*ಐ. ಎಸ್. ಎಫ್ ಜುಬೈಲ್ ಅಧ್ಯಕ್ಷರಾಗಿ ನಝೀರ್ ತುಂಬೆ ಆಯ್ಕೆ*
ಇಂಡಿಯನ್ ಸೋಶಿಯಲ್ ಫಾರಂ ಜುಬೈಲ್ ರಾಜ್ಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ದಮ್ಮಾಮ್ ನ ಇಸ್ತಿರಾ ದಲ್ಲಿ ಜರುಗಿತು. ಕಾರ್ಯಕ್ರಮದ ಮೊದಲಿಗೆ ಕಳೆದ ಅವಧಿಯಲ್ಲಿ ಮಾಡಿದಂತಹ ಕೆಲಸ-ಕಾರ್ಯಗಳ ಬಗ್ಗೆ ಪ್ರಧಾನ ಕಾರ್ಯದರ್ಶಿಯವರಾದ ಅಶ್ರಫ್ ಕುಂಪಲರವರು ವಿವರಿಸಿದರು.
ನಂತರ ನಡೆದ ಚುನಾವಣೆಯಲ್ಲಿ ಬರುವ ಮೂರು ವರ್ಷಗಳ ಅವಧಿಗೆ ನೂತನ ನಾಯಕರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ನಝೀರ್ ತುಂಬೆ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಕುಂಪಲ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ನದೀಮುಲ್ಲಾ ಶರೀಫ್ ಮೈಸೂರು ಹಾಗು ಅಶ್ರಫ್ ಉಳ್ಳಾಲ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಅನೀಸ್ ಹಳೆಯಂಗಡಿ,ಸೈಫುಲ್ಲಾ ತೋಡಾರ್, ಸಲೀಂ ಉಡುಪಿ ಇವರನ್ನು ಆಯ್ಕೆ ಮಾಡಲಾಯಿತು. ಹಾಗೂ ಅಬೂಬಕ್ಕರ್ ಸಿದ್ದೀಕ್, ರಫೀಕ್ ಕೇಪು, ಹಸನ್ ಕಿನ್ನಿಗೋಳಿ, ಶಮೀರ್ ಮೂಳೂರು, ಸಾಮತ್ ಕುಳಾಯಿ, ಇಂತಿಯಾಜ್ ಬಜ್ಪೆ ಇವರನ್ನು ರಾಜ್ಯ ಸಮಿತಿಯ ಸದಸ್ಯರಾಗಿ ನೇಮಿಸಲಾಯಿತು.