ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಖಾನ್ ರವರು ಬಿಬಿಎಂಪಿ ಸದಸ್ಯ ಹಾಗೂ ಜೆಡಿಎಸ್ ಯುವ ಮುಖಂಡ ಇಮ್ರಾನ್ ಪಾಷಾ ರವರ ಸಾವು ಬಯಸಿದ್ದರು ಎಂಬ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡುವ ಮೂಲಕ ರಾಜ್ಯದ್ಯಂತ ಮುಸ್ಲಿಂ
ರಾಜಕಾರಣಿಗಳ ಹಾಗೂ
ಸಾಮಾಜಿಕ ಕಾರ್ಯಕರ್ತರಲ್ಲಿನ ಗೊಂದಲ ನಿವಾರಿಸಲು ರಾಷ್ಟ್ರೀಯ ಸೌಹಾರ್ದ ವೇದಿಕೆ ರಾಜ್ಯದ್ಯಕ್ಷ ಸಮೀರ್ ಮಂಡ್ಯ ಮನವಿಮಾಡುತ್ತೇನೆ.

ಇತ್ತೀಚಿಗೆ ಬೆಂಗಳೂರಿನ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಜಮೀರ್ ಅಹಮದ್ ಖಾನ್
‘ ನಾವು ಸೇವೆ ಮಾಡುವುದು ಆಖಿರತ್ (ಮೋಕ್ಷ) ಗಾಗಿ
ಬೇರೆಯವರು ಮಾಡುವುದು ಪ್ರಚಾರ ಹಾಗೂ ಸ್ವಾರ್ಥಕ್ಕೆ ಇಂಥವರಿಗೆ ಸಾವು ಬರುವ ಮೊದಲೇ ಸಾವು ಬರುತ್ತದೆ ಎಂದು ಹೇಳಿದ್ದಾರೆ ಈ ಹೇಳಿಕೆ ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾ ರವರ ವಿರುದ್ಧವಾಗಿತ್ತು ಎಂಬುದು ವಿವಾದ ಸೃಷ್ಟಿಗೆ ಕಾರಣ ವಾಗಿದೆ.

ಈ ಒಂದು ಹೇಳಿಕೆ ಬೆಂಗಳೂರಿನಲ್ಲಿ ಜಮೀರ್ ಅಹ್ಮದ್ ಖಾನ್ ಮತ್ತು ಇಮ್ರಾನ್ ಪಾಷಾ ಅವರ ಮಧ್ಯೆ ಹಾಗೂ ಇವರುಗಳ ಬೆಂಬಲಿಗರ ಮಧ್ಯೆ ಭಾರಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.

ನಗರಪಾಲಿಕೆ ಸದಸ್ಯರಾಗಿರುವ ಇಮ್ರಾನ್ ಪಾಷಾ ಸಮಾಜ ಸೇವೆ ಮಾಡುತ್ತಾ, ಸಮಾಜ ಪರವಾಗಿ
ಬಡವರಿಗೆ ಕೈಲಾದಷ್ಟು ದಾನ-ಧರ್ಮ ಮಾಡುತ್ತಿರುವುದು
ಎಲ್ಲರಿಗೂ ತಿಳಿದಿರುವ ವಿಚಾರ. ಮಸೀದಿಗಳ, ಮದ್ರಸಗಳ ಅಭಿವೃದ್ಧಿಗಾಗಿ ಬಡವರ ಮದುವೆಗಳಿಗೆ ಇತರೆ ಕಾರ್ಯಗಳಿಗೆ ಇವರು ದೇಣಿಗೆ ನೀಡುವ ಶೈಲಿಚರ್ಚೆಯಲ್ಲಿದೆ. ಕಳೆದ ವರ್ಷ ಕರೋನ ಸಂದರ್ಭದಲ್ಲಿ ಆಹಾರದ ಸಾಮಗ್ರಿಗಳ ವಿತರಣೆ ಮಾಡಿ ರಾಜ್ಯಕ್ಕೆ ಗಮನಸೆಳೆದಿದ್ದರು.ಇವರ ಕಾರ್ಯವೈಖರಿ ಇತರ ರಾಜಕೀಯ ನಾಯಕರಿಗೂ ಪ್ರೇರಣೆಯಾಗಿತ್ತು. ಎನ್ಆರ್ಸಿ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ರಾಜ್ಯದ ಮುಸ್ಲಿಂ ಹಾಗೂ ಪ್ರಗತಿ ಪರರಿಂದ ಮೆಚ್ಚುಗೆಗೆ ಪಾತ್ರವಾಗಿದ್ದರು.

ಜಮೀರ್ ಅಹ್ಮದ್ ಖಾನ್ ರವರು ಕಾಂಗ್ರೆಸ್ ಪ್ರಮುಖ
ಮುಖಂಡರಾಗಿದ್ದು ಜೆಡಿಎಸ್ ನಲ್ಲಿ ಇದ್ದಾಗಲೂ ಸಹ ತನ್ನ ಕಾರ್ಯಚಟುವಟಿಕೆಗಳಿಂದ ರಾಜ್ಯದ ಜನರ ಗಮನ ಸೆಳೆದ ಒಬ್ಬ ರಾಜಕಾರಣಿ ಯಾಗಿದ್ದಾರೆ.

ವಾಸ್ತವಿಕವಾಗಿ ಜಮೀರ್ ರವರು ಇಮ್ರಾನ್ ಕೆಲಸವನ್ನ ಮೆಚ್ಚಿ ಅವರನ್ನು ಪ್ರಶಂಸೆ ಮಾಡಬೇಕು.
ಸಲಹೆ ಸಹಕಾರವ ನೀಡಿ
ಬೆಳೆಸಬೇಕು ಅದನ್ನು ಬಿಟ್ಟು ಸಾವು ಬಯಸುವುದು ಎಷ್ಟು ಸರಿ.? ಈ ಪ್ರಶ್ನೆ ರಾಜ್ಯದ ಜನತೆ ಜಮೀರ್ ಅಹ್ಮದ್ ಖಾನ್ ಅವರನ್ನು
ಕೇಳುತ್ತಿದ್ದಾರೆ ಹಾಗೂ ಅವರ ಹೇಳಿಕೆಯನ್ನು ಭಾರಿ ವಿಮರ್ಶೆ ಮಾಡುತ್ತಿದ್ದಾರೆ.

ಈ ಹೇಳಿಕೆ ರಾಜ್ಯಮಟ್ಟದಲ್ಲಿ ಚರ್ಚೆಯಾಗುತ್ತಿದ್ದರು ಹಾಗೂ ಇತರೆ ಜನಗಳು ಭಿನ್ನ ವಿಭಿನ್ನ ಹೇಳಿಕೆ ನೀಡುತ್ತಿದ್ದರು ಜಮೀರ್ ಅಹ್ಮದ್ ಖಾನ್ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಿಲ್ಲ.

ಇವರ ಮೌನ ಜಮೀರ್ ಮತ್ತು ಇಮ್ರಾನ್ ಬೆಂಬಲಿಗರ ನಡುವೆ ಭಾರಿ ಕಂದಕವನ್ನೇ ನಿರ್ಮಿಸಿ ಬಿಟ್ಟಿದೆ.

ಸಮಾಜ ಮುಖಿವಾಗಿ ಕೆಲಸ ಮಾಡಲು ಮುಂದಾಗುವ ಇಮ್ರಾನ್ ಪಾಷಾ ರಂತಹ ಯುವಕರನ್ನು ತುಳಿಯುತ್ತಿರುವುದು ಎಷ್ಟು ಸರಿ ಎಂಬುದು ರಾಜ್ಯದ ಮುಸ್ಲಿಂ ಬಾಂಧವರ ಪ್ರಶ್ನೆಯಾಗಿದೆ. ಈ ಪ್ರಶ್ನೆಗಳಿಗೆ ಜಮೀರ್ ಅಹಮದ್ ಖಾನ್ ರವರು ಉತ್ತರಿಸಬೇಕಾಗಿದೆ ಇವರ ಉತ್ತರವನ್ನು
ರಾಜ್ಯದ ಮುಸ್ಲಿಂ ರಾಜಕಾರಣಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಬಯಸುತ್ತಿದ್ದಾರೆ.
ಮತ್ತು ಜಮೀರ್ ರವರು ಸಾರ್ವಜನಿಕರಿಗೆ ಭೇಟಿ ಆಗುವ ಸ್ಥಳ ನಿಗದಿ ಮಾಡಿ ಜನತ ದರ್ಶನ ನಡೆಸಬೇಕು.. 220 ಶಾಸಕರು ಮೊಬೈಲ್ ಮೂಲಕ ಸಂಕಷ್ಟ ಕ್ಕೆ ಸ್ಪಂದಿಸುತ್ತಾರೆ, ಆದರೆ ಇವರು ಫೋನ್ ಗೂ ಸಿಗುವುದಿಲ್ಲ ಇದರಿಂದಾಗಿ ಮುಸ್ಲಿಂ ಸಮುದಾಯದ ಕುಂದು ಕೊರತೆ ಹೇಳಲು ಮುಸ್ಲಿಂ ಬಾಂಧವರಿಗೆ ಸಾಧ್ಯವಾಗುತ್ತಿಲ್ಲ ಒಂದೆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿವಾಗಿದ್ದಾರೆ.

ರಾಜ್ಯದ ಜನಸಂಖ್ಯೆ ಯ ಅನುಗುಣವಾಗಿ 36 ಮುಸ್ಲಿಂ ಶಾಸಕರು ಚುನಾಯಿತರಾಗಬೇಕು. ಈ ನಿಟ್ಟಿನಲ್ಲಿ ಜಮೀರ್ ಖಾನ್ ಚಿಂತಿಸಿ, ಹೆಚ್ಚು ಮುಸ್ಲಿಂ ಶಾಸಕರು ಗೆಲ್ಲಿಸಲು ಕಾರ್ಯಸೂಚಿ ಯೋಜನೆ ರೂಪಿಸಿ ಅನುಷ್ಠಾನ ಗೊಳಿಸಲಿ ಇದು ಇತಿಹಾಸ ಸೇರುತ್ತದೆ.
ಇಮ್ರಾನ್ ಪಾಷಾ ಮತ್ತು ಜಮೀರ್. ನನಗೆ ಒಳ್ಳೆಯ ಸ್ನೇಹಿತರು ಸಾಕಷ್ಟು ಕಾರ್ಯಕ್ರಮಗಳನ್ನು ಒಟ್ಟಿಗೆ ಮಾಡಿದ್ದೇವೆ ಮತ್ತು ಪ್ರವಾಸ ಗಳನ್ನು ಮಾಡಿದ್ದೇವೆ ಆದರೆ ಇವರು ಇತ್ತೀಚಿನ ಇವರ ನಡುವಳಿಕೆ ಗಳು ಬೇಸರ ತಂದಿದೆ.

ವಂದನೆಗಳು
ಸಮೀರ್ ಮಂಡ್ಯ