಂದು ಒಳ್ಳೆಯ ತಂಡ ಜೊತೆಗಿದ್ದರೆ ನಾನು ಬೀದಿಗಿಳಿದು ಹೋರಾಡುತ್ತಿದೆ. ಆದರೆ ನಾನು ಏಕಾಂಗಿ ಆಗಿ ಬಿಟ್ಟೆ. ಏನೇ ಆಗಲಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಬೇಕು ಎಂದಿದ್ದೇನೆ. ನೋಡೋಣ ಮುಂದೆ ಏನಾಗುತ್ತದೆ ಎಂದು. ಧನ್ಯವಾದ.
ದಾಸ ಮನೆ
ಉಪ್ಪಿನಂಗಡಿ (ಉಬಾರ್ )
*ಉಪ್ಪಿನಂಗಡಿ ಪೋಲೀಸರ ಅಮಾನವೀಯ ಕ್ರೌರ್ಯತೆ ಖಂಡನೀಯ. ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಲಿ: ಎಸ್‌ಡಿಪಿಐ*
ಬೆಂಗಳೂರು(ಡಿ.15) : ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ ಪೋಲಿಸ್ ಇಲಾಖೆ ರಾತ್ರೋರಾತ್ರಿ ಅಕ್ರಮವಾಗಿ ಬಂಧಿಸಿರುವ ಅಮಾಯಕ ಮುಸ್ಲಿಂ ನಾಯಕರನ್ನು ಬಿಡುಗಡೆಗೊಳಿಸಲು ಆಗ್ರಹಿಸಿ ನಿನ್ನೆ ಬೆಳಿಗ್ಗೆಯಿಂದ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾ ನಿರತರ ಮೇಲೆ ಬರ್ಬರವಾಗಿ ಲಾಠಿಜಾರ್ಚ್ ನಡೆಸಿ ಮಾರಣಾಂತಿಕ ಗಾಯಗೊಳಿಸಿ ಕ್ರೌರ್ಯ ಮೆರೆದ ಘಟನೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ತೀವ್ರವಾಗಿ ಖಂಡಿಸಿದ್ದಾರೆ.
ಮೇಲ್ನೋಟಕ್ಕೆ ಇದೊಂದು ಪೂರ್ವ ನಿಯೋಜಿತ ಘಟನೆಯಂತೆ ಕಂಡು ಬರುತ್ತದೆ. ಕೇವಲ ಲಾಠಿ ಮಾತ್ರವಲ್ಲದೆ ಮಾರಕಾಯುಧಗಳಿಂದಲೂ ಮಾರಣಾಂತಿಕವಾಗಿ ತಲೆ, ಎದೆಯ ಭಾಗಕ್ಕೆ ಇರಿಯಲಾಗಿದೆ. ಈ ಮೂಲಕ ಸಂವಿಧಾನಾತ್ಮಕವಾಗಿರುವ ಪ್ರತಿಭಟನೆಯ ಹಕ್ಕನ್ನು ಕಸಿದು ಸರ್ವಾಧಿಕಾರಿ ಧೋರಣೆ ಮಾಡಲಾಗುತ್ತಿದೆ.
ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಗೆ ರಾತ್ರಿಯ ಸಂದರ್ಭದಲ್ಲಿ ಏಕಾಏಕಿ ಯಾವುದೇ ಮುನ್ಸೂಚನೆ ನೀಡದೆ ಅಮಾನುಷವಾಗಿ ದೌರ್ಜನ್ಯ ಎಸಗುವ ಮೂಲಕ ಪೋಲಿಸರು ಕ್ರೌರ್ಯ ಮೆರೆದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ, ಕೆಲವು ಕೋಮುವಾದಿ ಗೂಂಡಾ ಸಂಘಟನೆಗಳು ಮತ್ತು ಕೋಮುವಾದಿ ನಾಯಕರಗಳ ಪ್ರಚೋಧನೆಯಿಂದಾಗಿ ಇದೇ ರೀತಿಯಾಗಿ ನಿರಂತರವಾಗಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿ ಮಾಡಿಕೊಂಡು ಒಂದಲ್ಲಾ ಒಂದು ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇದೆ. BJP ಸರ್ಕಾರವೂ ಇಂತಹ ದೌರ್ಜನ್ಯಗಳಿಗೆ ಪೂರಕವಾಗಿ ತನ್ನ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದೆ. ಸ್ವತಃ ಮುಖ್ಯಮಂತ್ರಿಗಳೇ ಮುಂದಾಗಿ ಕೋಮುದಳ್ಳುರಿ ಹೊತ್ತಿಸುವಂತಹ ಹೇಳಿಕೆ ನೀಡಿ, ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ತಂದರೆ ಕ್ರಿಯೆಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಅಲ್ಪಸಂಖ್ಯಾತರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದನ್ನು ನಾವಿಲ್ಲಿ ಮರೆಯುವ ಹಾಗಿಲ್ಲ. ಇಂತಹ ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕ ಹೇಳಿಕೆಗಳ ಕಾರಣದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿರುವ ಅಲ್ಪಸಂಖ್ಯಾತರ ಮೇಲೆ ಹಲ್ಲೆ, ಕೊಲೆಯತ್ನ ಪ್ರಕರಣಗಳು ಅಧಿಕಗೊಳ್ಳುತ್ತಿವೆ
ಸಂಘಪರಿವಾರ ಸಂಘಟನೆಗಳು ಬಹಿರಂಗವಾಗಿಯೇ ತ್ರಿಶೂಲ ದೀಕ್ಷೆ ಕಾರ್ಯಕ್ರಮಗಳನ್ನು ನಡೆಸಿದರೂ ಅಂತಹ ಕಾರ್ಯಕ್ರಮಗಳನ್ನು ತಡೆಯುವ ಯಾವುದೇ ಪ್ರಯತ್ನವನ್ನು ಪೊಲೀಸ್ ಇಲಾಖೆ ನಡೆಸಿಲ್ಲ. ತ್ರಿಶೂಲ ದೀಕ್ಷೆಯ ನಂತರ ಜಿಲ್ಲೆಯಲ್ಲಿ ಹಲವಾರು ಕಡೆ ದಿನ ನಿತ್ಯ ತ್ರಿಶೂಲ ದಾಳಿ ಪ್ರಕರಣಗಳು ನಡೆದರೂ ಸರಕಾರ ಆಗಲಿ ಪೊಲೀಸ್ ಇಲಾಖೆಯಾಗಲಿ ಅದನ್ನು ಗಣನೆಗೆ ತೆಗೆದುಕೊಂಡು, ದಾಳಿಗಳನ್ನು ನಡೆಸುವ ಶಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದೆ ಸಂಘ ಪರಿವಾರಕ್ಕೆ ಜಿಲ್ಲೆಯಲ್ಲಿ ಏನೂ ಬೇಕಾದರೂ ಮಾಡಬಹುದು ಎಂಬ ಮಟ್ಟಕ್ಕೆ ಮೌನವಹಿಸಿದೆ.
ಆದ್ದರಿಂದ ಘಟನೆಯ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥ ಪೋಲಿಸರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಎಸ್.ಡಿ.ಪಿ.ಐ ಒತ್ತಾಯಿಸುತ್ತದೆ
*ಪಾಪ್ಯುಲರ್ ಫ್ರಂಟ್ ನ ನೋವಿಗೆ ನೆರವಾಗೋಣ..*
ಪ್ರತಿ ಬಾರಿಯು ಸಮಾಜಕ್ಕೆ, ಸಮುದಾಯಕ್ಕೆ ಅನ್ಯಾಯವಾದಾಗ ಮುಂಚೂಣಿಯಲ್ಲಿ ನಿಂತು ಧೈರ್ಯ ತುಂಬುತ್ತಿದ್ದ ಸಂಘಟನೆಗೆ ಇದೀಗ ಅನ್ಯಾಯವಾಗಿದೆ. ಏನೇ ಅನ್ಯಾಯದ ಘಟನೆಗಳು ಸಂಭವಿಸಿದರೂ ಜಾತಿ, ಮತ ಭೇದ ವಿಲ್ಲದೆ ದಲಿತರಾಗಲಿ, ಆದಿವಾಸಿಗಳಾಗಲಿ, ಕ್ರಿಶ್ಚಿಯನ್ ಗಳಾಗಲಿ ಅಲ್ಪ ಸಂಖ್ಯಾತರಾಗಲಿ ಧ್ವನಿ ಎತ್ತುತ್ತಿದ್ದರು. ಅವರ ನಾಯಕರ ಹೇಳಿಕೆಗಳು, ಖಂಡನೆಗಳು ಅಕ್ರಮಿಗಳ ಪಾಲಿಗೆ ಉತ್ತಮ ಎಚ್ಚರಿಕೆಯೂ ನೀಡುತ್ತಿತ್ತು. ಆದರೆ ನಿನ್ನೆ ಉಪ್ಪಿನಂಗಡಿಯಲ್ಲಿ ಅಂತಹ ಸಂಘಟನೆ ನಾಯಕರನ್ನೇ ಅಕ್ರಮವಾಗಿ ಬಂಧಿಸಿ, ಶಾಂತಿಯುತ ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಹಿಗ್ಗಾ ಮುಗ್ಗ ಥಲಿಸಿ ಅನ್ಯಾಯವಾಗಿ ದೌರ್ಜನ್ಯ ಎಸೆಯಲಾಗಿದೆ. ಪೊಲೀಸರ ಕ್ರೂರ ನಡೆ ಬೆಚ್ಚಿಬೀಳಿಸಿದೆ. ಈ ಅಮಾನವೀಯ ಘಟನೆ ಯ ಬಗ್ಗೆ ನಾವೆಲ್ಲರೂ ಧ್ವನಿ ಎತ್ತುವ ಮೂಲಕ ಪಾಪ್ಯುಲರ್ ಫ್ರಂಟ್ ಗೆ ಬಲ ನೀಡಬೇಕು
ನಮಗಾಗಿ ಧ್ವನಿ ಎತ್ತಿದವರಿಗಾಗಿ ನಾವು ಇಂದು ಎಲ್ಲರೂ ಧ್ವನಿಯಾಗಬೇಕು.
ಜೈ ಭೀಮ್
*-ಪ್ರಾಣೇಶ್ ನಾಯ್ಕ್*
*ತೀರ್ಥಹಳ್ಳಿ*