ಕೋವಿಡ್-19 ಅಪ್ ಡೇಟ್- ಒಮಿಕ್ರೊನ್ ರೂಪಾಂತರಿ

ಸಾರ್ಸ್ಸಿ-ಒವಿ-2 ರೂಪಾಂತರಿ ಒಮಿಕ್ರೊನ್ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಸಚಿವಾಲಯ, 2021ರ ನವೆಂಬರ್26ರಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲೂಎಚ್ ಒ) ವರ್ಗೀಕರಿಸಿರುವ ಹೊಸಕೋವಿಡ್ ರೂಪಾಂತರಿ ಒಮಿಕ್ರೊನ್(ಬಿ.11.529) ಕುರಿತಂತೆ ಪದೇ ಪದೇ ಕೇಳಲಾಗುವ ಪ್ರಶ್ನೆ (ಎಫ್ ಎ ಕ್ಯೂ) ಗಳಿಗೆ ಉತ್ತರಗಳನ್ನು ಬಿಡುಗಡೆ ಮಾಡಿದೆ.

ಈ ಎಫ್ ಎ ಕ್ಯೂಗಳನ್ನು ಆರೋಗ್ಯಸಚಿವಾಲಯದ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ: https://www.mohfw.gov.in/pdf/FAQsonOmicron.pdf

ಒಮಿಕ್ರೊನ್ ಎಂದರೇನುಮತ್ತು ರೂಪಾಂತರಿ  ಆಂತಕ (ವಿಒಸಿಏಕೆಉಂಟು ಮಾಡುತ್ತದೆ ?

ದಕ್ಷಿಣ ಆಫ್ರಿಕಾದಲ್ಲಿ 2021ರ ನವೆಂಬರ್24ರಂದು   ಪತ್ತೆಯಾದ ಹೊಸ ರೂಪಾಂತರಿಸಾರ್ಸ್ ಸಿಒವಿ-2 ಗೆ ಬಿ.1.1.529 ಅಥವಾ ಒಮಿಕ್ರೊನ್ (ಗ್ರೀಕ್ ಅಕ್ಷರಮಾಲೆಯ ಆಲ್ಫಾ, ಬೀಟಾ, ಡೆಲ್ಟಾ ಇತ್ಯಾದಿಗಳ ರೀತಿ)ಎಂದು ಕರೆಯಲಾಗುತ್ತಿದೆ. ಈ ರೂಪಾಂತರಿ ಬಹಳಷ್ಟು ಬಾರಿ ರೂಪಾಂತರ ಹೊಂದಿದೆ ಮತ್ತು ವಿಶೇಷವಾಗಿ ವೈರಲ್ ಸ್ಪೈಕ್ಪ್ರೋಟೀನ್ ನಲ್ಲಿ 30ಕ್ಕೂ ಹೆಚ್ಚು ಸಲ ರೂಪಾಂತರಗೊಂಡಿದೆ ಮತ್ತು ಅದು ಮುಖ್ಯವಾಗಿ ರೋಗ ನಿರೋಧಕ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡಿದೆ.ಒಮಿಕ್ರೊನ್ ನಲ್ಲಿನ ರೂಪಾಂತರ ಸಂಗ್ರಹಗಳನ್ನು ನೀಡಲಾಗಿದೆ, ಇದು ಮೊದಲು ಪ್ರತ್ಯೇಕವಾಗಿ ಹೆಚ್ಚಿದ ಸೋಂಕುಮತ್ತು ಅಥವಾ ರೋಗ ನಿರೋಧಕ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲಿದೆ ಮತ್ತುದಕ್ಷಿಣ ಆಫ್ರಿಕಾದಲ್ಲಿ ಇದ್ದಕ್ಕಿದ್ದಂತೆಯೇ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರೊನ್   ಆತಂಕಕಾರಿರೂಪಾಂತರಿ(ವಿಒಸಿ) ಎಂದು ಘೋಷಣೆಮಾಡಿತು.

ಸದ್ಯ ಬಳಕೆ ಮಾಡುತ್ತಿರುವ ಪರೀಕ್ಷಾವಿಧಾನಗಳಿಂದ ಒಮಿಕ್ರೊನ್ ಪತ್ತೆಹೆಚ್ಚಬಹುದೇ?

SARS-CoV- 2 ರೂಪಾಂತರಕ್ಕಾಗಿ ಹೆಚ್ಚುಒಪ್ಪಿತ ಮತ್ತು ಸಾಮಾನ್ಯವಾಗಿ ಬಳಕೆಯಲ್ಲಿರುವ ವಿಧಾನವೆಂದರೆ RT-PCRವಿಧಾನ. ಈ ವಿಧಾನದಲ್ಲಿ ವೈರಾಣುವಿನಲ್ಲಿರುವ ನಿರ್ದಿಷ್ಟ ಜೀನ್ಗಳನ್ನು ಅಂದರೆ ಸ್ಪೈಕ್ (ಎಸ್) ಎನ್ವಲಪ್ಪಡ್(ಇ) ಮತ್ತು ನ್ಯೂಕ್ಲಿಯೋಕ್ಯಾಪ್ಸಿಡ್ (ಎನ್ )ಇತ್ಯಾದಿ ವೈರಾಣುಗಳು ಇರುವಿಕೆಯನ್ನು ದೃಢಪಡಿಸುತ್ತದೆ.  ಆದರೂ ಒಮಿಕ್ರೂನ್  ಸಂದರ್ಭದಲ್ಲಿ ಎಸ್ ವಂಶವಾಹಿ ಹೆಚ್ಚುರೂಪಾಂತರ ಗೊಂಡಿರುವುದರಿಂದ ಕೆಲವುಪ್ರಮೈರ್ ಗಳು ಎಸ್ ವಂಶವಾಹಿಯ ಅನುಪಸ್ಥಿತಿಯನ್ನು ಸೂಚಿಸುವಫಲಿತಾಂಶಗಳಿಗೆ ಕಾರಣವಾಗಬಹುದು(ಅದನ್ನು ಎಸ್ ಜೀನ್ ಡ್ರಾಪ್ ಔಟ್ ಎಂದುಕರೆಯಲಾಗುತ್ತದೆ). ಈ ನಿರ್ದಿಷ್ಟ ಎಸ್ಜೀನ್ ಡ್ರಾಪ್ ಔಟ್ ಜೊತೆಗೆ ಇತರವೈರಾಣು ವಂಶವಾಹಿ ಪತ್ತೆಯನ್ನುಒಮಿಕ್ರೊನ್ ರೋಗ ನಿರ್ಣಯದಗುಣಲಕ್ಷಣವನ್ನಾಗಿ ಬಳಕೆ ಮಾಡಬಹುದು.ಆದರೆ ಒಮಿಕ್ರೊನ್ ರೂಪಾಂತರವನ್ನುಅಂತಿಮವಾಗಿ ದೃಢಪಡಿಸಲು ಒಮಿಕ್ರೊನ್ರೂಪಾಂತರದ ಜಿನೋಮ್ ಸೀಕ್ವೆನ್ಸಿಂಗ್ಅಗತ್ಯವಿದೆ.

ಹೊಸ ಆಂತಕಕಾರಿ ರೂಪಾಂತರಿ ಬಗ್ಗೆನಾವು ಎಷ್ಟು ಕಾಳಜಿ ವಹಿಸಬೇಕು?

ಕೋವಿಡ್-19 ಸಾಂಕ್ರಾಮಿಕರೋಗಶಾಸ್ತ್ರದಲ್ಲಿ ಪ್ರಸರಣ ಅಥವಾಹಾನಿಕಾರಕ ಬದಲಾವಣೆಯು ಹೆಚ್ಚಾದಾಗಮೌಲ್ಯಮಾಪನದ ನಂತರ ಡಬ್ಲೂ ಎಚ್ ಒರೂಪಾಂತರವನ್ನು ವಿಒಸಿ ಎಂದುಘೋಷಿಸಿತು. ವೈರಾಣುಗಳ ಹೆಚ್ಚಳ ಮತ್ತುರೋಗ ನಿರೋಧಕದಿಂದತಪ್ಪಿಸಿಕೊಳ್ಳುವುದು, ಕೋವಿಡ್-19ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಪ್ರಾಥಮಿಕಸಾಕ್ಷಿಯಾಗಿ ಭಾರಿ ಬದಲಾವಣೆ, ಮರುಸೋಂಕು ಪ್ರಕರಣಗಳ ಹೆಚ್ಚಳವಾಗುವುದುಸೇರಿದೆ ಅಥವಾ ಸಾರ್ವಜನಿಕ ಆರೋಗ್ಯಮತ್ತು ಸಾಮಾಜಿಕ ಕ್ರಮಗಳು ಅಥವಾಲಭ್ಯವಿರುವ ರೋಗ ನಿರ್ಣಯಗಳು,ಲಭ್ಯವಿರುವ ರೋಗ ಪತ್ತೆ, ಲಸಿಕೆ ಹಾಗೂಚಿಕಿತ್ಸೆಗಳು.  (ಮೂಲ: ಡಬ್ಲೂ ಎಚ್ ಒ)

ಹೆಚ್ಚಿದ ರೂಪಾಂತರಗಳು, ಹೆಚ್ಚಿನಪ್ರಸರಣಾ ಮತ್ತು ಪ್ರತಿರಕ್ಷಣಾ ತಪ್ಪಿಸಿಕೊಳ್ಳುವಿಕೆಯ ಅವರ ನಿರೀಕ್ಷಿತಲಕ್ಷಣಗಳು ಮತ್ತು ಹೆಚ್ಚಿನ ಮರು ಸೋಂಕುಪ್ರಕರಣಗಳಂತಹ ಕೋವಿಡ್-19ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿನಹಾನಿಕಾರಕ ಬದಲಾವಣೆಯ ಪ್ರಾಥಮಿಕಪುರಾವೆಗಳ ಆಧಾರದ ಮೇಲೆ ಒಮಿಕ್ರೊನ್ಅನ್ನು ಆಂತಕಕಾರಿ ರೂಪಾಂತರಿ ಎಂದುಪ್ರಮುಖವಾಗಿ ಒತ್ತು ನೀಡಿಘೋಷಿಸಲಾಗಿದೆ. ಹೆಚ್ಚಿನ ಉಪಶಮನ ಮತ್ತು  ರೋಗ ನಿರೋಧಕದತಪ್ಪಿಸಿಕೊಳ್ಳುವಿಕೆಗೆ ಖಚಿತ ಪುರಾವೆಗಳಿಗಾಗಿನಿರೀಕ್ಷಿಸಲಾಗುತ್ತಿದೆ.

ನಾವು ಯಾವ ರೀತಿಯ ಮುನ್ನೆಚ್ಚರಿಕೆವಹಿಸಬೇಕು?

ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತುಕ್ರಮಗಳು ಮೊದಲಿನಂತೆಯೇ ಇರುತ್ತವೆ.ನೀವು ಸರಿಯಾದ ರೀತಿಯಲ್ಲಿ ಮಾಸ್ಕ್(ಮುಖಗವಸು) ಧರಿಸುವುದು ಅತ್ಯಗತ್ಯ,ಎರಡು ಡೋಸ್ ಲಸಿಕೆ ಪಡೆಯಿರಿ (ಒಂದುವೇಳೆ ಲಸಿಕೆ ಪಡೆದಿಲ್ಲವಾದರೆ), ಸಾಮಾಜಿಕಅಂತರ ಕಾಯ್ದುಕೊಳ್ಳಿ ಮತ್ತು ಎಷ್ಟುಸಾಧ್ಯವೋ ಅಷ್ಟು ಉತ್ತಮ ಗಾಳಿಯವ್ಯವಸ್ಥೆಯನ್ನು ಕಾಯ್ದುಕೊಳ್ಳಿ.

ಮೂರನೇ ಆಲೆ ಬರಲಿದೆಯೇ?

ದಕ್ಷಿಣ ಆಫ್ರಿಕಾದ ಹೊರಗಿನ ದೇಶಗಳಲ್ಲಿಒಮಿಕ್ರೊನ್ ಪ್ರಕರಣಗಳು ಹೆಚ್ಚಾಗಿಕಾಣಿಸುತ್ತಿವೆ ಮತ್ತು ಅದರಗುಣಲಕ್ಷಣಗಳನ್ನು ಗಮನಿಸಿದರೆ ಭಾರತಸೇರಿದಂತೆ ಹೆಚ್ಚಿನ ದೇಶಗಳಿಗೆ ಹರಡುವಸಾಧ್ಯತೆ ಇದೆ. ಆದರೆ ಪ್ರಕರಣಗಳ ಏರಿಕೆಪ್ರಮಾಣ, ಪ್ರಕರಣ ಹೆಚ್ಚಳದ ತೀವ್ರತೆ ಮತ್ತುಉಂಟಾಗುವ ರೋಗದ ತೀವ್ರತೆ ಬಗ್ಗೆ ಇನ್ನೂಯಾವುದೇ ಸ್ಪಷ್ಟತೆ ಇಲ್ಲ. ಅಲ್ಲದೆ,ಭಾರತದಲ್ಲಿ ಲಸಿಕೀಕರಣ ಅತ್ಯಂತವೇಗವಾಗಿ ಸಾಗುತ್ತಿದೆ ಮತ್ತು ಹೆಚ್ಚಿನ ಸೆರೋಪಾಸಿಟಿವಿಟಿಯಿಂದ ಸಾಬೀತಾಗಿರುವಂತೆಡೆಲ್ಟಾ ರೂಪಾಂತರಕ್ಕೆ ಹೆಚ್ಚಿನ ಮಟ್ಟಿಗೆಒಡ್ಡಿಕೊಂಡರೆ ರೋಗದ ತೀವ್ರತೆಯು ಕಡಿಮೆಎಂದು ನಿರೀಕ್ಷಿಸಲಾಗುತ್ತಿದೆ. ಆದರೂವೈಜ್ಞಾನಿಗಳು ಪುರಾವೆಗಳನ್ನೂ ಇನ್ನೂಬೆಳವಣಿಗೆ ಹೊಂದುತ್ತಿವೆ.

ಹಾಲಿ ಇರುವ ಲಿಸಿಕೆ ಒಮಿಕ್ರೊನ್ವಿರುದ್ಧ ಕಾರ್ಯನಿರ್ವಹಿಸಲಿದೆಯೇ?

ಹಾಲಿ ಬಳಸುತ್ತಿರುವ ಲಸಿಕೆಗಳುಒಮಿಕ್ರೊನ್ ವಿರುದ್ಧಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಲುಯಾವುದೇ ಪುರಾವೆಗಳಿಲ್ಲ, ಸ್ಪೈಕ್ ಜೀನ್ನಲ್ಲಿ ವರದಿ ಮಾಡಲಾದ ಕೆಲವುರೂಪಾಂತರಗಳು ಅಸ್ತಿತ್ವದಲ್ಲಿರುವಲಸಿಕೆಗಳ ಪರಿಣಾಮವನ್ನು ತಗ್ಗಿಸಬಹುದು.ಆದರೆ ಲಸಿಕೆ ರಕ್ಷಣೆಯು ಪ್ರತಿಕಾಯಗಳುಸೆಲ್ಯುಲಾರ್ ಪ್ರತಿರಕ್ಷೆಯ ಮೂಲಕವೂಆಗಿದ್ದು, ಅದು ತುಲನಾತ್ಮಕವಾಗಿ ಉತ್ತಮರಕ್ಷಣೆ ಒದಗಿಸುತ್ತದೆ ಎಂದುನಿರೀಕ್ಷಿಸಲಾಗುತ್ತಿದೆ.  ಆದ್ದರಿಂದ ಲಸಿಕೆಗಳುಈಗಲೂ ಗಂಭೀರ ಕಾಯಿಲೆಗಳ ವಿರುದ್ಧಉತ್ತಮ ರೀತಿಯಲ್ಲಿ ರಕ್ಷಣೆಯನ್ನುಒದಗಿಸುತ್ತದೆ ಮತ್ತು ಲಭ್ಯವಿರುವ ಲಸಿಕೆಪಡೆಯುವುದು ನಿರ್ಣಾಯಕವಾಗಿದೆ.ಹಾಗಾಗಿ ಅರ್ಹರೆಲ್ಲರೂ ಯಾರು ಲಸಿಕೆಪಡೆದಿಲ್ಲವೋ ಅವು ಲಸಿಕೆ ಪಡೆಯುವುದುಹೆಚ್ಚು ಸೂಕ್ತ.

ಭಾರತ ಹೇಗೆ ಪ್ರತಿಕ್ರಿಯಿಸುತ್ತಿದೆ?

ಭಾರತ ಸರ್ಕಾರವು ಪರಿಸ್ಥಿತಿಯನ್ನೂಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಕಾಲಕಾಲಕ್ಕೆ ಸೂಕ್ತ ಮಾರ್ಗಸೂಚಿಗಳನ್ನುನೀಡುತ್ತಿದೆ. ಈ ಮಧ್ಯೆ, ವೈಜ್ಞಾನಿಕ ಮತ್ತುವೈದ್ಯಕೀಯ ಸಮುದಾಯವು ರೋಗ ಪತ್ತೆವಿಧಾನವನ್ನು ಅಭಿವೃದ್ಧಿಪಡಿಸಲು ಮತ್ತುಅದನ್ನು ಪರೀಕ್ಷೆಗಳಿಗೆ ನಿಯೋಜಿಸಲು,ಜಿನೋಮ್ ಸರ್ವೇಲೆನ್ಸ್ ಕೈಗೊಳ್ಳಲು,ವೈರಾಣು ಮತ್ತು ಸಾಂಕ್ರಾಮಿಕಗಳಗುಣಲಕ್ಷಣಗಳ ಪುರಾವೆಗಳನ್ನುಕಂಡುಹಿಡಿಯಲು ಮತ್ತು ಚಿಕಿತ್ಸೆಗಳನ್ನುಅಭಿವೃದ್ಧಿಪಡಿಸಲು ಸಜ್ಜಾಗಿದೆ.

ಮತ್ತೆ ರೂಪಾಂತರಿಗಳು ಬರಬಹುದೇ?

ರೂಪಾಂತರಗಳು ವಿಕಸನದ ಸಾಮಾನ್ಯಭಾಗವಾಗಿದೆ ಮತ್ತು ಎಲ್ಲಿಯವರೆಗೆವೈರಾಣು ಸೋಂಕು ಹರಡುತ್ತದೆಯೋ,ಎಲ್ಲಿಯವರೆಗೆ ಅದು ಪುನರಾವರ್ತಿಸಲುಮತ್ತು ಪ್ರಸರಣ ಮಾಡಲುಸಾಧ್ಯವಿರುತ್ತದೆಯೋ ಅಲ್ಲಿಯವರೆಗೆವಿಕಸನಗೊಳ್ಳುತ್ತಲೇ ಇರುತ್ತವೆ. ಎಲ್ಲರೂಪಾಂತರಿಗಳು ಅಪಾಯಕಾರಿಯಲ್ಲ,ಬಹುತೇಕವು ಆ ರೀತಿ ಇರುವುದಿಲ್ಲ, ಅದರೆನಾವು ಅದನ್ನು ಗಮನಿಸಿರುವುದಿಲ್ಲ.  ಜನರುಹೆಚ್ಚು ಸೂಕ್ಷ್ಮವಾಗಿದ್ದಾಗ ಮತ್ತು ಹೆಚ್ಚುಸಾಂಕ್ರಾಮಿಕಕ್ಕೆ ತೆರೆದುಕೊಳ್ಳುತ್ತಿದ್ದಾಗಮಾತ್ರ ಅಂತಹವರಿಗೆ ಪ್ರಾಮುಖ್ಯತೆಸಿಗಲಿದೆ. ರೂಪಾಂತರಿಗಳಉತ್ಪಾದನೆಯನ್ನು ತಪ್ಪಿಸುವ ಪ್ರಮುಖಹಂತವೆಂದರೆ ಸೋಂಕಿನ ಸಂಖ್ಯೆಯನ್ನುಕಡಿಮೆ ಮಾಡುವುದು.