ಪ್ರಧಾನ ಮಂತ್ರಿಯವರ ಕಛೇರಿ

ಲಸಿಕೆ ಪ್ರಗತಿ ಕುರಿತು ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಪ್ರಧಾನಮಂತ್ರಿ

ಈ ವಾರದಲ್ಲಿ ಲಸಿಕೆ ಅಭಿಯಾನದ ವೇಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿ: ಈ ವೇಗವನ್ನು ಮುಂದಕ್ಕೆ ಕೊಂಡೊಯ್ಯುವುದು ಮುಖ್ಯ

ಯಾವುದೇ ಪ್ರದೇಶದಲ್ಲಿ ಹೆಚ್ಚುತ್ತಿರುವ ಸೋಂಕಿನ ಜಾಡು ಪತ್ತೆ ಮಾಡಲು ಮತ್ತು ಸೋಂಕು ನಿಯಂತ್ರಿಸಲು ಪರೀಕ್ಷೆಯ ವೇಗ ಖಚಿತಪಡಿಸಿಕೊಳ್ಳುವುದು ಅಗತ್ಯ: ಪ್ರಧಾನಮಂತ್ರಿ

ಕೋವಿಡ್ ವೇದಿಕೆಯಲ್ಲಿ ಭಾರತದ ತಾಂತ್ರಿಕ ಪರಿಣತಿಯ ಶ್ರೀಮಂತ ತಂತ್ರಜ್ಞಾನದಿಂದ ಆಸಕ್ತ ರಾಷ್ಟ್ರಗಳಿಗೆ ನೆರವು ನೀಡಲು ಪ್ರಯತ್ನಿಸಬೇಕು.

ಕಳೆದ ಆರು ದಿನಗಳಲ್ಲಿ 3.77 ಕೋಟಿ ಡೋಸ್ ಗಳನ್ನು ಹಾಕಿದ್ದು, ಇದು ಮಲೇಷ್ಯಾ, ಸೌದಿ ಅರೆಬಿಯಾ ಮತ್ತು ಕೆನಡಾ ದೇಶಗಳ ಜನಸಂಖ್ಯೆಗಿಂತ ಅಧಿಕ

ಪ್ರಕಟಣಾ ದಿನಾಂಕ: 26 JUN 2021 7:32PM by PIB Bengaluru

ದೇಶದಲ್ಲಿ ಕೋವಿಡ್ ಪರಿಸ್ಥಿತಿ ಮತ್ತು ಲಸಿಕೆ ಕುರಿತುಪ್ರಧಾನಮಂತ್ರಿ ಅವರು ಪ್ರಗತಿ ಪರಿಶೀಲನೆನಡೆಸಿದರು.

ದೇಶದಲ್ಲಿ ಕೋವಿಡ್ ಲಸಿಕೆ ಕುರಿತು ಅಧಿಕಾರಿಗಳುಇದೇ ಸಂದರ್ಭದಲ್ಲಿ ವಿಸ್ತೃತ ಪ್ರಾತ್ಯಕ್ಷಿಕೆ ನೀಡಿದರು. ಪ್ರಧಾನಮಂತ್ರಿ ಅವರಿಗೆ ವಯೋಮಿತಿಗೆಅನುಗುಣವಾಗಿ ಹಾಕಿರುವ ಲಸಿಕೆ ಕುರಿತು ಮಾಹಿತಿನೀಡಲಾಯಿತು. ಆರೋಗ್ಯ ಕಾರ್ಯಕರ್ತರು, ಮಂಚೂಣಿ ಕಾರ್ಯಕರ್ತರು ಮತ್ತು ವಿವಿಧರಾಜ್ಯಗಳಲ್ಲಿ ಸಾಮಾನ್ಯ ಜನರಿಗೆ ಹಾಕಿರುವ ಲಸಿಕೆಕುರಿತು ವಿವರ ನೀಡಿದರು.

ಮುಂಬರುವ ತಿಂಗಳುಗಳಲ್ಲಿ ಲಸಿಕೆ ಪೂರೈಕೆ ಮತ್ತುಉತ್ಪಾದನೆ ಹೆಚ್ಚಾಗುತ್ತಿರುವ ಕುರಿತು ಅಧಿಕಾರಿಗಳುಪ್ರಧಾನಮಂತ್ರಿ ಅವರಿಗೆ ವಿವರ ನೀಡಿದರು. ಕಳೆದಆರು ದಿನಗಳಲ್ಲಿ 3.77 ಕೋಟಿ ಡೋಸ್ ಗಳನ್ನುಹಾಕಿದ್ದು, ಇದು ಮಲೇಷ್ಯಾ, ಸೌದಿ ಅರೆಬಿಯಾಮತ್ತು ಕೆನಡಾ ದೇಶದ ಜನಸಂಖ್ಯೆಗಿಂತಅಧಿಕವಾಗಿದೆ.

ದೇಶದ 128 ಜಿಲ್ಲೆಗಳಲ್ಲಿ 45 ವಯೋಮಿತಿಮೀರಿದವರಿಗೆ ಶೇ 50 ಕ್ಕೂ ಹೆಚ್ಚಿನ ಪ್ರಮಾಣದಲ್ಲಿಲಸಿಕೆ ಹಾಕಲಾಗಿದೆ ಮತ್ತು 16 ಜಿಲ್ಲೆಗಳಲ್ಲಿ 45 ವರ್ಷಕ್ಕಿಂತ ಅಧಿಕ ವಯಸ್ಸಿನವರಿಗೆ ಶೇ 90 ಕ್ಕಿಂತಹೆಚ್ಚು ಲಸಿಕೆ ಹಾಕಲಾಗಿದೆ. ಈ ವಾರದಲ್ಲಿ ನಡೆದಲಸಿಕೆಯ ವೇಗದ ಬಗ್ಗೆ ಪ್ರಧಾನಮಂತ್ರಿ ಅವರು ತೃಪ್ತಿವ್ಯಕ್ತಪಡಿಸಿದ್ದಾರೆ ಮತ್ತು ಇದೇ  ವೇಗವನ್ನುಮುಂದುವರಿಸುವುದು ಅತ್ಯಂತ ಪ್ರಮುಖವಾಗಿದೆಎಂದು ಒತ್ತಿ ಹೇಳಿದರು.

ಲಸಿಕೆ ಜನರನ್ನು ತಲುಪುವ ವಿನೂತನವಿಧಾನಗಳನ್ನು ಅನುಷ್ಠಾನಗೊಳಿಸುವ ಮತ್ತುರಾಜ್ಯಗಳನ್ನು ತಲುಪುವ ಕುರಿತು ಅಧಿಕಾರಿಗಳುಪ್ರಧಾನಮಂತ್ರಿ ಅವರಿಗೆ ವಿವರ ನೀಡಿದರು. ಎನ್.ಜಿ.ಒ ಗಳು ಮತ್ತು ಇತರೆ ಸಂಘಟನೆಗಳುಇಂತಹ ಪ್ರಯತ್ನಗಳಲ್ಲಿ ಭಾಗಿಯಾಗುವ ಕುರಿತುಪ್ರಧಾನಮಂತ್ರಿ ಅವರು ಮಾತನಾಡಿದರು. ಯಾವುದೇ ಪ್ರದೇಶದಲ್ಲಿ ಹೆಚ್ಚುತ್ತಿರುವ ಸೋಂಕಿನಜಾಡು ಪತ್ತೆ ಮಾಡಲು ಮತ್ತು ಸೋಂಕುನಿಯಂತ್ರಿಸಲು ಪರೀಕ್ಷೆಯ ವೇಗಖಚಿತಪಡಿಸಿಕೊಳ್ಳುವುದು ಅಗತ್ಯ ಎಂದುಪ್ರಧಾನಮಂತ್ರಿ ಅವರು ಅಧಿಕಾರಿಗಳಿಗೆ ನಿರ್ದೇಶನನೀಡಿದರು.

ಕೊವಿನ್ ವೇದಿಕೆ ಬಗ್ಗೆ ಜಾಗತಿಕವಾಗಿ ಹೆಚ್ಚುತ್ತಿರುವಆಸಕ್ತಿ ಕುರಿತು ಪ್ರಧಾನಮಂತ್ರಿ ಅವರ ಬಳಿಅಧಿಕಾರಿಗಳು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹಪ್ರಯತ್ನಗಳಿಂದ ಆಸಕ್ತಿ ತೋರುವ ಎಲ್ಲಾರಾಷ್ಟ್ರಗಳಿಗೆ ಕೋವಿನ್ ನ ಶ್ರೀಮಂತ ತಾಂತ್ರಿಕಪರಿಣತಿಯಿಂದ ನೆರವಾಗವಾಗಬೇಕು ಎಂದುಪ್ರಧಾನಮಂತ್ರಿ ಅವರು ಹೇಳಿದರು.

***

(ಪ್ರಕಟಣೆ ಐ.ಡಿ.: 1730606)