ನಮ್ಮ ಉಳ್ಳಾಲ ಸುಸ್ಥಿರ

ಐದು ವರ್ಷಗಳಲ್ಲಿ ಉಳ್ಳಾಲ ನಗರ ಸಭೆಯ ಜೊತೆ ತ್ಯಾಜ್ಯ ನಿರ್ವಹಣೆ ಕುರಿತು ಸ್ವಯಂ ಸೇವಾ ನೆಲೆಯಲ್ಲಿ ರೋಶನಿ ನಿಲಯದ ವಿದ್ಯಾರ್ಥಿ ಗಳು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮಾಡಿದ ಪ್ರಯತ್ನ ಗಳ ಆದಾರದಲ್ಲಿ ಈ ಕೆಳಗಿನ ವಸ್ತು ನಿಷ್ಟ ಅಂಕಿ ಅಂಶ ಗಳನ್ನು ಪ್ರಸ್ತುತ ಪಡಿಸುವುದು ಉಳ್ಳಾಲದ ತ್ಯಾಜ್ಯ ನಿರ್ವಹಣೆಯ ಸವಾಲುಗಳನ್ನು ಎದುರಿಸಲು ಅಗತ್ಯವಿದೆ ಎಂದು ಕೊಂಡಿದ್ದೇನೆ.
ಅದರಂತೆ.

1. ಕರಾವಳಿ ಪ್ರದೇಶದಲ್ಲಿಉಳ್ಳಾಲ ನಗರ ಅತ್ಯಂತ ಜನಸಂಖ್ಯೆ ಇರುವ ಪ್ರದೇಶ ( 2011 ರಂತೆ 53,400)
ಈಗ ಅಂದಾಜು 60 ಸಾವಿರ ಮೀರಿರಬಹುದು.
2. ಜನಸಂಖ್ಯೆ ಯ ಸಾಂದ್ರತೆ 4040 per Sq.km. ಇದು ಸಾಮಾನ್ಯ ನಗರ ಪ್ರದೇಶಕ್ಕಿಂತ ಹತ್ತು ಪಟ್ಟು ಹೆಚ್ಚು ಅಂದರೆ 400 per sq.km.
3. ಉಳ್ಳಾಲದಲ್ಲಿ ದಿನಂಪ್ರತಿ ಉತ್ಪತ್ತಿ ಯಾಗುವ ತ್ಯಾಜ್ಯ 16/17 TPD( Tons per day)
4. ಇದರಲ್ಲಿ ಹಸಿ ಕಸ ಮೂರನೇ ಎರಡು ಅಂಶ ಅಂದರೆ, 10/12 TPDಮತ್ತು ಒಣ ಕಸ ಸುಮಾರು 5/6 TPD. (2016-17 ರಲ್ಲಿ) ಈಗ 20 TPD ಇರ ಬಹುದು.

5. ಉಳ್ಳಾಲ ಮಾತ್ರ ತನ್ನದೇ ಆದ ತ್ಯಾಜ್ಯ ಗುಂಡಿ ಹೊಂದಿರದೆ, ಪ್ರತೀ ನಿತ್ಯ ಈ ತ್ಯಾಜ್ಯ ವನ್ನು ಮಂಗಳೂರು ಮಹಾನಗರ ಪಾಲಿಕೆಯ ವಾಮಂಜೂರಿನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಪ್ರತೀ Ton ಗೆ ₹ 300/- ರಂತೆ ಪಾವತಿಸಿ ನಿರವಹಣೆಗಾಗಿ ಕಳುಹಿಸಿ ಕೊಡುತ್ತಾ ಬಂದಿದೆ. ಈಗ ಈ ಮೊತ್ತ ₹ 500/- ಆಗಿರಬಹುದು.
6. ನಗರ ಸಭೆಯಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಒಟ್ಟು 54 ಪೌರಕಾರ್ಮಿಕರು ಇದ್ದಾರೆ. ಅದರಲ್ಲಿ ಸ್ವೀಪರ್, ಡ್ರೈವರ್ ಹಾಗೂ ಕಸವನ್ನು ವಿಲೇವಾರಿ ಮಾಡುವ ಕೆಲಸಗಾರರು ಮತ್ತು ಸುಪರ್ ವೈಸರ್‌ಗಳಿದ್ದಾರೆ ಮತ್ತು ಮೇಲ್ವಿಚಾರಣೆಗೆ ಪರಿಸರ ಇಂಜಿನಿಯರ್, ಆರೋಗ್ಯ ನೀರೀಕ್ಷಕರು ಆಯುಕ್ರ ಸುಪರ್ದಿಯಲ್ಲಿದ್ದಾರೆ.
7. ಉಳ್ಳಾಲದ ಎಲ್ಲಾ ಮೂವತ್ತೊಂದು(31)ವಾರ್ಡ್ ಗಳನ್ನು ತ್ಯಾಜ್ಯ ಸಂಗ್ರಹಿಸುವ ನಿಟ್ಟಿನಲ್ಲಿ ಮೂರು ಜೋನ್(ಪ್ರದೇಶ) ವನ್ನಾಗಿ ಮಾಡಿ ಮುಖ್ಯ ರಸ್ಥೆಗಳಿಂದ ದೊಡ್ಡ ಕಸದ ವಾಹನ ಮತ್ತು ಸಣ್ಣ ರಸ್ತೆ ಗಳಿಗೆ ಮೂರು ಚಕ್ರದ ವಾಹನ ಗಳನ್ನು ರೋಟ್ ಮ್ಯಾಪ್ ನಂತೆ ಹಂಚಿಕೆ ಮಾಡಲಾಗಿದೆ. ವಾಹನ ಹೋಗಲು ಅನಾನುಕೂಲವಾದ ಪ್ರದೇಕ್ಕೆ ಪೌರಕಾರ್ಮಿಕರು ನಡೆದು ಸಂಗ್ರಹಿಸ ಬೇಕು.
8. ದಿನಂಪ್ರತಿ 2 TPD ರಷ್ಟು ಕೋಳಿ ತ್ಯಾಜ್ಯ ವನ್ನು ಒಟ್ಟು 42 ಅಂಗಡಿಗಳಿಂದ ಸಂಗ್ರಹಿಸಲು ನಗರ ಸಭೆಯು ಮಂಗಳೂರು ಪ್ರೊಟೀನ್ಸ್ ಎಂಬ ಗೊಬ್ಬರ ತಯಾರಿಸುವ ಉದ್ದಿಮೆ ಜೊತೆ ಒಡಂಬಡಿಕೆ ಮಾಡಿ ಕಳೆದ ಮೇ 2020 ರಿಂದಲೇ ಮಾಡುತ್ತಾಬಂದಿದೆ. ಇದರಿಂದ ಕೋಳಿ ತ್ಯಾಜ್ಯ ನಮ್ಮ ನೇತ್ರಾವತಿ ಯನ್ನು ಕಲ್ಮಶಗೊಳಿಸುವುದನ್ನು ಬಹುತೇಕ ತಪ್ಪಿಸಿದೆ.

9. ಉಳ್ಳಾಲದಲ್ಲಿ ಈ ಕೆಳಗಿನ ನಿರ್ದಿಷ್ಟ ಸ್ಥಳದಲ್ಲಿ ನಾಗರೀಕರು ನಗರ ಸಭೆಯ ನಿರಂತರ ಪ್ರಯತ್ನದ ಮಾಡುತಿದ್ದರೂ ಇನ್ನೂ ತ್ಯಾಜ್ಯ ಚೆಲ್ಲುತ್ತಿರುವುದು ಇನ್ನೂ ನಡೆದಿದೆ. ಇವುಗಳನ್ನು hot spots ಅಂತ ಕರಿತಾರೆ. ಅವುಗಳೆಂದರೆ;

* ವಾರ್ಡ್ 5 : ಶಾರದಾ ನಿಕೇತನದ ಮುಂದೆ, ಆರೋಗ್ಯ Kiosk ಇಟ್ಟಲ್ಲಿ

*ವಾರ್ಡ್24: ಅಬ್ಮಕ್ಕ ನಗರ ಮಾಸ್ತಿ ಕಟ್ಟೆ Entrance ಹತ್ತಿರ

* ವಾರ್ಡ್ 25: ಅಝಾದ್ ನಗರ,

* ವಾರ್ಡ್ 28: ಟಿಪ್ಪು ಐ.ಟಿ.ಐ. ಮತ್ತು ಮೆರಿಡಿಯನ್ ಸಂಸ್ಥೆಗಳ ನಡುವೆ ಮುಖ್ಯ ರಸ್ತೆ ಯಲ್ಲಿ

* ವಾರ್ಡ್ 31: ಗೇರು ಸಂಶೋಧನಾ ಕೇಂದ್ರದ ಆವರಣಕ್ಕೆ ತಾಗಿ ಮುಖ್ಯರಸ್ಥೆಯಲ್ಲಿ, ರೈಲ್ವೆ ಹಳಿಗೆ ತಾಗಿ ಕೊಂಡಲ್ಲಿ

* ವಾರ್ಡ 22 ತೊಕ್ಕೋಟು ಒಳಪೇಟೆ ಕುಡಿಯುವ ನೀರಿನ ಘಟಕ‌ಕ್ಕೆ ತಾಗಿ( ಈಗ ಇಲ್ಲಿ ಕಸ ಹಾಕುತ್ತಿಲ್ಲ, ಕಾರಣ; ನಗರ ಸಭೆಯಿಂದ ಆ ಸ್ಥಳದಲ್ಲಿ ಒಂದು ಹೂ ಮಾರುವ ಅಂಗಡಿಗೆ ಪರವಾನಿಗೆ ನೀಡಿರುವುದರಿಂದ)

* ವಾರ್ಡ್11; ತೊಕ್ಕೋಟು ಚರ್ಚ್ ರೋಡ್‌ಲ್ಲಿ ಹೊಸ ಕುಡಿಯುವ ನೀರಿನ ಘಟಕದ ಮುಂದೆ

* ವಾರ್ಡ್ ಹಳೇಕಲ 11: ಅದೇ ರಸ್ತೆಯಲ್ಲಿ ಮುಂದೆ ಬ್ರಿಡ್ಜ್ ಬಳಿ

* ವಾರ್ಡ. 10 ವಿದ್ಯಾರಣ್ಯ ಮುಂದೆ ಕಬ್ಬಿಣದ ಕಪಾಟು ಮಾಡುವ ಅಂಗಡಿ ಬಳಿ.
* ವಾರ್ಡ 14, ಮಿಲ್ಲತ್ ನಗರ, ದರ್ಗಾ ದ ಕಾಂಪೌಂಡ್‌ಗೆ ತಾಗಿ
* ವಾರ್ಡ್ 4: ಬಸ್ತಿಪಡ್ಪು ‌ರಸ್ಥೆ ಬಳಿ

ಒಟ್ಟು 11 ಇಂತಹ ಸ್ಥಳಗಳಲ್ಲಿ ಒಂದನ್ನು ಹೊರತು ಪಡಿಸಿ ( ತೊಕ್ಕೋಟು ಒಳ ಪೇಟೆ) ಉಳಿದವುಗಳು ಇನ್ನೂ ಒಂದು ಸವಾಲಾಗಿ ಉಳಿದಿದೆ.

10. ಆದರೆ, ಕಳೆದ ನಾಲ್ಕೈದು ತಿಂಗಳಿಂದೀಚೆಗೆ, ರಾಷ್ಟ್ರೀಯ ಹಸಿರು ವಿದ್ಯಾಪೀಠದ ಆದೇಶ ದ ನಂತರ , ಉಳ್ಳಾಲ ನಗರ ಸಭೆಗೆ ಕಸ ವನ್ನು ಮಂಗಳೂರಿನ ವಾಮಂಜೂರಿನಲ್ಲಿ ಸ್ವೀಕರಿಸಲು ಷರತ್ತುಗಳನ್ನು ವಿಧಿಸಲಾಗಿದೆ. ಅದರಂತೆ; ಇನ್ನು ಮುಂದೆ ವಿಂಗಡಿಸಿದ ಕಸವನ್ನು ಮಾತ್ರ ಕಳುಹಿಸ ಬೇಕು. ಅದೂ ಕೂಡಾ ಸೀಮಿತ ಅವಧಿಗೆ ಮಾತ್ರ.

11. ತದನಂತರ, ನಗರ ಸಭೆ ನಾಗರೀಕರಿಗೆ ಕಡ್ಡಾಯವಾಗಿ ತ್ಯಾಜ್ಯ ವಿಂಗಡನೆ ಮಾಡಲು ತಾಕೀತು ಮಾಡಲು ಆರಂಬಿಸಿದೆ. ಇದರಿಂದಾಗಿ ಬರೀ 50% ಮನೆಗಳಿಂದ ವಿಂಗಡಿಸಿದ ತ್ಯಾಜ್ಯವನ್ನು ನಮ್ಮವರು ಕೊಡುತಿದ್ದಾರೆ. ಉಳಿದ 50% ಮನೆಗಳಿಂದ ಇನ್ನೂ ವಿಂಗಡಣೆ ಗೊಳ್ಳದಿರುವ ತ್ಯಾಜ್ಯ ವನ್ನು ನಮ್ಮ ಪೌರಕಾರ್ಮಿಕರು ಮೊದಲು ಬೀಚ್ ಪಕ್ಕದಲ್ಲಿ ಮತ್ತು ಈಗ ಆಯಾ hot spot ಸ್ಥಳಗಳಲ್ಲಿಯೇ ಮಾಡುತ್ತಿರುವುದನ್ನು ಕಾಣ ಬಹುದು.
12. ಆದರೆ ಕಳೆದ ವಾರ ವಾಮಂಜೂರಿನಿಂದ ಉಳ್ಳಾಲದ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಂಗಡನೆ ಆಗಿಲ್ಲ ಎಂಬ ಕಾರಣಕ್ಕೆ ವಾಪಾಸು ಕಳುಹಿಸಿರುತ್ತಾರೆ. ಈ ಬಗ್ಗೆ ಆಯುಕ್ತರು ಸ್ಥಳ ತನಿಖೆ ಮಾಡಿ , ಇತ್ತೀಚ್ಚೆಗಿನ ಬಿರುಗಾಳಿ ಮತ್ತು ಮಳೆ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ವಿಂಗಡನೆಯಾಗದ ಕಸ ಅಲ್ಲಿಗೆ ರವಾನೆಯಾಗಿರುವ ಕಾರಣವನ್ನು ಕಂಡು ಹಿಡಿಯಲಾಗಿದೆ. ಇದಕ್ಕೆ ಶಾಸ್ವತ ಪರಿಹಾರ ಕಂಡುಕೊಳ್ಳಲು ನಾಗರೀಕರಿಗೆ ಹೆಚ್ಚಿನ ಜವಾಬ್ದಾರಿಯನ್ನು ತಿಳಿಯಪಡಿಸಲು ಸಂಘ ಸಂಸ್ಥೆಗಳು ನಗರ ಸಭೆ ಜೊತೆ ಕೈ ಜೋಡಿಸುವುದು ಅನಿವಾರ್ಯ ಎಂದು ನಾನು ಅಂದು ಕೊಂಡಿದ್ದೇನೆ.

ಈ ಹಿನ್ನೆಲೆಯಲ್ಲಿ ನಮ್ಮಮುಂದಿರುವ ಸವಾಲು;
1. ಉಳ್ಳಾಲದ ಲ್ಲಿ ತ್ಯಾಜ್ಯ ವಿಲೇವಾರಿ ಯನ್ನು ವಿಕೇಂದ್ರೀಕ್ರತ ಗೊಳಿಸಿ ಆಯಾ ವಾರ್ಡ್‌ ನ ಹಸಿ ಕಸವನ್ನು ಅಲ್ಲಿಯೇ ವಿಂಗಡನೆಯಾಗುವಂತೆ ನೋಡಿಕೊಳ್ಳುವುದು. (ಇದನ್ನು ಹಂತ ಹಂತವಾಗಿ ಜನರ ಸಹಬಾಗಿತ್ವದಲ್ಲಿ ಜಾರಿಗೊಳಿಸುವುದು)
2. ಉಳ್ಳಾಲದಲ್ಲಿರುವ ಎಲ್ಲಾ ವಸತಿ ಸಂಕೀರ್ಣ ಗಳು ತಮ್ಮ ತ್ಯಾಜ್ಯವನ್ನು ಅವರೇ ವಿಲೇವಾರಿ ಮಾಡಲು ನಗರ ಸಭೆಯಿಂದ ಅಂತಿಮ ಗಡುವನ್ನು ವಿಧಿಸುವುದು,ತಪ್ಪಿದ್ದಲ್ಲಿ ದಂಡ ,ಪಾಲನೆಗೆ ಟ್ಯಾಕ್ಸ್ ನಲ್ಲಿ ರಿಯಾಯಿತಿ.
3. ವ್ಯಾಪಾರ ಮುಂಗಟ್ಟುಗಳಿಗೆ ತ್ಯಾಜ್ಯ ವಿಲೇವಾರಿಗೆ ನಿರ್ದಿಷ್ಟ ಸೂಚನೆ ತಪ್ಪಿದ್ದಲ್ಲಿ ದಂಡ,ಪಾಲನೆಗೆ ಟ್ಯಾಕ್ಸ್ ನಲ್ಲಿ ರಿಯಾಯಿತಿ.
4. ತಮ್ಮ ತಾಜ್ಯವನ್ನು ನಗರ ಸಭೆಗೆ ನೀಡದೆ ಸದ್ಬಳಕೆ ಮಾಡುವ ಮನೆಯವರಿಗೆ ಟ್ಯಾಕ್ಸ್ ನಲ್ಲಿ ರಿಬೇಟ್
5. ಸುಸ್ಥಿರ ತ್ಯಾಜ್ಯ ನಿರ್ವಹಣೆ ಮಾಡುವ ವಾರ್ಡಗಳಿಗೆ ನಗರ ಸಭೆಯ ಅನುದಾನದಲ್ಲಿ ವಿಶೇಷ ಅಭಿವ್ರದ್ದಿ ಪ್ಯಾಕೇಜ್.
6. ಸುಸ್ಥಿರ ತ್ಯಾಜ್ಯ ನಿರ್ವಹಣೆ ಕಾರ್ಯದಲ್ಲಿ ಎಲ್ಲಾ ಸಮುದಾಯವನ್ನು ಪಾಲ್ಗೊಳಿಸಲು ಸಹಕರಿಸುವ ಸ್ಥಳೀಯ ಸಂಘ ಸಂಸ್ಥೆಗಳಿಗೆ ಅನುದಾನ.

ಇದು ಕೆಲವು ಸಲಹೆಗಳು ಮತ್ತು ನನ್ನ ಅನಿಸಿಕೆ ಗಳು. ಟೀಕೆ ಟಿಪ್ಪಣಿಗಳು ಸ್ವಾಗತಾರ್ಹ🙏🏼

ವರದಿ: ಕಿಶೋರ್ ಅತ್ತಾವರ್,
ರೋಶನೀ ಹಳೇ ವಿದ್ಯಾರ್ಥಿ ಸಂಘ, ಕಾರ್ಯಕಾರಿ ಸಮಿತಿ ಸದಸ್ಯರು