*ಪ.ಜಾ ಅಲೆಮಾರಿ ಸಿಂಧೋಳ್ಳು ಸಮಾಜದ ಇಬ್ಬರು ಅಪ್ರಾಪ್ತ ಬಾಲಕಿಯರ ಅತ್ಯಾಚಾರ ಕೊಲೆ ಪ್ರತಿಭಟನೆ;*

ರಾಯಚೂರು: ಸಿಂಧನೂರು ಪಟ್ಣದಲ್ಲಿ SC ST ಅಲೆಮಾರಿ, ವಿಮುಕ್ತ ಬುಡಕಟ್ಟು ಮಹಾ ಸಭಾ (ರಿ) ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ಇತ್ತೀಚೆಗೆ ಬಳ್ಳಾರಿ ಜಿಲ್ಲೆ, ಸಿರಗುಪ್ಪ ತಾಲ್ಲೂಕು ತೆಕ್ಕಲಕೋಟೆ ಸಿಂಧೋಳ್ಳು ಸಮಾಜದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಶವಗಳನ್ನು ಗಮನಿಸಿದಾಗ ಯುವತಿಯರು ಚಿಂದಿ ಆಯುಲು ಹೋಗಿದ್ದಾಗ ಅತ್ಯಾಚಾರ ಮಾಡಿ ಕೊಲೆ ಮಾಡಿರುವಂತೆ ಕಂಡಿದ್ದು ಈ ರೀತಿಯ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ವಿಕೃತ ಕಾಮಿ ಕಿಡಿಗೇಡಿ ಆರೋಪಿಗಳ ಮೇಲೆ ಪೋಸ್ಕೊ ಕಾಯ್ದೆ, ಬಲವಂತ ಅತ್ಯವಾರ ಕೊಲೆ ಹಾಗೂ SC ST ದೌರ್ಜನ್ಯ ತಡೆ ಕಾಯ್ದೆ ಅಡಿ ಸಿರಗುಪ್ಪ ಪೋಲಿಸ್ ಇಲಾಖೆ ತಕ್ಷಣವೇ FIR ದಾಖಲಿಸಿ ಆರೋಪಿಗಳುನ್ನು ಈ ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು
ಈ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಿ ಪರಿಹಾರ ಒದಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿ ಇಂದು ದಿನಾಂಕ 09/11/2021 ರಂದು ಸಿಂಧನೂರು ತಹಶಿಲ್ದಾರ್ ಕಾರ್ಯಾಲಯ ಮುಂದೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಈ ಪ್ರತಿಭಟನೆಯಲ್ಲಿ SC-ST ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ (ರಿ) ರಾಯಚೂರು ಜಿಲ್ಲಾ ಅಧ್ಯಕ್ಷರಾದ ಶ್ರೀ ಶಿವರಾಜ್ ರುದ್ರಾಕ್ಷಿ, ಪ್ರಧಾನ ಕಾರ್ಯದರ್ಶಿ ಹುಸೇನಪ್ಪ ವಿಭೂತಿ, ಆಂಜನೇಯ ಮೋತಿ ಸುಡುಗಾಡು ಸಿದ್ದರು,
ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಶಾಮಣ್ಣ ಸಿಂಧೋಳ್ಳು. ಸಿಂಹಾದ್ರಿ. ಜಂಬಯ್ಯ ಬುಡ್ಗಜಂಗಮ. ಸುರೇಶ್ ಕಟ್ಟಿಮನಿ ಸೀಳ್ಳೇಕ್ಯಾತಾಸ್. ಕೊರಮ ಸಮಾಜದ ಮುಖಂಡರಾದ ಸಾಬಣ್ಣ ಭಜಂತ್ರಿ.ರಾಮಕೃಷ್ಣ ಭಜಂತ್ರಿ.CPI(ಎಂ ಎಲ್)
ರೆಡ್ ಸ್ಟಾರ್ ಎಂ ಗಂಗಾಧರ್. ಮಾದಿಗ ಮಹಾಸಭಾ ತಾ ಅ ಅಮರೀಶ್ ಗಿರಿಜಾಲಿ. ಪ್ರಜಾ ಜಾಗೃತಿ ಸಂಘಟನೆ ಅಧ್ಯಕ್ಷರು H ಜಗದೀಶ್ ವಕೀಲರು ಸಿಂಧನೂರು ಹಾಗೂ ಇನ್ನಿತರೆ ಪ್ರಗತಿಪರ,ದಲಿತಪರ,ಕಾರ್ಮಿಕಪರ ಸಂಘಟನಗಳ ಮುಖಂಡರು ಹಾಗೂ ಪ.ಜಾ & ಪ.ವರ್ಗ ಅಲೆಮಾರಿ, ದಲಿತ ಮುಖಂಡರುಗಳು ಪ್ರತಿಭಟನೆಯನ್ನು ಬೆಂಬಲಿಸಿ ಸರ್ಕಾರ ಮತ್ತು ಸಿರಗುಪ್ಪ ಪೋಲಿಸ್ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನಾ ಧರಣಿಯನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿ ಸಹಕರಿಸಿ ಹೋರಾಟವನ್ನು ಯಶಸ್ವಿಗೊಳಿಸಿದ ರಾಯಚೂರು ಜಿಲ್ಲೆಯ ಸಂಘದ ಎಲ್ಲಾ ತಾಲ್ಲೂಕು ಅಧ್ಯಕ್ಷರು ಹಾಗೂ ಎಲ್ಲ ಹಂತದ ಪಧಾಧಿಕಾರಿಗೆ ಹಾಗೂ ಕಾರ್ಯಕರ್ತ ಬಂಧುಗಳಿಗೆ ಹೃತ್ಪೂರ್ವಕವಾದ ಧನ್ಯವಾದಗಳು…

ಇಂತಿ
ಶಿವರಾಜ್ ರುದ್ರಾಕ್ಷಿ
ಅಧ್ಯಕ್ಷರು
SC ST ಅಲೆಮಾರಿ ವಿಮುಕ್ತ ಬುಡಕಟ್ಟು ಮಹಾಸಭಾ (ರಿ) ರಾಯಚೂರು ಜಿಲ್ಲಾ ಸಮಿತಿ