*ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆಯ ಎರಡನೇ ಜಿಲ್ಲಾ ಸಮಿತಿ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ*

ದಿನಾಂಕ 16 ನವೆಂಬರ್ 2021, ಮಂಗಳವಾರ ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನ ಕಾನ್ಫರೆನ್ಸ್ ಹಾಲ್ ನಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾದ ಜನಾಬ್ ಮುಶ್ತಾಕ್ ಅಹ್ಮದ್ ಬೆಳ್ವೆ ಯವರ ಅಧ್ಯಕ್ಷತೆಯಲ್ಲಿ ನಮ್ಮ ನಾಡ ಒಕ್ಕೂಟ ಉಡುಪಿ ಜಿಲ್ಲೆಯ ಎರಡನೇ ಜಿಲ್ಲಾ ಸಮಿತಿ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಉಸ್ತಾದ್ ಜಮಾಲ್ ಮಲ್ಪೆಯವರ ಕುರ್ ಆನ್ ಪಠಣದೊಂದಿಗೆ ಸಭೆ ಆರಂಭವಾಯಿತು. ಜಿಲ್ಲಾ ಉಪಾಧ್ಯಕ್ಷರಾದ ಎಸ್.ಎಮ್. ಇರ್ಶಾದ್ ನೇಜಾರ್ ಸ್ವಾಗತ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ NNO ಕೇಂದ್ರ ಸಮಿತಿ ವತಿಯಿಂದ ಸಮಾಜದ ಮೂರು ಸಾಧಕರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಸಮಾಜ ಸೇವಕರು, ಪರಿಸರವಾದಿಗಳು ಮತ್ತು Indian Achievers Award ಪುರಸ್ಕೃತರಾದ *ಬಿ.ಎಂ. ಜಾಫರ್* (ಸಂಸ್ಥಾಪಕರು ಮತ್ತು ಅಧ್ಯಕ್ಷರು, ತೋನ್ಸೆ ಹೆಲ್ತ್ ಸೆಂಟರ್, ನೇಚರ್ ಕ್ಯೂರ್ ಮತ್ತು ಆಯುರ್ವೇದ ಆಸ್ಪತ್ರೆ, ಹೂಡೆ) ಜಾಫರ್ ರವರು ಈ ಭಾಗದ ಗುರುತಿಸಲ್ಪಟ್ಟಿರುವ ಸಮಾಜ ಸೇವಕ ಮತ್ತು   ಕೊಡುಗ್ಯದಾನಿ . ತಮ್ಮ  ಸಂಸ್ಥೆಯ ಮೂಲಕ ಸಮಾಜದ ಅನೇಕ ಜನರನ್ನು ಉದ್ಯೋಗ ಪಡೆಯುವಲ್ಲಿ ಸಹಕರಿಸಿದ *ಫಯಾಝ್ ಅಹ್ಮದ್ ತೋನ್ಸೆ* (ಸಂಸ್ಥಾಪಕರು ಮೆರಿಟ್ಯೂಡ್ ಸ್ಕಿಲ್ ಡೆವಲಪ್ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿ) ಮತ್ತು ಸಮಾಜ ಸೇವಕರು ಹಾಗೂ ನಮ್ಮ ನಾಡ ಒಕ್ಕೂಟ ಹೆಬ್ರಿ ತಾಲೂಕಿನ ಅಧ್ಯಕ್ಷರಾದ *ಮುಹಮ್ಮದ್ ರಫೀಕ್ ಅಜೆಕಾರು* ಇವರುಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಉಪಾಧ್ಯಕ್ಷರುಗಳಾದ ಅಬು ಮುಹಮ್ಮದ್ ಕುಂದಾಪುರ, ಶಾಕಿರ್ ಹಾವಂಜೆ ಮತ್ತು ಕಾಪು ತಾಲೂಕು ಅಧ್ಯಕ್ಷರಾದ ಅಶ್ರಫ್ ಪಡುಬಿದ್ರಿ ಅಭಿನಂದನಾ ಪತ್ರ ಓದಿದರು. ಅದೇ ರೀತಿ ಹೆಬ್ರಿ ತಾಲೂಕಿನಾದ್ಯಂತ ಆಯುಷ್ಮಾನ್ ಕಾರ್ಡ್ ಹಾಗೂ ವಿದ್ಯಾರ್ಥಿ ವೇತನ ಶಿಬಿರಗಳಲ್ಲಿ ಸ್ವಯಂ ಸೇವಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ 5 ವಿದ್ಯಾರ್ಥಿಗಳಾದ *ಮುಹಮ್ಮದ್ ರಯಾನ್ ಬೆಳ್ವೆ, ಫಾರಿಶ್ ಬೆಳ್ವೆ, ಅರ್ಫಾತ್ ಬೆಳ್ವೆ, ಮುಹಮ್ಮದ್ ಸಹದ್ ಎಣ್ಣೆಹೊಳೆ, ಮುಹಮ್ಮದ್ ಸುಹೈಲ್ ಎಣ್ಣೆಹೊಳೆ* ರವರನ್ನು ಹೆಬ್ರಿ ತಾಲೂಕು ಘಟಕದ ವತಿಯಿಂದ ರಿಯಲ್ ಹೀರೋ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಜಿಲ್ಲಾಧ್ಯಕ್ಷರಾದ ಮುಶ್ತಾಕ್ ಅಹ್ಮದ್ ಬೆಳ್ವೆ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೌ/ ಝಮೀರ್ ಅಹ್ಮದ್ ರಶಾದಿ ವರದಿ ಮಂಡಿಸಿದರು. ಜಿಲ್ಲಾ ಕೋಶಾಧಿಕಾರಿ ಸಯ್ಯದ್ ಅಜ್ಮಲ್ ಶಿರೂರು ಲೆಕ್ಕ ಪತ್ರ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ *ರಫೀಕ್ ಮಾಸ್ಟರ್* (ಕಾರ್ಯದರ್ಶಿ NNO ದ.ಕ. ಜಿಲ್ಲೆ) ತಮ್ಮ ಭಾಷಣದಲ್ಲಿ ನಾಯಕರ ಗುಣ ನಡತೆ ಹಾಗೂ ಹೊಣೆಗಾರಿಕೆಯ ಬಗ್ಗೆ ಬೆಳಕು ಚೆಲ್ಲಿದರು. ಇನ್ನೊರ್ವ ಮುಖ್ಯ ಅತಿಥಿ *ಇನಾಯತುಲ್ಲಾ ಶಾಬಂದ್ರಿ ಭಟ್ಕಳ* (ಜಿಲ್ಲಾಧ್ಯಕ್ಷರು NNO ಉತ್ತರ ಕನ್ನಡ ಜಿಲ್ಲೆ) ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ತಾಲೂಕು ಅಧ್ಯಕ್ಷರುಗಳು ತಾಲೂಕು ಚಟುವಟಿಕೆಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಬೈಂದೂರು ತಾಲೂಕು ಅಧ್ಯಕ್ಷರಾದ ಅಬ್ದುಲ್ ಸಮೀ ಹಳಗೇರಿ NNOನ ಸಂವಿಧಾನದ ಬಗ್ಗೆ ವಿವರಿಸಿದರು.

ಹೆಬ್ರಿ ತಾಲೂಕು ಅಧ್ಯಕ್ಷರಾದ ಮುಹಮ್ಮದ್ ರಫೀಕ್ ಅಜೆಕಾರು ಡಾಟಾ ಸಂಗ್ರಹಣೆಯ ಪ್ರಯೋಜನಗಳ ಬಗ್ಗೆ ವಿವರಿಸಿದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿಯವರು NNOನ ಭವಿಷ್ಯದ ಕಾರ್ಯಕ್ರಮಗಳ ಮೇಲೆ ಬೆಳಕು ಚೆಲ್ಲಿದರು. ಒಕ್ಕೂಟದ ಧ್ಯೇಯೊದ್ದೇಶವನ್ನು ಮುಂದಿಟ್ಟು ಕಾರ್ಯಕ್ರಮ ರೂಪಿಸಿ ಅದನ್ನು ಕಾರ್ಯಗತಗೊಳಿಸುವುದಕ್ಕೆ ಉಪ ಸಮಿತಿಗಳನ್ನು ರಚಿಸಿ ಸಂಚಾಲಕರನ್ನು ನೇಮಿಸಲಾಯಿತು. ಒಕ್ಕೂಟಕ್ಕೆ ಜಿಲ್ಲಾ ಕಚೇರಿಯ ಅಗತ್ಯವಿರುವುದರಿಂದ ಕಚೇರಿಯ ವ್ಯವಸ್ಥೆ ಕೇಂದ್ರ ಸಮಿತಿ ವತಿಯಿಂದ ಮಾಡಿಕೂಡಲು ಆಗ್ರಹಿಸುವಂತೆ ನಿರ್ಣಯಿಸಲಾಯಿತು. ನೂತನ ಜಿಲ್ಲಾ ಕೋಶಾಧಿಕಾರಿ ಮತ್ತು ಕಾಪು ಹಾಗೂ ಕಾರ್ಕಳ ತಾಲೂಕು ಘಟಕದಿಂದ ನೂತನ ಜಿಲ್ಲಾ ಉಪಾಧ್ಯಕ್ಷರನ್ನು ನೇಮಿಸುವಂತೆ ನಿರ್ಣಯಿಸಲಾಯಿತು. ನಿಷ್ಕ್ರಿಯ ಜಿಲ್ಲಾ ಸಮಿತಿ ಸದಸ್ಯರ ಬದಲು ಆಯಾಯಾ ತಾಲೂಕಿನಿಂದ ಹೊಸ ಸದಸ್ಯರನ್ನು ಆಯ್ಕೆ ಮಾಡುವ ಬಗ್ಗೆ ನಿರ್ಣಯಿಸಲಾಯಿತು. ಜಿಲ್ಲಾ ಜೊತೆ ಕಾರ್ಯದರ್ಶಿ ಅಬ್ದುಲ್ ಸಮದ್ ಖಾನ್ ವಂದಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಫಾಝಿಲ್ ಅಹ್ಮದ್ ಆದಿಉಡುಪಿ ನಿರೂಪಿಸಿದರು. ಜಿಲ್ಲಾ ಸಮಿತಿ ಸದಸ್ಯರಾದ ಹಾಫಿಝ್ ಫಝಲ್ ಕಂಡ್ಲೂರಿನ ದುವಾ ದೊಂದಿಗೆ ಸಭೆ ಮುಕ್ತಾಯ ಗೊಂಡಿತು.