ಇಂದು ಬೆಂಗಳೂರಿನ ಹಮೀದ್ ಷಾ ದರ್ಗಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಿ.ಎ.ಬಾವಾ ಹಾಗೂ ಪಧಾದಿಕಾರಿಗಳು ತಮ್ಮ ಕೇಂದ್ರ ಕಛೇರಿಗೆ ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕರು, ಮುಸ್ಲಿಂ ಯೂನಿಟಿ ಸಂಸ್ಥಾಪಕ,ಕೊಡುಗೈ ದಾನಿಗಳು, ಆದ ಶ್ರೀಯುತ *ಡಾ. ಬೊಮ್ಮನಹಳ್ಳಿ ಬಾಬು* ರವರನ್ನು ಆಮಂತ್ರಿಸಿದರು. ದರ್ಗಾ ಮಂಡಳಿ ವತಿಯಿಂದ ಬಡ -ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನಡೆಸುತ್ತಿರುವ ವಿವಿದೋದ್ದೇಶ ಸೇವಾ ಕಾರ್ಯಕ್ರಮಗಳನ್ನು ಪರಿಚಯಿಸಿದರು. ರಕ್ತನಿಧಿ ಕೇಂದ್ರ, ಆರೋಗ್ಯ ಕೇಂದ್ರ, ಬಡ ಮಕ್ಕಳಿಗಾಗಿ ತಾಂತ್ರಿಕ ವೃತ್ತಿ ತರಬೇತಿ ಕೇಂದ್ರ, ಇತ್ಯಾದಿ. ಈ ಸಂಧರ್ಭದಲ್ಲಿ ದರ್ಗಾ ಆಡಳಿತ ಮಂಡಳಿಯ ಅದ್ಯಕ್ಷರಾದ ಜನಾಬ್ ಜಿ.ಎ. ಬಾವಾ ರವರು ಮತ್ತು ಪದಾಧಿಕಾರಿಗಳು ಹಾಜರಿದ್ದು ,ಡಾ. ಬೊಮ್ಮನಹಳ್ಳಿ ಬಾಬುರವರನ್ನು ಗೌರವಿಸಿ ಸನ್ಮಾನಿಸಿದರು.ಇದೇ ಸಂದರ್ಭದಲ್ಲಿ ಬೊಮ್ಮನಹಳ್ಳಿ ಬಾಬುರವರು ಸಂಸ್ಥೆಯ ಅಭಿವೃದ್ಧಿ ಕಾರ್ಯ ಕ್ರಮ ಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿ ಶುಭ ಹಾರೈಸಿದರು.
ಮತ್ತು ಈ ಒಂದು ಸಮಾಜಮುಖಿ ಸೇವಾ ಕಾರ್ಯಕ್ರಮಕ್ಕೆ ನನ್ನಿಂದ ತಾವು ಯಾವುದೇ ರೀತಿಯ ಸಹಾಯವನ್ನು ಅಪೇಕ್ಷಿಸಿದರೂ ಸಹಾಯ ಮಾಡಲು ನಾನು ಸಿದ್ದನಿದ್ದೇನೆ, ಹಾಗು ನಾನು ಸದಾ ನಿಮ್ಮೊಡನೆ ಇರುತ್ತೇನೆ, ಎಂಬ ಭರವಸೆಯನ್ನು ನೀಡಿದರು.

~ *ಡಾ.ಬೊಮ್ಮನ‌ಹಳ್ಳಿ ಬಾಬು ಅಭಿಮಾನಿ ಬಳಗ* – ಬೆಂಗಳೂರು.