ಎನ್ಐಎ ತನಿಖೆಯ ಬಗ್ಗೆ ಗೊಂದಲ ಸ್ರಷ್ಟಿ ಬೇಡ —ಯು.ಟಿ.ಖಾದರ್
ಮಂಗಳೂರು,ಆ.13: ಎನ್ಐಎ ತನಿಖೆಯ ಬಗ್ಗೆ ಅನಗತ್ಯವಾದ ಗೊಂದಲ ಸ್ರಷ್ಟಿ ಮಾಡು ವುದು ಸರಿಯಲ್ಲ.ತನಿಖೆಯಿಂದ ಸತ್ಯ ಹೊರಬೀಳುತ್ತದೆ.ಅಲ್ಲಿಯವರೆಗೆ ತಾಳ್ಮೆ ವಹಿಸಬೇಕು ಈ ನಿಟ್ಟಿನಲ್ಲಿ ತಾಳ್ಮೆ ವಹಿಸಿರು ವ ಉಳ್ಳಾಲದ ಜನತೆಯನ್ನು ಅಭಿನಂದಿ ಸುವುದಾಗಿ ಶಾಸಕ ಮಾಜಿ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿಯ ಲ್ಲಿಂದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಉಳ್ಳಾಲದ ಜನತೆ ಸೌಹಾರ್ದತೆಯಲ್ಲಿ ಇದ್ದಾರೆ.ಅವರ ನಡುವೆ ಕೆಲವರು ಗೊಂದಲ ಸ್ರಷ್ಟಿಸುವ ಪ್ರತಿಭಟನೆ,ಹೇಳಿಕೆ ನೀಡುತ್ತಿರುವುದು ಸರಿಯಲ್ಲ.ಉಳ್ಳಾಲದ ಜನತೆ ಈ ಹಿಂದೆಯೂ ಭಯೋತ್ಫಾದನೆಗೆ ಬೆಂಬಲ ನೀಡಿಲ್ಲ.ಅಂತಹ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ.ಲವ್ ಜಿಹಾದ್ ಬಗ್ಗೆ ಕಾನೂನು ತರುತ್ತೇವೆ ಎಂದು ಬಿಜೆಪಿ ಹೇಳಿದೆ.ಆ ರೀತಿಯ ಕಾನೂನು ಏಕೆ ಮಾಡಲಿಲ್ಲ.ಅದನ್ನು ಜಾರಿ ಮಾಡಲು ಅವರು ಸರಕಾರವನ್ನು ಏಕೆ ಒತ್ತಾಯ ಮಾಡುತ್ತಿಲ್ಲ ? ಜನರಲ್ಲಿ ಏಕೆ ಗೊಂದಲ ಸ್ರಷ್ಟಿಸುತ್ತಿದ್ದಾರೆ ? ಪ್ರತಿಭಟನೆ ಮಾಡುವವರು ಬಿಹೆಪಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಿ ಎಂದು ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿ. ತಿಳಿಸಿದ್ದಾರೆ.
*ಸಿ.ಎಂ.ಗೆ ಅವಮಾನ ಮಾಡುವ ಹೇಳಿಕೆ ಸರಿಯಲ್ಲ :-ತಲಪಾಡಿ ಗಡಿ ಪ್ರದೇಶದಲ್ಲಿ ಸಿ.ಎಂ ಭೇಟಿ ಕಾರ್ಯಕ್ರಮ ಅಂತಿಮ ಕ್ಷಣದಲ್ಲಿ ಬದಲಾವಣೆಯಾಗಿದೆ.ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯದ ಸಿ.ಎಂಗೆ ಅವಮಾನವಾಗುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ.ರಾಜ್ಯದ ಸಿ.ಎಂ ಮಂಗಳೂರಿಗೆ ಭೇಟಿ ನೀಡಿ ಈ ಬಗ್ಗೆ ಚರ್ಚಿಸಿದ್ದಾರೆ.ಆ ಕಾರಣದಿಂದ ಮತ್ತೆ ಗಡಿಭಾಗಕ್ಕೆ ಅವರೆ ಹೋಗಬೇಕಾದ ಅನಿವಾರ್ಯ ತೆ ಕಂಡು ಬರುವುದಿಲ್ಲ.ಈ ಬಗ್ಗೆ ಅವಮಾನ ಕಾರಿ ಹೇಳಿಕೆಗೆ ನನ್ನ ಬೆಂಬಲ ಇಲ್ಲ ಎಂದು ಯು.ಟಿ.ಖಾದರ್ ಹೇಳಿದ್ದಾರೆ.
*ಕೋಮುವಾದದ ಅಫೀಮು ಅಮಲಿನಲ್ಲಿರುವವರು ಮಾತ್ರ ಕಾಂಗ್ರೆಸ್ ಮುಖಂಡರ ಹೆಸರಿನಲ್ಲಿ ಹುಕ್ಕಾ ಬಾರ್ ಮಾಡಿ ಎನ್ನುವ ಹೇಳಿಕೆ ನೀಡಲು ಸಾಧ್ಯ. ನಮ್ಮ ಪಕ್ಷ ಹಸಿದವರಿಗೆ ಬಡವರಿಗೆ ಅನ್ನ ನೀಡಿದ ಸಹಾಯ ಮಾಡಿದ ಪಕ್ಷ. ಅದು ನಮ್ಮ ಸಂಸ್ಕೃತಿ.ಅವರ ಹೇಳಿಕೆಯಿಂದ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
*ವಾಜಪೇಯಿ ಹೆಸರಿನ ಯೋಜನೆಯ ಹೆಸರುಗಳನ್ನು ನಮ್ಮ ಪಕ್ಷ ಅಧಿಕಾರದ ಲ್ಲಿದ್ದಾಗ ಬದಲಿಸಿರುವುದಿಲ್ಲ.ಹೊಸ ಯೋಜನೆ ಮಾಡಿ ಅದಕ್ಕೆ ಹೊಸ ಹೆಸರಿಡಿ ನಮ್ಮ ಆಕ್ಷೇಪ ಇಲ್ಲ.ಈ ಹಿಂದೆ ಮಾಡಿರುವ ವಾಜಪೇಯಿ ವಸತಿ ಯೋಜನೆಯಲ್ಲಿ ಬಡವರಿಗೆ ಎಷ್ಟು ಜನರಿಗೆ ವಸತಿ ನೀಡಲಾಗಿದೆ ಎನ್ನುವುದನ್ನು ಬಿಜೆಪಿ ಬಹಿರಂಗ ಪಡಿಸಲಿ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು,ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳಾದ ಸದಾಶಿವ ಉಳ್ಳಾಲ್ , ಶಶಿಕಲಾ,ಫಾರೂಕ್ ತುಂಬೆ,ಸಮೀರ್, ಜಕ್ರಿಯ ಮೊದಲಾದ ವರು ಉಪಸ್ಥಿತರಿದ್ದರು.