*ಕರ್ನಾಟಕ ರಾಜಕೀಯ*

ಭಾರತದ ಒಕ್ಕೂಟದಲ್ಲಿ 6ನೇ ದೊಡ್ಡ ರಾಜ್ಯ ಕರ್ನಾಟಕ, ಒಟ್ಟು 196.650 ಚದರ ಕಿಲೋಮೀಟರ್ ವಿಸ್ತೀರ್ಣ, 6.5 ಕೋಟಿ ಜನಸಂಖ್ಯೆಯಲ್ಲಿ ಶೇ. 80ರಷ್ಟು ಸಾಕ್ಷರತೆ ಇರುವ ರಾಜ್ಯ ಕರ್ನಾಟಕ. ಆದರೆ ಆಡಳಿತ ನಡೆಸುವ ಎಂ.ಪಿ, ಎಂ.ಎಲ್.ಎ ಹಾಗೂ ಇತರ ಜನಪ್ರತಿನಿಧಿಗಳನ್ನು ಮತ ಹಾಕಿ ಚುನಾಯಿಸುವ ವಿಷಯದಲ್ಲಿ ರಾಜಕೀಯ ಪಕ್ವತೆ ಕಡಿಮೆ ಇದೆ. ದಕ್ಷಿಣ ಭಾರತ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯದಲ್ಲಿ ಮಾತ್ರ ಬಿಜೆಪಿ ಗಟ್ಟಿಯಾಗಿ ಬೆಳದಿದೆ ಹಾಗೂ ಅಧಿಕಾರದಲ್ಲಿದೆ.

ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ಸಣ್ಣ-ಪುಟ್ಟ ಮತ್ತು ದೊಡ್ಡ ರಾಜಕೀಯ ಪಕ್ಷಗಳು ಚುನಾವಣಾ ರಾಜಕೀಯದಲ್ಲಿ ಸಕ್ರಿಯವಾಗಿದೆ. ಬಿ.ಜೆ.ಪಿ, ಕಾಂಗ್ರೆಸ್, ಜೆ.ಡಿ.ಎಸ್, ಬಿ.ಎಸ್.ಪಿ, ಆಮ್ ಆದ್ಮಿ ಪಕ್ಷ, ಜೆ.ಡಿ.ಯು, ಎಸ್.ಡಿ.ಪಿ.ಐ, ಸಿ.ಪಿ.ಐ, ಸಿ.ಪಿ.ಎಂ, ಎಂ.ಐ.ಎಂ, ಡಬ್ಲೂö್ಯ.ಪಿ.ಐ ಮತ್ತಿತರ ಕೆಲವು ರಾಜಕೀಯ ಪಕ್ಷಗಳು ಮಾತ್ರ ಚುನಾವಣೆಗಳಲ್ಲಿ ಗೆದ್ದಿರುತ್ತಾರೆ. ರಾಜ್ಯದಲ್ಲಿ ಎಸ್.ಡಿ.ಪಿ.ಐ ಪಕ್ಷವು ನಾಲ್ಕನೇ ದೊಡ್ಡ ಪಕ್ಷವಾಗಿ ಜನರ ಮಧ್ಯೆ ಗುರುತಿಸಲಾಗುತ್ತಿದೆ.

ಇತ್ತೀಚಿನ ತಿಂಗಳುಗಳಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ ಮತ್ತು ಕಾಂಗ್ರೆಸ್ ಎರಡು ಪಕ್ಷಗಳಲ್ಲಿ ಸ್ಥಾನಮಾನ ಮತ್ತು ಅಧಿಕಾರಕ್ಕಾಗಿ ಪರಸ್ಪರ ಕಿತ್ತಾಟ, ಹೇಳಿಕೆ, ಹೈಕಮಾಂಡ್ ದೂರು, ಕಾಲೆಳೆಯುವಿಕೆ ಹೆಚ್ಚಾಗಿದೆ. ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಬಿ.ಜೆ.ಪಿಯ ಯಡಿಯೂರಪ್ಪ ಯಾವ ಕ್ಷಣದಲ್ಲಾದರೂ ಕುರ್ಚಿ ಖಾಲಿ ಮಾಡುವ ಸಂಭವವಿದೆ.

*ಬಿಜೆಪಿ* :- 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿ.ಜೆ.ಪಿ ಪಕ್ಷವು 25 ಕ್ಷೇತ್ರಗಳಲ್ಲಿ ಗೆದ್ದಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 224 ಕ್ಷೇತ್ರಗಳಲ್ಲಿ ಬಿ.ಜೆ.ಪಿ ಪಕ್ಷವು 104 ಕ್ಷೇತ್ರಗಳನ್ನು ಗೆದ್ದಿತ್ತು. ಆದರೆ ಸರಕಾರ ನಡೆಸಲು ಬಹುಮತದ 113 ಸಂಖ್ಯಾಬಲ ವಿಲ್ಲದ ಕಾರಣ ಅಧಿಕಾರದಿಂದ ದೂರ ಉಳಿಯಬೇಕಾಯಿತು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಬಂದು ಒಂದು ವರ್ಷಗಳ ಬಳಿಕ ಕಾಂಗ್ರೆಸ್-ಜೆ.ಡಿ.ಎಸ್‌ನ 17 ಶಾಸಕರುಗಳನ್ನು ಆಪರೇಷನ್ ಕಮಲದ ಹೆಸರಿನಲ್ಲಿ ಕುದುರೆ ವ್ಯಾಪಾರ ಮಾಡಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರ ಉರುಳಿಸಿ ಬಿ.ಜೆ.ಪಿಯ ಯಡಿಯೂರಪ್ಪ ಮುಖ್ಯಮಂತ್ರಿಯಾದರು.

ಕಳೆದ 30 ವರ್ಷದಿಂದ ಬಿ.ಜೆ.ಪಿ ಪ್ರತಿ ಚುನಾವಣೆಗಳಲ್ಲಿ ತನ್ನ ಮತಗಳಿಕೆ ಪ್ರಮಾಣ ಮತ್ತು ಸೀಟು ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇದೆ. ಒಮ್ಮೆ ಸಮ್ಮಿಶ್ರ ಸರ್ಕಾರ ಹಾಗೂ ಎರಡು ಬಾರಿ ಸ್ವತಂತ್ರವಾಗಿ ಸರ್ಕಾರ ರಚಿಸಿದೆ. ಹಿಂದೆ ಬ್ರಾಹ್ಮಣರ ಪಕ್ಷವಾಗಿದ್ದ ಬಿ.ಜೆ.ಪಿ ಪಕ್ಷವು ಅಧಿಕಾರ ಹಿಡಿಯಲು ಹಂತಹಂತವಾಗಿ ಲಿಂಗಾಯುತ, ವಾಲ್ಮೀಕಿ ನಾಯಕರು, ಭೂವಿ, ಲಂಬಾಣಿ, ಈಡಿಗ, ಬಲ್ಲವ, ಮಾದಿಗ, ಬಂಟ, ಜೈನ ಈ ರೀತಿ ಹಲವು ಜಾತಿಗಳ 2-3 ಶೇಕಡ ಮತಗಳನ್ನು ಬುಟ್ಟಿಗೆ ಹಾಕುತ್ತಾ ಮತಬ್ಯಾಂಕ್ ಮಾಡಿ ಅಧಿಕಾರಕ್ಕೆ ಬಂದಿದೆ.

ಲಿಂಗಾಯತ ಸಮುದಾಯದ ಯಡಿಯೂರಪ್ಪ ಎರಡು ಅವಧಿಯಲ್ಲಿ ಬಿ.ಜೆ.ಪಿ ಪಕ್ಷದಿಂದ ಮುಖ್ಯಮಂತ್ರಿಯಾದರು. ಅವರಿಗೆ ಪ್ರಬಲ ಲಿಂಗಾಯತ ಸಮುದಾಯದ ಬೆಂಬಲವಿದ್ದು, ರಾಜ್ಯದಲ್ಲಿ ಈ ಸಮುದಾಯದ ಜನಸಂಖ್ಯೆ ಶೇ.15ರಷ್ಟಿದೆ. ಆದರೆ ಇತ್ತೀಚಿಗೆ ಬಿ.ಜೆ.ಪಿ ಪಕ್ಷದ ಬ್ರಹ್ಮಣ ನಾಯಕತ್ವ ಯಡಿಯೂರಪ್ಪರನ್ನು ಅಧಿಕಾರದಿಂದ ಇಳಿಸಲು ಶತಪ್ರಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಬರಪರಿಹಾರ, ಕೋವಿಡ್ ಪರಿಹಾರ, ಚಂಡಮಾರುತ ಪರಿಹಾರ, ಜಿ.ಎಸ್.ಟಿ ತೆರಿಗೆ ಪಾಲು ರಾಜ್ಯಕ್ಕೆ ಕಡಿಮೆ ಬರುವಂತೆ ಮಾಡಿದ್ದಾರೆ. ಬಿ.ಜೆ.ಪಿಯಲ್ಲಿ ಯಡಿಯೂರಪ್ಪ ಮಗ ವಿಜಯೇಂದ್ರ ಲಿಂಗಾಯತ ಸಮುದಾಯದ ದೊಡ್ಡ ನಾಯಕರಾಗಿ ಸರಕಾರ ಮತ್ತು ಪಕ್ಷದಲ್ಲಿ ಪ್ರಬಲಶಾಲಿಯಾಗುತ್ತಿದ್ದಾರೆ. ಇದು ಬಿ.ಜೆ.ಪಿಯ ಹಿರಿಯ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ಬಿ.ಜೆ.ಪಿಯವರ ಒಳಜಗಳದಿಂದ ಸರಕಾರ ಒಟ್ಟು ಅವಧಿಗೂ ಮುನ್ನ ಚುನಾವಣೆ ನಡೆಯುವ ಸಂಭವವೂ ಇದೆ

*ಕಾಂಗ್ರೆಸ್* :- ರಾಜ್ಯದಲ್ಲಿ ಹೆಚ್ಚು ಬಾರಿ ಅಧಿಕಾರ ಚಲಾಯಿಸಿದ ಕಾಂಗ್ರೆಸ್ ಪಕ್ಷ ಈಗ ದುರ್ಬಲವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿರುತ್ತಾರೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ದೇಶದಾದ್ಯಂತ ಪ್ರಶಂಸಿಸಲ್ಪಟರೂ 2ನೇ ಅವಧಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಆ ಚುನಾವಣೆಯಲ್ಲಿ ಮುಸ್ಲಿಂ ಮತ್ತು ಕ್ರೆಸ್ತ್ರ ರು ಶೇ. 95ರಷ್ಟು ಮತದಾರರು ಕಾಂಗ್ರೆಸ್ಸಿಗೆ ಬೆಂಬಲಿಸಿದ್ದರು. ನಂತರ ಸ್ಥಾನದಲ್ಲಿ ಕುರುಬ, ಹೊಳೆಯ, ರೆಡ್ಡಿ ಮತ್ತಿತ್ತರು ಕೆಲವು ಓ.ಬಿ.ಸಿ ಜಾತಿಯವರು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದರು. ದಲಿತರ ಶೇ. 60ಕ್ಕೂ ಹೆಚ್ಚು ಮತ ಬಿ.ಜೆ.ಪಿಗೆ ಹೋಗಿತ್ತು.

ಕಾಂಗ್ರೆಸ್‌ನೊಳಗೆ ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್, ಡಿ.ಕೆ ಶಿವಕುಮಾರ್, ಮತ್ತಿತ್ತರ ಬಣಗಳು ಸ್ವಪಕ್ಷೀಯ ಶಾಸಕರನ್ನು ಸೋಲಿಸಲು ಹಿಂಬಾಗಿಲ ಪ್ರಯತ್ನ ಮಾಡಿದ್ದರು. ಸಿದ್ದರಾಮಯ್ಯನವರನ್ನು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು. ಉತ್ತರ ಕರ್ನಾಟಕದ ಬಾದಾಮಿಯಲ್ಲಿ ಸ್ಪರ್ಧಿಸುವುದರಿಂದ ಅವರು ಈಗ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಈಗ ಪಕ್ಷದ ರಾಜ್ಯಾಧ್ಯಕ್ಷರಾಗಿ ಒಕ್ಕಲಿಗ ಸಮುದಾಯದ ನಾಯಕ ಡಿ.ಕೆ ಶಿವಕುಮಾರ್‌ರವರು ಸ್ವಲ್ಪಮಟ್ಟಿಗೆ ಕಾಂಗ್ರೆಸ್ ಚುರುಕುತನ ತರುತ್ತಿದ್ದಾರೆ. ಆದರೆ ಅಲ್ಪ ನಾಯಕರ ಕಚ್ಚಾಟ ಜೋರಾಗಿದೆ.

ಪಕ್ಷದ 10ಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿ ಬಿ.ಜೆ.ಪಿ ಪಕ್ಷದಿಂದ ಶಾಸಕರಾಗಿ ಪುನರಾಯ್ಕೆಯಾಗಿದ್ದಾರೆ. ಈಗ ಕಾಂಗ್ರೆಸ್ಸಿನ ಒಳಗೆ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಪೈಪೋಟಿ ಜೋರಾಗಿದೆ. ಮುಂದೆ ನಡೆಯಲಿರುವ ಚುನಾವಣೆಯಲ್ಲೂ ಸ್ವಪಕ್ಷೀಯ ಶಾಸಕರುಗಳನ್ನು ಸೋಲಿಸಲು ತೆರೆಮೆರೆಯಲ್ಲಿ ಪ್ರಯತ್ನ ನಡೆಯುತ್ತಿದೆ. ದೊಡ್ಡ ವಿರೋಧಪಕ್ಷವಾಗಿ ರಾಜ್ಯದ ಬಿ.ಜೆ.ಪಿಯ ಜನವಿರೋಧಿ ನೀತಿ-ನಡುವಳಿಕೆಗಳ ಬಗ್ಗೆ ಕಾಂಗ್ರೆಸ್ ಬೀದಿ ಹೋರಾಟ ಮಾಡುವುದರಲ್ಲಿ ವಿಫಲವಾಗಿದೆ. ಗೆದ್ದಮೇಲೆ ಜಾತ್ಯತೀತ ಶಾಸಕರು ಬಿ.ಜೆ.ಪಿಗೆ ಪಕ್ಷಾಂತರ ಆಗುವುದು ಮಾಮೂಲಾಗಿದೆ.

*ಜೆಡಿಎಸ್* :- ಪಕ್ಷದ ನಾಯಕ ಹೆಚ್.ಡಿ ದೇವೇಗೌಡರು ದೇಶದ ಪ್ರಧಾನಿ ಹಾಗೂ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರ ಮಗ ಕುಮಾರಸ್ವಾಮಿ 2 ಬಾರಿ ಮುಖ್ಯಮಂತ್ರಿಯಾಗಿದ್ದರು. ಅವರ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕರಾಗಿದ್ದಾರೆ. ದೇವೇಗೌಡರ ಹಿರಿಯ ಮಗ ರೇವಣ್ಣ ಎರಡು ಬಾರಿ ಸಚಿವರಾಗಿದ್ದು, ಈಗ ಶಾಸಕರಾಗಿದ್ದಾರೆ. ಇವರ ಮಗ ಹಾಸನದ ಎಂ.ಪಿ. ಈ ರೀತಿ ಜೆಡಿಎಸ್ ಪಕ್ಷ ದೇವೇಗೌಡರ ಕುಟುಂಬದ ಪಕ್ಷವಾಗಿ ಬೆಳೆದಿದ್ದು, ರಾಜ್ಯದಲ್ಲಿ 12 ಶೇಕಡ ವಿರುವ ಒಕ್ಕಲಿಗ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ಬೆಂಬಲಿಸುತ್ತದೆ.

ರಾಜ್ಯದ ಹಳೆ ಮೈಸೂರು ಭಾಗದಲ್ಲಿ ಮಾತ್ರ ಜೆಡಿಎಸ್ ಸಕ್ರಿಯವಾಗಿದೆ. ಕರಾವಳಿ, ಮಧ್ಯ-ಕರ್ನಾಟಕ, ಹೈದರಾಬಾದ್ ಕರ್ನಾಟಕ, ಬೆಂಗಳೂರು ಹಾಗೂ ಬಾಂಬೆ-ಕರ್ನಾಟಕದ ಭಾಗಗಳಲ್ಲಿ ಜೆಡಿಎಸ್ ಪಕ್ಷವು ಪ್ರಬಲವಾಗಿಲ್ಲ. 2018ರ ಚುನಾವಣೆಯಲ್ಲಿ ಮೂರು ಪಕ್ಷಗಳಿಗೆ ಪೂರ್ಣಬಹುಮತ ಇಲ್ಲದ ಕಾರಣ ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿಗೆ ಬೆಂಬಲ ನೀಡಿ, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದರು. ಆದರೆ ಈ ಸರಕಾರ ಎರಡು ವರ್ಷವು ನಡೆಯಲಿಲ್ಲ. ಎರಡು ಪಕ್ಷದೊಳಗಿನ ಹೊಂದಾಣಿಕೆ ಇರಲಿಲ್ಲ. ಬಿ.ಜೆ.ಪಿ ಪಕ್ಷವು ಎರಡು ಪಕ್ಷಗಳ 17 ಶಾಸಕರುಗಳನ್ನು ಲಂಚ ಕೊಟ್ಟು ಖರೀದಿಸಿ ಶಾಸಕತ್ವಕ್ಕೆ ರಾಜೀನಾಮೆ ಕೊಡಿಸುವುದರ ಮೂಲಕ ಕುಮಾರಸ್ವಾಮಿ ಸರಕಾರ ಬಹುಮತವಿಲ್ಲದ ಬಿದ್ದಿತ್ತು.

*ಎಸ್.ಡಿ.ಪಿ.ಐ:-* 2009ರಲ್ಲಿ ಸ್ಥಾಪನೆಯಾದ ಎಸ್.ಡಿ.ಪಿ.ಐ ಪಕ್ಷವು ಸ್ಥಳೀಯ ಚುನಾವಣೆಗಳಲ್ಲಿ ಈಗ 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದಿದೆ. ಬಿ.ಬಿ.ಎಂ.ಪಿ, ಕಾರ್ಪೊರೇಷನ್, ಮುನ್ಸಿಪಾಲಿಟಿ, ಗ್ರಾಮ ಪಂಚಾಯತ್‌ಗಳಲ್ಲಿ ಸದಸ್ಯರುಗಳಿದ್ದಾರೆ. ಪಕ್ಷದ ಕಾರ್ಯಕರ್ತರು ಗ್ರಾಮ ಪಂಚಾಯತ್‌ಗಳಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಮುನ್ಸಿಪಾಲಿಟಿಯ ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿಗಳಲ್ಲಿ ಅಧ್ಯಕ್ಷರು ಹಾಗೂ ಸದಸ್ಯರುಗಳಾಗಿದ್ದಾರೆ. ಈ ರೀತಿ ಹಂತ ಹಂತವಾಗಿ ರಾಜಕೀಯ ಅಧಿಕಾರವನ್ನು ಪಕ್ಷವು ಪಡೆಯುತ್ತಿದೆ. ಹಲವಾರು ಸ್ಥಳೀಯ ಸಂಸ್ಥೆಗಳಲ್ಲಿ ಬಿ.ಜೆ.ಪಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜೆ.ಡಿ.ಎಸ್-ಕಾಂಗ್ರೆಸ್ ಪಕ್ಷಗಳಿಗೆ ಬೆಂಬಲ ನೀಡಿದೆ.

ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲೂ ಎಸ್.ಡಿ.ಪಿ.ಐ ಪಕ್ಷದ ಕಾರ್ಯಕರ್ತರ ಪಡೆ ಇದೆ. ಹೆಚ್ಚಿನೆಡೆ ಜಿಲ್ಲೆ, ಅಸೆಂಬ್ಲಿ, ಮುನ್ಸಿಪಾಲಿಟಿ, ಗ್ರಾಮ, ವಾರ್ಡ್ ಹಾಗೂ ಬೂತ್ ಸಮಿತಿಗಳನ್ನು ರಚಿಸಿ ಶಿಸ್ತುಬದ್ಧವಾಗಿ ಪಕ್ಷವನ್ನು ಸಂಘಟಿಸುವ ಕೆಲಸ ನಡೆಯುತ್ತಿದೆ. ಕರೋನಾ ಸಂತ್ರಸ್ತರ ಅಂತ್ಯಸAಸ್ಕಾರ, ಆಹಾರ ವಿತರಣೆ, ವಿದ್ಯಾರ್ಥಿವೇತನ, ಆರೋಗ್ಯ ಸೇವೆ, ರಕ್ತದಾನ, ನೆರೆ-ಚಂಡಮಾರುತ ಸಂದರ್ಭಗಳಲ್ಲಿ ಜಾತಿಭೇದವಿಲ್ಲದೆ ಈ ರೀತಿ ನೂರಾರು ಜನಸೇವೆ ಕಾರ್ಯಗಳನ್ನು ಪಕ್ಷದ ಕಾರ್ಯಕರ್ತರು ಮಾಡುತ್ತಿದ್ದಾರೆ.

ಅಲ್ಲದೆ ಭ್ರಷ್ಟಾಚಾರ, ತಾರತಮ್ಯ, ಫ್ಯಾಶಿಸಂ, ಕೋಮುವಾದ, ಭೂಮಿ ಹಕ್ಕು ಹೋರಾಟ, ಕೋವಿಡ್ ಪರಿಹಾರ, ಸರಕಾರದ ಜನವಿರೋಧಿ ನೀತಿ, ಬೆಲೆ ಏರಿಕೆ ಮೊದಲಾದ ವಿಷಯಗಳಲ್ಲಿ ನಿರಂತರ ಪ್ರತಿಭಟನೆ, ಬೀದಿ ಹೋರಾಟ, ಕಾನೂನು ಹೋರಾಟ, ಪತ್ರಿಕಾ ಪ್ರಕಟಣೆಗಳ ಮೂಲಕ ಪಕ್ಷವು ಜನಪ್ರಿಯವಾಗುತ್ತಿದೆ. ಈಗ ನಾಡಿನ ನಾಲ್ಕನೇ ದೊಡ್ಡ ಪಕ್ಷವಾಗಿ ಹೊರಹಮ್ಮಿದೆ. ದಲಿತರು, ಕ್ರೈಸ್ತ, ಕಾರ್ಮಿಕರು, ಮಹಿಳೆಯರು, ಹಿಂದುಬಾAಧವರು, ಮತ್ತಿತ್ತರು ವಿವಿಧ ವರ್ಗಗಳ ಜನರು ಬೆಂಬಲಿಗರಾಗಿ, ಮತದಾರರಾಗಿ,ಸದಸ್ಯರಾಗಿ, ನಾಯಕರುಗಳಾಗಿ ಪಕ್ಷವನ್ನು ಬಲಿಷ್ಠಗೊಳಿಸುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಬಿಬಿಎಂಪಿ, ಮತ್ತಿತ್ತರ ಸ್ಥಳೀಯ ಚುನಾವಣೆಗೆ ಎಸ್.ಡಿ.ಪಿ.ಐ ಈಗಿಂದಲೇ ಬೂತ್ ಮಟ್ಟದಿಂದ ಪೂರ್ವತಯಾರಿ ನಡೆಸುತ್ತಿದೆ.

ಕರ್ನಾಟಕದ ರಾಜಕಾರಣದಲ್ಲಿ ಎಸ್.ಡಿ.ಪಿ.ಐ ಪಕ್ಷವು ಸಿದ್ಧಾಂತ, ಹೋರಾಟ, ನಿಸ್ವಾರ್ಥ ಸೇವೆ, ಭ್ರಷ್ಟಾಚಾರರಹಿತ ಆಡಳಿತ ಮೂಲಕ ಜನಸೇವೆ ಮಾಡುತ್ತಿದೆ. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಅಧಿಕಾರದಲ್ಲಿ ಬಂದಿದ್ದ ಬಿ.ಜೆ.ಪಿ. ಜೆ.ಡಿ.ಎಸ್ ಹಾಗೂ ಕಾಂಗ್ರೆಸ್ ಈ 3 ರಾಜಕೀಯ ಪಕ್ಷಗಳು ಸಾಮಾಜಿಕ ನ್ಯಾಯ, ತಾರತಮ್ಯರಹಿತ ಸೇವೆ, ಹಿಂದುಳಿದ, ದಲಿತ, ಆದಿವಾಸಿ ಮತ್ತು ಮುಸ್ಲಿಮರ ಹಕ್ಕುಗಳ ಸಂರಕ್ಷಣೆಯಲ್ಲಿ ವಿಫಲವಾಗಿದೆ. ಪರ್ಯಾಯ ರಾಜಕೀಯ ಚಿಂತನೆ ಮತದಾರರಲ್ಲಿ ಬರಬೇಕಾದದ್ದು ತುರ್ತಿನ ಅಗತ್ಯವಾಗಿದೆ. ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷಗಳಿಗೆ ಪರ್ಯಾಯವಾಗಿ ಇತರ ಜಾತ್ಯತೀತ ಪಕ್ಷಗಳು ಶಾಸಕರನ್ನು ಗೆಲ್ಲಿಸಿ ರಾಜ್ಯದ ಹಿತ ಕಾಪಾರುವ ಆಗತ್ಯವಿದೆ.

70 ವರ್ಷಗಳಿಂದ ರಾಜ್ಯದಲ್ಲಿ ಶೇ.50ಕ್ಕೂ ಹೆಚ್ಚು ಇರುವ ದಲಿತರು, ಮುಸಲ್ಮಾನರು, ಕ್ರೈಸ್ತ ಸಮುದಾಯಗಳಿಗೆ ಯಾವ ಪಕ್ಷವು ಮುಖ್ಯಮಂತ್ರಿ ಸ್ಥಾನ ನೀಡಿರುವುದಿಲ್ಲ. ಹದಿನೈದು ವರ್ಷಗಳಿಂದ ರಾಜ್ಯದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ವ್ಯಕ್ತಿಗಳನ್ನು ಲೋಕಸಭೆಗೆ ಚುನಾಯಿಸಿ ಕಳುಹಿಸಲು ಸಾಧ್ಯವಾಗಿಲ್ಲ. ಮಂತ್ರಿಮಂಡಲದಲ್ಲಿ ಜನಸಂಖ್ಯೆ ಅನುಪಾತದಲ್ಲಿ ಸ್ಥಾನಮಾನ ನಿರಾಕರಿಸಲಾಗಿದೆ. ಬಿ.ಜೆ.ಪಿ ಸರ್ಕಾರದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಹಾಗೂ ಕ್ರೆöÊಸ್ತ ಸಮುದಾಯಗಳಿಗೆ ಸಚಿವ ಸ್ಥಾನ ನೀಡಿಲ್ಲ. ಕರ್ನಾಟಕದ ರಾಜಕೀಯ ಹಕ್ಕು ನಿರಾಕರಿಸಲ್ಪಟ್ಟ ಜನವರ್ಗಗಳಿಗೆ ಸಮಾನ ಪಾಲು ದೊಡ್ಡ ಮಟ್ಟದ ಹೋರಾಟ ಮಾಡಬೇಕಿದೆ.

*ಜಾತಿ ರಾಜಕಾರಣ*

ಈ ಬಾರಿ ವಿಧಾನಸೌಧ ಪ್ರವೇಶಿಸಿರುವ ಶಾಸಕರಲ್ಲಿ ಲಿಂಗಾಯತ ಶಾಸಕರ ಸಂಖ್ಯೆಯೇ ಹೆಚ್ಚಿದೆ. 222 ಶಾಸಕರಲ್ಲಿ 58 ಮಂದಿ ಲಿಂಗಾಯತ ಶಾಸಕರು ಮೂರು ಪಕ್ಷಗಳಿಂದ ಆಯ್ಕೆ ಆಗಿದ್ದಾರೆ. ಬಿಜೆಪಿಯಿಂದ ಅತಿ ಹೆಚ್ಚು ಅಂದರೆ 38 ವೀರಶೈವ ಲಿಂಗಾಯತ ಶಾಸಕರು ವಿಧಾನಸೌಧ ಪ್ರವೇಶಿಸಿದ್ದಾರೆ. ಕಾಂಗ್ರೆಸ್‌ನಿಂದ 18 ವೀ-ಲಿಂಗಾಯತ ಶಾಸಕರು ಮತ್ತು ಜೆಡಿಎಸ್‌ನಿಂದ 4 ಈ ಜಾತಿಯ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ.ಒಕ್ಕಲಿಗರದ್ದು ಎರಡನೇ ದೊಡ್ಡ ಸಂಖ್ಯೆ
ಲಿಂಗಾಯತ ಬಿಟ್ಟರೆ ಒಕ್ಕಲಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ವಿಧಾನಸಭೆ ಪ್ರವೇಶಿಸಿದ್ದಾರೆ. ಒಟ್ಟು 42 ಮಂದಿ ಒಕ್ಕಲಿಗ ಅಭ್ಯರ್ಥಿಗಳು ಈ ಬಾರಿ ಗೆದ್ದು ಶಾಸಕರಾಗಿದ್ದಾರೆ. ಅದರಲ್ಲಿ ಜೆಡಿಎಸ್‌ ಗೆದ್ದಿರುವ 37 ಸೀಟುಗಳಲ್ಲಿ 23 ಮಂದಿ ಒಕ್ಕಲಿಗ ಅಭ್ಯರ್ಥಿಗಳೇ ಆಗಿರುವುದು ವಿಶೇಷ. ಕಾಂಗ್ರೆಸ್‌ನಿಂದ 11 ಬಿಜೆಪಿಯಿಂದ 8 ಜನ ಒಕ್ಕಲಿಗ ಅಭ್ಯರ್ಥಿಗಳು ಈ ಬಾರಿ ಗೆದ್ದಿದ್ದಾರೆ.

ಪರಿಶಿಷ್ಟ ಜಾತಿಯ ಎಷ್ಟು ಅಭ್ಯರ್ಥಿ ಗೆದ್ದಿದ್ದಾರೆ
ಪರಿಶಿಷ್ಟ ಜಾತಿಯ ಒಟ್ಟು 36 ಅಭ್ಯರ್ಥಿಗಳು ಈ ಬಾರಿ ವಿಧಾನಸೌಧ ಪ್ರವೇಶಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ 12 ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಗೆದ್ದಿದ್ದರೆ, ಬಿಜೆಪಿಯ 16 ಅಭ್ಯರ್ಥಿಗಳು, ಜೆಡಿಎಸ್‌ನ 6 ಮತ್ತು ಇತರೆ ಪಕ್ಷಗಳ 2 ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಗೆದ್ದಿದ್ದಾರೆ.ಪರಿಶಿಷ್ಟ ಪಂಗಡದ ಶಾಸಕರ ಬಲ ಎಷ್ಟು
ಪರಿಶಿಷ್ಟ ಪಂಗಡದ ಒಟ್ಟು 19 ಶಾಸಕರು ಈ ಬಾರಿ ವಿಧಾನಸೌಧ ಪ್ರವೇಶಿಸಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ತಲಾ 9 ಪ.ಪಂಗಡದ ಅಭ್ಯರ್ಥಿಗಳು ಗೆದ್ದಬಂದಿದ್ದಾರೆ. ಜೆಡಿಎಸ್‌ನಿಂದ ಒಬ್ಬರು ಅಭ್ಯರ್ಥಿ ಮಾತ್ರ ಗೆದ್ದಿದ್ದಾರೆ. ವಿಧಾನಸಭೆಯಲ್ಲಿ ಬ್ರಾಹ್ಮಣರ ಬಲವೆಷ್ಟು
ಈ ಬಾರಿ 14 ಜನ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಅತಿ ಹೆಚ್ಚು ಅಂದರೆ 10 ಬ್ರಾಹ್ಮಣ ಅಭ್ಯರ್ಥಿಗಳು ಆಯ್ಕೆ ಆಗಿದ್ದರೆ, ಕಾಂಗ್ರೆಸ್‌ನಿಂದ 04 ಜೆಡಿಎಸ್‌ನಿಂದ ಒಬ್ಬರೂ ಆಯ್ಕೆ ಆಗಿಲ್ಲ. ವಿಧಾನಸಭೆಯಲ್ಲಿ ಕುರುಬ ಜನಾಂಗದ ಬಲಾಬಲ ಎಷ್ಟು
ಸಿದ್ದರಾಮಯ್ಯ ಅವರು ನಾಯಕರಾಗಿರುವ ಕುರುಬ ಜನಾಂಗದ 13 ಅಭ್ಯರ್ಥಿಗಳು ಈ ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ಒಟ್ಟು 09 ಮಂದಿ ಕುರುಬ ಸಮುದಾಯದ ಅಭ್ಯರ್ಥಿಗಳು ಕಾಂಗ್ರೆಸ್‌ನಿಂದ ಆಯ್ಕೆ ಆಗಿದ್ದಾರೆ. ಒಬ್ಬ ಅಭ್ಯರ್ಥಿ ಬಿಜೆಪಿಯಿಂದ, 2 ಅಭ್ಯರ್ಥಿಗಳು ಜೆಡಿಎಸ್‌ನಿಂದ ವಿಧಾನಸಭೆಗೆ ಆಯ್ಕೆ ಆಗಿದ್ದಾ ಎಲ್ಲ ಮುಸ್ಲಿಂ ಶಾಸಕರೂ ಕಾಂಗ್ರೆಸ್‌ನವರೇ
ಈ ಬಾರಿ ಏಳು ಜನ ಮುಸ್ಲಿಂ ಅಭ್ಯರ್ಥಿಗಳು ವಿಧಾನಸೌಧ ಪ್ರವೇಶಿಸಿದ್ದಾರೆ. ವಿಶೇಷವೆಂದರೆ ಏಳೂ ಜನ ಕಾಂಗ್ರೆಸ್‌ನಿಂದಲೇ ಆಯ್ಕೆ ಆಗಿ ಬಂದಿದ್ದಾರೆ. ಬಿಜೆಪಿಯು ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡರಲಿಲ್ಲ ಜೆಡಿಎಸ್ ಟಿಕೆಟ್ ನೀಡಿತ್ತಾದರೂ ಆ ಅಭ್ಯರ್ಥಿ ಗೆದ್ದಿಲ್ಲ. ಕೊಡವ ಮತ್ತು ಕ್ರಿಶ್ಚಿಯನ್‌ ಸಂಖ್ಯೆ ಎಷ್ಟು
ಎರಡು ಕೊಡವ ಜನಾಂಗದ ಮತ್ತು ಒಬ್ಬ ಕ್ರಿಶ್ಚಿಯನ್‌ ಅಭ್ಯರ್ಥಿಗಳು ಈ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಗೆದ್ದಿರುವ ಇಬ್ಬರು ಕೊಡವರು ಬಿಜೆಪಿ ಅಭ್ಯರ್ಥಿಗಳಾಗಿದ್ದರೆ, ಗೆದ್ದಿರುವ ಒಬ್ಬ ಕ್ರಿಶ್ಚಿಯನ್ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದಾರೆ ಇತರೆ ಜಾತಿಯ ಎಷ್ಟು ಶಾಸಕರಿದ್ದಾರೆ
ಬಲಿಜ, ಕ್ಷತ್ರೀಯ, ಗಾಣಿಗ, ಉಪ್ಪಾರ, ಕೋಳಿ ಇನ್ನೂ ವಿವಿಧ ಇತರೆ ಜಾತಿಗಳಿಗೆ ಸೇರಿದ 21 ಜನ ಅಭ್ಯರ್ಥಿಗಳು ಗೆದ್ದು ವಿಧಾನಸೌಧ ಪ್ರವೇಶಿಸಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನಿಂದ 5 ಜನ ಅಭ್ಯರ್ಥಿಗಳು ಗೆದ್ದಿದ್ದರೆ, ಬಿಜೆಪಿಯ 16 ಅಭ್ಯರ್ಥಿಗಳು ಗೆದ್ದಿದ್ದಾರೆ.

ಬರಹ-: ಅಕ್ರಮ್ ಹಸನ್ ಉಳ್ಳಾಲ

ಪ್ರಧಾನ ಸಂಪಾದಕರು. ಅಹಿಂದಾ.ಕಾಮ್