ಉಳ್ಳಾಲದಲ್ಲಿ ಮಾಹಿತಿ ಸೇವಾ ಕೇಂದ್ರ ಉದ್ಘಾಟನ

ಉಳ್ಳಾಲ 18 ನವೆಂಬರ್: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ – ಎಸ್ಡಿಪಿಐ ಉಳ್ಳಾಲ ನಗರ ಸಮಿತಿ ನೂತನ ಕಚೇರಿ ಹಾಗೂ ಮಾಹಿತಿ ಸೇವಾ ಕೇಂದ್ರ ಉದ್ಘಾಟನಾ ನಡೆಯಿತು. ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಈ ಸೇವಾ ಕೇಂದ್ರ ಮುಂದೆಯೂ ಪಕ್ಷ ಧರ್ಮ ಭೇದ ಮಾಡದೆ ಉಚಿತವಾಗಿ ಸೇವೆ ಸಲ್ಲಿಸಿದ್ದಾರೆ ಎಂದರು. ಕಛೇರಿ ಉದ್ಘಾಟನೆ ಮಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಬಜತೂರ್ ಮಾತನಾಡುತ್ತಾ ಪಕ್ಷದ ಕಛೇರಿಯಲ್ಲಿ
ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕ್ರಿಯೆ ನಡೆಸಲಾಗುವುದು ಎಂದರು.


ಮುಖ್ಯ ಅತಿಥಿಯಾಗಿ  ರಾಜ್ಯ ಪ್ರಧಾನ ಕಾರ್ಯದರ್ಶಿ  ಬಿ.ಆರ್ ಭಾಸ್ಕರ್ ಪ್ರಸಾದ್ ಆಗಮಿಸಿದರು.  ಅವರು ಮಾತನಾಡುತ್ತಾ ಸರಕಾರಿ ಸೌಲಭ್ಯ ಗಳ ಮಾಹಿತಿ ನೀಡುವ ಕಾರ್ಯ ನಿರ್ವಹಣೆ  ರಾಜ್ಯಾದ್ಯಂತ  ಎಸ್ ಡಿ ಪಿ ಐ  ಯಶಸ್ವಿಯಾಗಿ ಮಾಡುತ್ತಿದೆ. ಕಾಂಗ್ರೆಸ್ ಸಮರ್ಥ ವಿರೋಧ ಪಕ್ಷಗಳು ಜವಾಬ್ದಾರಿ ನಿರ್ವಹಣೆ ಮಾಡುತ್ತಿಲ್ಲ ಎಂದರು. ಸಂಫಪರಿವಾರ ಮೇಲ್ಜಾತಿ ಯುವಕರಿಗೆ   ಉನ್ನತ ಶಿಕ್ಷಣ ನೀಡುತ್ತಿದೆ,  ಹಿಂದೂ ಧರ್ಮದ ಬಡ ಕೆಲಜಾತಿ ಯುವ ಜನಾಂಗಕ್ಕೆ ತ್ರಿಶೂಲ ಧೀಕ್ಷೆ ನೀಡುವ ಮೂಲಕ ಅಶಾಂತಿಗೆ ಪ್ರೇರೇಪಣೆ ನೀಡುವ ಕಾರ್ಯ ಸರಿಯಲ್ಲ ಎಂದರು.

ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲ್ ಮಾತನಾಡುತ್ತಾ ಈ ಭಾರಿ ಉಳ್ಳಾಲ ದಿಂದ ಎಸ್ಡಿಪಿಐ
ಶಾಸಕ ಗೆಲುವು ಖಚಿತ ಎಂದರು.
ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೊನ್ಸೋ ಪ್ರಾಂಕೊ ಮಾತನಾಡುತ್ತಾ ಕ್ರೈಸ್ತ ಸಮುದಾಯ ಮುಂದೆ ಕಾಂಗ್ರೆಸ್ ಪಕ್ಷ ಬಿಟ್ಟು ಅವಕಾಶ ವಂಚಿತರ ಪಕ್ಷ     ಎಸ್ ಡಿಪಿ ಐ  ಸೇರಲು ಆಹ್ವಾನ ನೀಡಿದರು.         ದಕ ಜಿಲ್ಲೆಯ ಅಧ್ಯಕ್ಷ ಅಬೂಬಕ್ಕರ್ ಕುಳಾಯಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷ
ಹಲ್ಲೆ ಬೆದರಿಕೆ ಮೂಲಕ ಎಸ್ ಡಿ ಪಿ ಐ ಕಾರ್ಯಕರ್ತರ ದಮನ ನೀತಿಯ ನಿಲ್ಲಿಸಬೇಕು ಎಂದರು.

ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ ರಿಯಾಝ್  ಪರಂಗಿಪೇಟೆ ಮಾತನಾಡುತ್ತಾ ಈ ಮಾಹಿತಿ ಕೇಂದ್ರ ಉಳ್ಳಾಲ ಅಸೆಂಬ್ಲಿ ಐದನೇ ಕೇಂದ್ರ ನಾಳೆ ಆರನೇ ಕೇಂದ್ರ ಸ್ಥಾಪನೆ ಆಗಲಿದೆ ಎಂದರು. ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಲ ಹಾಜಬ್ಬ ರವರನ್ನು ಸನ್ಮಾನಿಸಿವೆ. ನಗರ ಸಮಿತಿ ಕಾರ್ಯದರ್ಶಿ  ಅಬ್ಬಾಸ್ ಎ ಆರ್ ಧನ್ಯವಾದ ಮಾಡಿದರು.

ವೇದಿಕೆಯಲ್ಲಿ ಮುಖಂಡರಾದ   ಅತಾವುಲ್ಲಾ ಜೊಕಟ್ಟೆ,
ಅಕ್ರಮ್ ಹಸನ್,ಇರ್ಷಾದ್ ಅಜ್ಜನಡ್ಕ, ಅಶ್ರಫ್ ಕೆ ಸಿ ರೋಡ್, ಜಮಾಲ್ ಜೊಕಟ್ಟೆ, ಕೌನ್ಸಿಲರ್ ಗಳಾದ ಝರೀನ ರೌಫ್, ಶಹನಾಝ್ ಅಕ್ರಮ್, ಅಸ್ಗರ್ ಅಲಿ, ರಮೀಝ್ ಮುಂತಾದವರು ಉಪಸ್ತರಿದ್ದರು.