ಆಜಾದಿ ಕಾ ಅಮೃತ ಮಹೋತ್ಸವ; ಸ್ವಾತಂತ್ರ್ಯ ಸೇನಾನಿಗಳ ತ್ಯಾಗ, ಬಲಿದಾನದ ಸ್ಮರಣೆ

ಸರ್ದಾರ್ ವಲ್ಲಭ ಬಾಯ್ ಪಟೇಲರ ತತ್ವಾದರ್ಶಗಳು ರಾಷ್ಟೀಯ ಏಕತೆಗೆ ಸ್ಫೂರ್ತಿ – ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಬೆಂಗಳೂರು :ಆಜಾದಿ ಕಾ ಅಮೃತ ಮಹೋತ್ಸವ ಸ್ವಾತಂತ್ರ್ಯ ಸೇನಾನಿಗಳತ್ಯಾಗ, ಬಲಿದಾನದ ಸ್ಮರಣೆಯಾಗಿದ್ದು, ಈ ನಿಟ್ಟಿನಲ್ಲಿಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಬಾಯ್ ಪಟೇಲರುರಾಷ್ಟ್ರದ ಏಕತೆಗೆ ಸ್ಪೂರ್ತಿ ಎಂದು ಕೇಂದ್ರ ಸಾಮಾಜಿಕನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅವರು ಅಭಿಪ್ರಾಯಪಟ್ಟಿದ್ದಾರೆ.

 

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಕಾಶನವಿಭಾಗ ಪ್ರಕಟಿಸಿರುವ ಸ್ವಾತಂತ್ರ್ಯ ಹೋರಾಟ ಮತ್ತುಸ್ವಾತಂತ್ರ್ಯ ಸೇನಾನಿಗಳ ಪುಸ್ತಕಗಳನ್ನು ಕುರಿತುಮಾತನಾಡಿದ ಅವರು, ಅಪ್ರತಿಮ ಸ್ವಾತಂತ್ರ್ಯಹೋರಾಟಗಾರಾಗಿದ್ದ ದೇಶದ ಪ್ರಥಮ ಉಪಪ್ರಧಾನಿಮತ್ತು ಗೃಹ ಸಚಿವ ಸರ್ದಾರ್ ವಲ್ಲಭ ಬಾಯ್ ಪಟೇಲ್ಅವರ ತತ್ವಾದರ್ಶಗಳು ಯುವಜನತೆಗೆ ದಾರಿದೀಪವಾಗಿದೆಎಂದರು.

560ಕ್ಕೂ ಹೆಚ್ಚು ರಾಜ ಸಂಸ್ಥಾನಗಳಲ್ಲಿ ಹರಿದುಹಂಚಿಹೋಗಿದ್ದ ಭಾರತವನ್ನು ಒಂದು ರಾಷ್ಟ್ರವಾಗಿರೂಪಿಸುವಲ್ಲಿ ಮಹತ್ವದ ಪಾತ್ರವನ್ನು ಸರ್ದಾರ್ ಪಟೇಲರುವಹಿಸಿ ’ಏಕ ಭಾರತ-ಶ್ರೇಷ್ಠ ಭಾರತ’ದ ನಿರ್ಮಾಣಕ್ಕೆಸ್ಫೂರ್ತಿಯಾಗಿದ್ದು, ಇಂತಹ ವಿಚಾರಧಾರೆಯ ಪುಸ್ತಕಗಳುಮಾತೃಭಾಷೆ ಕನ್ನಡದಲ್ಲಿರುವುದು ಶ್ಲಾಘನೀಯ ಎಂದುಸಚಿವರು ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿಸ್ವಾತಂತ್ರ್ಯ ಸೇನಾನಿಗಳ ಪುಸ್ತಕಗಳು ರಿಯಾಯಿತಿ ದರದಲ್ಲಿಓದುಗರಿಗೆ ತಲುಪುತ್ತಿರುವುದರ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರಕಾಶನ ವಿಭಾಗದ ನಿರ್ದೇಶಕ ಎಂ.ದೇವೇಂದ್ರ ಹಾಗೂ ಉಪ ನಿರ್ದೇಶಕಿ, ಬಿ.ಕೆ. ಕಿರಣ್ ಮಯಿಉಪಸ್ಥಿತರಿದ್ದರು.