ಆಟೋ, ಕ್ಯಾಬ್ ಚಾಲಕರಿಗೆ ಆನ್ ಲೈನ್ ಮೂಲಕ ಪರಿಹಾರ ಹಣ ನೇರ ಪಾವತಿಗೆ ಕ್ರಮ

ಬೆಂಗಳೂರು ನಗರ ಜಿಲ್ಲೆ, ಮೇ 21- (ಕರ್ನಾಟಕ ವಾರ್ತೆ) ಕೋವಿಡ್-19 ಸಾಂಕ್ರಾಮಿಕ 2ನೇ ಅಲೆಯ ಹಿನ್ನೆಲೆಯಲ್ಲಿ ಮೇ 19ರಂದು ಮಾನ್ಯ ಮುಖ್ಯಮಂತ್ರಿಗಳು ಲೈಸೆನ್ಸ್ ಹೊಂದಿದ ಹಾಗೂ ನೋಂದಣಿ ಮಾಡಿಸಿದ ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ ರೂ. 3,000/- ಗಳನ್ನು ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ. ಈ ಪರಿಹಾರ ಧನ ನೀಡಲು “ಸೇವಾಸಿಂಧು” ವೆಬ್ ಪೋರ್ಟಲ್ ಮೂಲಕ ಅರ್ಜಿ ಸ್ವೀಕರಿಸಲು ಅಗತ್ಯವಿರುವ ತಂತ್ರಾಂಶವನ್ನು ಸಿದ್ಧಪಡಿಸಲಾಗುತ್ತಿದ್ದು, ಈ ವ್ಯವಸ್ಥೆಯು ಕಾರ್ಯರೂಪಕ್ಕೆ ಬಂದೊಡನೆಯೇ ಅರ್ಹ ಚಾಲಕರುಗಳು ಅರ್ಜಿಗಳನ್ನು ಆಹ್ವಾನಿಸಲಾಗುವುದು. ಎಲ್ಲಾ ಅರ್ಹ ಚಾಲಕರುಗಳಿಗೆ ಪರಿಹಾರ ಧನವನ್ನು ಅವರ ಖಾತೆಗೆ ನೇರವಾಗಿ ಡಿ.ಬಿ.ಟಿ. ಮೂಲಕ ವರ್ಗಾಯಿಸಲಾಗುವುದು. ಆದ್ದರಿಂದ ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಚಾಲಕರುಗಳು ಪರಿಹಾರ ಧನ ಕೋರಿ ಅರ್ಜಿಗಳನ್ನು ಅನ್ಯ ಮಾರ್ಗದಲ್ಲಿ ಸಲ್ಲಿಸಲು ಅನಾವಶ್ಯ

—————–
ಒಂದು ರಾಷ್ಟ್ರ ಒಂದು ಪಡಿತರ ಯೋಜನೆ ಬಳಸಿಕೊಳ್ಳಲು ಆಹಾರ ಆಯುಕ್ತೆ ಶ್ಯಾಮಲಾ ಇಕ್ಬಾಲ್ ಕರೆ

ಬೆಂಗಳೂರು ನಗರ ಜಿಲ್ಲೆ, ಮೇ- 21, (ಕರ್ನಾಟಕ ವಾರ್ತೆ) ಉದ್ಯೋಗ ಮತ್ತು ಇತರೆ ಜೀವನೋಪಾಯಕ್ಕಾಗಿ ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ವಲಸೆ ಹೋಗುವವರಿಗೆ ಭದ್ರತೆ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ “ಒಂದು ರಾಷ್ಟ್ರ ಒಂದು ಪಡಿತರ” ಚೀಟಿ ಯೋಜನೆಯಡಿ ರಾಷ್ಟ್ರದ ಯಾವುದೇ ರಾಜ್ಯದಲ್ಲಿ ಅಂತ್ಯೋದಯ, ಅನ್ನ ಅಥವಾ ಆದ್ಯತಾ ಪಡಿತರ ಚೀಟಿ ಹೊಂದಿರುವವರು ರಾಷ್ಟ್ರದ ಯಾವುದೇ ರಾಜ್ಯದ ಯಾವುದೇ ಭಾಗದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಎಲ್ಲಾ ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತರಾದ ಶ್ಯಾಮಲಾ ಇಕ್ಬಾಲ್ ಅವರು ಕೋರಿದ್ದಾರೆ. ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯ ಮುಖ್ಯಾಂಶಗಳು: ರಾಜ್ಯದೊಳಗೆ ಎಲ್ಲಾದರೂ ಪಡಿತರ ಪಡೆಯಬಹುದು: ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆ/ಆಧಾರ್ ಸಂಖ್ಯ