ಬೆಂಗಳೂರು : ಮುಜರಾಯಿ ಇಲಾಖೆಯಿಂದ ಅರ್ಚಕರಿಗೆ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಾರ್ಹ. ಕೋವಿಡ್ ಲಾಕ್ ಡೌನ್ ನಲ್ಲಿ ದೇವಾಲಯ ಚರ್ಚ್ ಮಸೀದಿಗಳು ಬಂದ್ ಆಗಿರುವುದರಿಂದ ಈ ವೃತ್ತಿಯಲ್ಲಿ ಇರುವವರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಸರಕಾರ ಅರ್ಚಕರಿಗೆ ಪರಿಹಾರ ಪ್ಯಾಕೇಜ್ ಘೋಷಿಸಿ ಉತ್ತಮ ಕೆಲಸವನ್ನೇ ಮಾಡಿದೆ. ಅದೇ ರೀತಿ ಮಸೀದಿಗಳ ಇಮಾಮರು ಮತ್ತು ಮೋಜಿನ್ ರಿಗೆ ಕೋವಿಡ್ ಪರಿಹಾರ ಪ್ಯಾಕೇಜನ್ನು ಕೊಡಬೇಕು ಎಂದು ಶಾಸಕ ಬಿ.ಎಂ. ಫಾರೂಕ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸನ್ಮಾನ್ಯ ಮುಖ್ಯಮಂತ್ರಿಗಳು ವಕ್ಸ್ ಖಾತೆಯ ಅಡಿಯಲ್ಲಿ ಬರುವ ಮಸೀದಿಗಳ ಇಮಾಮರು ಮತ್ತು ಮೋಜಿನ್‌ರು ಆರ್ಥಿಕವಾಗಿ ದುರ್ಬಲರಾಗಿದ್ದು ಲಾಕ್ ಡೌನ್ ನಿಂದಾಗಿ ಇನ್ನಷ್ಟು ಸಂಕಷ್ಟಕ್ಕೆ ಈಡಾಗಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳು ಈ ಕಡೆಗೆ ಗಮನ ಹರಿಸಿ ಅವರಿಗೂ ಪ್ಯಾಕೇಜ್ ಘೋಷಿಸ ಬೇಕೆಂದು ಕೇಳಿಕೊಳ್ಳುತ್ತೇನೆ ಎಂದು ಫಾರೂಕ್ ಮನವಿ ಮಾಡಿದ್ದಾರೆ.